Charmadi Ghat: ಪ್ರವಾಸಿಗರ ಹುಚ್ಚಾಟ, ರೋಗಿಗಳ ಪರದಾಟ, ಅಂಬುಲೆನ್ಸ್‌ಗೆ ದಾರಿ ಬಿಡದೆ ವಾಹನ ಪಾರ್ಕಿಂಗ್ | Tourist Misbehaving At Charmadi Ghat

Chikkamagaluru

lekhaka-Veeresha H G

By ಚಿಕ್ಕಮಗಳೂರು ಪ್ರತಿನಿಧಿ

|

Google Oneindia Kannada News

ಚಿಕ್ಕಮಗಳೂರು, ಜೂನ್‌ 23: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರೆದಿದ್ದು, ಆಂಬುಲೆನ್ಸ್‌ಗೂ ದಾರಿ ಬಿಡದೇ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ.

ಚಾರ್ಮಾಡಿ ಘಾಟಿಯ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕ್ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರಿಗೆ ತೆರಳುವ ಆಂಬುಲೆನ್ಸ್‌ಗೆ ದಾರಿ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ‌. ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕ್ ಮಾಡುವ ಮೂಲಕ ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ.

Charmadi Ghat

ಚಾರ್ಮಾಡಿ ಘಾಟಿಯಲ್ಲಿರುವ ಜಲಪಾತದ ಬಳಿ ವಾಹನ ನಿಲ್ಲಿಸಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದಾರೆ. ಪ್ರವಾಸಿಗರ ಹುಚ್ಚಾಟದಿಂದ ರೋಗಿಗಳು, ಇತರೆ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಅಪಾಯದ ಬಂಡೆ ಮೇಲೆ ಪ್ರವಾಸಿಗರ ಹುಚ್ಚಾಟ..!

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರೆದಿದ್ದು, ಪೋಷಕರು ಜೀವಕ್ಕೆ ಸಂಚಕಾರ ತರುವಂತಹ ಅಪಾಯಕಾರಿ ಬಂಡೆಯ ಮೇಲೆ ಮಕ್ಕಳನ್ನು ಹತ್ತಿಸುತ್ತ ಹುಚ್ಚಾಟ ಮೆರೆಯುತ್ತಿದ್ದಾರೆ.

Charmadi Ghat

22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿ ಘಾಟಿ ರಸ್ತೆ ಹಾವು ಬಳುಕಿನ ಮೈಕಟ್ಟಿನಿಂದ ಕೂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಒಂದೆಡೆ ಪಾತಾಳ, ಮತ್ತೊಂದೆಡೆ ಮುಗಿಲೆತ್ತರದ ಬೆಟ್ಟಗಡ್ಡಗಳು. ಇಂತಹ ಸುಂದರ ಹಾಗೂ ಅಪಾಯದ ತಾಣದಲ್ಲಿ ಪ್ರವಾಸಿಗರು ಹೇಳೋರು-ಕೇಳೋರಿಲ್ಲದೆ ಹುಚ್ಚಾಟ ಮೆರೆಯುತ್ತಿದ್ದಾರೆ.

ರಸ್ತೆ ಬದಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವ ಪ್ರವಾಸಿಗರು ಹತ್ತಾರು ಅಡಿ ಎತ್ತರ ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಕ್ರೇಜಿಗೆ ಬಿದ್ದಿದ್ದಾರೆ. ಈ ಕಲ್ಲುಬಂಡೆ ಹಾಗೂ ಗುಡ್ಡಗಳನ್ನ ಏರಿ ಇಳಿಯುವಾಗ ಒಂಚೂರು ಬ್ಯಾಲೆನ್ಸ್ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈಗಾಗಲೇ ಇಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಒಡೆದುಕೊಂಡವರು ಇದ್ದಾರೆ. ತಿಂಗಳುಗಟ್ಟಲೇ ಹಾಸಿಗೆ ಹಿಡಿದಿರುವವರು ಇದ್ದಾರೆ. ಪ್ರಾಣ ಕಳೆದುಕೊಂಡವರು ಉಂಟು. ಆದರೆ, ಇಂತಹಾ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಮಕ್ಕಳನ್ನು ಕೂಡ ಹತ್ತಿಸುತ್ತಿರುವುದು ಅನಾಹುತಕ್ಕೆ ಆಹ್ವಾನ ನೀಡುತ್ತಿರುವಂತಿದೆ.

 Monsoon Rain: ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆ, ಎಲ್ಲೆಲ್ಲಿ?, ಇಲ್ಲಿದೆ ವಿವರ Monsoon Rain: ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆ, ಎಲ್ಲೆಲ್ಲಿ?, ಇಲ್ಲಿದೆ ವಿವರ

ಘಾಟಿಯ ದಾರಿಯುದ್ಧಕ್ಕೂ ಅಲ್ಲಲ್ಲೇ ನೋ ಪಾರ್ಕಿಂಗ್ ಬೋರ್ಡ್ ಕೂಡ ಇದೆ. ನೋ ಪಾರ್ಕಿಂಗ್ ಫಲಕದ ಬಳಿಯೇ ಅಡ್ಡಾದಿಡ್ಡಿ ವಾಹನಗಳನ್ನು ಪಾರ್ಕ್ ಮಾಡುವ ಪ್ರಯಾಣಿಕರು ಹೇಳೋರು-ಕೇಳೋರು ಇಲ್ಲದಂತೆ ವರ್ತಿಸುತ್ತಿದ್ದಾರೆ. ಅಪಾಯದ ಸ್ಥಳಗಳಲ್ಲಿ ಪ್ರವಾಸಿಗರು, ಯುವಕ-ಯುವತಿಯರು, ಮಕ್ಕಳು ಜಾರುವ ಬಂಡೆ, ಕಲ್ಲುಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಮೋಜು ಮಸ್ತಿ ಮಾಡ್ತಿದ್ದಾರೆ. ಏನಾದರೂ ಹೆಚ್ಚು ಕಡಿಮೆಯಾದರೆ ಜವಾಬ್ದಾರಿ ಯಾರೆಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಹಾಗಾಗಿ, ಕೂಡಲೇ ಪೊಲೀಸರು ಚಾರ್ಮಾಡಿಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸುವ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ತುಂಬಾ ಇದೆ.

English summary

Ambulance stuck in Charmadi ghat traffic due to tourist misbehave. Know more

Story first published: Friday, June 23, 2023, 13:11 [IST]

Source link