Malayalam
oi-Muralidhar S
Dhoomam
Box
Office
Collection:
Day
3,
‘ಕೆಜಿಎಫ್’,
‘ಕಾಂತಾರ’ದಂತಹ
ಮೆಗಾ
ಹಿಟ್
ಸಿನಿಮಾಗಳನ್ನು
ನೀಡಿದ್ದ
ಹೊಂಬಾಳೆ
ಕನ್ನಡದ
ಜೊತೆ
ಜೊತೆಗೆ
ಬೇರೆ
ಚಿತ್ರರಂಗಕ್ಕೂ
ಕಾಲಿಟ್ಟಿದ್ದು
ಗೊತ್ತೇ
ಇದೆ.
ಈಗಾಗಲೇ
ತೆಲುಗು,
ತಮಿಳು
ಹಾಗೂ
ಮಲಯಾಳಂ
ಫಿಲ್ಮ್
ಇಂಡಸ್ಟ್ರಿಗೆ
ಕಾಲಿಟ್ಟಿದೆ.
ಪರಭಾಷೆಯಲ್ಲಿ
ನಿರ್ಮಿಸಿದ
ಮೊದಲ
ಸಿನಿಮಾ
ಕೂಡ
ರಿಲೀಸ್
ಆಗಿದೆ.
ಹೊಂಬಾಳೆ
ಫಿಲ್ಮ್ಸ್
ನಿರ್ಮಿಸಿದ
ಮೊದಲ
ಮಲಯಾಳಂ
ಸಿನಿಮಾ
‘ಧೂಮಂ’
ಕಳೆದ
ವಾರವಷ್ಟೇ
ರಿಲೀಸ್
ಮಾಡಲಾಗಿದೆ.
ಆದರೆ,
ಎರಡು
ಮೆಗಾ
ಹಿಟ್ಗಳನ್ನು
ಕೊಟ್ಟ
ನಿರ್ಮಾಣ
ಸಂಸ್ಥೆಗೆ
ತೀವ್ರ
ನಿರಾಸೆಯಾಗಿದೆ.
‘ಧೂಮಂ’
ಬಾಕ್ಸಾಫೀಸ್ನಲ್ಲಿ
ಹೇಳಿಕೊಳ್ಳುವಂತಹ
ಕಲೆಕ್ಷನ್
ಏನೂ
ಮಾಡಿಲ್ಲ.
ಯಾವುದೇ
ಸಿನಿಮಾ
ಆಗಿರಲಿ.
ಮೊದಲ
ಮೂರು
ದಿನದ
ಗಳಿಕೆ
ಪ್ರಮುಖವಾಗಿರುತ್ತೆ.
ಈ
ಮೂರು
ದಿನಗಳಲ್ಲಿ
ದೊಡ್ಡ
ಮೊತ್ತದ
ಗಳಿಕೆ
ಕಂಡ್ರೆ,
ಯಶಸ್ಸಿನ
ಹಾದಿಯಲ್ಲಿದೆ
ಅಂತ
ನಿರೀಕ್ಷೆ
ಮಾಡಬಹುದು.
ಸದ್ಯ
‘ಧೂಮಂ’
ಆ
ರೀತಿಯ
ಲಕ್ಷಣಗಳು
ಕಾಣಿಸುತ್ತಿಲ್ಲ.
ವೀಕೆಂಡ್ನಲ್ಲೂ
ಹೇಳಿಕೊಳ್ಳುವಂತಹ
ಕಲೆಕ್ಷನ್
ಮಾಡಿಲ್ಲ.
ಹಾಗಿದ್ರೆ
ವೀಕೆಂಡ್ನಲ್ಲಿ
‘ಧೂಮಂ’
ಕಲೆಕ್ಷನ್
ಎಷ್ಟು?
ಮೂರನೇ
ದಿನ
ಗಳಿಕೆ
ಏನಾಗಿದೆ?
ತಿಳಿಯೋಕೆ
ಮುಂದೆ
ಓದಿ.
“ನಿಧಾನವಾಗಿ
ಸುಟ್ಟು
ಹಾಕುವ
ಥ್ರಿಲ್ಲರ್..
ಇಂಟರ್ವಲ್
ಅದ್ಭುತ:
‘ಧೂಮಂ’
ಬಗ್ಗೆ
ನೆಟ್ಟಿಗರ
ಟ್ವಿಟರ್
ವಿಮರ್ಶೆ
‘ಧೂಮಂ’
ಮೂರನೇ
ದಿನದ
ಕಲೆಕ್ಷನ್
ಎಷ್ಟು?
ಮಲಯಾಳಂ
ಸಿನಿಮಾ
‘ಧೂಮಂ’
ಮೇಲೆ
ನಿರೀಕ್ಷೆ
ಹೆಚ್ಚಿತ್ತು.
ಅದಕ್ಕೆ
ಕಾರಣ,
ನಿರ್ದೇಶಕ
ಪವನ್
ಕುಮಾರ್,
ನಟ
ಫಹಾದ್
ಫಾಸಿಲ್
ಹಾಗೂ
ಹೊಂಬಾಳೆ
ಫಿಲ್ಮ್ಸ್.
ಈ
ಮೂರು
ಅಂಶಗಳಿಂದ
ಮತ್ತೊಂದು
ಮೆಗಾ
ಸಿನಿಮಾ
ಸಿಗಬಹುದೆಂಬ
ನಿರೀಕ್ಷೆಯಿತ್ತು.
ಆದರೆ,
ಲೆಕ್ಕಾಚಾರ
ಹಾಕಿದಂತೆ
ಆಗಿಲ್ಲ.
‘ಧೂಮಂ’
ವೀಕೆಂಡ್ನಲ್ಲೂ
ಸದ್ದು
ಮಾಡಿಲ್ಲ.
‘ಧೂಮಂ’
ಸಿನಿಮಾ
ಮೂರನೇ
ದಿನವಾದ
ಭಾನುವಾರ
(ಜೂನ್
24)
ಮೊದಲ
ಎರಡು
ದಿನಗಳಿಗಿಂತ
ಹೆಚ್ಚು
ಕಲೆಕ್ಷನ್
ಆಗಿದೆ.
ಟ್ರೇಡ್
ಎಕ್ಸ್ಪರ್ಟ್ಗಳ
ಪ್ರಕಾರ,
ಭಾರತದಾದ್ಯಂತ
1.30
ಕೋಟಿ
ರೂ.(Gross)
ಕಲೆಕ್ಷನ್
ಮಾಡಿದೆ
ಎಂದು
ಹೇಳಲಾಗುತ್ತಿದೆ.
ಮೊದಲು
ಮೂರು
ದಿನಗಳ
ಒಟ್ಟು
ಕಲೆಕ್ಷನ್
ಎಷ್ಟು?
10
ಕೋಟಿ
ರೂ.ಯಲ್ಲಿ
‘ಧೂಮಂ’
ಸಿನಿಮಾ
ನಿರ್ಮಾಣ
ಆಗಿದೆ
ಎಂದು
ಹಲವು
ಮಾಧ್ಯಮಗಳಲ್ಲಿ
ವರದಿಯಾಗಿದೆ.
ಈ
ಬೆನ್ನಲ್ಲೇ
ಸಿನಿಮಾ
ಮೊದಲ
ಮೂರು
ದಿನಗಳಲ್ಲಿ
ಭಾರತದಾದ್ಯಂತ
ಕೇವಲ
2.93
ಕೋಟಿ
ಕಲೆಕ್ಷನ್
ಆಗಿದೆ
ಎಂದು
sacnilk
ಟ್ರೇಡ್
ವೈಬ್
ಪೋರ್ಟರ್
ವರದಿ
ಮಾಡಿದೆ.
Dhoomam:
ಫಹಾದ್
ಫಾಸಿಲ್
ಸಿನಿಮಾ
ಫಸ್ಟ್
ಡೇ
ಕಲೆಕ್ಷನ್
ಎಷ್ಟು?
ಮಿಸ್
ಆಗಿದ್ದು
ಎಲ್ಲಿ?
ಅಂದ್ಹಾಗೆ,
‘ಧೂಮಂ’
ಮೂರು
ದಿನಗಳ
ಗಳಿಕೆ
ಬಗ್ಗೆ
ಹಲವು
ವೆಬ್ಸೈಟ್ಗಳಲ್ಲಿ
ವರದಿಯಾಗಿದ್ದು,
ಅದರ
ಲೆಕ್ಕಾಚಾರ
ಇಲ್ಲಿದೆ.
ಧೂಮಂ
3
ದಿನಗಳ
ಬಾಕ್ಸಾಫೀಸ್
ಕಲೆಕ್ಷನ್
(Net)
ಮೊದಲ ದಿನ |
1.05 ಕೋಟಿ ರೂ. (Net) |
ಎರಡನೇ ದಿನ |
82 ಲಕ್ಷ ರೂ. (Net) |
ಮೂರನೇ ದಿನ |
1.06 ಕೋಟಿ ರೂ. (Net) |
ಒಟ್ಟು |
2.93 ಕೋಟಿ ರೂ. (Net) |
ಕರ್ನಾಟಕದಲ್ಲೂ
ಏನಂದ್ರೆ
ಏನಿಲ್ಲ?
‘ಧೂಮಂ’
ಸಿನಿಮಾ
ಕರ್ನಾಟಕದಲ್ಲೂ
ಉತ್ತಮ
ಗಳಿಕೆ
ಮಾಡಿಲ್ಲ
ಎಂದು
ವಿತರಕರ
ವಲಯ
ಹೇಳುತ್ತಿದೆ.
ಮೂಲಗಳ
ಪ್ರಕಾರ,
ಕರ್ನಾಟಕದ
ಕಲೆಕ್ಷನ್
ಒಂದು
ಕೋಟಿ
ರೂ.ನೂ
ದಾಟಿಲ್ಲ
ಎಂದು
ಹೇಳಲಾಗುತ್ತಿದೆ.
ಮೂರು
ದಿನಗಳಲ್ಲಿ
50
ಲಕ್ಷ
ರೂ.
ಹತ್ತರ
ಕಲೆಕ್ಷನ್
ಆಗಿರಬಹುದು
ಎಂದು
ಅಂದಾಜಿಸಲಾಗುತ್ತಿದೆ.
ಒಂದ್ವೇಳೆ
ಟ್ರೇಡ್
ಎಕ್ಸ್ಪರ್ಟ್ಗಳು
ಹಾಕಿರೋ
ಈ
ಲೆಕ್ಕಾಚಾರ
ಸರಿಯಾಗಿದ್ದಲ್ಲಿ
‘ಧೂಮಂ’
ನಷ್ಟದಲ್ಲಿದೆ
ಎಂದು
ನಿಸ್ಸಂದೇಹವಾಗಿ
ಹೇಳಬಹುದು.
ಆದರೆ
ಹೊಂಬಾಳೆ
ಫಿಲ್ಮ್ಸ್,
‘ಧೂಮಂ’
ಕಲೆಕ್ಷನ್
ಬಗ್ಗೆ
ಇನ್ನೂ
ಅಧಿಕೃತವಾಗಿ
ಎಲ್ಲೂ
ಹೇಳಿಕೆ
ಕೊಟ್ಟಿಲ್ಲ.
ಹೀಗಾಗಿ
ನಿರ್ಮಾಣ
ಸಂಸ್ಥೆ
ಘೋಷಣೆ
ಮಾಡಿದ
ಬಳಿಕ
ಕಲೆಕ್ಷನ್
ಬಗ್ಗೆ
ಕ್ಲಾರಿಟಿ
ಸಿಗಲಿದೆ.
English summary
Dhoomam Day 3 Box Office Collection: Audience Seems Not Interested As the Collection Dropped, know more.
Monday, June 26, 2023, 12:16