ESIC Karnataka Jobs 2023: ಬೆಂಗಳೂರಿನಲ್ಲೇ ಸಂದರ್ಶನ, ಆಯ್ಕೆಯಾದರೆ ಲಕ್ಷ ಸಂಬಳ | ESIC Karnataka Recruitment 2023: ESIC Invites To Eligibles For Interview Of 13 Posts

Jobs

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 25: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕವು (ESIC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಉದ್ಯೋಗ ಬಯಸುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಇನ್ನೊಂದು ವಾರದಲ್ಲಿ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC)ದಲ್ಲಿ ಒಟ್ಟು 13 ಸೀನಿಯರ್ ರೆಸಿಡೆಂಟ್ (Junior Resident), ಸೂಪರ್ ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿ ಪ್ರಕ್ರಿಯೆ ಆರಂಭಿಸಿರುವ ನಿಗಮವು ಅರ್ಹರಿಂದ ಅರ್ಜಿ ಕರೆದಿದೆ. ಆಸಕ್ತರು ಅಭ್ಯರ್ಥಿಗಳು ಮುಂದಿನ ಜುಲೈ 4 ಮತ್ತು 5ರಂದು ಬೆಂಗಳೂರಿನಲ್ಲಿ ನಡೆಯಿರುವ ಸಂದರ್ಶನದಲ್ಲಿ ನೇರವಾಗಿ ಪಾಲ್ಗೊಳ್ಳಿ ಎಂದು ಅಧಿಸೂಚನೆ ತಿಳಿಸಿದೆ.

ESIC Karnataka Recruitment 2023: ESIC Invites To Eligibles For Interview Of 13 Posts

ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳುವವರು ಅದಕ್ಕು ಮುನ್ನ ಹುದ್ದೆಗಳ ಸಂಪೂರ್ಣ ಮಾಹಿತಿ, ಮಾಸಿಕ ವೇತನ, ವಯೋಮಿತಿ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿ ತಿಳಿಯಿರಿ.

ಉದ್ಯೋಗದ ಪೂರ್ಣ ವಿವರ

ಹುದ್ದೆ ಹೆಸರು – ಸೀನಿಯರ್ ರೆಸಿಡೆಂಟ್, ಸೂಪರ್ ಸ್ಪೆಷಲಿಸ್ಟ್​.

ಸೂಪರ್ ಸ್ಪೆಷಲಿಸ್ಟ್ ಹುದ್ದೆ – 4

ಸೀನಿಯರ್ ರೆಸಿಡೆಂಟ್ ಹುದ್ದೆ- 9

ಒಟ್ಟು ಖಾಲಿ ಹುದ್ದೆ ಸಂಖ್ಯೆ – 13

ಮಾಸಿಕ ವೇತನ – 2 ಲಕ್ಷ ರೂ.ನಿಂದ 2,40 ಲಕ್ಷ ರೂ.

ಶೈಕ್ಷಣಿಕ ಅರ್ಹತೆ – ಎಂಡಿ, ಎಂಎಸ್, ಸ್ನಾತಕೋತ್ತರ ಪದವಿ

ಸಂದರ್ಶನ ಸ್ಥಳ- ಬೆಂಗಳೂರು

ಸಂದರ್ಶನ ದಿನಾಂಕ – ಜುಲೈ 4 ಮತ್ತು 5ರಂದು.

ಶೈಕ್ಷಣಿಕ ಅರ್ಹತೆ- ವಯೋಮಿತಿ

ಹುದ್ದೆಗಳ ಭರ್ತಿಗಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳುವ ಆಸಕ್ತರು ಸೂಪರ್ ಸ್ಪೆಷಲಿಸ್ಟ್ ಹುದ್ದೆಗಾಗಿ ಡಿಎಂ, ಡಿಎನ್​ಬಿ, ಎಂಸಿಎಚ್ ಪೂರ್ಣಗೊಳಿಸಿರಬೇಕು. ಇನ್ನೂ ಸೀನಿಯರ್ ರೆಸಿಡೆಂಟ್ ಹುದ್ದೆಯ ಅಭ್ಯರ್ಥಿಗಳು ಎಂಡಿ, ಎಂಎಸ್ ಮತ್ತು ಸ್ನಾತಕೋತ್ತರ ಪದವಿ ಮುಗಿಸಿರಬೇಕು ಎಂದು ಅವರು ಹೇಳಿದರು.

ESIC Karnataka Recruitment 2023: ESIC Invites To Eligibles For Interview Of 13 Posts

ಸೂಪರ್ ಸ್ಪೆಷಲಿಸ್ಟ್ ಹುದ್ದೆಗೆ 67 ವರ್ಷ ಹಾಗೂ ಸೀನಿಯರ್ ರೆಸಿಡೆಂಟ್ ಹುದ್ದೆಯ ಅಭ್ಯರ್ಥಿಳಿಗೆ 45 ವರ್ಷ ನಿಗದಿ ಮಾಡಲಾಗಿದೆ. ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ SC/ST ಅಭ್ಯರ್ಥಿಗಳಿಗೆ ಒಟ್ಟು ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಇತರೆ ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇರಲಿದೆ.

ಇತರೆ ವಿವರ

ನಿಗಮದ ಈ ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ಆಯ್ಕೆಯಾಗುವವರು ಮಾಸಿಕವಾಗಿ 2,00,000 ನಿಂದ 2,40,000 ರೂಪಾಯಿ ಪಡೆಯಲಿದ್ದಾರೆ. ಇನ್ನು ಸೀನಿಯರ್ ರೆಸಿಡೆಂಟ್ ಹುದ್ದೆಗೆ ಮಾಸಿಕ 67,700 ವೇತನ ನಿಗದಿಯಾಗಿದೆ.

ಆಯ್ಕೆಯಾಗುವವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಬೆಂಗಳೂರಿನಲ್ಲಿಯೇ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಯಲಿದೆ. ಸೂಪರ್ ಸ್ಪೆಷಲಿಸ್ಟ್ ಅಭ್ಯರ್ಥಿಗಳಿಗೆ ಜುಲೈ 5 ರಂದು ಮತ್ತು ಸೀನಿಯರ್ ರೆಸಿಡೆಂಟ್ ಹುದ್ದೆಯ ಅಭ್ಯರ್ಥಿಗಳಿಗೆ ಜುಲೈ 4 ರಂದು ಸಂದರ್ಶನ ನಡೆಯಲಿದೆ.

English summary

ESIC Karnataka Recruitment 2023: ESIC Karnataka Recruitment 2023: ESIC Invites to Eligible For Interview Of 13 Posts.

Story first published: Sunday, June 25, 2023, 17:14 [IST]

Source link