Bomb Blast: ಒಂದು ಬಾಂಬ್ ಸ್ಫೋಟಕ್ಕೆ 40 ದೇಹಗಳು ಛಿದ್ರ ಛಿದ್ರ! | At Least 40 dead in a deadly bomb blast at Pakistan

International

oi-Malathesha M

|

Google Oneindia Kannada News

ಪೇಶಾವರ: ಸದಾ ಭಯೋತ್ಪಾದಕರನ್ನು ಬೆಳೆಸುತ್ತಾ, ಭಯೋತ್ಪಾದನೆ ಅನ್ನೋ ವಿಷದ ಮರಕ್ಕೆ ನೀರು ಎರೆಯುವ ಪಾಕಿಸ್ತಾನದಲ್ಲಿ ಇಂದು ಹೀನ ಕೃತ್ಯ ನಡೆದಿದೆ. ಪಾಕಿಸ್ತಾನದಲ್ಲಿ ಉಗ್ರರು ನಡೆಸಿದ ಭೀಕರ ಕೃತ್ಯಕ್ಕೆ 40 ಜನರ ದೇಹಗಳು ಛಿದ್ರ ಛಿದ್ರವಾಗಿವೆ. ಇನ್ನು ಭೀಕರ ಸ್ಫೋಟದಲ್ಲಿ ಗಾಯಗೊಂಡ ಜನರ ಸಂಖ್ಯೆ ಶತಕ ದಾಟಿದೆ. ಹಾಗಾದರೆ ಕೃತ್ಯ ನಡೆದಿದ್ದು ಯಾವ ಪ್ರಾಂತ್ಯದಲ್ಲಿ? ನಡೆಸಿದ್ದು ಯಾರು? ಬನ್ನಿ ತಿಳಿಯೋಣ.

ಅರಾಜಕತೆಯ ತವರು ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಿಲ್ಲ. ಅದರಲ್ಲೂ ಪಾಕಿಸ್ತಾನ ಈಗ ಉಗ್ರರ ಕೈಯಲ್ಲಿ ನಲುಗಿ ಹೋಗಿದೆ. ಪಾಕ್‌ನ ಖೈಬರ್ ಪಖ್ತುಂಖ್ವಾ ಭಾಗದಲ್ಲಿ ಇಸ್ಲಾಮಿಕ್ ರಾಜಕೀಯ ಪಕ್ಷದ ಸಭೆ ವೇಳೆ ಡೆಡ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು, 40 ಜನರು ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಹಾಗೇ 100ಕ್ಕೂ ಹೆಚ್ಚು ಜನರು ಗಂಭೀರವಾಗಿದ್ದಾರೆ. ಹೀಗಾಗಿ ಸಾವಿನ ಮತ್ತಷ್ಟು ಹೆಚ್ಚಾಗುವ ಭೀತಿ ಆವರಿಸಿದೆ. ಇಲ್ಲಿನ ಬಜೌರ್‌ನ ಖಾರ್‌ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ ಕಾರ್ಯಕರ್ತರ ಸಮಾವೇಶದಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದೆ. ಹಾಗಾದರೆ ಈ ಸ್ಫೋಟ ಸಂಭವಿಸಿದ್ದು ಹೇಗೆ? ಮುಂದೆ ಓದಿ.

At Least 40 dead in a deadly bomb blast at Pakistan

ತನ್ನನ್ನೇ ಸ್ಫೋಟಿಸಿಕೊಂಡ ಸೂಸೈಡ್ ಬಾಂಬರ್!

ಉಗ್ರರ ಬ್ರೈನ್ ವಾಶ್ ಮಾಡಿದ ನಂತರ ಅವರಿಗೆ ಜೀವದ ಮೇಲೆ ಆಸೆಯೆ ಇರಲ್ಲ ಅನ್ನೋ ಮಾತು ಮತ್ತೆ ಸಾಬೀತಾಗಿದೆ. ಸೂಸೈಡ್ ಬಾಂಬರ್ ಒಬ್ಬ ತನ್ನನ್ನೇ ಸ್ಫೋಟಿಸಿಕೊಂಡಿದ್ದು, ತಕ್ಷಣ ಸಮಾವೇಷ ನಡೆಯುತ್ತಿದ್ದ ಜಾಗ ಸ್ಮಶಾನವಾಗಿದೆ. ಕಡಿಮೆ ಕಡಿಮೆ ಅಂದರೂ ಈ ತನಕ 40 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 150 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಬಾಂಬ್ ಬ್ಲಾಸ್ಟ್‌ನಲ್ಲಿ ಜೆಯುಐ-ಎಫ್ ನಾಯಕ ಮೌಲಾನಾ ಜಿಯಾವುಲ್ಲಾ ಜಾನ್ ಸಹ ಮೃತಪಟ್ಟಿದ್ದು, ಹಲವು ಪತ್ರಕರ್ತರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಅಲ್ಲದೆ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಉಗ್ರರ ದಾಳಿ, ಬದುಕು ಬೀದಿಗೆ..

ಮತ್ತೊಂದ್ಕಡೆ ಈ ಬಾಂಬ್ ಬ್ಲಾಸ್ಟ್ ನಡೆಯುವ ಕೆಲ ಹೊತ್ತಿನ ಹಿಂದೆ ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿಯ ಚೀನಾ ರಾಯಭಾರಿ ಕಚೇರಿ ಹೊರಗೆ ಗುಂಡಿನ ದಾಳಿ ನಡೆದಿತ್ತು. ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು. ಗುಂಡಿನ ಚಕಮಕಿ ನಂತರ, ಖಾಕಿ ಗುಂಡಿಗೆ ಮೂವರು ಭಯೋತ್ಪಾದಕರು ನರಕ ಸೇರಿದ್ದರು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಆದರೆ ಈ ಘಟನೆ ನಡೆದ ಸ್ವಲ್ಪ ಸಮಯಕ್ಕೆ ಮತ್ತೊಂದು ಭೀಕರ ಘಟನೆ ನಡೆದಿದೆ. ಹೀಗಾಗಿ ಇಡೀ ಪಾಕಿಸ್ತಾನ ಬೆಚ್ಚಿಬಿದ್ದಿದ್ದು, ಉಗ್ರ ಕೃತ್ಯದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

At Least 40 dead in a deadly bomb blast at Pakistan

ಒಟ್ನಲ್ಲಿ ಪಾಕಿಸ್ತಾನದಲ್ಲಿ ನಡೆದಿರುವ ಉಗ್ರರ ಹೀನ ಕೃತ್ಯದ ಬಗ್ಗೆ ಇಡೀ ಜಗತ್ತೇ ಆಕ್ರೋಶ ಹೊರಹಾಕುತ್ತಿದೆ. ಅದ್ರಲ್ಲೂ ರಾಯಭಾರ ಕಚೇರಿಗಳನ್ನೂ ಉಗ್ರರು ಟಾರ್ಗೆಟ್ ಮಾಡ್ತಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಈ ವಿಚಾರದ ಬಗ್ಗೆ ಚರ್ಚೆಯೂ ನಡೆಯುತ್ತಿದ್ದು, ಪಾಕಿಸ್ತಾನ ಸರ್ಕಾರ ಮಾತ್ರ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ಇಂತಹ ಬೆಳವಣಿಗೆ ಪಾಕಿಸ್ತಾನದ ಜನರನ್ನ ಮತ್ತಷ್ಟು ರೊಚ್ಚಿಗೆಬ್ಬಿಸಿದೆ. ಅಲ್ಲಿನ ರಾಜಕಾರಣಗಳ ವಿರುದ್ಧ ಅಕ್ರೋಶ ಮೊಳಗುವಂತೆ ಮಾಡಿದೆ.

English summary

At Least 40 dead in a deadly bomb blast at Pakistan.

Story first published: Sunday, July 30, 2023, 20:48 [IST]

Source link