Bhagyalakshmi: ಮನೆಯವರ ಮುಂದೆ ಮೈ ಮೇಲೆ ಬರೆ ಬರುವಂತೆ ತಾಂಡವ್.. ಈ ಹಿಂದಿನ ಪ್ಲ್ಯಾನ್ ಏನು? | Colors Kannada Bhagyalakshmi serial Written Update on June 22nd episode

bredcrumb

Tv

oi-Muralidhar S

By ಎಸ್ ಸುಮಂತ್

|

ತನ್ನ
ಕಡೆ
ಗಮನ
ಇಲ್ಲ
ಅಂತ
ಮುಂಬೈಗೆ
ಹೋಗುವ
ನಾಟಕವಾಡಿದ್ದ
ತಾಂಡವ್.
ಮನೆ
ಬಿಟ್ಟು
ಹೋಗ್ತೀನಿ
ಅಂದ್ರೆ
ಮನೆಯವರೆಲ್ಲ
ಕರಗಿ
ಹೋಗ್ತಾರೆ
ಎಂದುಕೊಂಡಿದ್ದ.
ಆದರೆ,
ಅದ್ಯಾವುದು
ತಾಂಡವ್
ಅಂದುಕೊಂಡಂತೆ
ಆಗಲೇ
ಇಲ್ಲ.
ಕುಸುಮಾಗೆ
ತನ್ನ
ಸೊಸೆಯೇ
ಹೆಚ್ಚಾದಳು.
ಸೊಸೆಯನ್ನು
ಓದಿಸಿಯೇ
ಓದಿಸ್ತೀನಿ
ಅಂತ
ಹಠ
ಹಿಡಿದಿದ್ದಳು.
ಮುಂಬೈಗೆ
ಹೊರಟವನನ್ನು
ಅಲ್ಲಿಯೇ
ಬಿಟ್ಟು
ಬಂದಳು.
ಅದ್ಯಾವಾಗ
ಬೀದಿ
ಪಾಲಾಗುವ
ಸೂಚನೆ
ಸಿಕ್ಕಿತೋ
ಆಗ
ನಾಟಕವಾಡಿ
ಮನೆಗೆ
ಬಂದಿದ್ದಾನೆ.

ತಾಂಡವ್
ಟಾರ್ಗೆಟ್
ಇರುವುದೇ
ಭಾಗ್ಯಾಳ‌
ಮೇಲೆ.
ಭಾಗ್ಯಾ
ತನ್ನ
ಹೆಂಡತಿ,
ಮಕ್ಕಳಿಗೆ
ತಾಯಿ
ಎಂಬುದನ್ನು
ಮರೆತು
ದ್ವೇಷ
ಮಾಡುತ್ತಿದ್ದಾನೆ.
ಈಗ
ಮನೆಯವರ
ಮುಂದೆಲ್ಲ
ನಾಟಕ
ಮಾಡಿ,
ಮರಳು
ಮಾಡುವುದಕ್ಕೆ
ಹೊರಟಿದ್ದಾನೆ.
ಆದರೆ,

ನಾಟಕದ
ಹಿಂದೆ
ದೊಡ್ಡದೊಂದು
ಸಂಚು
ಅಡಗಿದೆ.

Colors Kannada Bhagyalakshmi serial Written Update on June 22nd episode

ಬಾಸುಂಡೆ
ಬರುವಂತೆ
ಹೊಡೆದುಕೊಂಡ
ತಾಂಡವ್

ತಾಂಡವ್
ತಾನೂ
ಬದಲಾಗಿದ್ದೀನಿ,
ಮಾಡಿದ
ತಪ್ಪಿಗೆ
ಕ್ಷಮೆ
ಕೇಳಬೇಕು
ಎಂಬುದನ್ನು
ಮನೆಯವರ
ಮುಂದೆ
ಪ್ರೂವ್
ಮಾಡುವುದಕ್ಕೆ,
ತನಗೆ
ತಾನೇ
ಶಿಕ್ಷೆ
ಕೊಟ್ಟುಕೊಂಡ.
ಪಶ್ಚಾತ್ತಾಪದ
ವ್ರತ
ಮಾಡಿ,
ಮೈಯೆಲ್ಲಾ
ಬಾಸುಂಡೆ
ಬರುವಂತೆ
ಹೊಡೆದುಕೊಂಡ.
ಮನೆಯವರೆಲ್ಲ
ಅದನ್ನು
ನೋಡಿ
ಶಾಕ್
ಆದ್ರು.
ಮಕ್ಕಳು
ಗಾಬರಿಯಾದ್ರು.
ಎಲ್ಲರೂ
ಬೇಡ
ಬೇಡ
ಎನ್ನುತ್ತಿದ್ದರು
ತಾಂಡವ್
ನಿಲ್ಲಿಸದೆ
ಬಾರಿಸಿಕೊಂಡು
ಎಲ್ಲರ
ಗಮನ
ಸೆಳೆದಿದ್ದಾನೆ.

Bhagyalakshmi: ಪಂಚೆ ಉಟ್ಟು.. ಶಲ್ಯ ತೊಟ್ಟು.. ನೀರಲ್ಲಿ ಮುಳುಗಿದ್ರೂ ತಾಂಡವ್ ಬದಲಾಗಿರೋದನ್ನು ವೀಕ್ಷಕರು ಒಪ್ತಿಲ್ಲ!Bhagyalakshmi:
ಪಂಚೆ
ಉಟ್ಟು..
ಶಲ್ಯ
ತೊಟ್ಟು..
ನೀರಲ್ಲಿ
ಮುಳುಗಿದ್ರೂ
ತಾಂಡವ್
ಬದಲಾಗಿರೋದನ್ನು
ವೀಕ್ಷಕರು
ಒಪ್ತಿಲ್ಲ!

ಅಮ್ಮನ
ಮನಸ್ಸು
ಬದಲಾಗಿ
ಬಿಡ್ತು

ತಾಂಡವ್
ತನಗೆ
ತಾನೇ
ಕೊಟ್ಟುಕೊಂಡ
ಶಿಕ್ಷೆ
ಕಂಡು,
ಅಪ್ಪ
ಅಮ್ಮ,
ಹೆಂಡತಿ
ಮಕ್ಕಳು
ಗಾಬರಿಯಾದ್ರು.
ಹಿಂಗೆ
ಬಿಟ್ರೆ
ಇನ್ನಷ್ಟು‌
ನೋವು
ಮಾಡಿಕೊಳ್ಳುತ್ತಾನೆ
ಅನ್ನೋದಂತು
ಕನ್ಫರ್ಮ್
ಆಯ್ತು.
ಕುಸುಮಾ,
ತನ್ನ
ಮಗನ
ಕೈಯಿಂದ
ಚಾಟಿ
ಕಿತ್ತುಕೊಂಡಳು.
ಕ್ಷಮಿಸಿದ್ದೀನಿ,
ಬಿಡು
ಎಂದಾಗ
ತಾಂಡವ್
ಸುಮ್ಮನೆ
ಆದ.
ದೇವರಿಗೆ
ಪೂಜೆ
ಮಾಡಿಸಿ,
ಮನೆ
ಕಡೆ
ಬಂದರು.
ಕುಸುಮಾಗಂತು
ತನ್ನ
ಮಗನ
ಒಳ್ಳೆಯತನ
ನೋಡಿ
ಖುಷಿಯೋ
ಖುಷಿ.
ತಾನೇ
ಕಲಿಸಿಕೊಟ್ಟ
ವಿಧ್ಯೆ
ಇದು
ಅಂತ
ಸಿಕ್ಕಾಪಟ್ಟೆ
ಬೀಗುತ್ತಿದ್ದಳು.

ತಾಂಡವ್‌ನಿಂದ
ಇನ್ಮುಂದೆ
ನಾಟಕ
ಶುರು

ತಾಂಡವ್‌ಗೆ
ತನ್ನ
ಹಠದಿಂದ
ಏನನ್ನು
ಸಾಧಿಸಲು
ಸಾಧ್ಯವಿಲ್ಲ
ಅನ್ನೋದಂತು
ಗೊತ್ತಾಯ್ತು.
ಅದಕ್ಕೆ
ನಾಟಕ
ಶುರು
ಮಾಡಿಕೊಂಡಿದ್ದಾನೆ.

ನಾಟಕದಲ್ಲಿ
ತನಗೆ
ದೇಹ
ಪೂರ್ತಿ
ಪೆಟ್ಟಾದರೂ
ಸರಿ,
ಆದರೆ
ಭಾಗ್ಯಾಳ
ಮೇಲಿನ
ದ್ವೇಷವನ್ನಂತು
ತೀರಿಸಿಕೊಳ್ಳಬೇಕು.
ಅದಕ್ಕೆ
ಮನೆಗೆ
ಬಂದು
ಮನಸ್ಸಲ್ಲಿಯೇ
ಮಾತಾಡಿಕೊಂಡಿದ್ದಾನೆ.
“ಇನ್ಮುಂದೆ
ನೀನಾಡುವಂತೆ
ನಾನು
ನಾಟಕವಾಡುತ್ತೀನಿ.

ನಾಟಕದಲ್ಲಿ
ನಿನಗೆ
ಪೆಟ್ಟು
ಕೊಟ್ಟೆ
ಕೊಡ್ತೀನಿ.
ಈಗ
ನಾನು
ತಿಂದಿರುವ
ಒದೆಗೆ
ಡಬಲ್
ಪೆಟ್ಟು
ನಿನಗೆ
ಸಿಗುತ್ತೆ”
ಅಂತ
ಮತ್ತೆ
ದ್ವೇಷ
ಕಾರಿದ್ದಾನೆ.

Colors Kannada Bhagyalakshmi serial Written Update on June 22nd episode

ಪ್ರೀತಿ
ನಾಟಕವಾಡಿ
ಕತ್ತಿ
ಮಸೆಯುತ್ತಿದ್ದಾನೆ

ಭಾಗ್ಯಾಳಿಗೆ
ತನ್ನ
ಗಂಡನ
ನಾಟಕ
ತಿಳಿದಿಲ್ಲ.
ಅದಕ್ಕೆಂದೇ
ಗಂಡನಿಗಾದ
ಗಾಯಕ್ಕೆ
ಮುಲಾಮು
ಹಚ್ಚುತ್ತೀನಿ
ಅಂತ
ಬಂದಿದ್ದಾಳೆ.
ಭಾಗ್ಯಾಳ
ಪ್ರೀತಿಗೆ
ತಾಂಡವ್
ಕೈ
ಮುಗಿದು
ನಮಿಸಿದ್ದಾನೆ.
ನೀನೆಷ್ಟು
ಒಳ್ಳೆಯವಳು,
ಮುಗ್ಧೆ
ಅಂತ
ಪ್ರೀತಿಯಿಂದ
ಯಾಮಾರಿಸಿದ್ದಾನೆ.
ಇನ್ಮುಂದೆ,
ನಿನ್ನನ್ನು
ಪ್ರೀತಿಯಿಂದ
ನೋಡಿಕೊಳ್ಳುತ್ತೀನಿ.
ಮಕ್ಕಳಿಗೆ
ಹೀರೋ
ಆಗಿರ್ತೀನಿ
ಅಂತ,
ತಬ್ಬಿಕೊಂಡಿದ್ದಾನೆ.
ಆಗಲು
ಅವನ
ಮನಸ್ಸಲ್ಲಿ
ಭಾಗ್ಯಾಳನ್ನು
ಹೇಗೆ
ನೋಯಿಸಬೇಕು?
ಹೇಗೆ
ಶಿಕ್ಷೆ
ನೀಡಬೇಕು
ಎಂಬುದೇ
ಅವನ
ಮನಸ್ಸಲ್ಲಿ
ಓಡುತ್ತಾ
ಇದೆ.
ಇದರಿಂದ
ಭಾಗ್ಯಾ
ಬಚಾವ್
ಆಗುವುದಾದರೂ
ಹೇಗೊ
ತಿಳಿಯದು.

English summary

Colors Kannada Bhagyalakshmi serial Written Update on June 22nd episode. Here is the details Tandav Drama start.

Thursday, June 22, 2023, 20:44

Story first published: Thursday, June 22, 2023, 20:44 [IST]

Source link