Bengaluru
oi-Shankrappa Parangi
ಬೆಂಗಳೂರು, ಜೂನ್ 25: ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಬಡಾವಣೆಯಗಳಲ್ಲಿ ಭಾನುವಾರ ಸಂಜೆ ಭರ್ಜರಿ ಮಳೆ ಮುಂದುವರಿಯಿತು. ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದಲ್ಲಿ ಅಧಿಕ ಮಳೆ ದಾಖಲಾಗಿದೆ. ಮುಂದಿನ ಹಲವು ದಿನ ಇದೇ ರೀತಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಭಾನುವಾರ ಎಂದಿನಂತೆ ಇದ್ದ ಬಿಸಿಲಿನ ವಾತಾವರಣ ಸಂಜೆ ನಂತರ ಮರೆಯಾಗಿ ಬಹುತೇಕ ಬಡಾವಣೆಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಿತು. ದಾಸರಹಳ್ಳಿ ವಲಯದ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಅಧಿಕ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಪೀಣ್ಯ ಕೈಗಾರಿಕೆ ಪ್ರದೇಶ ಸೇರಿದಂತೆ ದಾಸರಹಳ್ಳಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಮಳೆಯ ಆರ್ಭಟ ತುಸು ಹೆಚ್ಚಿತ್ತು. ಹೀಗಾಗಿ ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಉಕ್ಕಿ ಹರಿಯಿತು. ಇಲ್ಲಿನ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತು. ಪರಿಣಾಮ ಕೆಲವು ಮನೆಗಳ ಮಾಲೀಕರು ಸಂಕಷ್ಟ ಎದುರಿಸಿದರು.
ಹಲವೆಡೆ ಬಿದ್ದ ತುಂತುರ ಮಳೆ
ಇದರೊಂದಿಗೆ ಗೊರಗುಂಟೆಪಾಳ್ಯ, ಜಾಲಹಳ್ಳಿ, ಯಶವಂತಪುರ, ಮಲ್ಲೇಶ್ವರಂ, ವಿದ್ಯಾರಣ್ಯಪುರ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳು, ಚಾಮರಾಜಪೇಟೆ, ಹೆಬ್ಬಾಳ, ಯಲಹಂಕ, ರಾಜಾಜಿನಗರ, ವಿಜಯನಗರ, ಹಂಪಿನಗರ, ಚಂದ್ರಾಲೇಔಟ್ ಸೇರಿದಂತೆ ನಗರದ ಇನ್ನಿತರ ಭಾಗಗಳಲ್ಲಿ ತುಂತುರು ಮಳೆ ದಾಖಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯ ವಿವಿಧೆಡೆ ಮುಂಗಾರು ಸಕ್ರಿಯಗೊಂಡಿದೆ. ತಡವಾಯಿತಾದರೂ ರಾಜ್ಯದಲ್ಲಿ ಸಾಮಾನ್ಯವಾಗಿ ವಾಡಿಕೆಯಷ್ಟು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಇನ್ನೂ ಬೆಂಗಳೂರಿನಲ್ಲಿ ಪ್ರತಿ ಭಾರಿ ಮೇ ತಿಂಗಳಿನಲ್ಲಿ ಉತ್ತಮ ಮಳೆ ಆಗುತ್ತಿತ್ತು. ಆದರೆ ಈ ಭಾರಿ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಮಳೆ ತಡವಾಯಿತು. ಅಲ್ಲದೇ ಕಳೆದ ಕೆಲವು ದಿನಗಳಿಂದ ನಗರದಲ್ಲಿ ಬ್ರೇಕ್ ನೀಡಿದ್ದ ವರುಣ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾನೆ.
ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ
ದಾಸರಹಳ್ಳಿ ವ್ಯಾಪ್ತಿಯ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ 30ಮಿಲಿ ಮೀಟರ್, ಬಾಗಲಕುಂಟೆ 28.5ಮಿಮಿ, ಶೆಟ್ಟಿಹಳ್ಳಿ 28ಮಿಮಿ, ನಂದಿನಿ ಬಡಾವಣೆ 21 ಮಿಮಿ, ದೊಡ್ಡಬಿದಕಲ್ಲು, 25.5 ಮಿಮಿ, ನಾಗಪುರ 21ಮಿಮಿ, ಹೆಗ್ಗನಹಳ್ಳಿ 18ಮಿಮಿ, ರಾಜಮಹಲ್ ಗುಟ್ಟಹಳ್ಳಿ 18 ಮಿಮಿ, ಹೊರಮಾವು 14ಮಿಮಿ, ಹೆರೋಹಳ್ಳಿ 13.5 ಮಿಮಿ, ದಯಾನಂದ ಸಾಗರ 13ಮಿಮಿ, ರಾಜಾಜಿನಗರ 13 ಮಿಮಿ, ಮಾರಪ್ಪನಪಾಳ್ಯ 11.5 ಮಿಮಿ ಮತ್ತು ವಿದ್ಯಾರಣ್ಯಪುರ, 11.5 ಮಿಮಿ ಮಳೆ ದಾಖಲಾಗಿದೆ.
ಜೂನ್ 29 ರವರೆಗೆ ಸಾಧಾರಣದಿಂದ ಉತ್ತಮ ಮಳೆ
ಬೆಂಗಳೂರು ನಗರದಲ್ಲಿ ಮುಂದಿನ ಜೂನ್ 29 ರವರೆಗೆ ಸಧಾರಣದಿಂದ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ. ಮುಂದಿನ ಐದು ದಿನ ಸಂಜೆಯಿಂದ ತಡರಾತ್ರಿವರೆಗೂ ಮಳೆ ಬರಲಿದೆ. ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಸಂಭವವಿದೆ. ಈ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
English summary
Bengaluru rains: Dasarahalli zone light to moderate rain record in sunday night, rain will continue till June 29 th.
Story first published: Sunday, June 25, 2023, 21:21 [IST]