Bengaluru
oi-Shankrappa Parangi
ಬೆಂಗಳೂರು, ಜಲೈ 02: ರಾಜ್ಯ ಸಾರಿಗೆ ಇಲಾಖೆಯು ಉದ್ದೇಶದಂತೆ ಈ ವರ್ಷಾಂತ್ಯದ ವೇಳೆ ಹೊಸ ಬಸ್‌ಗಳನ್ನು ಖರೀದಿಸಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರಿಗಾಗಿ ಹಂತ ಹಂತವಾಗಿ ಎಲೆಕ್ಟ್ರಾನಿಕ್ ಸೇರಿದಂತೆ ಸುಮಾರು 1900 ಬಸ್‌ಗಳು ರಸ್ತೆಗೆ ಇಳಿದು ಸೇವೆ ನೀಡಲಿವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ವರ್ಷ ಡಿಸೆಂಬರ್ ಅಂತ್ಯಕ್ಕೆ ಸುಮಾರು 1,900 ಬಸ್‌ಗಳು ನಿಗಮದ ಫ್ಲೀಟ್‌ಗೆ ಸೇರ್ಪಡೆಗೊಳ್ಳಲು ಸಿದ್ಧವಾಗಿವೆ. ಮೊದಲು 921ಲೋ ಫ್ಲೋರ್ ಎಲೆಕ್ಟ್ರಿಕ್ ಬಸ್‌ಗಳು ಮುಂದಿನ ಪ್ರತಿ ತಿಂಗಳು 100 ಬ್ಯಾಚ್‌ಗಳಲ್ಲಿ ರಸ್ತೆಗಿಳಿಸಲು ಚಿಂತನೆ ನಡೆದಿದೆ. ಬಿಎಂಟಿಸಿ ನಿಗಮವು ಈಗಾಗಲೇ ಟಿಎಂ ಎಲ್ ಸ್ಮಾರ್ಟ್ ಮೊಬಿಲಿಟಿ ಸಲೂಷನ್ ಈಗಾಗಲೇ 921 ಬಸ್‌ಗಳನ್ನು ಸ್ವೀಕರಿಸಿದೆ.
ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯು ತನ್ನ ಬಸ್‌ಗಳನ್ನು ಸಾರ್ವಜನಿಕ ಬಳಕೆ ಅಧಿಕೃತವಾಗಿ ನೀಡಲು ಔಪಚಾರಿಕ ನೋಂದಣಿಗೆ ಕಾಯುತ್ತಿದೆ. ಇನ್ನೊಂದು ವಾರದಲ್ಲಿ ವಾಹನಗಳ ನೋಂದಣಿ ಮುಗಿಯಲಿದೆ. ಮೊದಲು ತಿಂಗಳು 100 ಬಸ್‌ಗಳಂತೆ ಒಟ್ಟು 900 ಕ್ಕೂ ಅಧಿಕ ಬಸ್‌ಗಳು ಮೊದಲ ಬ್ಯಾಚ್‌ಗಳಲ್ಲಿ ನಿಗಮಕ್ಕೆ ಸೇರ್ಪಡೆಗೊಳ್ಳಲಿವೆ ಎಂದು ಶುಕ್ರವಾರ ಬಿಎಂಟಿಸಿ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಎಂ.ಎನ್ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
BMTC ಡೀಸೆಲ್ ಬಸ್‌ಗಳು ಭವಿಷ್ಯದಲ್ಲಿ EV ಗಳಾಗಿ ಪರವರ್ತಿನೆಗೊಳ್ಳಲಿವೆ?
ನಿಗಮದಿಂದ ಅಧಿಕ ಬಸ್‌ಗಳ ಖರೀದಿ ಪ್ರಕ್ರಿಯೆ ಪ್ರಯಾಣಿಕರಿಗೆ ಖಷಿ ನೀಡಿದ್ದು, ಬಸ್ ತೊಂದರೆ, ಕೊರತೆ ಇರುವ ಮಾರ್ಗದ ಜನರಿಗೆ ಸಾರಿಗೆ ಸೇವೆ ಲಭ್ಯವಾಗಲಿದೆ. ಬೆಂಗಳೂರಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯ ಹೆಚ್ಚಿಸಿಕೊಳ್ಳುವ ಅಗತ್ಯವು ಇದೆ. ಹೊಸ ಬಸ್ ಖರೀದಿ ಜೊತೆಗೆ ಬಸ್ ನಿಲ್ದಾಣಗಳನ್ನು ಪ್ರಯಾಣಿಕ ಸ್ನೇಹಿಯಾಗಿ ನಿರ್ವಹಿಸುವುದು ಮುಖ್ಯವಾಗಿದೆ.
ಅದರಲ್ಲೂ ಈ ಮೆಜೆಸ್ಟಿಕ್ ಹಾಗೂ ಶಿವಾಜಿನಗರದಂತಹ ದೊಡ್ಡ ಟರ್ಮಿನಲ್ ಬಸ್ ನಿಲ್ದಾಣಗಳಲ್ಲಿ ಪ್ರಯಾಣ ಸುಲಭಗೊಳಿಸಲು ತಂತ್ರಜ್ಞಾನ ಬಳಕೆಗೆ ನಿಗಮವು ಹೆಚ್ಚು ಆದ್ಯತೆ ವಹಿಸಲಿದೆ. ಬೆಂಗಳೂರಿನ ಜನಸಂಖ್ಯೆ ಹೆಚ್ಚಿದಂತೆಲ್ಲ, ವಾಹನಗಳ ಸಂಖ್ಯೆಯೂ ಏರಿಕೆ ಆಗಿ ಮಾಲಿನ್ಯ ಮಟ್ಟ ಸಹ ಏರುಗತಿಯಲ್ಲಿದೆ. ಇದರಿಂದ ನಿಗಮವು ಆದಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನೇ ಖರೀದಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಪ್ರತಿ ಕಿಮೀ ಗೆ 41 ರೂ. ಕಾರ್ಯಾಚರಣೆ
ಈ EV ಬಿಎಂಟಿಸಿ ಬಸ್‌ಗಳು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಮಾದರಿಯಲ್ಲಿ ಪ್ರತಿ ಕಿಲೋ ಮೀಟರ್‌ಗೆ 41 ರೂಪಾಯಿ ಕಡಿಮೆ ಕಾರ್ಯಾಚರಣೆ ವೆಚ್ಚದಲ್ಲಿ ಖರೀದಿಸಲಾಗುತ್ತಿದೆ. ಈ ಜಿಸಿಸಿ ಮಾದರಿ ಎಂದರೆ ಬಿಎಂಟಿಸಿಯು 41 ಕಿ ಮೀಗೆ ಕಂಪನಿಯಿಂದ ಚಾಲಕರ ಸಹಿತ ಬಸ್‌ಗಳನ್ನು ಬಾಡಿಗೆಗೆ ಪಡೆಯುತ್ತದೆ. ಚಾಲಕರು ಮತ್ತು ಬಸ್‌ಗಳ ನಿರ್ವಹಣೆ ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. ಬಿಎಂಟಿಸಿ ನಿಗಮವು ಗ್ರಾಹಕರಿಗೆ ಅನುಕೂಲವಾಗುವಂತೆ ಬಸ್ ಮಾರ್ಗಗಳನ್ನು ನೋಡಿಕೊಳ್ಳುತ್ತದೆ. ಜೊತೆಗೆ ನಿರ್ವಾಹಕರು ನಿಗಮವೇ ನಿಯೋಜಿಸಲಿದೆ ಎಂದು ಅಧಿಕಾರಿಗಳು ಹೇಳಿದರು.
ಈ ಬಸ್‌ಗಳು ನೆಲದಿಂದ ಕಡಿಮೆ ಅಂತರವುಳ್ಳವುಗಳಾಗಿವೆ. ಅಪಘಾತ ತಡೆ ಜೊತೆಗೆ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಮಕ್ಕಳಿಗೆ ಬಸ್ ಹತ್ತಲು ಅನುಕೂಲಕರವಾಗಿವೆ. ಇದಲ್ಲದೇ ಬಿಎಂಟಿಸಿ ಒಟ್ಟು 800ಕ್ಕೂ ಅಧಿ ಡೀಸೆಲ್ ಚಾಲಿತ ಹೊಸ ಬಸ್‌ಗಳನ್ನು ಪರಿಚಯಿಸಲಿದೆ.
ಇವಿ ಬಸ್‌ಗಳಿಗೆ ನಿಗಮ ಆದ್ಯತೆ
ಈ ಡೀಸೆಲ್ ಬಸ್‌ಗಳಿಗೆ ಒಂದಕ್ಕೆ 41.3 ಲಕ್ಷ ರೂ ನೀಡಿ ಟಾಟಾ ಮೋಟಾರ್ಸ್ ಕಂಪನಿಯಿಂದ ಖರೀದಿಸಲಾಗಿದೆ. ಈಗಾಗಲೇ ಇಪ್ಪತ್ತು ಬಸ್‌ಗಳ ಪ್ರಾಯೋಗಿಕ ಕಾರ್ಯ ನಡೆಯುತ್ತಿದೆ. ಸದ್ಯ ನಿಗಮವು ಜಿಸಿಸಿ ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗೆ ಇಳಿಸುವುದರ ಮೇಲೆ ಗಮನ ನೆಟ್ಟಿದೆ.
ಜಿಸಿಸಿ ಮಾದರಿಯಲ್ಲಿ ಬಿಎಂಟಿಸಿ ಡೀಸೆಲ್ ಬಸ್ ಖರೀದಿಸಲು ಬಯಸುತ್ತಿರುವ ಕಾರಣ ಆ ಪ್ರತಿ ವಾಹನಕ್ಕೆ ಸುಮಾರು 35-45 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಅಷ್ಟು ಹಣ ಮುಂಗಡವಾಗಿ ಪಾವತಿಸಬಹುದಾಗಿದೆ. ಆದರೆ ಇವಿ ಬಸ್‌ಗಳ ವೆಚ್ಚವು ಪ್ರತಿ ವಾಹನಕ್ಕೆ 2 ಕೋಟಿ ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಆದರೆ ಇದು ಬಾಡಿಕಗೆ ಪಡೆದ ಲಾಭವಾಗುತ್ತದೆ .
ಇದಷ್ಟೇ ಅಲ್ಲದೇ ಈ ಹಿಂದೆಯೇ ಹೇಳಿದಂತೆ 10 ಡಬಲ್ ಡೆಕ್ಕರ್ ಬಸ್‌ಗಳು ಮತ್ತು 120 ಮಿನಿ ಬಸ್‌ಗಳು ಕಾಯುತ್ತಿವೆ. ಐದು ಡಬಲ್ ಡೆಕ್ಕರ್‌ಗಳನ್ನು ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಆರ್ಥಿಕ ನೆರವಿನ ಸಹಿತಿ ಖರೀದಿಸಲಿದ್ದೇವೆ. ಡಬಲ್ ಡೆಕ್ಕರ್ ಕಾಯನಿರ್ವಹಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಆಗಿದೆ. ಬಿಎಂಟಿಸಿ ಟೆಂಡರ್‌ನಲ್ಲಿ ಒಂದೇ ಬಿಡ್ಡಿಂಗ್ ಸ್ವೀಕರಿಸಿದ್ದರಿಂದ ಖರೀದಿ ತಡವಾಗುತ್ತಿದೆ. ಇದರೊಂದಿಗೆ 120 ಮಿನಿ ಬಸ್‌ಗಳ ಖರೀದಿಗೆ ಟೆಂಡರ್ ಕರೆಯಬೇಕಿದೆ ಎಂದು ನಿಗಮವು ತಿಳಿಸಿದೆ.
English summary
BMTC 921 electric 840 diesel bus include double decker bus total 1900 bus hit road 2023 year end
Story first published: Sunday, July 2, 2023, 12:38 [IST]