News
oi-Muralidhar S
ಸ್ಯಾಂಡಲ್‌ವುಡ್
ನಟ
ಶ್ರೀನಗರ
ಕಿಟ್ಟಿ
ಹುಟ್ಟುಹಬ್ಬದ
ಸಂಭ್ರಮದಲ್ಲಿದ್ದಾರೆ.
ಇಂದು(ಜುಲೈ
8)
ಬರ್ತ್‌ಡೇ
ಖುಷಿಯಲ್ಲಿಯೇ
ಅವರ
ಅಭಿಮಾನಿಗಳಿಗೊಂದು
ಸರ್ಪ್ರೈಸ್
ಇದೆ.
ಅವರ
ವೃತ್ತಿ
ಬದುಕಿನಲ್ಲಿ
ಹೆಚ್ಚು
ಸಕ್ಸಸ್
ಕೊಟ್ಟ
ಸಿನಿಮಾ
‘ಸಂಜು
ವೆಡ್ಸ್
ಗೀತಾ’
ಬಗ್ಗೆ
ಒಂದು
ಅಪ್‌ಡೇಡ್
ಇದೆ.
‘ವೀಕೆಂಡ್
ವಿತ್
ರಮೇಶ್’
ಮೊದಲ
ಎಪಿಸೋಡ್‌ಗೆ
ಮೋಹಕತಾರೆ
ಬಂದಿದ್ದರು.
ಆ
ವೇಳೆ
ಶ್ರೀನಗರ
ಕಿಟ್ಟಿ,ರಮ್ಯಾ
ಹಾಗೂ
ನಿರ್ದೇಶಕ
ನಾಗಶೇಖರ್
ಮುಖಾಮುಖಿಯಾಗಿದ್ದರು.
ಅಲ್ಲಿ
ಚಿಗುರಿದ
‘ಸಂಜು
ವೆಡ್ಸ್
ಗೀತಾ
2’
ಈಗ
ಒಂದು
ಹಂತಕ್ಕೆ
ಬಂದು
ನಿಂತಿದೆ.

ಶ್ರೀನಗರ
ಕಿಟ್ಟಿ
ಹಾಗೂ
ರಮ್ಯಾ
ಕಾಂಬಿನೇಷನ್‌ನಲ್ಲಿ
ಬಂದ
ಸಿನಿಮಾ
ಬಾಕ್ಸಾಫೀಸ್‌ನಲ್ಲಿ
ಸೂಪರ್
ಹಿಟ್
ಆಗಿತ್ತು.
ಮೂವರು
ಒಳ್ಳೆ
ಹೆಸರು
ಬಂದಿತ್ತು.
ಈಗ
ಇದೇ
ಸಿನಿಮಾದ
ಸೀಕ್ವೆಲ್
ಶೀಘ್ರದಲ್ಲಿಯೇ
ಆರಂಭ
ಆಗಲಿದೆ.
ಈ
ಬಗ್ಗೆ
ಸ್ವತ:
ನಾಗಶೇಖರ್
ಫಿಲ್ಮಿಬೀಟ್
ಜೊತೆ
ಮಾಹಿತಿಯನ್ನು
ಹಂಚಿಕೊಂಡಿದ್ದಾರೆ.
Exclusive:
ಶ್ರೀನಗರ
ಕಿಟ್ಟಿ-ನಾಗಶೇಖರ್
ಚರ್ಚೆ..
‘ಸಂಜು
ವೆಡ್ಸ್
ಗೀತಾ
2’
ಬರೋದು
ಫಿಕ್ಸ್?
ಇರ್ತಾರಾ
ರಮ್ಯಾ?
‘ಸಂಜು
ವೆಡ್ಸ್
ಗೀತಾ
2’
ಯಾವಾಗ?
‘ವೀಕೆಂಡ್
ವಿತ್
ರಮೇಶ್’
ವೇದಿಕೆ
ಮೇಲೆ
‘ಸಂಜು
ವೆಡ್ಸ್
ಗೀತಾ’
ಬಗ್ಗೆ
ಚರ್ಚೆಯಾಗಿತ್ತು.
ಶ್ರೀನಗರ
ಕಿಟ್ಟಿ
ಹಾಗೂ
ರಮ್ಯಾ
ಇಬ್ಬರೂ
ಸಿನಿಮಾ
ಸವಿನೆನಪುಗಳನ್ನು
ಹಂಚಿಕೊಂಡಿದ್ದರು.
ಅಲ್ಲಿಂದ
ಮರಳುತ್ತಿದ್ದಂತೆ
‘ಸಂಜು
ವೆಡ್ಸ್
ಗೀತಾ
2’
ಸಿನಿಮಾ
ಮಾಡುವ
ಬಗ್ಗೆ
ಕಿಟ್ಟಿ
ಹಾಗೂ
ನಿರ್ದೇಶಕ
ನಾಗಶೇಖರ್
ಮಾತಾಡಿಕೊಂಡಿದ್ದರು.
ಅದರಂತೆ
ಈಗ
ಸಿನಿಮಾ
ಒಂದು
ಹಂತಕ್ಕೆ
ಬಂದು
ನಿಂತಿದೆ.

ನಿರ್ದೇಶಕ
ನಾಗಶೇಖರ್
‘ಸಂಜು
ವೆಡ್ಸ್
ಗೀತಾ
2’
ಸಿನಿಮಾದ
ಕಥೆಯನ್ನು
ಹೆಣೆಯುತ್ತಿದ್ದಾರೆ.
ಸದ್ಯ
ಈ
ಸಿನಿಮಾ
ಪೋಸ್ಟ್
ಪ್ರೊಡಕ್ಷನ್
ಹಂತದಲ್ಲಿದೆ.
ಅವರೇ
ಹೇಳುವ
ಪ್ರಕಾರ,
ಈ
ಸಿನಿಮಾ
ನವೆಂಬರ್
ತಿಂಗಳಲ್ಲಿ
ಸೆಟ್ಟೇರಬಹುದು.
ಕಥೆ
ಅದ್ಭುತವಾಗಿ
ಬಂದಿದ್ದು,
ಸಿನಿಮಾ
ಆರಂಭ
ಮಾಡುವುದಕ್ಕೆ
ಕಾತುರರಾಗಿದ್ದಾಗಿ
ಫಿಲ್ಮಿ
ಬೀಟ್‌ಗೆ
ತಿಳಿಸಿದ್ದಾರೆ.
ಶ್ರೀನಗರ
ಕಿಟ್ಟಿ
ಜೊತೆ
ರಮ್ಯಾ
ಇರ್ತಾರಾ?
ಶ್ರೀನಗರ
ಕಿಟ್ಟಿ
ಹಾಗೂ
ರಮ್ಯಾ
ಇಬ್ಬರನ್ನು
ಬಿಟ್ಟು
‘ಸಂಜು
ವೆಡ್ಸ್
ಗೀತಾ’
ಬಗ್ಗೆ
ಊಹಿಸಿಕೊಳ್ಳುವುದಕ್ಕೆ
ಸಾಧ್ಯವೇ
ಇಲ್ಲ.
ಹೀಗಾಗಿ
‘ಸಂಜು
ವೆಡ್ಸ್
ಗೀತಾ
2’ನಲ್ಲಿ
ಮೋಹಕತಾರೆ
ಇರುತ್ತಾರಾ?
ಇಲ್ಲಾ
ಅವರನ್ನು
ಬಿಟ್ಟು
ಸಿನಿಮಾ
ಮಾಡುತ್ತಾರಾ?
ಅನ್ನೋ
ಪ್ರಶ್ನೆ
ಏಳುವುದ
ಸಹಜ.
ಈ
ಬಗ್ಗೆ
ನಿರ್ದೇಶಕ
ನಾಗಶೇಖರ್
ಖುಷಿ
ವಿಷಯವನ್ನು
ಫಿಲ್ಮಿಬೀಟ್
ಜೊತೆ
ಹಂಚಿಕೊಂಡಿದ್ದಾರೆ.
“ರಮ್ಯಾ
ಅವರು
ನನಗೆ
ಅದೃಷ್ಟ.
ಅವರನ್ನು
ಕಲ್ಪಿಸಿಕೊಳ್ಳದೆ
ಈ
ಕಥೆಯನ್ನು
ಹೆಣೆಯುವುದಕ್ಕೆ
ಸಾಧ್ಯವಿಲ್ಲ.
ಅವರನ್ನು
ಈಗಾಗಲೇ
ಸಿನಿಮಾದಲ್ಲಿ
ನಟಿಸುವಂತೆ
ಅಪ್ರೋಚ್
ಮಾಡಿದ್ದೇನೆ.
ಆದರೆ,
ಇನ್ನೂ
ಅವರಿಂದ
ಪ್ರತಿಕ್ರಿಯೆ
ಬಂದಿಲ್ಲ.
ಅವರು
ಗ್ರೀನ್
ಸಿಗ್ನಲ್
ಕೊಟ್ಟರೆ
ಖುಷಿಯಿಂದ
ಸಿನಿಮಾ
ಮಾಡುತ್ತೇವೆ.
ಇಲ್ಲದೆ
ಹೋದರೆ,
ಬೇರೆ
ನಟಿಯೊಂದಿಗೆ
ಮಾಡಯತ್ತೇವೆ.
ಅದರೆ,
ನಮ್ಮ
ಸಿನಿಮಾದ
ಪೋಸ್ಟರ್‌ನಲ್ಲೇ
ರಮ್ಯಾ
ಪ್ರೆಸೆಂಟ್ಸ್
ಅಂತ
ಈಗಾಗಲೇ
ಹಾಕಿದ್ದೇವೆ.
ಅವರು
ಇದ್ದೇ
ಇರುತ್ತಾರೆ”
ಎಂದು
ನಾಗಶೇಖರ್
ಹೇಳಿದ್ದಾರೆ.
ನಾಗಶೇಖರ್
ಅವರದ್ದೇ
ಮ್ಯೂಸಿಕ್
‘ಸಂಜು
ವೆಡ್ಸ್
ಗೀತಾ’
ಸಿನಿಮಾ
ಪ್ರಮುಖ
ಹೈಲೈಟ್‌ಗಳಲ್ಲೊಂದು
ಮ್ಯೂಸಿಕ್.
ಅಂದು
ಜೆಸ್ಸಿ
ಗಿಫ್ಟ್
ಈ
ಸಿನಿಮಾಗೆ
ಟ್ಯೂನ್
ಹಾಕಿದ್ದರು.
ಎಲ್ಲಾ
ಹಾಡುಗಳೂ
ಸೂಪರ್
ಹಿಟ್
ಆಗಿದ್ದವು.
ಹೀಗಾಗಿ
ಪಾರ್ಟ್
2ಗೂ
ಅವರೇ
ಬರಬಹುದಾ?
ಅನ್ನೋ
ನಿರೀಕ್ಷೆಯಿತ್ತು.
ಆದರೆ,
ಈ
ಬಾರಿ
ಕಹಾನಿಯಲ್ಲೊಂದು
ಟ್ವಿಸ್ಟ್
ಇದೆ.
‘ಸಂಜು
ವೆಡ್ಸ್
ಗೀತಾ
2’
ಸಿನಿಮಾ
ಸ್ವತ:
ನಾಗಶೇಖರ್
ಅವರೇ
ಟ್ಯೂನ್
ಹಾಕುತ್ತಿದ್ದಾರೆ.
ಈಗಾಗಲೇ
ಕೆಲವು
ಹಾಡುಗಳಿಗೆ
ಟ್ಯೂನ್
ಕೂಡ
ಹಾಕಿದ್ದಾರೆ.
ಇದೇ
ವರ್ಷ
ನವೆಂಬರ್
ತಿಂಗಳಿನಿಂದ
ಸಿನಿಮಾದ
ಶೂಟಿಂಗ್
ಆರಂಭ
ಆಗುವ
ಸಾಧ್ಯತೆಗಳಿವೆ.
ಇನ್ನೂ
ಹೆಚ್ಚಿನ
ಇನ್ನಷ್ಟೇ
ಹೊರಬೀಳಬೇಕಿದೆ.
English summary
Sanju Weds Geetha 2 movie shooting stars by September; will Ramya be part of the film?
Saturday, July 8, 2023, 18:22
Story first published: Saturday, July 8, 2023, 18:22 [IST]