Features
oi-Mamatha M
ಭಾರತದಲ್ಲಿ ಬಿಲ್ಪಪತ್ರೆ ಬಗ್ಗೆ ತಿಳಿಯದವರು ಯಾರಿದ್ದಾರೆ ಹೇಳಿ. ಬಿಲ್ವಪತ್ರೆ ಅಷ್ಟು ಪೂಜನೀಯ ಮರ. ಪವಿತ್ರ ಮೌಲ್ಯವನ್ನು ಹೊಂದಿರುವ ಈ ಮರದ ಬಿಲ್ವಪತ್ರೆ ಎಲೆಗಳು ಶಿವನ ಪೂಜೆಗೆ ಹೆಚ್ಚು ಬಳಕೆಯಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಶಿವನ ಮರ ಎಂದು ಕರೆಯಲಾಗುತ್ತದೆ. ಬಿಲ್ಬಮರದ ಪತ್ರೆಗಳ ಜೊತೆಗೆ ಹಣ್ಣು ಕೂಡ ಉಪಯೋಗಕಾರಿ. ಇದರಲ್ಲಿ ಬೆಳೆಯುವ ಸಿಹಿ ಮತ್ತು ಪರಿಮಳಯುಕ್ತ ಹಣ್ಣು ಪೋಷಕಾಂಶಗಳ ಖಜಾನೆಯೇ ಸರಿ.
ಬಿಲ್ವಪತ್ರೆ ಹಣ್ಣು ಹೊಂದಿರುವ ಪೋಷಕಾಂಶಗಳು ಹೀಗಿವೆ.
1. ಪ್ರೋಟೀನ್‌ಗಳು
2. ವಿಟಮಿನ್ಸ್ – ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್.
3. ಮಿನರಲ್ಸ್ – ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಝಿಂಕ್, ಕಾಪರ್ ಮತ್ತು ಕಬ್ಬಿಣ
4. ಫೈಬರ್ಗಳು
5. ಕೊಬ್ಬು
ಬಿಲ್ವಪತ್ರೆ ಹಣ್ಣಿನ ಆರೋಗ್ಯ ಪ್ರಯೋಜನಗಳು
1. ಅತಿಸಾರ ಮತ್ತು ಕಾಲರಾ ನಿರ್ವಹಣೆ
ಬಿಲ್ವಪತ್ರೆ ಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಪ್ಯಾರಸಿಟಿಕ್ ಗುಣಲಕ್ಷಣಗಳು ಅತಿಸಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಲ್ವಪತ್ರೆಯಲ್ಲಿರುವ ಟ್ಯಾನಿನ್‌ಗಳು ಅತಿಸಾರ ಮತ್ತು ಕಾಲರಾವನ್ನು ಉಂಟುಮಾಡುವ ಶಿಗೆಲ್ಲೋಸಿಸ್ ಎಂಬ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Flax Seeds: ಚಪ್ಪಟೆ ಅಗಸೆಬೀಜದ ಬೆಟ್ಟದಷ್ಟು ಆರೋಗ್ಯ ಮಹಾತ್ಮೆ
ಚಿಕ್ಕ ಮಕ್ಕಳು, ಯಾವಾಗಲು ಪ್ರಯಾಣ ಮಾಡುವವರು, ರೋಗನಿರೋಧಕ ಶಕ್ತಿ ಇಲ್ಲದ ಜನರು ವಿಶೇಷವಾಗಿ ಶಿಗೆಲ್ಲೋಸಿಸ್ ಸೋಂಕಿಗೆ ಗುರಿಯಾಗುತ್ತಾರೆ. ಹಣ್ಣಾದ ಬಿಲ್ವಪತ್ರೆ ಹಣ್ಣು ಸೇವನೆಯು ಕಾಲರಾ ಮತ್ತು ಅತಿಸಾರವನ್ನು ನಿಯಂತ್ರಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.
2. ಜೀರ್ಣಕ್ರಿಯೆ
ಎಲ್ಲಾ ಜೀರ್ಣಕಾರಿ ಸಮಸ್ಯೆಗಳಿಗೆ ಬಿಲ್ವಪತ್ರೆ ಅತ್ಯುತ್ತಮ ಆರೋಗ್ಯ ಪ್ರಯೋಜನ ನೀಡುವ ಹಣ್ಣು. ಇದರ ರಸವು ಲೋಳೆಪೊರೆಯ ಅಸಮತೋಲನ ಮತ್ತು ಗ್ಯಾಸ್ಟ್ರಿಕ್ ಟ್ರಾಕ್ಟ್‌ನಲ್ಲಿನ ಆಕ್ಸಿಡೇಟಿವ್ ಒತ್ತಡದ ಮಟ್ಟಗಳಿಂದ ಉಂಟಾಗುವ ಗ್ಯಾಸ್ಟ್ರಿಕ್ ಅಲ್ಸರ್ ಅನ್ನು ನಿಯಂತ್ರಿಸುತ್ತದೆ. ಇದು ಮಲಬದ್ಧತೆಯನ್ನು ತಡೆಯುವ ಗುಣಗಳನ್ನು ಸಹ ಹೊಂದಿದೆ.
3. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಬಿಲ್ವಪತ್ರೆ ಜ್ಯೂಸ್ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ.
4. ಮಧುಮೇಹ ನಿರ್ವಹಣೆಯಲ್ಲಿ ಸಹಾಯ
ಬಿಲ್ವಪತ್ರೆ ಹಣ್ಣಿನ ತೊಗಟೆ ಫೆರೋನಿಯಾ ಗಮ್‌ನಿಂದ ಸಮೃದ್ಧವಾಗಿವೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಯುರ್ವೇದದಲ್ಲಿ, ಬಿಲ್ವಪತ್ರೆ ಮಧುಮೇಹಕ್ಕೆ ಅತ್ಯಗತ್ಯ ಪರಿಹಾರವಾಗಿದೆ. ಬಿಲ್ವಪತ್ರೆ ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಇನ್ಸುಲಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
5. ಚರ್ಮದ ಸೋಂಕುಗಳನ್ನು ತಡೆಯುತ್ತೆ
ಬಿಲ್ವಪತ್ರೆಯಲ್ಲಿನ ಆಂಟಿ ಬ್ಯಾಕ್ಟೀರಿಯಾ, ಆಂಟಿ ಶಿಲೀಂಧ್ರ ಗುಣಲಕ್ಷಣಗಳಿಂದಾಗಿ, ಇದು ಚರ್ಮದ ಸೋಂಕುಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಬಿಲ್ವಪತ್ರೆ ಎಲೆಯ ಎಣ್ಣೆಯು ಚರ್ಮಕ್ಕೆ ಸೋಂಕು ತಗುಲಿಸುವ ಸಾಮಾನ್ಯ ರೀತಿಯ ಶಿಲೀಂಧ್ರಗಳನ್ನು ತಡೆಯುತ್ತದೆ. ಇದು ಚರ್ಮದ ದದ್ದು ಮತ್ತು ತುರಿಕೆಯಿಂದಾದ ಉಬ್ಬುಗಳಿಗೆ ಸಹ ಪ್ರಯೋಜನಕಾರಿಯಾಗಿದೆ.
6. ರಕ್ತ ಶುದ್ಧಿಕಾರಕವಾಗಿ ಕಾರ್ಯ
ಬಿಲ್ವಪತ್ರೆ ಖನಿಜಗಳಿಂದ ಸಮೃದ್ಧವಾಗಿದ್ದು, ರಕ್ತ ಶುದ್ಧಿಕಾರಕವಾಗಿದೆ . ಇದು ದೇಹದಿಂದ ಎಲ್ಲಾ ವಿಷಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಡಿಟಾಕ್ಸಿಫೈಯಿಂಗೆ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಮೂತ್ರಪಿಂಡ ಮತ್ತು ಯಕೃತ್ತಿನ ಹಾನಿಯನ್ನು ತಡೆಯುತ್ತದೆ.
7. ಸ್ಕರ್ವಿ ತಡೆಯಲು ಸಹಾಯ
ವಿಟಮಿನ್ ಸಿ ಸಿಕೊರತೆಯಿಂದ ಬರುವ ಅತ್ಯಂತ ಪ್ರಮುಖ ರೋಗ ಎಂದರೆ ಅದು ಸ್ಕರ್ವಿ. ಬಿಲ್ಪ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ ಇದು ನಿಮ್ಮ ಸ್ಕರ್ವಿ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸ್ಕರ್ವಿಯು ದೇಹದಲ್ಲಿ ವಿಟಮಿನ್ ಸಿ ಕೊರತೆಯನ್ನು ಉಂಟುಮಾಡಬಹುದು, ಇದರ ಪರಿಣಾಮವಾಗಿ ತೋಳುಗಳು ಮತ್ತು ಕಾಲುಗಳಲ್ಲಿ ನೋವುಂಟಾಗುತ್ತದೆ.
8. ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ
ಬಿಲ್ವಪತ್ರೆ ಹಣ್ಣಿನ ಸಾರವು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಸ್ವತಂತ್ರ ರಾಡಿಕಲ್‌ಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆ ಸ್ವತಂತ್ರ ರಾಡಿಕಲ್ಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಬಹುದು. ಈ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ ಅಥವಾ ಗುಣಪಡಿಸುತ್ತದೆ ಎಂದು ಅಧ್ಯಯನವು ಸೂಚಿಸುತ್ತದೆ.
9. ರೋಗನಿರೋಧಕ ಶಕ್ತಿ ವರ್ಧಕ
ಬಿಲ್ವಪತ್ರೆ ಹಣ್ಣಿನ ಜ್ಯೂಸ್ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳ ಪವರ್‌ಹೌಸ್ ಆಗಿದ್ದು ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಬಿಲ್ವಪತ್ರೆ ಜ್ಯೂಸ್ ಕುಡಿಯುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಉಂಟಾಗುವ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
10. ಬಾಣಂತಿ ತಾಯಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ
ಬಿಲ್ವಪತ್ರೆಯ ದೈನಂದಿನ ಸೇವನೆಯು ಪ್ರೊಲ್ಯಾಕ್ಟಿನ್ ಮತ್ತು ಕಾರ್ಟಿಕಾಯ್ಡ್ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಗ್ಯಾಲಕ್ಟಾಗೋಗ್ ಕ್ರಿಯೆಯನ್ನು ಪ್ರೇರೇಪಿಸುತ್ತದೆ ಮತ್ತು ಆ ಮೂಲಕ ಎದೆ ಹಾಲಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಗಳಿಗಾಗಿ, ಶಿಶು ತಾಯಂದಿರು ಒಣ ಶುಂಠಿ ಪುಡಿ ಮತ್ತು ಬೆಲ್ಲದೊಂದಿಗೆ ಬಿಲ್ವಪತ್ರೆ ಹಣ್ಣಿನ ರಸವನ್ನು ಕುಡಿಯಬೇಕು.
ಬಿಲ್ವಪತ್ರೆ ಜ್ಯೂಸ್ ತಯಾರಿಸುವುದು ಹೇಗೆ?
ಇದು ಸಾಮಾನ್ಯವಾಗಿ ಈಶಾನ್ಯ ಭಾರತದ ಮನೆಗಳಲ್ಲಿ, ವಿಶೇಷವಾಗಿ ಬೇಸಿಗೆಯಲ್ಲಿ ಕಂಡುಬರುವ ಸಾಂಪ್ರದಾಯಿಕ ಪಾಕವಿಧಾನವಾಗಿದೆ. ಜೊತೆಗೆ ಬಾಂಗ್ಲಾ ದೇಶದಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ರಸ್ತೆ ಬದಿಗಳಲ್ಲಿಯೂ ಬಿಲ್ಪಪತ್ರೆ ಹನ್ನಿನ ಜ್ಯೂಸ್ ಮಾತಾಟ ಮಾಡಲಾಗುತ್ತದೆ.
ಬಿಲ್ಪಪತ್ರೆ ಹಣ್ಣನ್ನು ತೆಗೆದುಕೊಂಡು ಅದನ್ನು ತೊಳೆದು ಸುತ್ತಲೂ ಗಟ್ಟಿಯಾದ ಚಿಪ್ಪನ್ನು ಒಡೆಯಿರಿ. ನಂತರ, ಒಂದು ಬಟ್ಟಲಿನಲ್ಲಿ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ, ತಿರುಳನ್ನು ಮೃದುವಾಗುವವರೆಗೆ ಕೈಗಳಿಂದ ಕಿವುಚಿ ಅಥವಾ ಮಿಕ್ಸಿಯಲ್ಲಿ ರುಬ್ಬಿ. ಬಳಿಕ ಒಂದು ಜರಡಿಯಲ್ಲಿ ಸೋಸಿ, ಅದಕ್ಕೆ ಹಾಲು, ಏಲಕ್ಕಿ ಪುಡಿ, ಬೆಲ್ಲ ಬೆರೆಸಿ ಸವಿಯಬಹುದು. ಬೇಕಾದರೆ ಚಿಟಿಕೆ ಕಪ್ಪು ಉಪ್ಪನ್ನು ಸೇರಿಸಬಹುದು.
ಬಿಲ್ಪಪತ್ರೆ ಹಣ್ಣನ್ನೂ ಹೀಗೂ ಸೇವಿಸಬಹುದು
* ಬಿಲ್ಪಪತ್ರೆ ಸ್ಮೂಥಿ: 3 ಬಿಲ್ಪಪತ್ರೆ ಹಣ್ಣಿನ ತಿರುಳನ್ನು ಬೆಲ್ಲ , ಏಲಕ್ಕಿ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡೆಉ ಸೂಸಿಕೊಂಡರೆ ಬಿಲ್ಪಪತ್ರೆ ಸ್ಮೂಥಿ ರೆಡಿ.
* ಬಿಲ್ಪಪತ್ರೆ ಮೊಜಿಟೊ: ಬೇಸಿಗೆಯ ದಿನಕ್ಕೆ ಹೇಳಿ ಮಾಡಿಸಿದ ಪಾನೀಯವಿದು. ರುಚಿಗೆ ಸಕ್ಕರೆ, ಕರಿಮೆಣಸು, ಕಪ್ಪು ಉಪ್ಪು, ನಿಂಬೆ ಮತ್ತು ಐಸ್ ಕ್ಯೂಬ್‌ಗಳ ಜೊತೆಗೆ ಒಂದು ಬಿಲ್ಪಪತ್ರೆ ಹಣ್ಣಿನ ತಿರುಳು ಹಾಕಿ ರುಬ್ಬಿದರೆ ಮೊಜಿಟೊ ರೆಡಿ.
*ಬಿಲ್ಪಪತ್ರೆ ಲಸ್ಸಿ : 1 ಬಿಲ್ಪಪತ್ರೆ ಹಣ್ಣನ್ನು ನೀರು (3 ಕಪ್), ಮೊಸರು (½ ಕಪ್), ಸಕ್ಕರೆ ಅಥವಾ ರುಚಿಗೆ ಜೇನುತುಪ್ಪ, ಅರ್ಧ ಟೀ ಚಮಚ ಚಾಟ್ ಮಸಾಲಾ ಪುಡಿಯೊಂದಿಗೆ ಮಿಶ್ರಣ ಮಾಡಿ ಸೋಸಿಕೊಳ್ಳಿ. ಕುಡಿಯುವಾಗ ಐಸ್ ಕ್ಯೂಬ್ ಹಾಕಿಕೊಳ್ಳಿ.
ಬಿಲ್ಪಪತ್ರೆ ಅಡ್ಡ ಪರಿಣಾಮಗಳು:
ಬಿಲ್ಪಪತ್ರೆ ಬಳಕೆಯಿಂದ ಯಾವುದೇ ಸಾಮಾನ್ಯ ಅಡ್ಡಪರಿಣಾಮಗಳು ವರದಿಯಾಗಿಲ್ಲ. ಆದರೂ, ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು.
ಬಿಲ್ಪಪತ್ರೆ ಬಳಕೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:
ವಿಶೇಷವಾಗಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ವಯಸ್ಸಾದ ವ್ಯಕ್ತಿಗಳು ಮತ್ತು ಮಕ್ಕಳು ಅದರ ಸಂಭಾವ್ಯ ಆರೋಗ್ಯ ಬಳಕೆಗಳಿಗಾಗಿ ಬೇಲ್ ಅನ್ನು ಬಳಸುವ ಮೊದಲು ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಪರಿಸ್ಥಿತಿಗಳಲ್ಲಿ ಅದರ ಬಳಕೆಗಾಗಿ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬೇಕು. ಇತರ ಔಷಧಿಗಳೊಂದಿಗೆ ಬಿಲ್ಪಪತ್ರೆಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
(ಮಾಹಿತಿ ಕೃಪೆ: pharmeasy)
English summary
Benefits and Side Effects of Bael Fruit (bilwa) (ಬಿಲ್ವ ಪತ್ರೆ ಹಣ್ಣು) in Kannada.
Story first published: Wednesday, June 21, 2023, 18:05 [IST]