Bengaluru
oi-Shankrappa Parangi
ಬೆಂಗಳೂರು, ಜೂನ್ 23: ಬೆಂಗಳೂರಿನಂತಹ ಪಟ್ಟಣಗಳಲ್ಲಿ ಬದುಕು ಸಾಗಿಸಬೇಕಾದರೆ ದಂಪತಿಗಳಿಬ್ಬರು ದುಡಿಯಲೇಬೇಕಿದೆ. ಇಂತಹ ಸಂದರ್ಭಗಳಲ್ಲಿ ಆ ದಂಪತಿಗಳಿಗೆ ಮಕ್ಕಳಿದ್ದರೆ ಅವರನ್ನು ಡೇ ಕೇರ್ ಟೇಕರ್ ಗಳಲ್ಲಿ ದಂಪತಿ ಬಿಟ್ಟು ಹೋಗುತ್ತಾರೆ. ಇಂತಹ ಕೇರ್ ಟೇಕರ್‌ಗಳು ಮಕ್ಕಳಿಗೆ ಸುರಕ್ಷಿತತೆ ಇಲ್ಲ ಎಂಬುದು ವೈರಲ್ ಆದ ವಿಡಿಯೋದಿಂದ ಗೊತ್ತಾಗಿದೆ. ಆದ್ದರಿಂದ ಸರ್ಕಾರ ಈ ಕೇರ್ ಸೆಂಟರ್‌ಗಳಿಗೆ ಅಂಕುಶ ಹಾಕಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಎಎಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಈ ಬಗ್ಗೆ ಮಾಹಿತಿ ನೀಡಿದ ಪಕ್ಷದ ಮುಖಂಡ ಮೋಹನ್ ದಾಸರಿ ಅವರು, ನಗರದ ಖಾಸಗಿ ಮಾಂಟೆಸರಿ/ ಡೇ ಕೇರ್ ಟೇಕರ್‌ವೊಂದರಲ್ಲಿ ಪುಟ್ಟ ಕಂದಮ್ಮಗಳು ಹೊಡೆದಾಡುತ್ತಿರುವ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಇಲ್ಲಿ ಮಾಲೀಕರ ದೃಷ್ಟಿ ಕೇವಲ ವ್ಯಾಪಾರವಾಗಿರುತ್ತದೆ.
ಮಕ್ಕಳನ್ನು ನೋಡಿಕೊಳ್ಳಲು ಸೂಕ್ತ ತರಬೇತಿ ಹೊಂದಿರದ ಸಿಬ್ಬಂದಿಗಳನ್ನು ನೇಮಿಸದೆ ಹಣ ಮಾಡುವ ದಂದೆಗೆ ಇಳಿದಿರುವುದರಿಂದಲೇ ಆಗಾಗ ಅಚಾರ್ತುಗಳು ನಡೆಯುತ್ತಲೇ ಇರುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
We received a disturbing video of a preschool where toddlers are left unattended in a closed room. A senior kid is seen hitting repeatedly a junior school. The school’s name is Tenderfoot, Chikkalasandra, Bengaluru- 560061. Please don’t send your kid there! 🙏🏻 #childabuse pic.twitter.com/IeGsj2M9b2
— Citizens Movement, East Bengaluru (@east_bengaluru) June 22, 2023
ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರವು ಮಕ್ಕಳ ಕೇರ್ ಟೇಕರ್‌ಗಳ ಮೇಲೆ ನಿಗಾವಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಮೂಲಕ ಅವುಗಳ ಮೇಲೆ ಅಂಕುಶ ಹಾಕಬೇಕು. ಮಕ್ಕಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬೆಲೆ ಏರಿಕೆ ದುಬಾರಿ ಬದುಕಿಗಾಗಿ ಪೋಷಕರು ದುಡಿಯಲೇಬೇಕು
ಬೆಂಗಳೂರಿನಂತಹ ವಾಣಿಜ್ಯ ನಗರಿಯಲ್ಲಿ ಬೆಲೆ ಏರಿಕೆಯಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸಲು, ಸಂಸಾರಗಳನ್ನು ಸರಿದೂಗಿಸಿಕೊಂಡು ಹೋಗಲು ದಂಪತಿಗಳಿಬ್ಬರು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ತಮ್ಮ ಮಕ್ಕಳನ್ನು ಮಾಂಟೇಸರಿಗಳಲ್ಲಿ ಅಥವಾ ಡೇ ಕೇರ್ ಸೆಂಟರ್ ಗಳಲ್ಲಿ ಬಿಟ್ಟು ಹೋಗುವಂತಹ ಅನಿವಾರ್ಯತೆ ಇದೆ.
ಆದರೆ ಮಾಂಟೇಸರಿ ಮಾಲೀಕರುಗಳು ಕೇವಲ ವ್ಯಾಪಾರಿ ದೃಷ್ಟಿಯಿಂದ ನೋಡುತ್ತಾರೆ. ಸೂಕ್ತ ರೀತಿಯಲ್ಲಿ ನೋಡಿಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬಂಧಿದೆ.
NCERT ವರದಿ ಅನುಷ್ಠಾನದಲ್ಲಿ ಬೇಜವಾಬ್ದಾರಿ
ಬೆಂಗಳೂರು ನಗರದ ಎಎಪಿ ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ ಅವರು, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಈಗಾಗಲೇ 2013ರಲ್ಲಿವರದಿ ನೀಡಿ ಅದನ್ನು 2016ರ ಒಳಗೆ ಅನುಷ್ಠಾನಗೊಳಿಸಬೇಕೆಂದು ಹೇಳಿತ್ತು. ಆದರೆ ಇದುವರೆಗೂ ರಾಜ್ಯ ಸರ್ಕಾರ ವರದಿಯ ಮಾರ್ಗಸೂಚಿಯ ಅನುಷ್ಠಾನವನ್ನು ಮಾಡದಿರುವುದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ.
ಸಮಿತಿಯ ಯಾವುದೇ ಮಾನದಂಡಗಳನ್ನು ಮಾಂಟೇಸರಿಗಳು ಪಾಲಿಸದೆ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ. ಕೂಡಲೇ ಶಿಕ್ಷಣ ಸಚಿವರು ಇತ್ತ ಕಡೆ ಗಮನಹರಿಸಬೇಕು ಹಾಗೂ ಕಮಿಷನ್ ನೇಮಕ ಆಗಬೇಕೆಂದು ವರದಿಯಲ್ಲಿ ಉಲ್ಲೇಖಿಸಿತ್ತು ಎಂದರು.
ಪಕ್ಷದ ಕಾರ್ಯದರ್ಶಿ ಸುಷ್ಮಾ ವೀರ್ ಮಾತನಾಡಿ, ಸರ್ಕಾರವು ಈ ವಿಚಾರದಲ್ಲಿ ತಾಯ್ತನ ಹಾಗೂ ಮಾನವೀಯತೆಯನ್ನು ಮೆರೆಯಬೇಕು. ದೇಶದ ಭವಿಷ್ಯದ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿಸುವಲ್ಲಿ ಸರ್ಕಾರವು ಕೂಡಲೇ ಇಂತಹ ಖಾಸಗಿ ಮಾಂಟೆಸರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದೆಹಲಿಯ ಎಎಪಿ ಸರ್ಕಾರದ ವತಿಯಿಂದ ನಡೆಸುತ್ತಿರುವ ಮಾಂಟೆಸರಿಗಳನ್ನು ಅಲ್ಲಿಗೆ ಹೋಗಿ ವೀಕ್ಷಿಸಿ ಅದೇ ರೀತಿಯ ಶಾಲೆಗಳನ್ನು ರಾಜ್ಯದಲ್ಲಿಯೂ ಸಹ ತೆರೆಯಬೇಕು ಎಂದು ಅವರು ಹೇಳಿದರು.
ಆದ ಪ್ರಮಾದವೇನು?: ವಿಡಿಯೋ ವೈರಲ್
ಬೆಂಗಳೂರಿನ ಚಿಕ್ಕಲಸಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಡೆ ಕೇರ್ ಸೆಂಟರ್‌ಗಳಲ್ಲಿ ಆಯಾ ಮಗುವೊಂದನ್ನು ಕರೆದುಕೊಂಡು ಹೊರ ಹೋಗುತ್ತಾರೆ. ಒಳಗೆ ಆಡುತ್ತಿದ್ದ ಮಕ್ಕಳ ಪೈಕಿ ದೊಡ್ಡ ಮಗುವೊಂದು ತನದಿಂದ ಸಣ್ಣವನ್ನು ಕೈಯಿಂದ ಹೊಡೆದಿದೆ ಈ ದೃಶ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 4-5 ನಿಮಿಷಗಳ ಕಾಲ ಸಣ್ಣ ಮಗು ಪೆಟ್ಟು ತಿಂದಿರುವ ದೃಶ್ಯ ಸೆರೆಯಾಗಿದೆ. ಯಾರೋಬ್ಬರು ದೊಡ್ಡ ಮಗುವ ಹೊಡೆಯುವುದನ್ನು ಬಿಡಿಸಲು ಬಂದಿಲ್ಲ. ಇಂತಹ ನಿರ್ಲಕ್ಷ್ಯಗಳಿಂದ ಮಕ್ಕಳ ಜೀವಕ್ಕೆ ಏನಾದರೂ ಆದರೆ ಯಾರೂ ಹೊಣೆ. ಹೀಗಾದರೆ ಮಕ್ಕಳನ್ನು ಇಂತಹ ಸೆಂಟರ್‌ಗಳಲ್ಲಿ ಬಿಡಲು ಪೋಷಕ ಮನಸ್ಸು ಹೇಗೆ ಬರುತ್ತದೆ. ನಿರ್ಲಕ್ಷ್ಯ ವಹಿಸಿರುವ ಮಾಂಟೆಸರಿ ಆಡಳಿತ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಸಂಘ ಸಂಸ್ಥೆಗಳು ಟ್ವೀಟ್ ನಲ್ಲಿ ಆಗ್ರಹಿಸಿವೆ.
ಆ ಮಗುವಿನ ಪೋಷಕರು ದೂರು ನೀಡಲು ಹಿಂದೇಟು ಹಾಕಿದ್ದಾರೆ. ಟ್ವೀಟ್ ಮೂಲಕ ಬೆಂಗಳೂರಿನ ಸುಬ್ರಹ್ಮಣ್ಯ ನಗರದ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹ ಕೇಳಿ ಬಂದಿದೆ.
English summary
Day Care Center: Beware of parents who trust a day care and leave their children, Bengaluru Day Care Center video viral, AAP Leader Mohan dasari.