Bengaluru
oi-Shankrappa Parangi

ಬೆಂಗಳೂರು, ಜೂನ್ 30: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಜುಲೈ 12ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯಲ್ಲಿ ಒಟ್ಟು 23 ಪ್ರಾಜೆಕ್ಟ್ ಎಂಜಿನಿಯರ್- I ಹುದ್ದೆಗಳು ಖಾಲಿ ಇವೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು ಎಂದು ಬಿಇಎಲ್ ಅಧಿಸೂಚನೆ ಮಾಹಿತಿ ನೀಡಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳು ಪೂರ್ತಿ ಅಧಿಸೂಚನೆ ಓದಿ ಸಲ್ಲಿಸಿ. ಹುದ್ದೆಗಳ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಹುದ್ದೆಗಳ ಪೂರ್ಣ ವಿವರ
ಸಂಸ್ಥೆ- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಒಟ್ಟು ಹುದ್ದೆಗಳು – 23
ಹುದ್ದೆ ಹೆಸರು- ಪ್ರಾಜೆಕ್ಟ್ ಇಂಜಿನಿಯರ್
ಮಾಸಿಕ ವೇತನ – 40,000 ರಿಂದ 55,000 ರೂಪಾಯಿ.
ಉದ್ಯೋಗದ ಸ್ಥಳ- ಬೆಂಗಳೂರು
ವಿದ್ಯಾರ್ಹತೆ- ವಯಸ್ಸಿನ ಮಿತಿ ಮಾಹಿತಿ
ಅರ್ಜಿ ಸಲ್ಲಿಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್, ಬಿ.ಎಸ್ಸಿ ಪೂರ್ಣಗೊಳಿಸಿರಬೇಕು ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನೂ ಅಭ್ಯರ್ಥಿಗಳ ವಯಸ್ಸು ನಾಳೆ ಜುಲೈ 1ಕ್ಕೆ ಗರಿಷ್ಠ 32 ವರ್ಷ ಮೀರಿರಬಾರದು.
ಅಭ್ಯರ್ಥಿಗಳ ವಯಸ್ಸಿನಲ್ಲಿ ತುಸು ಸಡಿಲಿಕೆ ನೀಡಲಾಗಿದೆ. SC/ST ಅಭ್ಯರ್ಥಿಗಳಿಗೆ ಐದು ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ ಒಟ್ಟು 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.

ಮಾಸಿಕ ವೇತನ-ಉದ್ಯೋಗದ ಸ್ಥಳ
ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಪಡೆದುಕೊಳ್ಳುವವರಿಗೆ ಮಾಸಿಕವಾಗಿ 40,000 ರಿಂದ 55,000 ರೂಪಾಯಿ ನೀಡಲಾಗುವುದು. ಆಯ್ಕೆ ಯಾಗುವವರಿಗೆ ಬೆಂಗಳೂರು, ಕವರತಿ, ಕೊಚ್ಚಿ, ಗಾಂಧಿನಗರದಲ್ಲಿ ಪೋಸ್ಟಿಂಗ್ ನೀಡಲಾಗುವುದು.
BEL Recruitment 2023: ಬಿಇಎಲ್‌ನ 205 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ, ಆಸಕ್ತರಿಗೆ ಇಲ್ಲಿದೆ ಮಾಹಿತಿ
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಆಯ್ಕೆಯಾಗುವರಿಗೆ ನೇರ ಸಂದರ್ಶನ ನಡೆಯಲಿದೆ. ಜುಲೈ 12ರೊಳಗೆ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ DM (HR/NS) ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಅಂಚೆ ಬೆಂಗಳೂರು – 560013 ಇಲ್ಲಿಗೆ ಪೋಸ್ಟ್ ಮಾಡಬೇಕು ಎಂದು ಅಧಿಸೂಚನೆ ಸೂಚಿಸಿದೆ.
English summary
BEL Recruitment 2023: BEL invited applications for 23 Project Engineer posts by eligible, apply before July 12th.
Story first published: Friday, June 30, 2023, 19:53 [IST]