Bengaluru Metro: ನಾಗಸಂದ್ರದಿಂದ ಮಾದಾವರ ಹಸಿರು ಮಾರ್ಗ ಅಕ್ಟೋಬರ್ ವೇಳೆಗೆ ಕಾರ್ಯಾಚರಣೆ | Nagasandra to Madavara Metro Operations to Begin in October

Bengaluru

oi-Naveen Kumar N

|

Google Oneindia Kannada News

ಬೆಂಗಳೂರು, ಜುಲೈ 27: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಮತ್ತೊಂದು ಮಾರ್ಗ ಇನ್ನೊಂದು ತಿಂಗಳಲ್ಲಿ ಸಜ್ಜಾಗಲಿದೆ. ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗೆ ಮೆಟ್ರೋ ರೈಲು ಸಂಚಾರ ಅಕ್ಟೋಬರ್ ತಿಂಗಳಿನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.

ನಾಗಸಂದ್ರದಿಂದ ಮಾದಾವರವರೆಗಿನ ಹಸಿರು ಮಾರ್ಗದ ವಿಸ್ತರಣೆಯ ಭಾಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಬಳಿ ನೈಸ್‌ ಪೆರಿಫೆರಲ್‌ ರಿಂಗ್‌ ರಸ್ತೆಯ ಮೇಲಿದ್ದ ವೈಡಕ್ಟ್‌ ಕಟ್ಟಡದ ಅಡಚಣೆಯನ್ನು ತೆರವುಗೊಳಿಸಿದೆ.

Nagasandra to Madavara Metro Operations to Begin in October

ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿ, ಪೆರಿಫೆರಲ್‌ ರಿಂಗ್‌ ರಸ್ತೆಯ ಮೇಲೆ ಯಾವ ಎತ್ತರದಲ್ಲಿ ಉಕ್ಕಿನ ಗರ್ಡರ್‌ಗಳನ್ನು ಎನ್ನುವುದರ ಕುರಿತು ಇದ್ದ ಆತಂಕಗಳನ್ನು ದೂರ ಮಾಡಲಾಗಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ (NICE) ಈ ಬಗ್ಗೆ ಪ್ರಶ್ನೆ ಮಾಡಿತ್ತು, ಈಗ ಎಲ್ಲಾ ಗೊಂದಲಗಳು ನಿವಾರಣೆಯಾಗಿದೆ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

“ಬಿಎಂಆರ್‌ಸಿಎಲ್‌ ಅಸ್ತಿತ್ವದಲ್ಲಿರುವ ನೈಸ್ ರಸ್ತೆಯ ಮೇಲೆ ಮೆಟ್ರೋ ಮಾರ್ಗವನ್ನು ನಿರ್ಮಿಸುವ ಕುರಿತು ನೈಸ್ ಮತ್ತು ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ನೊಂದಿಗೆ ತ್ರಿಪಕ್ಷೀಯ ಒಪ್ಪಂದವನ್ನು ಮಾಡಿಕೊಂಡಿತು. ರಸ್ತೆಯ ಸಮೀಪವಿರುವ ಮೆಟ್ರೊದ ಎಲಿವೇಟೆಡ್ ಲೈನ್‌ನ ಎತ್ತರವು ಸಾಕಾಗುವುದಿಲ್ಲ ಎಂದು ಮೊದಲು ಕಳವಳ ವ್ಯಕ್ತಪಡಿಸಲಾಯಿತು. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾನದಂಡಗಳ ಪ್ರಕಾರ, ಎತ್ತರವು 5.5 ಮೀಟರ್ ಆಗಿರಬೇಕು, ಆದರೆ ನಮ್ಮ ವಯಡಕ್ಟ್‌ಗಳು 5.8 ಮೀಟರ್ ಎತ್ತರದಲ್ಲಿದೆ. ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದರು,” ಎಂದು ಮಾಹಿತಿ ನೀಡಿದ್ದಾರೆ.

ಸ್ಟೀಲ್ ಗರ್ಡರ್ ಅಳವಡಿಕೆ

ಕೆಲವು ದಿನಗಳ ಹಿಂದೆ, ಬಿಎಂಆರ್‌ಸಿಎಲ್‌ ಕ್ರೇನ್‌ಗಳ ಸಹಾಯದಿಂದ ನೈಸ್ ರಸ್ತೆಯ ಉದ್ದಕ್ಕೂ ಸ್ಟೀಲ್ ಗರ್ಡರ್ ಅನ್ನು ಅಳವಡಿಸಿದೆ. ಇದರ ಉದ್ದ 53 ಮೀಟರ್. “ನಾವು ಮೆಟ್ರೋ ಕಾರಿಡಾರ್‌ನ ಲೂಪ್ ಲೈನ್‌ನಲ್ಲಿ ಗರ್ಡರ್ ಅನ್ನು ಇರಿಸುವ ಕೆಲಸವನ್ನು ಸಹ ಪೂರ್ಣಗೊಳಿಸಿದ್ದೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಗಸಂದ್ರದಿಂದ ಮಾದಾವರ (BIEC) ವರೆಗೆ ವಿಸ್ತೃತ ಹಸಿರು ಮಾರ್ಗವು ಅಕ್ಟೋಬರ್ ವೇಳೆಗೆ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಪರ್ವೇಜ್ ಹೇಳಿದರು. ಈ ಹಿಂದೆ, ಬಿಎಂಆರ್ ಸಿಎಲ್ ನೇರಳೆ ಮಾರ್ಗದ ಇತರ ಎರಡು ರೀಚ್‌ಗಳೊಂದಿಗೆ (ಕೆಆರ್ ಪುರದಿಂದ ಬೈಯಪ್ಪನಹಳ್ಳಿ ಮತ್ತು ಕೆಂಗೇರಿಯಿಂದ ಚಲ್ಲಘಟ್ಟ) ಮಾರ್ಗವನ್ನು ಆಗಸ್ಟ್‌ನಲ್ಲಿ ತೆರೆಯಲು ಯೋಜಿಸಿತ್ತು ಆದರೆ ಈಗ ದಿನಾಂಕ ಮುಂದಕ್ಕೆ ಹಾಕಲಾಗಿದೆ.

2ನೇ ಹಂತದ ಅಡಿಯಲ್ಲಿ, ಬಿಎಂಆರ್ ಸಿಎಲ್ ಹಸಿರು ಮಾರ್ಗವನ್ನು ನಾಗಸಂದ್ರದಿಂದ ಮಾದಾವರ (BIEC) ವರೆಗೆ 3km ವರೆಗೆ ವಿಸ್ತರಿಸಿದೆ. ಮೂರು ನಿಲ್ದಾಣಗಳ ಪೈಕಿ ಮಜುನಾಥನಗರ ಮತ್ತು ಚಿಕ್ಕಬಿದರಕಲ್ಲು ನಿಲ್ದಾಣಗಳ ಕಾಮಗಾರಿಯು ಪೂರ್ಣಗೊಂಡಿದೆ, ಆದರೆ ಮಾದಾವರದಲ್ಲಿ ನಿರ್ಮಾಣ ಕಾಮಗಾರಿ ಇನ್ನೂ ಚಾಲನೆಯಲ್ಲಿದೆ.

ನಿರ್ಮಾಣ ಸಂಸ್ಥೆಯು ಆರ್ಥಿಕ ತೊಂದರೆ, ಭೂಸ್ವಾಧೀನ ವಿಳಂಬ ಸೇರಿದಂತೆ ಹಲವಾರು ಅಡೆತಡೆಗಳನ್ನು ಎದುರಿಸುತ್ತಿರುವ ಕಾರಣ ಈ ಮೂರು ಕಿಲೋ ಮೀಟರ್ ಮಾರ್ಗದ ನಿರ್ಮಾಣ 5 ವರ್ಷಗಳಷ್ಟು ತಡವಾಗಿದೆ.

English summary

BMRCL successfully clears hurdle of building viaduct above NICE peripheral ring road for the extended Green Line. The new segment from Nagasandra to Madavara set to begin operations in October.

Story first published: Thursday, July 27, 2023, 15:42 [IST]

Source link