Captain Miller: ಶಿವಣ್ಣ, ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಟೀಸರ್ ಬಿಡುಗಡೆ ದಿನಾಂಕ, ಸಮಯ ಪ್ರಕಟ | Captain Miller: Dhanush and Shivarajkumar starrer Captian Miller teaser will be out on 28th July

bredcrumb

Tamil

oi-Srinivasa A

|


ವರ್ಷದ
ಫೆಬ್ರವರಿ
ತಿಂಗಳಿನಲ್ಲಿ
ತೆಲುಗು
ನಿರ್ದೇಶಕ
ವೆಂಕಿ
ಅಟ್ಲೂರಿ
ನಿರ್ದೇಶನದ
‘ವಾತಿ’
(
ಸರ್

ತೆಲುಗು
)
ಚಿತ್ರದ
ಮೂಲಕ
ಬಾಕ್ಸ್
ಆಫೀಸ್‌ನಲ್ಲಿ
ನೂರು
ಕೋಟಿ
ಕ್ಲಬ್
ಸೇರಿದ್ದ
ಧನುಷ್
ನಟನೆಯ
ಮುಂದಿನ
ಸಿನಿಮಾ
ಕ್ಯಾಪ್ಟನ್
ಮಿಲ್ಲರ್
ಸದ್ಯ
ಎಲ್ಲೆಡೆ
ಸಿಕ್ಕಾಪಟ್ಟೆ
ಹೈಪ್
ಹುಟ್ಟುಹಾಕುತ್ತಿದೆ.
ಇನ್ನು

ಚಿತ್ರದಲ್ಲಿ
ನಾಯಕಿಯಾಗಿ
ಪ್ರಿಯಾಂಕಾ
ಅರುಲ್
ಮೋಹನ್
ನಟಿಸಿದ್ದು
ಸಂದೀಪ್
ಕಿಶನ್
ಮುಖ್ಯ
ಭೂಮಿಕೆಯಲ್ಲಿ
ಕಾಣಿಸಿಕೊಂಡಿದ್ದಾರೆ.
ಅದರ
ಜತೆ
ಸ್ಯಾಂಡಲ್‌ವುಡ್
ಕಿಂಗ್
ಶಿವ
ರಾಜ್‌ಕುಮಾರ್
ಸಹ
ಚಿತ್ರದಲ್ಲಿ
ಪ್ರಮುಖ
ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.

ಅರುಣ್
ಮಾದೇಶ್ವರನ್
ನಿರ್ದೇಶನವಿರುವ

ಚಿತ್ರ
ದಿನದಿಂದ
ದಿನಕ್ಕೆ
ತನ್ನ
ಹೈಪ್
ಹೆಚ್ಚಿಸುತ್ತಿದ್ದು,
ಜೂನ್
30
ರಂದು
ಬಿಡುಗಡೆಗೊಂಡಿದ್ದ
ಫಸ್ಟ್
ಲುಕ್
ಪೋಸ್ಟರ್
ಮೂಲಕ
ಸಾಮಾಜಿಕ
ಜಾಲತಾಣದಲ್ಲಿ
ಸಂಚಲನ
ಸೃಷ್ಟಿಸಿತ್ತು.

ಫಸ್ಟ್
ಲುಕ್‌ನಲ್ಲಿ
ಧನುಷ್
ಹೆಣಗಳ
ರಾಶಿ
ಇರುವ
ಯುದ್ಧಭೂಮಿಯಲ್ಲಿ
ಆಕಾಶ
ನೋಡುತ್ತಾ
ನಿಂತಿರುವ
ರಗಡ್
ಲುಕ್‌ನಲ್ಲಿ
ಕಾಣಿಸಿಕೊಂಡಿದ್ದರು.
ಚಿತ್ರದ
ಹೆಸರಿನ
ಮೂಲಕ
ಹುಟ್ಟಿಕೊಂಡಿದ್ದ
ಕ್ರೇಜ್
ಧನುಷ್
ಅವರ

ಲುಕ್‌ನಿಂದ
ಮತ್ತಷ್ಟು
ಹೆಚ್ಚಿಸಿತ್ತು.

Captain Miller: Dhanush and Shivarajkumar starrer Captian Miller teaser will be out on 28th July

ಹೀಗೆ
ಕೇವಲ
ಒಂದು
ಪೋಸ್ಟರ್
ಮೂಲಕವೇ
ಸಿಕ್ಕಾಪಟ್ಟೆ
ದೊಡ್ಡ
ಮಟ್ಟದ
ಹೈಪ್
ಹುಟ್ಟುಹಾಕಿದ್ದ
ಕ್ಯಾಪ್ಟನ್
ಮಿಲ್ಲರ್
ಚಿತ್ರದ
ಟೀಸರ್
ಬಿಡುಗಡೆ
ದಿನಾಂಕ
ಹಾಗೂ
ಸಮಯ
ಸದ್ಯ
ಘೋಷಣೆಗೊಂಡಿದ್ದು,
ಸಿನಿ
ರಸಿಕರನ್ನು
ಹಾಗೂ
ಧನುಷ್
ಮತ್ತು
ಶಿವರಾಜ್‌ಕುಮಾರ್
ಅಭಿಮಾನಿಗಳಲ್ಲಿ
ಚಿತ್ರದ
ಟೀಸರ್
ಹೇಗಿರಲಿದೆ
ಹಾಗೂ
ಯಾವ
ಥೀಮ್
ಮೇಲೆ
ಚಿತ್ರದ
ಕಥೆ
ಇರಲಿದೆ
ಎಂಬ
ಕುತೂಹಲ
ಹಾಗೂ
ಪ್ರಶ್ನೆಯನ್ನು
ಹೆಚ್ಚಿಸಿದೆ.

ಇನ್ನು
ಚಿತ್ರದ
ಟೀಸರ್
ಜುಲೈ
28ರಂದು
ಧನುಷ್
ಹುಟ್ಟುಹಬ್ಬದ
ಪ್ರಯುಕ್ತ
ಮಧ್ಯರಾತ್ರಿ
12.01ಕ್ಕೆ
ಬಿಡುಗಡೆಯಾಗಲಿದೆ
ಎಂದು
ಇಂದು
(
ಜುಲೈ
26
)
ಚಿತ್ರಕ್ಕೆ
ಬಂಡವಾಳ
ಹೂಡಿರುವ
ಸತ್ಯಜ್ಯೋತಿ
ಫಿಲ್ಮ್ಸ್
ಬ್ಯಾನರ್
ತನ್ನ
ಟ್ವಿಟರ್
ಖಾತೆಯಲ್ಲಿ
ಟ್ವೀಟ್
ಮಾಡಿದೆ.

ಚಿತ್ರದಲ್ಲಿ
ಶಿವಣ್ಣಗೆ
ಪ್ರಮುಖ
ಪಾತ್ರ:


ಸಿನಿಮಾದಲ್ಲಿ
ಸೆಂಚುರಿ
ಸ್ಟಾರ್
ಶಿವಣ್ಣ
ಧನುಷ್
ಅಣ್ಣನಾಗಿ
ಕಾಣಿಸಿಕೊಳ್ಳುತ್ತಿದ್ದಾರೆ.
ಹಾಗಂತ
ಇದು
ಅಣ್ಣ
ತಮ್ಮ
ಕಥೆ
ಅಲ್ಲದೇ
ಇದ್ದರೂ,
ಶಿವಣ್ಣ
ಪಾತ್ರಕ್ಕೆ
ಸಿನಿಮಾದಲ್ಲಿ
ಉತ್ತಮ
ಹಿನ್ನೆಲೆಯಿದೆ
ಎಂಬ
ಮಾತಿದೆ.

ಕಾರಣಕ್ಕೆ
ಶಿವರಾಜ್‌ಕುಮಾರ್
ಕೂಡ
ಗ್ರೀನ್
ಸಿಗ್ನಲ್
ಕೊಟ್ಟಿದ್ದಾರೆ
ಅನ್ನೋ
ಮಾತು
ಕೇಳಿ
ಬಂದಿತ್ತು.
ಶಿವರಾಜ್‌ಕುಮಾರ್
ಹಾಗೂ
ಧನುಷ್
ಇಬ್ಬರ
ಸ್ನೇಹ
ಇಂದಿನದಲ್ಲ.
ಬಹಳ
ವರ್ಷಗಳಿಂದಲೂ
ಇವರಿಬ್ಬರ
ಒಡನಾಟವಿದೆ.

ಹಿಂದೆ
ಶಿವರಾಜ್‌ಕುಮಾರ್
ನಟಿಸಿದ್ದ
‘ವಜ್ರಕಾಯ’
ಸಿನಿಮಾದ
ನೋ
ಪ್ರಾಬ್ಲಮ್
ಹಾಡಿಗೆ
ಧನುಷ್
ಧ್ವನಿ
ನೀಡಿದ್ದರು.
“ನಾನು
ಧನುಶ್‌ರ
ದೊಡ್ಡ
ಅಭಿಮಾನಿ.
ಅವರ
ಎಲ್ಲ
ಸಿನಿಮಾಗಳನ್ನೂ
ನಾನು
ನೋಡಿದ್ದೇನೆ.
ನನ್ನನ್ನು
ನಾನು
ಧನುಶ್
ಅವರಲ್ಲಿ
ಕಾಣುತ್ತೇನೆ.
ಅವರ
ವ್ಯಕ್ತಿತ್ವ
ಸಹ
ನನ್ನೊಂದಿಗೆ
ಹೋಲುತ್ತದೆ.
ಅವರು
ನನ್ನಂತೆಯೇ
ಇದ್ದಾರೆ
ಅಥವಾ
ನಾನು
ಅವರಂತೆ
ಇದ್ದೇನೆ.
ಅವರೊಟ್ಟಿಗೆ
ನಟಿಸುವ
ಅವಕಾಶವನ್ನು
ಕೈಬಿಡುವುದು
ನನಗೆ
ಇಷ್ಟವಿರಲಿಲ್ಲ
ಹಾಗಾಗಿ
ಸಿನಿಮಾವನ್ನು
ಒಪ್ಪಿಕೊಂಡೆ”
ಎಂದು
ಸಂದರ್ಶನವೊಂದರಲ್ಲಿ
ಹೇಳಿದ್ದರು.

English summary

Captain Miller: Dhanush and Shivarajkumar starrer Captian Miller teaser will be out on 28th July

Wednesday, July 26, 2023, 18:30

Story first published: Wednesday, July 26, 2023, 18:30 [IST]

Source link