Black Ordinance: ಭವಿಷ್ಯದ ಸಮಾನ ಮನಸ್ಕ ಸಭೆ, ಮೈತ್ರಿಕೂಟದ ಭಾಗವಾಗಲು ಕಷ್ಟ: ಪಟ್ಟು ಬಿಡದ ಎಎಪಿ | Congress Silence Against Centre Ordinance: Impossible To Be Part Of Alliance In Future, says AAP

India

oi-Shankrappa Parangi

|

Google Oneindia Kannada News

ಪಾಟ್ನಾ, ಜೂನ್ 23: ಕೇಂದ್ರ ಬಿಜೆಪಿ ಸರ್ಕಾರ ದೆಹಲಿಯ ಲೆಫ್ಟಿನಂಟ್ ಕಚೇರಿಗೆ ಹೆಚ್ಚಿನ ಆಡಳಿತ ನೀಡಿ ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ಇಂದು ಜೂನ್ 23 ರಂದು ಶುಕ್ರವಾರ ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಪ್ರಮುಖ ‘ಸಭೆ’ಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಬಿಟ್ಟು ಉಳಿದೆಲ್ಲ ಪಕ್ಷಗಳು ಭಾಗವಹಿಸಿದ್ದವು. ಸುಗ್ರಿವಾಜ್ಞೆ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವ ಸ್ಪಷ್ಟಪಡಿಸದಿದ್ದರೆ ಭವಿಷ್ಯ ಸಮಾನ ಮನಸ್ಕ ಸಭೆಗಳಲ್ಲಿ ಭಾಗವಹಿಸುವುದು ಕಷ್ಟವಾಗಲಿದೆ ಎಂದು ಆಮ್ ಆದ್ಮಿ ಪಕ್ಷ (AAP) ತಿಳಿಸಿದೆ.

ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಬಿಹಾರ್ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಮಹತ್ವ ಸಭೆ ನಡೆಯಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾಗವಹಿಸಿದ್ದರು. ಸಭೆ ನಂತರ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಮಾತನಾಡಿ, ಪಾಲ್ಗೊಂಡಿದ್ದ ಪಕ್ಷಗಳು ಕೇಂದ್ರದ ವಿರುದ್ಧ ತಮ್ಮ ನಿಲುವು ಸ್ಪಷ್ಟಪಡಿಸಿವೆ. ಮುಂದಿನ ಚುನಾವಣೆ ಬಗ್ಗೆಯೂ ಇಂದು ಚರ್ಚೆಗಳಾಗಿವೆ.

Congress Silence Against Centre Ordinance: Impossible To Be Part Of Alliance In Future, says AAP

ದೆಹಲಿಗೆ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಕಪ್ಪು ಸುಗ್ರಿವಾಜ್ಞೆ ಎಂದು ಎಎಪಿ ಕರೆದಿದೆ. ಕಾಂಗ್ರೆಸ್ ಸಾರ್ವಜನಿಕವಾಗಿ ಖಂಡಿಸುವವರೆಗೆ ಮತ್ತು ರಾಜ್ಯಸಭೆಯಲ್ಲಿ ತನ್ನ ಎಲ್ಲಾ 31 ಆರ್‌ಎಸ್ ಸಂಸದರು ಸುಗ್ರೀವಾಜ್ಞೆಯನ್ನು ವಿರೋಧಿಸುವುದಾಗಿ ಘೋಷಿಸುವವರೆಗೆ, ಭವಿಷ್ಯದ ಸಮಾನ ಮನಸ್ಕ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಎಪಿ ಹೇಳಿದೆ.

ಕೇಂದ್ರದ ವಿರುದ್ಧ ರಾಜ್ಯಸಭೆಯಲ್ಲಿ ಧ್ವನಿ ಎತ್ತಲು ಸಜ್ಜು

ಒಟ್ಟು 15 ಪಕ್ಷಗಳ ಪೈಕಿ ಪಾಟ್ನಾದಲ್ಲಿ ಸಮಾನ ಮನಸ್ಕ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿವೆ, ಆ ಪೈಕಿ 12 ರಾಜ್ಯಸಭೆಯಲ್ಲಿ ಪ್ರಾತಿನಿಧ್ಯ ಹೊಂದಿವೆ. ಕಾಂಗ್ರೆಸ್ ಬಿಟ್ಟು ಉಳಿದೆಲ್ಲವು ಕೇಂದ್ರ ವಿರುದ್ಧ ಧ್ವನಿ ಎತ್ತಿವೆ. ಅವರೆಲ್ಲರೂ ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಸುಗ್ರಿವಾಜ್ಞೆ ವಿರೋಧಿಸಲಿವೆ. ಇದರೊಂದಿಗೆ ಸಭೆಯಲ್ಲಿ 2024ರ ಲೋಕಸಭೆ ಚುನಾವಣೆ ಕಾರ್ಯತಂತ್ರದ ಬಗ್ಗೆಯು ವಿಪಕ್ಷಗಳು ಚರ್ಚಿಸಿವೆ.

ಕಪ್ಪು ಸುಗ್ರೀವಾಜ್ಞೆಯು ದೆಹಲಿಯಲ್ಲಿ ಚುನಾಯಿತ ಸರ್ಕಾರದ ಪ್ರಜಾಸತ್ತಾತ್ಮಕ ಹಕ್ಕು ಕಸಿದುಕೊಳ್ಳುವ ಹುನ್ನಾರ ನಡೆಸಲಾಗಿದೆ.

Congress Silence Against Centre Ordinance: Impossible To Be Part Of Alliance In Future, says AAP

ಬಹುತೇಕ ಎಲ್ಲಾ ವಿಷಯಗಳ ಬಗ್ಗೆ ನಿಲುವು ತೆಗೆದುಕೊಳ್ಳುವ ಕಾಂಗ್ರೆಸ್, ಕಪ್ಪು ಸುಗ್ರೀವಾಜ್ಞೆಯ ಬಗ್ಗೆ ತನ್ನ ನಿಲುವನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಬದಲಾಗಿ ದೆಹಲಿ ಮತ್ತು ಪಂಜಾಬ್ ಕಾಂಗ್ರೆಸ್ ಘಟಕಗಳು ಮೋದಿ ಸರ್ಕಾರ ಬೆಂಬಲಿಸುವ ಬಗ್ಗೆ ಘೋಷಣೆ ಮಾಡಿವೆ.

ಕಾಂಗ್ರೆಸ್‌ ಮೌನ: ಹಲವು ರಾಜಕೀಯ ಅನುಮಾನ

ಹೀಗಿದ್ದಾಗ ಎಎಪಿಯು ವಿಪಕ್ಷಗಳ ತಂಡದ ಜೊತೆಗೆ ಕಾರ್ಯನಿರ್ವಹಿಸುವುದು, ಮೈತ್ರಿಕೂಟಗಳ ಭಾಗವಾಗಲು ಕಷ್ಟುವೆನಿಸುತ್ತದೆ. ಇದೆಲ್ಲ ಕಾರಣದಿಂದ ಕಾಂಗ್ರೆಸ್‌ನ ಮೌನ ವಹಿಸುವ ಮೂಲಕ ಹಲವು ರಾಜಕೀಯ ಅನುಮಾನಗಳನ್ನು ಹುಟ್ಟು ಹಾಕುತ್ತದೆ.

ಕಾಂಗ್ರೆಸ್ ಪಕ್ಷ ಹಿರಿಯ ನಾಯಕರು ರಾಜ್ಯಸಭೆಯಲ್ಲಿ ವೈಯಕ್ತಿಕ ಚರ್ಚೆ ಮತ್ತು ತಮ್ಮ ಪಕ್ಷವು ಅನೌಪಚಾರಿಕ/ ಔಪಚಾರಿಕ ಚರ್ಚೆಗಳಿಂದ ದೂರು ಉಳಿಯುವ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ದೆಹಲಿಯ ಜನರೊಂದಿಗೆ ನಿಲ್ಲಬೇಕೋ ಅಥವಾ ಮೋದಿ ಸರ್ಕಾರದೊಂದಿಗೆ ನಿಲ್ಲಬೇಕೋ ಎಂಬುದನ್ನು ನಿರ್ಧರಿಸುವ ಸಮಯ ಇದು ಎಂದು ಎಎಪಿ ಗುಡುಗಿದೆ.

ಕೇಂದ್ರವು ಕಳೆದ ತಿಂಗಳ ಮೇ 19 ರಂದು ದೆಹಲಿಯ ಲೆಫ್ಟಿನಂಟ್ ಕಚೇರಿಗೆ ಹೆಚ್ಚಿನ ಆಡಳಿತ ನೀಡಿ ಸುಗ್ರೀವಾಜ್ಞೆ ಹೊರಡಿಸಿದೆ.

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ಕಾಯಿದೆ, 1991 ಅನ್ನು ತಿದ್ದುಪಡಿ ಮಾಡಲು ತಂದ ಸುಗ್ರೀವಾಜ್ಞೆ ಇದಾಗಿದೆ. ಇಲ್ಲಿನ ಆಡಳಿತ ಪಕ್ಷದ ಹಕ್ಕನ್ನು ಕಸಿಯುವ ಯತ್ನ ಇದಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.

English summary

Congress silence against centre ordinance: Impossible to be part of alliance in future, says AAP.

Story first published: Friday, June 23, 2023, 20:02 [IST]

Source link