Bus Pass Extension: ಪದವಿ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿ ವಿಸ್ತರಿಸಿದ KSRTC | KSRTC Has Extended Bus Pass Timings Of Students Of Graduates

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 30: ರಾಜ್ಯದಲ್ಲಿ ವಿವಿಧ ಪದವಿ ಕೋರ್ಸ್‌ಗಳ ಪರೀಕ್ಷೆಗಳು ಆಗಸ್ಟ್‌ ನಲ್ಲಿ ನಡೆಯುವುದರಿಂದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತಿಳಿಸಿದೆ.

2022-23 ಸಾಲಿನ ಸ್ನಾತಕೋತ್ತರ, ಡಿಪ್ಲೋಮಾ ಬಿ.ಫಾರ್ಮ, ಕಾನೂನು ಪದವಿ ಹಾಗೂ ಮುಂತಾದ ಕೋರ್ಸುಗಳ ಪದವಿವಿದ್ಯಾರ್ಥಿಗಳ ಬಸ್‌ಪಾಸ್ ಜೂನ್ 2023ರ ಅಂತ್ಯದವರೆಗೆ ಮಾತ್ರ ವಿಸ್ತರಿಸಲಾಗಿತ್ತು. ಆದರೆ ಈ ವಿದ್ಯಾರ್ಥಿಗಳ ಪರೀಕ್ಷೆಗಳು ಜುಲೈ/ಆಗಸ್ಟ್ ತಿಂಗಳಲ್ಲಿ ನಡೆಯಲಿವೆ.

KSRTC Has Extended Bus Pass Timings Of Students Of Graduates

ಈ ಕುರಿತು ಆಯಾ ವಿಶ್ವವಿದ್ಯಾನಿಲಯಗಳು ಅಧಿಸೂಚನೆಯನ್ನು ಹೊರಡಿಸಿವೆ. ಈ ಕಾರಣಕ್ಕೆ ಪರೀಕ್ಷೆಗಳಿಗೆ ಹಾಜರಾಗಲಿರುವ ವಿದ್ಯಾರ್ಥಿಗಳು ತಮ್ಮ ಬಸ್ ಪಾಸ್‌ ಅವಧಿಯನ್ನು ವಿಸ್ತರಣೆ ಮಾಡುವಂತೆ ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ಸಾರಿಗೆ ಇಲಾಖೆ ಎಲ್ಲ ನಾಲ್ಕು ನಿಗಮಗಳಿಗೆ ಮನವಿ ಸಲ್ಲಿಸಿದ್ದರು.

KSRTC: ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ 3636 ಪ್ರಕರಣ ಪತ್ತೆ, 5.9ಲಕ್ಷ ದಂಡ ವಸೂಲಿKSRTC: ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ 3636 ಪ್ರಕರಣ ಪತ್ತೆ, 5.9ಲಕ್ಷ ದಂಡ ವಸೂಲಿ

ಇದೀಗ ಆ ಮನವಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಅನುಕೂಲತೆಗಾಗಿ ವಿಸ್ತರಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಹಾಗೂ ಬಸ್ ಸಿಬ್ಬಂದಿಗೆ ಸಾರಿಗೆ ಸಂಸ್ಥೆ ಸೂಚಿಸಿರುವ ಈ ಕೆಳಗಿನ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.

ಸಾರಿಗೆ ಸಂಸ್ಥೆ ಸೂಚನೆಗಳು

* ಯಾವ ಕೋರ್ಸ್ಳಿಗೆ ಮತ್ತು ಯಾವ ತರಗತಿಗಳು ಎಲ್ಲಿಯವರೆಗೆ ನಡೆಯುತ್ತವೆ ಎಂಬುದರ ಬಗ್ಗೆ ಸಂಬಂಧಿಸಿದ ಕಾಲೇಜುಗಳಿಂದ ದೃಢೀಕರಣ ಪತ್ರ ಪಡೆಯಬೇಕು.

KSRTC Has Extended Bus Pass Timings Of Students Of Graduates

* ಸದರಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸುಗಳನ್ನು ಒಂದು ಅಥವಾ ಎರಡು ತಿಂಗಳ ಅವಧಿಗೆ ವಿಸ್ತರಣೆ ಮಾಡುವುದು.

* ಪಾಸ್‌ಗಳ ವಿಸ್ತರಣೆಗಾಗಿ ನಿಯಮಾವಳಿಯಂತೆ ಒಂದು/ಎರಡು ತಿಂಗಳ ಶುಲ್ಕವನ್ನು ಹಾಗೂ ಸಂಸ್ಕರಣ ಶುಲ್ಕವನ್ನು ಪಾವತಿಸಿಕೊಂಡು, ಸದರಿ ರಶೀದಿಯಲ್ಲಿ ವಿದ್ಯಾರ್ಥಿಯ ಹೆಸರು ಹಾಗೂ ಬಸ್ ಪಾಸಿನ ಸಂಖ್ಯೆಯನ್ನು ಖಡ್ಡಾಯವಾಗಿ ನಮೂದಿಸುವುದು.

* 2022-23 ಸಾಲಿನ ಬಸ್‌ಪಾಸ್ ಮತ್ತು ಶುಲ್ಕ ಪಾವತಿ ರಶೀದಿ ಎರಡನ್ನೂ ತೋರಿಸಿ ಪಾಸಿನಲ್ಲಿರುವ ಮಾರ್ಗದಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary

KSRTC has Extended bus pass timings of students of Graduates.

Story first published: Friday, June 30, 2023, 20:30 [IST]

Source link