Chandrayaan-3: ಚಂದ್ರಯಾನ 3 ಉಪಗ್ರಹ ಉಡಾವಣೆ ಸಮಯ ಪಂಚಾಂಗದ ಪ್ರಕಾರ ನಿಗಧಿಯಾಗಿದಿಯೇ? | Chandrayaan-3: Is Chandrayaan 3 satellite launch time schedule according to almanac?

India

oi-Sunitha B

|

Google Oneindia Kannada News

ದೆಹಲಿ: ಇಂದು ಚಂದ್ರಯಾನ 3 ಉಡಾವಣೆಯೊಂದಿಗೆ, ಅದರ ಉಡಾವಣೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡೋಣ.

ಕಳೆದ ಕೆಲವು ವರ್ಷಗಳಿಂದ ಭಾರತ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ಚಂದ್ರಯಾನ, ಮಂಗಳಯಾನದಂತಹ ಗ್ರಹಗಳಿಗೆ ಭಾರತ ಕಳುಹಿಸಿದ ಪ್ರತಿಯೊಂದು ಉಪಗ್ರಹವೂ ಜಗತ್ತನ್ನು ಹಿಂತಿರುಗಿ ನೋಡುವಂತೆ ಮಾಡಿದೆ.

Chandrayaan-3: Is Chandrayaan 3 satellite launch time schedule according to almanac?

ಈ ಮಧ್ಯೆ ಇಸ್ರೋ ಇಂದು ಚಂದ್ರಯಾನ 3 ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇಂದು ಮಧ್ಯಾಹ್ನ 2.35ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹ ಹಾರಾಟ ನಡೆಸಲಿದೆ. ಇದಕ್ಕೆ ಕೌಂಟ್ ಡೌನ್ ಈಗಾಗಲೇ ಆರಂಭವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚಂದ್ರಯಾನ 3 ಉಪಗ್ರಹವನ್ನು ಉಡಾವಣೆ ಸಮಯದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಸಮಯವನ್ನು ಪಂಚಾಂಗದ ಪ್ರಕಾರ ನಿಗಧಿಪಡಿಸಲಾಗಿದೆ ಎಂದು ಹಲವರು ಹೇಳುತ್ತಿದ್ದಾರೆ. ಹಾಗಾದರೆ ಇದು ನಿಜವೇ?

ಉಪಗ್ರಹ ಉಡಾವಣೆ ಸಮಯದ ಬಗ್ಗೆ ಭಿನ್ನ ಅಭಿಪ್ರಾಯ:

ಉಪಗ್ರಹಗಳ ಉಡಾವಣೆ ಸಮಯದ ಬಗ್ಗೆ ಅನೇಕ ಜನರು ವಿಭಿನ್ನ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಅಂದರೆ 6.22 AM (ಚಂದ್ರಯಾನ 1), 2.46 PM (ಚಂದ್ರಯಾನ 2) ಮತ್ತು ಈಗ ಚಂದ್ರಯಾನ 3 ಉಪಗ್ರಹವನ್ನು 2.35 PM ಕ್ಕೆ ಉಡಾವಣೆ ಮಾಡಲಾಗುತ್ತಿದೆ. ಉಪಗ್ರಹಗಳನ್ನು ಈ ಸಮದಲ್ಲೇ ಏಕೆ ಉಡಾವಣೆ ಮಾಡಲಾಗಿದೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಪ್ರಶ್ನೆಗೆ ಕೆಲವರು ಒಳ್ಳೆಯ ಸಮಯ ನೋಡಿ ಸಮಯ ನಿಗಧಿ ಮಾಡಲಾಗಿದೆ ಅಂದರೆ ಇನ್ನೂ ಕೆಲವರು ಪಂಚಾಂಗ ನೋಡಿ ಉಪಗ್ರಹ ಉಡಾವಣೆ ಸಮಯವನ್ನು ಅಂತಿಮವಾಗುತ್ತದೆ ಎನ್ನುತ್ತಿದ್ದಾರೆ.

Chandrayaan-3: Is Chandrayaan 3 satellite launch time schedule according to almanac?

ಚಂದ್ರಯಾನ ಮತ್ತು ಮಂಗಳಯಾನ ಯೋಜನೆಗಳ ನಿರ್ದೇಶಕರಾಗಿದ್ದ ಮೈಲಸ್ವಾಮಿ ಅಣ್ಣಾದೊರೈ ಇದಕ್ಕೆ ನಿಜವಾದ ಕಾರಣವನ್ನು ಹಳೆಯ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಅದರ ಬಗ್ಗೆ ನೋಡೋಣ. ಅದರಲ್ಲಿ ಮೈಲ್ಸ್ವಾಮಿ ಅಣ್ಣಾದೊರೈ, “ಬಾಹ್ಯಾಕಾಶ ಪರಿಶೋಧಕರು ದೇವರಲ್ಲಿ ವೈಯಕ್ತಿಕ ನಂಬಿಕೆಯನ್ನು ಹೊಂದಿರಬಹುದು. ಆದರೆ ಉಪಗ್ರಹ ಉಡಾವಣೆ ವಿಚಾರಕ್ಕೆ ಇದನ್ನು ನೋಡಲಾಗುವುದಿಲ್ಲ. ಪಂಚಾಂಗಕ್ಕೂ ಮತ್ತು ಉಪಗ್ರಹ ಉಡಾವಣೆ ಸಮಯಕ್ಕೂ ಯಾವುದೇ ಸಂಬಂಧವಿಲ್ಲ” ಎಂದಿದ್ದರು.

ಚಂದ್ರನು 100,000 ಕಿಮೀ ವೇಗದಲ್ಲಿ ಭೂಮಿಯನ್ನು ಸುತ್ತುತ್ತಾನೆ. ನಮ್ಮ ಭೂಮಿಯೂ ಸೂರ್ಯನ ಸುತ್ತ ಸುತ್ತುತ್ತದೆ. ಇಲ್ಲಿಂದ ನೌಕೆ ಕಳುಹಿಸಿದರೆ ಚಂದ್ರನನ್ನು ತಲುಪಲು 6, 7 ದಿನ ಬೇಕಾಗುತ್ತದೆ. ಇಷ್ಟು ದಿನಗಳ ಪ್ರಯಾಣದ ನಂತರವೇ ಚಂದ್ರಯಾನ ಚಂದ್ರನನ್ನು ತಲುಪಲಿದೆ. ಇಷ್ಟು ದಿನ ಪ್ರಯಾಣ ಮಾಡಿ ನಮ್ಮ ಚಂದ್ರಯಾನ ತಲುಪಿದಾಗ ಆ ಜಾಗದಲ್ಲಿ ಚಂದ್ರನಿರಬೇಕು.

ಕಾರಣವೇನು:

ಆದರೆ ಉಪಗ್ರಹ ಹೊರಡುವ ಸಮಯದಲ್ಲಿ ಚಂದ್ರ ನಾವು ನಿಗಧಿಪಡಿಸಿದ ಸ್ಥಳದಲ್ಲಿ ಇರುವುದಿಲ್ಲ. ಬೇರೆಡೆ ಇರುತ್ತದೆ. ಆದ್ದರಿಂದ, ನಾವು ಚಂದ್ರನ ವೇಗ ಮತ್ತು ಭೂಮಿಯ ವೇಗವನ್ನು ಲೆಕ್ಕಾಚಾರ ಮಾಡುವ ಮೂಲಕ ಸಮಯವನ್ನು ಅಂತಿಮಗೊಳಿಸುತ್ತೇವೆ. ಅಲ್ಲದೆ ಬಾಹ್ಯಾಕಾಶದಲ್ಲಿ ಸಾಕಷ್ಟು ತ್ಯಾಜ್ಯವಿದೆ. ನಮ್ಮ ಉಪಗ್ರಹ ಆ ತ್ಯಾಜ್ಯದ ರಾಶಿಯಿಂದ ದೂರವಾಗಬೇಕು.

Chandrayaan-3: Is Chandrayaan 3 satellite launch time schedule according to almanac?

ಹೀಗಾಗಿ ಉಪಗ್ರಹ ಉಡಾವಣೆಗೆ ಇಂಥದ್ದೇ ಸಮಯವನ್ನು ನಿರ್ಧರಿಸಲು ಹಲವು ಕಾರಣಗಳಿವೆ. ಅದೆಲ್ಲವೂ ವೈಜ್ಞಾನಿಕವಾಗಿರುತ್ತದೆ. ಹಾಗಾಗಿ ಉಪಗ್ರಹವನ್ನು 10 ನಿಮಿಷ ಮುಂಚಿತವಾಗಿ ಅಥವಾ ತಡವಾಗಿ ಕಳುಹಿಸಿದರೂ ಚಂದ್ರ ಅಂದುಕೊಂಡ ಸ್ಥಳದಲ್ಲಿ ಇರುವುದಿಲ್ಲ. ಇದರಿಂದ ಚಂದ್ರನನ್ನು ತಲುಪಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಲ್ಲಿಂದ ಉಪಗ್ರಹ ನಿಖರವಾದ ಸಮಯದಲ್ಲಿ ಹೊರಡಬೇಕು. ಹಾಗಾಗಿ ಪಂಚಾಂಗಕ್ಕೂ ಇದಕ್ಕೂ ಸಂಬಂಧವಿಲ್ಲ.

ವೈಯಕ್ತಿಕ ನಂಬಿಕೆಗಳು:

ಇಸ್ರೋದಲ್ಲಿ ವೈಯಕ್ತಿಕವಾಗಿ ಅನೇಕರು ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯದಲ್ಲಿ ನಂಬಿಕೆಯನ್ನು ಹೊಂದಿದ್ದರು. ಜೊತೆಗೆ ಮಂಗಳವಾರ ಹೊಸದೇನನ್ನೂ ಮಾಡಬಾರದು ಎನ್ನುವವರಿದ್ದರು. ಆದರೂ ನಾನು ಚಂದ್ರಯಾನ, ಮಂಗಳಯಾನದ ಯೋಜನಾ ನಿರ್ದೇಶಕನಾಗಿದ್ದಾಗ ಪ್ರತಿದಿನ ಎಲ್ಲಾ ಕೆಲಸಗಳನ್ನು ಮಾಡುವ ವಿಧಾನವನ್ನು ಅಲ್ಲಿ ನಾನು ಕಂಡುಕೊಂಡೆ ಎಂದು ಮೈಲಸ್ವಾಮಿ ಅಣ್ಣಾದೊರೈ ಹೇಳಿದರು.

ನಮ್ಮ ಚಂದ್ರಯಾನ ಮತ್ತು ಮಂಗಳಯಾನ ಎರಡೂ ಯೋಜನೆಗಳ ಯಶಸ್ಸಿನೊಂದಿಗೆ, ಈಗ ಮಂಗಳವಾರ ಹೊಸದೇನನ್ನೂ ಮಾಡಬಾರದು ಎಂದು ಬದಲಾಗುತ್ತಿದೆ ಎಂದು ಅವರು ಹೇಳಿದರು. ಉಪಗ್ರಹದ ಉಡಾವಣೆ ಸಮಯವನ್ನು ಅಂತಿಮಗೊಳಿಸುವುದಕ್ಕೂ ಪಂಚಾಂಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇದು ಖಚಿತಪಡಿಸುತ್ತದೆ.

English summary

Chandrayaan-3: Is Chandrayaan 3 satellite launch time schedule according to almanac?

Source link