Arvind Kejriwal: ಕೇಂದ್ರದ ಸುಗ್ರಿವಾಜ್ಞೆ ವಿರುದ್ಧ ಕಾಂಗ್ರೆಸ್ ಬೆಂಬಲಿಸದಿದ್ದರೆ ಪಾಟ್ನಾ ಸಭೆ ಬಹಿಷ್ಕಾರ: ಕೇಜ್ರಿವಾಲ್ | ‍Congress If Not To Support Against central Ordinance, AAP threat Skip Tomorrow opposition Meeting

India

oi-Shankrappa Parangi

|

Google Oneindia Kannada News

ನವದೆಹಲಿ, ಜೂನ್ 22: ಕೇಂದ್ರ ಸರ್ಕಾರ ಪರಿಚಯಿಸಿರುವ ದೆಹಲಿಯ ಆಡಳಿತಾತ್ಮಕ ಸೇವೆಗಳ ವಿವಾದಿತ ಸುಗ್ರೀವಾಜ್ಞೆಯ ವಿರುದ್ಧದ ಪ್ರಚಾರಕ್ಕೆ ಕಾಂಗ್ರೆಸ್ ತನ್ನ ನಿಲುವನ್ನು ಇದುವರೆಗೂ ಏನೆಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಕಾರಣಕ್ಕೆ ಆಮ್‌ ಆದ್ಮಿ ಪಕ್ಷದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಬೆದರಿಕೆ ಹಾಕಿದ್ದಾರೆ ಎಂದು ವರದಿ ಆಗಿದೆ.

ಆಮ್ ಆದ್ಮಿ ಪಕ್ಷವು ಕೇಂದ್ರ ಸರ್ಕಾರದ ದೆಹಲಿಯ ಆಡಳಿತಾತ್ಮಕ ಸೇವೆಗಳ ವಿವಾದಿತ ಸುಗ್ರೀವಾಜ್ಞೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದೆ. ವಿಪಕ್ಷಗಳನ್ನು ಒಟ್ಟುಗೂಡಿಸುತ್ತಿದೆ. ಇತ್ತ ಕಾಂಗ್ರೆಸ್ ಮಾತ್ರ ತನ್ನ ನಿಲವು ಏನೆಂದು ತಿಳಿಸಿಲ್ಲ. ಕಾಂಗ್ರೆಸ್ ಕೇಂದ್ರದ ವಿರುದ್ಧ ನಮ್ಮನ್ನು ಬೆಂಬಲಿಸಬೇಕು. ಇಲ್ಲವಾದರೆ ನಾಳೆ ಪಾಟ್ನಾದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆ ಬಹಿಷ್ಕರಿಸುವುದಾಗಿ ಅವರು ಗುರುವಾರ ಬೆದರಿಕೆ ಹಾಕಿದ್ದಾರೆ.

‍Congress If Not To Support Against central Ordinance, AAP threat Skip Tomorrow opposition Meeting

ಕೇಜ್ರಿವಾಲರ ಈ ಕ್ರಮವು ಮುಂದಿನ 2024 ರ ಲೋಕಸಭೆ ಚುನಾವಣೆಗೆ ಒಗ್ಗೂಡಲು ಮತ್ತು ಕಾರ್ಯತಂತ್ರವನ್ನು ರೂಪಿಸಲು ಭಾರತದ ವಿರೋಧ ಪಕ್ಷದ ಈವರೆಗಿನ ಪ್ರಯತ್ನಗಳನ್ನು ಹಳಿ ತಪ್ಪಿಸುತ್ತದೆ ಎಂದು ಹೇಳಲಾಗುತ್ತಿದೆ.

ಒಂದು ತಿಂಗಳ ಹಿಂದೆ ಕೇಂದ್ರ ಬಿಜೆಪಿ ಸರ್ಕಾರ ದೆಹಲಿ ಆಡಳಿತಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಿದೆ. ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಿವಿಲ್ ಸರ್ವಿಸ್ (ಡ್ಯಾನಿಕ್ಸ್) ಕೇಡರ್‌ನ ಗ್ರೂಪ್-ಎ ಅಧಿಕಾರಿಗಳ ವಿರುದ್ಧ ವರ್ಗಾವಣೆ ಮತ್ತು ಶಿಸ್ತಿನ ಪ್ರಕ್ರಿಯೆಗಳ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಸ್ಥಳೀಯ ಆಡಳಿತ ಸರ್ಕಾರವಾದ ಎಎಪಿ ಆಕ್ಷೇಪ ವ್ಯಕ್ತಪಡಿಸಿದೆ.

ಕೇಂದ್ರದ ಕ್ರಮ ಟೀಕಿಸಿರುವ ಎಎಪಿ, ಚುನಾಯಿತ ಸರ್ಕಾರಕ್ಕೆ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂಮಿಯನ್ನು ಹೊರತುಪಡಿಸಿ ದೆಹಲಿಯಲ್ಲಿ ಸೇವೆಗಳ ನಿಯಂತ್ರಣವನ್ನು ನೀಡುವ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಹೋದಂತಾಗುತ್ತದೆ ಎಂದು ತಿಳಿಸಿದೆ.

‍Congress If Not To Support Against central Ordinance, AAP threat Skip Tomorrow opposition Meeting

ಕಾಂಗ್ರೆಸ್ ಬೆಂಬಲಿಸಲಿದೆ ಎಂದು ಎಎಪಿ ಭರವಸೆ

ಈ ವಿಚಾರ ಸೇರಿದಂತೆ ಮುಂದಿನ ಲೋಕಸಭಾ ಚುನಾವಣೆ ಕುರಿತು ಕೇಜ್ರಿವಾಲರು ವಿರೋಧ ಪಕ್ಷಗಳನ್ನು ಸಂಘಟಿಸುತ್ತಲೇ ಬಂದಿದ್ದರು. ಈ ಸಂಬಂಧ ಬಿಹಾರ್ ಸಿಎಂ ನಿತಿಶ್ ಕುಮಾರ್ ಜೂನ್ 23ರ ಶುಕ್ರವಾರ ವಿರೋಧ ಪಕ್ಷಗಳ ಪ್ರಮುಖ ಸಭೆ ಹಮ್ಮಿಕೊಂಡಿದ್ದಾರೆ. ಈ ಸಭೆಯಲ್ಲಿ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ವ್ಯಕ್ತಪಡಿಸಿದ್ದಾರೆ.

ಸುಗ್ರೀವಾಜ್ಞೆಗೆ ವಿರುದ್ಧವಾಗಿಕೇಜ್ರಿವಾಲ್ ವಿರೋಧ ಪಕ್ಷಗಳ ಒಗ್ಗೂಡಿಸಲು ಅಭಿಯಾನವೊಂದನ್ನೆ ಮಾಡಿದ್ದಾರೆ. ಸಂಸತ್ತಿನ ಮೂಲಕ ಕಾನೂನಾಗುವುದನ್ನು ತಡೆಯುವ ಪ್ರಯತ್ನದಲ್ಲಿ ಅವರು ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಕೇಜ್ರಿವಾಲ್ ತಲುಪಿದ್ದಾರೆ.

ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ಸಭೆ ನಡೆಯಲಿದೆ. ಇಲ್ಲಿ ಮುಂಬರುವ ಚುನಾವಣೆಗೆ ಪ್ರತಿಪಕ್ಷಗಳ ಜಂಟಿ ಕಾರ್ಯತಂತ್ರವನ್ನು ಹೊಂದಿಸುವ ನಿರೀಕ್ಷೆಯಿದೆ. ಸಭೆಯಲ್ಲಿ ಕಾಂಗ್ರೆಸ್ ತನ್ನ ನಿಲು ಸ್ಪಷ್ಟಪಡಿಸಬೇಕು, ಏಕೆಂದರೆ ಸಭೆಯಲ್ಲಿ ಇತರ ಎಲ್ಲಾ ರಾಜಕೀಯ ಪಕ್ಷಗಳು ತನ್ನ ನಿಲುವಿನ ಬಗ್ಗೆ ತಾವು ಕೇಳುವುದಾಗಿ ತಿಳಿಸಿದ್ದಾರೆ.

ಟಿಎಂಸಿಯಿಂದಲೂ ಕಾಂಗ್ರೆಸ್ ಮೇಲೆ ಒತ್ತಡ

ಎಎಪಿಗೆ ಪರವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಕೇಂದ್ರದ ವಿರುದ್ಧ ತಮ್ಮನ್ನು ಬೆಂಬಲಿಸುವಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇತ್ತ, ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆ ಮತ್ತು ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ಆಕ್ರಮಿಸಿಕೊಂಡಿದೆ ಎನ್ನುತ್ತಿರುವ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ವರ್ತನೆಯು ಮೋದಿ ಸರ್ಕಾರಕ್ಕೆ ಹೋಲಿಕೆಯಾಗುವಂತಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಇದೆಲ್ಲ ಕಾರಣಗಳಿಂದಲೇ ಕಾಂಗ್ರೆಸ್ ಬಿಜೆಪಿ ವಿರುದ್ಧ ವಿಪಕ್ಷಗಳ ಪರ ಅದರಲ್ಲೂ ಎಎಪಿ ಪರ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ ಎನ್ನಲಾಗುತ್ತಿದೆ. ಈ ಕುರಿತು ಎಲ್ಲ ಅಂಶಗಳು ನಾಳೆ ನಡೆಯಲಿರುವ ವಿಪಕ್ಷಗಳ ಸಭೆ ಬಳಿಕ ಬಹಿರಂಗವಾಗಲಿದೆ.

English summary

Congress if not to support against central ordinance, AAP threaten walk out to tomorrow Patna opposition meeting.

Source link