India
oi-Shankrappa Parangi

ಬೆಂಗಳೂರು, ಜುಲೈ 14: ಇಸ್ರೋದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಆಂಧ್ರದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ 2.35ಕ್ಕೆ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಲಾಗಿದೆ.
ಚಂದ್ರಯಾನ -3 ಚಂದ್ರಯಾನ -2 ರ ಮುಂದುವರೆದ ಭಾಗವಾಗಿದೆ. ಕಳೆದ ಬಾರಿ ಚಂದ್ರನ ಮೇಲ್ಮೈ ಮೇಲೆ ಇಳಿಯಲು ನೌಕೆ ವಿಫಲವಾಗಿತ್ತು. ಈ ಬಾರಿ ಸುರಕ್ಷಿತವಾಗಿ ಚಂದ್ರನ ಮೇಲ್ಮೈ ಮೇಲೆ ನೌಕೆಯನ್ನು ಇಳಿಸಲು ಇಸ್ರೋ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಆಗಸ್ಟ್ 23 ಅಥವಾ 24ರಂದು ನೌಕೆ ಚಂದ್ರನ ಮೇಲ್ಮೈ ಮೇಲೆ ಇಳಿಯುವ ವಿಶ್ವಾಸವಿದೆ.

ಇದುವರೆಗೂ ಚಂದ್ರನ ಮೇಲೆ ನೌಕೆ ಇಳಿಸಲು ಮೂರು ರಾಷ್ಟ್ರಗಳು ಮಾತ್ರ ಸಫಲವಾಗಿವೆ. ಭಾರತದ ಚಂದ್ರಯಾನ-3 ಯಶಸ್ವಿಯಾದರೆ, ಚಂದ್ರನ ಅಂಗಳದ ನೌಕೆ ಇಳಿಸಿದ ನಾಲ್ಕನೇ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಮೆರಿಕ, ರಷ್ಯಾ, ಚೀನಾ ಮಾತ್ರ ಈವರೆಗೆ ಯಶಸ್ವಿಯಾಗಿ ನೌಕೆಯನ್ನು ಚಂದ್ರನ ಮೇಲೆ ಇಳಿಸಿವೆ.
ಚಂದ್ರನ ಮೇಲೆ ಲ್ಯಾಂಡರ್, ರೋವರ್ ಯಂತ್ರ ಇಳಿದು ಮಹತ್ವದ ಅಧ್ಯಯನ ನಡೆಸಲಿವೆ. ಭಾರತದ ಪಾಲಿಗೆ ಇದು ಮಹತ್ವಪೂರ್ಣ ಯೋಜನೆಯಾಗಿದೆ.
ಈ ಬ್ಯಾಹ್ಯಾಕಾಶ ನೌಕೆಯ ಉಡಾವಣೆಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಆಂಧ್ರಪ್ರದೇಶದ ಶ್ರೀಹರಿಕೋಟಾಕ್ಕೆ ಅಪಾರ ಕನ್ನಡಿಗರು ಸೇರಿದಂತೆ ವಿವಿಧ ರಾಜ್ಯಗಳು ಜನರು ಆಗಮಿಸಿದ್ದರು. ಸತೀಶ್ ಧವನ್ ಸ್ಪೇಸ್ ಸೆಂಟರ್ ಮುಂದೆ ಕಿಕ್ಕಿರುದು ಜನ ಸೇರಿದ್ದು ಕಂಡು ಬಂತು.
English summary
India’s much-awaited Chandrayaan 3 successfully launched on July 14 at 2.35 pm.
Story first published: Friday, July 14, 2023, 14:53 [IST]