Eid-al-Adha: ಬೆಂಗಳೂರಿನ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಬಕ್ರೀದ್ ಬಲಿಗೆ ನಿಷೇಧ- ಶಿಕ್ಷೆ, ದಂಡದ ಪ್ರಮಾಣ ತಿಳಿಯಿರಿ | Eid-al-Adha: Ban on Bakrid Sacrifice on Roads, Public Places in Bengaluru

Bengaluru

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 27: ಈದ್-ಅಲ್-ಅದಾಹ್ (ಬಕ್ರೀದ್) ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದ ಆಚರಣೆಗೆ ಸಿದ್ದರಾಗಿದ್ದಾರೆ. ಆದರೆ, ಹಬ್ಬದ ಪ್ರಯುಕ್ತ ಬೆಂಗಳೂರಿನ ಸಾರ್ವಜನಿಕ ಸ್ಥಳಗಳಾದ ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ಉದ್ಯಾನವನಗಳು ಮತ್ತು ಆವರಣದ ಒಳಗೆ ಅಥವಾ ಹೊರಗೆ ಪ್ರಾಣಿಗಳನ್ನು ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೋಮವಾರ ಈ ಅಧಿಸೂಚನೆಯನ್ನು ಪ್ರಕಟಿಸಿದೆ.

ಸುತ್ತೋಲೆಯ ಪ್ರಕಾರ, ಅಧಿಕೃತ ಕಸಾಯಿಖಾನೆಗಳಿಗೆ ಮಾತ್ರ ಆಹಾರಕ್ಕಾಗಿ ಪ್ರಾಣಿಗಳನ್ನು ವಧೆ ಮಾಡಲು ಅನುಮತಿಸಲಾಗುವುದು.

Eid-al-Adha: Ban on Bakrid Sacrifice on Roads, Public Places in Bengaluru

‘ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಮಾರ್ಗಸೂಚಿಗಳನ್ನು ಉಲ್ಲಂಘಿಸುವುದು ಕಂಡುಬಂದರೆ, ಅವರು ಕರ್ನಾಟಕ ರಾಜ್ಯ ಪ್ರಾಣಿ ಬಲಿ ಕಾಯ್ದೆ 1959 ಸೆಕ್ಷನ್ 3 ರ ಅಡಿಯಲ್ಲಿ ಆರು ತಿಂಗಳವರೆಗೆ ಜೈಲು ಶಿಕ್ಷೆ / ದಂಡ ಅಥವಾ ಎರಡನ್ನೂ ಶಿಕ್ಷೆಗೆ ಗುರಿಪಡಿಸಲು ಹೊಣೆಗಾರರಾಗಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 429 ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡುತ್ತದೆ’ ಎಂದು ಬಿಬಿಎಂಪಿ ಹೇಳಿದೆ.

ಯಾರಾದರೂ ಕಾನೂನನ್ನು ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆ ಮತ್ತು ಕರ್ನಾಟಕ ಗೋಹತ್ಯೆ ತಡೆ ಕಾಯ್ದೆ ಮತ್ತು ಜಾನುವಾರುಗಳ ಸಂರಕ್ಷಣೆ ಕಾಯಿದೆ 2020 ರ ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ಬಿಬಿಎಂಪಿಯ ಪಶುಸಂಗೋಪನಾ ಜಂಟಿ ನಿರ್ದೇಶಕ ಡಾ ಕೆ ಪಿ ರವಿಕುಮಾರ್ ಹೇಳಿದ್ದಾರೆ.

ಬಿಬಿಎಂಪಿ ಈ ಹಿಂದೆಯೂ ಬಕ್ರೀದ್ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸಿತ್ತು.

Eid-al-Adha: Ban on Bakrid Sacrifice on Roads, Public Places in Bengaluru

‘ಈ ಹಿಂದೆಯೇ ನಾವು ಸಾರ್ವಜನಿಕ ರಸ್ತೆಗಳಲ್ಲಿ ಪ್ರಾಣಿಗಳನ್ನು ವಧೆ ಮಾಡುವುದನ್ನು ನಿಷೇಧಿಸಿದ್ದೇವೆ. ಸ್ವಚ್ಛತೆ ನಮ್ಮ ಪ್ರಮುಖ ಕಾಳಜಿಯಾಗಿದೆ. ಇದಲ್ಲದೆ, ಎಲ್ಲಾ ವಯೋಮಾನದ ಹಸುಗಳು, ದನ, ಕರು ಮತ್ತು ಗೂಳಿಗಳನ್ನು ವಧೆಗಾಗಿ ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ’ ಎಂದು ಮತ್ತೊಬ್ಬ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಕೆಳಗಿನ ಸ್ಥಳಗಳಲ್ಲಿ ಬಕ್ರೀದ್ ಅಥವಾ ಇತರ ಧಾರ್ಮಿಕ ಸಂದರ್ಭಗಳಲ್ಲಿ ಪ್ರಾಣಿಗಳನ್ನು ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ” ಎಂದು ಬಿಬಿಎಂಪಿ ಅಧಿಸೂಚನೆಯಲ್ಲಿ ಇದೆ.

ಸಾರ್ವಜನಿಕ ರಸ್ತೆಗಳು ಮತ್ತು ಕಾಲುದಾರಿಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಶಾಲೆಗಳು, ಕಾಲೇಜುಗಳು, ದೇವಾಲಯಗಳು, ಮಸೀದಿಗಳು ಅಥವಾ ಇತರ ಧಾರ್ಮಿಕ ಪೂಜಾ ಸ್ಥಳಗಳು, ಉದ್ಯಾನವನಗಳು ಅಥವಾ ಇತರ ಸಾರ್ವಜನಿಕ ಸ್ಥಳಗಳ ಆವರಣದ ಒಳಗೆ ಅಥವಾ ಹೊರಗೆ ನಿರ್ಬಂಧವು ಜಾರಿಯಲ್ಲಿರುತ್ತದೆ.

English summary

Eid-al-Adha: BBMP bans animal sacrifice on Bengaluru roads, public places

Story first published: Tuesday, June 27, 2023, 19:24 [IST]

Source link