Bengaluru: ಯಶವಂತಪುರ ರೈಲು ನಿಲ್ದಾಣದಲ್ಲಿ ಸುಸಜ್ಜಿತ ‘ರೂಫ್ ಪ್ಲಾಜಾ’ ಅಭಿವೃದ್ಧಿ, ಏನಿದು? | Central Decide To Make Roof Plaza In Bengaluru Yeshwanthpur Railway station

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜಲೈ 06: ಮುಂದಿನ ಮೂರು ವರ್ಷಗಳಲ್ಲಿ ರಾಜಧಾನಿ ಬೆಂಗಳೂರಿನ ಯಶವಂತರಪುರ ರೈಲ್ವೆ ನಿಲ್ದಾಣದಲ್ಲಿ ಕಣ್ಣು ಕುಕ್ಕುವ ರೀತಿಯಲ್ಲಿ ‘ರೂಫ್ ಪ್ಲಾಜಾ’ ಸೌಲಭ್ಯಗಳು ತಲೆ ಎತ್ತಲಿವೆ. ಈ ಕುರಿತು ಈಗಾಗಲೇ ನಿರ್ಧರಿಸಿರುವ ಭಾರತೀಯ ರೈಲ್ವೆ ಇಲಾಖೆಯು ರೈಲು ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯಡಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಪ್ರೀಮಿಯಂ ವೇಟಿಂಗ್ ಲಾಂಜ್‌ಗಳು, ಕೆಫೆಟೇರಿಯಾಗಳು, ಫುಡ್ ಕೋರ್ಟ್‌ಗಳು ಮತ್ತು ಮಕ್ಕಳಿಗಾಗಿ ಸಣ್ಣ ಆಟದ ಪ್ರದೇಶಗಳಂತಹ ವಿಶ್ವದರ್ಜೆಯ ಸೌಕರ್ಯ ಈ ‘ರೂಫ್ ಪ್ಲಾಜಾ’ ವ್ಯವಸ್ಥೆಯಡಿ ಬರಲಿವೆ ಎಂದು ‘ಮನಿಕಂಟ್ರೋಲ್’ ವರದಿ ಮಾಡಿದೆ.

 Bengaluru Yeshwanthpur Railway station

ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಒಟ್ಟು 380 ಕೋಟಿ ರೂಪಾಯಿ ವೆಚ್ಚದಲ್ಲಿ ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಮುಂದಿನ ಮೂರು ವರ್ಷಗಳ ನಂತರ 2026ರ ಜನವರಿ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ಏನೇನು ಅಭಿವೃದ್ಧಿಗೊಳ್ಳಲಿದೆ: ವಿಶೇಷತೆ ಏನು

ಪ್ರಸ್ತುತದಲ್ಲಿ ಯಶವಂತಪುರ ನಿಲ್ದಾಣದಲ್ಲಿ ರೂಫ್ ಪ್ಲಾಜಾ ನಿರ್ಮಾಣದ ಮೊದಲ ಹಂತದ ಕೆಲಸುಗಳು ನಡೆಯುತ್ತಿವೆ. ನಿಲ್ದಾಣದ ಮಾರುಕಟ್ಟೆ ಬದಿಗೆ ಎಲಿವೇಟೆಡ್ ರಸ್ತೆ ನಿರ್ಮಾಣ ಹಾಗೂ ಬಹುಹಂತಗಳು (ಮಲ್ಟಿ-ಲೆವೆಲ್) ಕಾರ್ ಪಾರ್ಕಿಂಗ್ ಸೌಲಭ್ಯ ನಿರ್ಮಾಗೊಳ್ಳುತ್ತಿದೆ.

ರೈಲ್ವೆ ಕಚೇರಿಗಳಾದ ಲಿನಿನ್ ಸ್ಟೋರ್ ಮತ್ತು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಕಚೇರಿಯ ನಿರ್ಮಾಣವು ನೆಲ ಅಂತಸ್ತಿನ ಸ್ಲ್ಯಾಬ್ ಹಂತದವರೆಗೆ ಪೂರ್ಣಗೊಂಡಿದೆ. ಸದ್ಯಕ್ಕೆ ಸುಮಾರು ಶೇಕಡಾ 0.5 ಪ್ರಗತಿ ಹೊಂದಿದ್ದೇವೆ. ಅನುಭವಿ ವಾಸ್ತುಶಿಲ್ಪಿಗಳು ಮತ್ತು ಅಗತ್ಯ ಸಿಬ್ಬಂದಿ ನಿಲ್ದಾಣ ಮರುವಿನ್ಯಾಸಗೊಳ್ಳುತ್ತಿದೆ. ಇದು ಪ್ರಯಾಣಿಕರಿಗೆ ಉನ್ನತ ಅನುಭವ ಒದಗಿಸುವಲ್ಲಿ ಯಶಸ್ವಿಯಾಗಲಿದೆ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ.

 Bengaluru Yeshwanthpur Railway station

ರೈಲ್ ಲ್ಯಾಂಡ್ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ (RLDA), ನಿಲ್ದಾಣದ ಹೊಸ ವಿನ್ಯಾಸದ ಅಭಿವೃದ್ಧಿ ಕೆಲಸಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಪ್ರಯಾಣಿಕರಿಗೆ ಸುಗಮ ಮತ್ತು ತಡೆರಹಿತ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಮಾಡಲಾಗಿದೆ.

ಇನ್ನೂ ನಿಲ್ದಾಣದಲ್ಲಿ ಉತ್ತಮ ವಾಹನ ನಿಲುಗಡೆ ಸೌಲಭ್ಯ, ಚಿಲ್ಲರೆ ಮಳಿಗೆಗಳು, ವಿಶಾಲ ವಿಶ್ರಾಂತಿ ಕೊಠಡಿ, ಎಸ್ಕಿಲೇಟರ್, ಮುಂತಾದ ಸೌಲಭ್ಯಗಳನ್ನು ಒಳಗೊಂಡಿರಲಿದೆ. ನವೀಕರಿಸಿದ ನಿರ್ಗಮನ ಕಟ್ಟಡವು ವಿವಿಧ ವರ್ಗದ ಪ್ರಯಾಣಿಕರಿಗೆ ವಿಶಾಲ ಟಿಕೆಟಿಂಗ್ ಹಾಲ್ ಪೂರೈಸಲಿದೆ.

ಶಿವಮೊಗ್ಗ-ತಾಳಗುಪ್ಪ ಸೇರಿ ಹಲವು ರೈಲು ರದ್ದು, ಪಟ್ಟಿ ಶಿವಮೊಗ್ಗ-ತಾಳಗುಪ್ಪ ಸೇರಿ ಹಲವು ರೈಲು ರದ್ದು, ಪಟ್ಟಿ

ಜನದಟ್ಟಣೆ ಆಗದಂತೆ ಕ್ರಮ

ನಿಲ್ದಾಣದ ನಿರ್ಗಮನ ಮತ್ತು ಆಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಸಂಚಾರ ದಟ್ಟಣೆ ಪರಿಹಾರ ಕಂಡು ಕೊಳ್ಳಲಾಗಿದೆ. ಈ ಮೂಲಕ ರೈಲಿನೊಂದಿಗೆ ಪ್ರಯಾಣಿಕರ ಸಂಪರ್ಕ ಸುಧಾರಣೆಗೆ ಕ್ರಮ ವಹಿಸಲಾಗಿದೆ. ಮುಖ್ಯವಾಗಿ ಈ ಸುಸಜ್ಜಿತ ರೈಲು ನಿಲ್ದಾಣದೊಳಗೆ ಪ್ರಯಾಣಿಕರ ರೈಲು ಸಂಚಾರ, ಗಾಡಿ ಸಂಖ್ಯೆ, ಸಮಯ, ಸಹಾಯವಾಣಿ ಇನ್ನಿತರ ಮಾಹಿತಿ ಮತ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ವ್ಯವಸ್ಥೆಗಳು ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನು ಸಹ ಒಳಗೊಂಡಿರಲಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.

ಸದ್ಯ ಯಶವಂತಪುರ ರೈಲು ನಿಲ್ದಾಣವು ವಾರ್ಷಿಕವಾಗಿ 60,000 ಪ್ರಯಾಣಿಕರ ಚಾಲನೆಗೆ ಆಸರೆಯಾಗಿದೆ. ಈ ರೂಫ್ ಪ್ಲಾಜಾ ನಿರ್ಮಾಣ ಬಳಿಕ ವಾಷಿರ್ಕ ವಾಗಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಿಂದ ಸಂಚರಿಸಲಿದ್ದಾರೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary

Benglauru: Central Decide To Make Roof Plaza In Yeshwanthpur Railways station.

Story first published: Thursday, July 6, 2023, 18:48 [IST]

Source link