Features
oi-Narayana M
ತಾಯಿಯೇ
ದೇವರು.
ಆದರೆ
ತಾಯಿಯನ್ನು
ಮೀರಿಸುವ
ಶಕ್ತಿ
ತಂದೆಗಿದೆ.
ತಂದೆ
ಅಂದರೆ
ಆಕಾಶ.
ಗಾಂಭೀರ್ಯದ
ಮಾತು,
ನಡೆ,
ನುಡಿಯಿಂದ
ತಂದೆ
ಆದರ್ಶ
ಜೀವನವನ್ನು
ತನ್ನ
ಮಕ್ಕಳಿಗೆ
ಕಲಿಸುತ್ತಾನೆ.
ಕುಟುಂಬದ
ಅಗತ್ಯಗಳನ್ನು
ಪೂರೈಸುವುದೇ
ತನ್ನ
ಪರಮೋದ್ದೇಶ
ಎಂದು
ಬದುಕುವ
ಪಾಪದ
ಜೀವ
ತಂದೆ.
ಮಕ್ಕಳನ್ನು
ಕೈಹಿಡಿದು
ನಡೆಸುವ,
ಕಣ್ಣೊರೆಸುವ,
ಬಿಗಿದಪ್ಪಿ
ಧೈರ್ಯ
ತುಂಬುವ
ಸ್ನೇಹಜೀವಿ.
ನಿಜಕ್ಕೂ
ತಂದೆ
ಅಂದರೆ
ಅಳತೆಗೆ
ಸಿಗದ
ವ್ಯಕ್ತಿತ್ವ.
ಇಂತಹ
ತಂದೆಯನ್ನು
ನೆನೆಯಲು
ಪ್ರತಿವರ್ಷ
ಜೂನ್
3ನೇ
ಭಾನುವಾರವನ್ನು
ತಂದೆಯಂದಿರ
ದಿನವನ್ನಾಗಿ
ಆಚರಿಸಲಾಗುತ್ತದೆ.
ಸಾಮಾನ್ಯವಾಗಿ
ಮದರ್
ಸೆಂಟಿಮೆಂಟ್
ಸಿನಿಮಾ
ಎನ್ನುವ
ಮಾತನ್ನು
ಹೆಚ್ಚು
ಕೇಳುತ್ತಿರುತ್ತೇವೆ.
ಆದರೆ
ಫಾದರ್
ಸೆಂಟಿಮೆಂಟ್
ಸಿನಿಮಾಗಳು
ಸಾಕಷ್ಟಿವೆ.
ಕನ್ನಡದಲ್ಲೂ
ಸಾಕಷ್ಟು
ತಂದೆ
ಮಕ್ಕಳ
ಬಾಂಧವ್ಯದ
ಸಿನಿಮಾಗಳು
ಬಂದೋಗಿವೆ.
ಮಕ್ಕಳ
ಬದುಕು
ರೂಪಿಸುವ
ತಂದೆಯನ್ನು
ಆರಾಧಿಸುವ
ಸನ್ನಿವೇಶಗಳು,
ಮಕ್ಕಳಿಗಾಗಿ
ತನ್ನ
ಜೀವವನ್ನೇ
ತೇಯುವ
ತಂದೆಯ
ಸನ್ನಿವೇಶ-
ಹಾಡುಗಳನ್ನು
ಸಿನಿಮಾಗಳಲ್ಲಿ
ನೋಡಿದ್ದೇವೆ.
ಡಾ.
ರಾಜ್‌ಕುಮಾರ್,
ಸಾಹಸಸಿಂಹ
ವಿಷ್ಣುವರ್ಧನ್,
ಕಲ್ಯಾಣ್
ಕುಮಾರ್
ಆದಿಯಾಗಿ
ಸ್ಟಾರ್
ನಟರೆಲ್ಲ
ಫಾದರ್
ಸೆಂಟಿಮೆಂಟ್
ಸಿನಿಮಾಗಳಲ್ಲಿ
ನಟಿಸಿ
ಪ್ರೇಕ್ಷಕರ
ಮನಗೆದ್ದಿದ್ದಾರೆ.
ಆ
ಸಿನಿಮಾಗಳು
ಸೂಪರ್
ಹಿಟ್
ಆಗಿವೆ.
ಸನಾದಿ
ಅಪ್ಪಣ್ಣ,
ದೇವತಾ
ಮನುಷ್ಯ
ಎಲ್ಲಾ
ತರಹದ
ಸಿನಿಮಾಗಳಲ್ಲೂ
ಡಾ.
ರಾಜ್‌ಕುಮಾರ್
ನಟಿಸಿದ್ದಾರೆ.
ತಂದೆ
ಮಗ,
ತಂದೆ
ಮಗಳ
ಬಾಂಧವ್ಯದ
ಸಿನಿಮಾಗಳು
ಡಾ.
ರಾಜ್‌ಕುಮಾರ್
ಸಿನಿಮಾ
ಲಿಸ್ಟ್‌ನಲ್ಲಿವೆ.
‘ಸನಾದಿ
ಅಪ್ಪಣ್ಣ’
ಚಿತ್ರದಲ್ಲೂ
ತಂದೆ
ಮಗನ
ಪ್ರೀತಿಯ
ಕಥೆಯಿತ್ತು.
ಚಿತ್ರದಲ್ಲಿ
ಅಶೋಕ್
ನಟಸಾರ್ವಭೌಮನ
ಮಗನಾಗಿ
ನಟಿಸಿದ್ದರು.
ಇನ್ನು
‘ದೇವತಾ
ಮನುಷ್ಯ’
ಚಿತ್ರದಲ್ಲಿ
ಕೃಷ್ಣಮೂರ್ತಿ
ಹಾಗೂ
ಮಗಳು
ಸೀತಾಳ
ಅನುಬಂಧದ
ಕಥೆ
ಇಷ್ಟವಾಗುತ್ತದೆ.
ಚಿತ್ರದಲ್ಲಿ
ಅಣ್ಣಾವ್ರ
ಮಗಳಾಗಿ
ಸುಧಾರಾಣಿ
ಮಿಂಚಿದ್ದರು.
ನೀ
ಬರೆದ
ಕಾದಂಬರಿ,
ಲಾಲಿ,
ದಿಗ್ಗಜ್ಜರು
ವಿಷ್ಣುದಾದಾ
ನಟಿಸಿದ
‘ನೀ
ಬರೆದ
ಕಾದಂಬರಿ’,
‘ಲಾಲಿ’
ಹಾಗೂ
‘ದಿಗ್ಗಜರು’
ತಂದೆ
ಮಕ್ಕಳ
ಪ್ರೀತಿಯ
ಕಥೆಯಿತ್ತು.
‘ದಿಗ್ಗಜರು’
ಮೇಲ್ನೋಟಕ್ಕೆ
ಕುಚಿಕು
ಸ್ನೇಹಿತರ
ಕಥೆ
ಅನ್ನಿಸಿದರೂ
ಚಿಕ್ಕಯ್ಯ
ಹಾಗೂ
ಮುತ್ತಯ್ಯನ
ಮನಮಿಡಿಯುವ
ಟ್ರ್ಯಾಕ್
ಕೂಡ
ಪ್ರೇಕ್ಷಕರಿಗೆ
ಇಷ್ಟವಾಗಿತ್ತು.
ಇನ್ನು
ದಾದಾ-
ಅಂಬಿ
ಕುಚಿಕು
ಸ್ನೇಹಿತರಾಗಿ
ನಟಿಸಿ
ಮೋಡಿ
ಮಾಡಿದರು.
‘ಲಾಲಿ’
ಚಿತ್ರದಲ್ಲಿ
ತಂದೆ-
ಮಗಳ
ಸೆಂಟಿಮೆಂಟ್,
‘ನೀ
ಬರೆದ
ಕಾದಂಬರಿ’ಯಲ್ಲಿ
ತಂದೆ
ಮಗಳ
ಬೊಂಬಾಟ್
ಕಥೆಯಿತ್ತು.
ದೇವರ
ಮಗ
ಅಂಬರೀಶ್
ಹಾಗೂ
ಶಿವರಾಜ್‌ಕುಮಾರ್
ತಂದೆ
ಹಾಗೂ
ಸಾಕು
ಮಗನಾಗಿ
‘ದೇವರ
ಮಗ’
ಚಿತ್ರದಲ್ಲಿ
ನಟಿಸಿದ್ದರು.
ಚಾಲೆಂಜಿಂಗ್
ಸ್ಟಾರ್
ದರ್ಶನ್
ವಿಲನ್
ಆಗಿ
ಸಣ್ಣ
ಪಾತ್ರದಲ್ಲಿ
ಮಿಂಚಿದ್ದರು.
ಡಿ.
ರಾಜೇಂದ್ರ
ಬಾಬು
ಈ
ಚಿತ್ರಕ್ಕೆ
ಆಕ್ಷನ್
ಕಟ್
ಹೇಳಿದ್ದರು.
2000
ಇಸವಿಯಲ್ಲಿ
ಈ
ಸಿನಿಮಾ
ತೆರೆಗೆ
ಬಂದಿತ್ತು.
ತಂದೆಗೆ
ತಕ್ಕ
ಮಗ
ಎಸ್.
ಮಹೇಂದರ್
ನಿರ್ದೇಶನದ
‘ತಂದೆಗೆ
ತಕ್ಕ
ಮಗ’
ಚಿತ್ರದಲ್ಲಿ
ಅಂಬಿ-
ಉಪ್ಪಿ
ತಂದೆ
ಮಗನಾಗಿ
ಮಿಂಚಿದ್ದರು.
ತಮಿಳಿನ
‘ತೇವರ್
ಮಗನ್’
ಸಿನಿಮಾ
ರೀಮೆಕ್
ಇದು.
ಸಾಕ್ಷಿ
ಶಿವಾನಂದ್,
ಲೈಲಾ
ಚಿತ್ರದಲ್ಲಿ
ನಾಯಕಿಯಾಗಿ
ಕಾಣಿಸಿಕೊಂಡಿದ್ದರು.
ಎಸ್.
ಎ
ರಾಜ್‌ಕುಮಾರ್
ಸಂಗೀತದ
ಹಾಡುಗಳು
ಹಿಟ್
ಆಗಿತ್ತು.
ನಾನು
ನನ್ನ
ಕನಸು
ಪ್ರಕಾಶ್
ರಾಜ್
ನಿರ್ಮಿಸಿ,
ನಿರ್ದೇಶಿಸಿ,
ನಟಿಸಿದ
‘ನಾನು
ನನ್ನ
ಕನಸು’
ತಂದೆ-
ಮಗಳ
ಬಾಂಧವ್ಯದ
ಮತ್ತೊಂದು
ಸಿನಿಮಾ.
ತಮಿಳಿನಲ್ಲಿ
ಇದೇ
ಚಿತ್ರವನ್ನು
ಪ್ರಕಾಶ್
ರಾಜ್
ಮಾಡಿ
ಗೆದ್ದಿದ್ದರು.
ಅಲ್ಲಿ
ತ್ರಿಶಾ
ಮಾಡಿದ್ದ
ಪಾತ್ರವನ್ನು
ಕನ್ನಡದಲ್ಲಿ
ಅಮೂಲ್ಯ
ನಿಭಾಯಿಸಿದ್ದರು.
ನಾದಬ್ರಹ್ಮ
ಹಂಸಲೇಖ
ಸಂಗೀತ
ಹಾಗೂ
ಸಾಹಿತ್ಯ
ಚಿತ್ರದ
ಮತ್ತೊಂದು
ಹೈಲೆಟ್.
ಗೋಧಿ
ಬಣ್ಣ
ಸಾಧಾರಣ
ಮೈಕಟ್ಟು
ಇತ್ತೀಚಿನ
ವರ್ಷಗಳಲ್ಲಿ
ಬಂದ
ತಂದೆ
ಸೆಂಟಿಮೆಂಟ್
ಸಿನಿಮಾಗಳಲ್ಲಿ
‘ಗೋಧಿ
ಬಣ್ಣ
ಸಾಧಾರಣ
ಮೈಕಟ್ಟು’
ಮರೆಯುವಂತಿಲ್ಲ.
ಹೇಮಂತ್
ಕುಮಾರ್
ನಿರ್ದೇಶನದ
ಈ
ಚಿತ್ರದಲ್ಲಿ
ಅನಂತ್
ನಾಗ್
ಹಾಗೂ
ರಕ್ಷಿತ್
ಶೆಟ್ಟಿ
ತಂದೆ
ಮಗನಾಗಿ
ಮಿಂಚಿದ್ದರು.
ಸಿನಿಮಾ
ಹಿಟ್
ಲಿಸ್ಟ್
ಸೇರಿತ್ತು.
ಹೇಮಂತ್
ಹಾಗೂ
ರಕ್ಷಿತ್
ಸೇರಿ
ಈಗ
‘ಸಪ್ತಸಾಗರದಾಚೆ
ಎಲ್ಲೋ’
ಸಿನಿಮಾ
ಮಾಡ್ತಿದ್ದಾರೆ.
ಪುಷ್ಪಕ
ವಿಮಾನ
ಬುದ್ದಿಮಾಂದ್ಯ
ಅನಂತರಾಮಯ್ಯ
ಹಾಗೂ
ತಾಯಿಯಿಲ್ಲದ
ಮಗಳು
ಪುಟ್ಟಲಕ್ಷ್ಮಿ
ಕಥೆ
‘ಪುಷ್ಪಕ
ವಿಮಾನ’.
ಎಸ್.
ರವೀಂದ್ರನಾಥ್ನ
ನಿರ್ದೇಶನದ
ಈ
ಚಿತ್ರದಲ್ಲಿ
ರಮೇಶ್
ಅರವಿಂದ್
ಹಾಗೂ
ರಚಿತಾ
ರಾಮ್
ತಂದೆ
ಮಗಳಾಗಿ
ನಟಿಸಿದ್ದರು.
ಬೇಬಿ
ಯುವಿನಾ
ಪುಟಾಣಿ
ಪುಟ್ಟಲಕ್ಷ್ಮಿ
ಆಗಿ
ಪ್ರೇಕ್ಷಕರ
ಮನಗೆದ್ದಿದ್ದರು.
ಚೌಕ
4
ಬೇರೆ
ಬೇರೆ
ಕಥೆಗಳನ್ನು
ಸೇರಿಸಿ
ತರುಣ್
ಸುಧೀರ್
ಚೌಕ
ಎನ್ನುವ
ಸಿನಿಮಾ
ಸಿನಿಮಾ
ಕಟ್ಟಿಕೊಟ್ಟಿದ್ದರು.
ಆದರೆ
ಆ
4
ಕಥೆಗಳಿಗೆ
ಒಂದು
ಲಿಂಕ್
ಕೊಟ್ಟು
ಕಥೆ
ಒಂದೆಡೆ
ಸೇರಿ
ಕ್ಲೈಮ್ಯಾಕ್ಸ್‌ನತ್ತ
ಸಾಗುವಂತೆ
ಮಾಡಲು
ವಿಶ್ವನಾಥ್
ಹಾಗೂ
ರಮ್ಯಾರ
ಸಣ್ಣ
ಕಥೆಯನ್ನು
ಸೇರಿಸಿದ್ದರು.
ಈ
ಕಥೆ
ಹೈಲೆಟ್
ಆಗಿತ್ತು.
‘ಅಪ್ಪ
ಐ
ಲವ್‌ಯು’
ಸಾಂಗ್
ಸೂಪರ್
ಹಿಟ್
ಆಗಿತು.
English summary
Devatha Manushya to Naanu Nanna Kanasu: Kannada Movies To Watch With Your Dad On Father’s Day.
Sunday, June 18, 2023, 8:18