Bollywood
oi-Muralidhar S
2023
ಆರಂಭದಲ್ಲಿ
ಬಾಲಿವುಡ್
ಮಂದಿ
ಸ್ವಲ್ಪ
ನಿಟ್ಟುಸಿರು
ಬಿಟ್ಟಿದ್ದರು.
ಅದಕ್ಕೂ
ಮುನ್ನ
ನಿರಂತರ
ಸೋಲು,
ದಕ್ಷಿಣ
ಭಾರತದ
ಸಿನಿಮಾ
ಏಳಿಕೆ,
ಬಾಕ್ಸಾಫೀಸ್‌ನಲ್ಲಿ
ಸೌತ್
ಸಿನಿಮಾಗಳ
ದರ್ಬಾರ್,
ನಿರಂತರ
ಟೀಕೆ-ಟಿಪ್ಪಣಿಗಳಿಂದ
ಬೇಸತ್ತು
ಹೋಗಿದ್ದರು.
ಇನ್ನು
ತಡೆಯೋಕೆ
ಆಗಲ್ಲ
ಅನ್ನುವಾಗಲೇ
ಬಾಲಿವುಡ್
ಮಂದಿ
ನಿಟ್ಟುಸಿರು
ಬಿಡುವಂತೆ
ಮಾಡಿದ್ದು
ಶಾರುಖ್
ಖಾನ್
ಸಿನಿಮಾ
‘ಪಠಾಣ್’.
ಬಾಲಿವುಡ್
ಬಾಕ್ಸಾಫೀಸ್‌ನಲ್ಲಿ
ಹೊಸ
ದಾಖಲೆಯನ್ನು
ಸೃಷ್ಟಿಸಿತು.
ಮತ್ತೆ
ಶಾರುಖ್
ಖಾನ್
ಬಾಕ್ಸಾಫೀಸ್
ಕಿಂಗ್
ಅಂತ
ಸಾಬೀತು
ಮಾಡಿತ್ತು.

ಈ
ವೇಳೆ
ತಲೆ
ಎತ್ತಿಕೊಂಡು
ಓಡಾಡುತ್ತಿದ್ದ
ಬಾಲಿವುಡ್
ಮಂದಿಗೆ
ಹೆಚ್ಚು
ದಿನ
ಹೀಗೆ
ಗರ್ವದಿಂದ
ಓಡಾಡೋಕೆ
ಆಗಿಲ್ಲ.
ಯಾಕಂದ್ರೆ,
ಈ
ಆರು
ತಿಂಗಳಲ್ಲಿ
ಮೆಗಾ
ಹಿಟ್
ಅಂತ
ಆಗಿದ್ದು
ಇದೊಂದೇ
ಸಿನಿಮಾ.
ಹಾಗಿದ್ರೆ,
ಉಳಿದ
ಸಿನಿಮಾಗಳ
ಗತಿಯೇನು?
ನೋಡೋಣ
ಬನ್ನಿ.
ಬಾಕ್ಸಾಫೀಸ್
ದಾಖಲೆಗಳೆಲ್ಲ
ಪೀಸ್
ಪೀಸ್
ಒಂದು
ಕಾಲದಲ್ಲಿ
ಬಾಕ್ಸಾಫೀಸ್‌ನಲ್ಲಿ
ಅತೀ
ಕಲೆಕ್ಷನ್
ಮಾಡುತ್ತಿದ್ದ
ಬಾಲಿವುಡ್
ಸಿನಿಮಾ
ಸೋಲುತ್ತಲೇ
ಹೋದರೆ
ಹೇಗೆ?
ಒಂದು
ಕಾಲದಲ್ಲಿ
ಮೆರೆಯುತ್ತಿದ್ದ
ಇದೇ
ಮಂದಿ
ದಿಢೀರನೇ
ಮಂಕಾಗಿ
ಹೋಗಿದ್ದರು.
ಆಗಲೇ
ಶಾರುಖ್
ಖಾನ್
ರೀ
ಎಂಟ್ರಿ
ಕೊಟ್ಟಿದ್ದರು.
4
ವರ್ಷಗಳ
ಬಳಿಕ
ಕಿಂಗ್
ಖಾನ್
ಸಿನಿಮಾ
‘ಪಠಾಣ್’
ರಿಲೀಸ್
ಆಯ್ತು.
ಇದು
ಅಲ್ಲಿಗೆ
ಇದ್ದ
ಎಲ್ಲಾ
ದಾಖಲೆಗಳನ್ನೂ
ಕಿತ್ತೊಗೆಯಿತು.

‘ಪಠಾಣ್’
ಬಾಲಿವುಡ್
ಬಾಕ್ಸಾಫೀಸ್‌ನಲ್ಲಿ
543.05
ಕೋಟಿ
ರೂ.
ಕಲೆಕ್ಷನ್
ಮಾಡಿತ್ತು.
ಅಲ್ಲಿವರೆಗೂ
ದಕ್ಷಿಣ
ಭಾರತದ
ಡಬ್
ಸಿನಿಮಾಗಳು
ದಾಖಲೆ
ಬರೆದಿದ್ದವು.
‘ಬಾಹುಬಲಿ
2’
ಹಾಗೂ
‘ಕೆಜಿಎಫ್
2’
ಲಿಸ್ಟ್‌ನಲ್ಲಿತ್ತು.
ಈ
ಎರಡೂ
ಸಿನಿಮಾಗಳ
ದಾಖಲೆ
ಉಡೀಸ್
ಮಾಡಿ
ಟಾಪ್
ಸ್ಥಾನಕ್ಕೆ
ಏರಿತ್ತು.
ಆದರೆ,
ಇದೇ
ಕೊನೆ.
ಇದೂವರೆಗೂ
ಬಾಲಿವುಡ್‌ನ
ಬಾಕ್ಸಾಫೀಸ್‌ನಲ್ಲಿ
ಈ
ಮಟ್ಟಿಗೆ
ಯಾವುದೇ
ಸಿನಿಮಾ
ಸದ್ದು
ಮಾಡಿಲ್ಲ.
ಲಾಭ
ಸ್ವಲ್ಪ
..
ನಷ್ಟ
ದೊಡ್ಡದು
ಕಳೆದ
ವರ್ಷ
ಗೆದ್ದವರೆಲ್ಲ
ಈ
ವರ್ಷ
ಸೋತಿದ್ದರು.
ಕಾರ್ತಿಕ್
ಆರ್ಯನ್
ಸಿನಿಮಾ
‘ಶೆಹಜಾದ’
ಗಳಿಸಿದ್ದು
ಬರೀ
32.20
ಕೋಟಿ
ರೂ.
ಅಕ್ಷಯ್
ಕುಮಾರ್
ಸಿನಿಮಾ
‘ಸೆಲ್ಫಿ’
ಗಳಿಸಿದ್ದು
ಬರೀ
16.85
ಕೋಟಿ
ರೂ.,
ಮಿಸ್ಸಸ್
ಚಟರ್ಜಿ
Vs
ನಾರ್ವೆ
21.67
ಕೋಟಿ
ರೂ.,
ಓಕೆ
ಅಂದ್ರೆ
ರಣ್‌ಬೀರ್
ಕಪೂರ್
ಸಿನಿಮಾ
‘ತೂ
ಜೂಟಿ
ಮೇ
ಮಕ್ಕರ್
149.05
ಕೋಟಿ
ರೂ.
ಕಲೆಕ್ಷನ್
ಮಾಡಿತ್ತು.
2023ರ
ಮೊದಲ
6
ತಿಂಗಳಲ್ಲಿ
ಅತಿಹೆಚ್ಚು
ಗಳಿಸಿದ
ಕನ್ನಡ
ಚಿತ್ರಗಳ
ಪಟ್ಟಿ;
ಯಾವ
ಚಿತ್ರ
ಟಾಪ್?
ಅಜಯ್
ದೇವಗನ್
ಸಿನಿಮಾ
‘ಭೋಲಾ’
82
ಕೋಟಿ
ರೂ.,
ಸಲ್ಮಾನ್
ಖಾನ್
ಸಿನಿಮಾ
‘ಕಿಸಿ
ಕ
ಭಾಯ್
ಕಿಸಿ
ಕ
ಜಾನ್’
110
ಕೋಟಿ
ರೂ.
ಕಲೆಕ್ಷನ್
ಮಾಡಿದೆಯಷ್ಟೇ.
‘ಆದಿಪುರುಷ್’
ಮೇಲೆ
ಇಟ್ಟ
ನಂಬಿಕೆನೂ
ಸುಳ್ಳಾಗಿದೆ.
500
ಕೋಟಿ
ರೂ.
ಬಜೆಟ್
ಸಿನಿಮಾ
ಬರೀ
370
ಕೋಟಿ
ರೂ.
ಗಳಿಸಿದೆ.
ಅದಕ್ಕೆ
ನಿರ್ಮಾಪಕರಿಗೆ
ಎಷ್ಟು
ಲಾಭ
ಆಗಿದೆಯೋ
ಇನ್ನೂ
ರಿವೀಲ್
ಆಗಿಲ್ಲ.
ಹಾಗೆ
ನೋಡಿದ್ರೆ
ಸ್ವಲ್ಪ
ಮರ್ಯಾದೆ
ಉಳಿಸಿದ್ದು
‘ದಿ
ಕೇರಳ
ಸ್ಟೋರಿ’.
ಈ
ಸಿನಿಮಾ
242
ಕೋಟಿ
ರೂ.
ಕಲೆಕ್ಷನ್
ಮಾಡಿದೆ.
ಕೋವಿಡ್
ಬಳಿಕ
ಚೇತರಿಸಿಕೊಂಡಿಲ್ಲ
ಬಾಲಿವುಡ್
ಬಾಲಿವುಡ್
ಸಿನಿಮಾಗಳು
ಕೋವಿಡ್
ಬಳಿಕ
ಸುಮಾರು
2800
ಕೋಟಿ
ರೂಪಾಯಿಯಿಂದ
3500
ಕೋಟಿ
ರೂಪಾಯಿವರೆಗೂ
ಬಾಕ್ಸಾಫೀಸ್
ಕಲೆಕ್ಷನ್
ಆಗಿವೆ.
ಆದ್ರೀಗ
2000
ಕೋಟಿ
ರೂಪಾಯಿ
ಗಡಿದಾಟುವುದಕ್ಕೂ
ಹರಸಾಹಸ
ಪಡುತ್ತಿದೆ.
ಸದ್ಯ
‘ಪಠಾಣ್’
ಒಂದರಿಂದಲೇ
1200
ಕೋಟಿ
ರೂ.
ದಾಟಿದೆ.
ಇನ್ನು
ಆರು
ತಿಂಗಳಲ್ಲಿ
3
ಸಾವಿರ
ಕೋಟಿ
ಗುರಿಯನ್ನು
ಮುಟ್ಟುತ್ತಾರಾ
ಅನ್ನೋದೇ
ಪ್ರಶ್ನೆ.
ಈ
ವರ್ಷ
6
ತಿಂಗಳಲ್ಲಿ
ಸ್ಟಾರ್ಸ್
ಚಿತ್ರಗಳಿಲ್ಲದೇ
ಚಿತ್ರರಂಗ
ಖಾಲಿ
ಖಾಲಿ:
108
ಸಿನಿಮಾಗಳಲ್ಲಿ
ಗೆದ್ದಿದ್ದೆಷ್ಟು?
ಸೋತಿದ್ದೆಷ್ಟು?
ಸದ್ಯ,
ಶಾರುಖ್
ಖಾನ್
ಸಿನಿಮಾ
‘ಜವಾನ್’
ಹಾಗೂ
‘ಡಂಕಿ’
ರಿಲೀಸ್
ಆಗಬೇಕಿದೆ.
ಸಲ್ಮಾನ್
ಖಾನ್
‘ಟೈಗರ್
3’,
ರಣ್‌ಬೀರ್
ಕಪೂರ್
‘ಎನಿಮಲ್’
ಹಾಗೂ
ಅಕ್ಷಯ್
ಕುಮಾರ್
ಸಿನಿಮಾ
‘ಓ
ಮೈ
ಗಾಡ್
3’
ರಿಲೀಸ್
ಆಗಲಿದೆ.
ಇವುಗಳಿಂದ
ಬಾಕ್ಸಾಫೀಸ್
ಕಲೆಕ್ಷನ್
ಆಗುತ್ತಾ?
ಅನ್ನೋದೇ
ವರ್ಷದ
ಕೊನೆಯಲ್ಲಿ
ಗೊತ್ತಾಗಬಹುದು.
English summary
Bollywood Half Year Report 2023; hits and flop movie list, know more.
Wednesday, July 5, 2023, 20:05
Story first published: Wednesday, July 5, 2023, 20:05 [IST]