BBMP Elections: ಬಿಬಿಎಂಪಿ ಚುನಾವಣೆಗೆ ಮಹೂರ್ತ ಫಿಕ್ಸ್‌- ಯಾವ ತಿಂಗಳಲ್ಲಿ ನಡೆಯಲಿದೆ ತಿಳಿಯಿರಿ | Bengaluru BBMP Elections: Know in which month it will be held?

Bengaluru

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ವಿಂಗಡಣೆಗೆ ಕರ್ನಾಟಕ ಸರ್ಕಾರ ಹೊಸ ಸಮಿತಿಯನ್ನು ರಚಿಸಿದೆ. ಇದಾದ ಒಂದು ದಿನದ ನಂತರ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ಅವರು ಚುನಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಬಿಬಿಎಂಪಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ ವಾರ್ಡ್ ವಿಂಗಡಣೆಯನ್ನು ಮರುಪರಿಶೀಲಿಸಲು 12 ವಾರಗಳ ಕಾಲಾವಕಾಶವನ್ನು ಹೈಕೋರ್ಟ್‌ ನೀಡಿತ್ತು. ಪ್ರಸ್ತುತ ಡಿಲಿಮಿಟೇಶನ್‌ನಲ್ಲಿ ಲೋಪದೋಷಗಳಿವೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

 Bengaluru BBMP Elections

ಹೈಕೋರ್ಟ್ ಆದೇಶದ ನಂತರ ಸರ್ಕಾರ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಬಿಡಿಎ ಆಯುಕ್ತರು, ಬೆಂಗಳೂರು ಉಪ ಆಯುಕ್ತರು ಮತ್ತು ಬಿಬಿಎಂಪಿ ವಿಶೇಷ ಆಯುಕ್ತರು ಈ ಸಮಿತಿಯ ಸದಸ್ಯರು ಆಗಿದ್ದಾರೆ.

ಸರ್ಕಾರದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವರು, ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

‘ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದೆವು. ಡಿಸೆಂಬರ್ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ. ಬಿಜೆಪಿ ಸರ್ಕಾರ ಅವರ ಇಚ್ಛೆಯಂತೆ ವಾರ್ಡ್‌ ಗಡಿ ಹಾಕಿತ್ತು. ಈಗ ನಾವು ಸಮಿತಿ ರಚಿಸಿದ್ದೇವೆ ಮತ್ತು ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡುತ್ತಾರೆ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ರೆಡ್ಡಿ ತಿಳಿಸಿದ್ದಾರೆ.

Bengaluru: ವಾರ್ಷಿಕ 4000 ಟನ್ ತ್ಯಾಜ್ಯ ಉತ್ಪಾದನೆ, ಏಕ ಬಳಕೆ ಪ್ಲಾಸ್ಟಿಕ್‌ ಉಪಯೋಗಿಸದಂತೆ ಬಿಬಿಎಂಪಿ ಮನವಿBengaluru: ವಾರ್ಷಿಕ 4000 ಟನ್ ತ್ಯಾಜ್ಯ ಉತ್ಪಾದನೆ, ಏಕ ಬಳಕೆ ಪ್ಲಾಸ್ಟಿಕ್‌ ಉಪಯೋಗಿಸದಂತೆ ಬಿಬಿಎಂಪಿ ಮನವಿ

ಹೊಸ ವಾರ್ಡ್‌ಗಳನ್ನು ಪರಿಚಯಿಸುವ ಯೋಜನೆಗಳ ಕುರಿತು ರಾಮಲಿಂಗಾ ರೆಡ್ಡಿ ಅವರನ್ನು ಪ್ರಶ್ನಿಸಲಾಯಿತು. ಹೊಸ ಬಿಬಿಎಂಪಿ ಕಾಯ್ದೆ ಪ್ರಕಾರ, 243 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಾರ್ಡ್‌ಗಳ ಸಂಖ್ಯೆ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.

ನಾವು ಚುನಾವಣೆ ನಡೆಸುತ್ತೇವೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುತ್ತೇವೆ. ಈ ಹಂತದಲ್ಲಿ ಎಷ್ಟು ವಾರ್ಡ್‌ಗಳಿವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಹೇಳಿದರು. 2020ರ ಸೆಪ್ಟೆಂಬರ್‌ನಿಂದ ಬಿಬಿಎಂಪಿಗೆ ಯಾವುದೇ ಶಾಸಕಾಂಗವಿಲ್ಲ.

English summary

Bengaluru BBMP Elections: Know in which month it will be held?

Story first published: Saturday, June 24, 2023, 16:43 [IST]

Source link