Gossips
oi-Narayana M
ಅಂದ
ಹಾಗೂ
ಅಭಿನಯದಿಂದ
ಪ್ರೇಕ್ಷಕರಿಗೆ
ಮೋಡಿ
ಮಾಡಿದ
ನಟಿ
ಅನುಷ್ಕಾ
ಶೆಟ್ಟಿ
ಚಿತ್ರರಂಗಕ್ಕೆ
ವಿದಾಯ
ಹೇಳಲು
ನಿರ್ಧರಿಸಿದ್ದಾರೆ
ಎನ್ನುವ
ಗುಸುಗುಸು
ಶುರುವಾಗಿದೆ.
ಇತ್ತೀಚಿನ
ವರ್ಷಗಳಲ್ಲಿ
ಸ್ವೀಟಿ
ಶೆಟ್ಟಿ
ಸಿನಿಮಾಗಳಲ್ಲಿ
ನಟಿಸೋದು
ಕಮ್ಮಿ
ಆಗಿದೆ.
ಆದರೆ
ಅಭಿಮಾನಿಗಳು
ಮಾತ್ರ
ನೆಚ್ಚಿನ
ನಟಿಯಲ್ಲಿ
ತೆರೆಮೇಲೆ
ನೋಡಲು
ಕಾಯುತ್ತಿದ್ದಾರೆ.
ಇದೆಲ್ಲದರ
ನಡುವೆ
ಇಂತಾದೊಂದು
ಊಹಾಪೋಹ
ಇದೀಗ
ಶುರುವಾಗಿದೆ.
‘ಬಾಹುಬಲಿ’
ಮೊದಲ
ಭಾಗದ
ಮುಗಿದ
ಮೇಲೆ
ಅನುಷ್ಕಾ
ಶೆಟ್ಟಿ
‘ಸೈಜ್
ಜೀರೋ’
ಚಿತ್ರದಲ್ಲಿ
ನಟಿಸಿದರು.
ಚಿತ್ರದಲ್ಲಿ
ದಢೂತಿ
ಯುವತಿಯ
ಪಾತ್ರದಲ್ಲಿ
ನಟಿಸಲು
ನಿಜವಾಗಿಯೇ
ತೂಕ
ಹೆಚ್ಚಿಸಿಕೊಳ್ಳುವ
ಸಾಹಸ
ಮಾಡಿದ್ದರು.
ಅದಕ್ಕೆ
ತಕ್ಕ
ಬೆಲೆ
ತೆರುವಂತಾಯಿತು.
ಹೆಚ್ಚಿಸಿಕೊಂಡ
ತೂಕ
ಇಳಿಸಲು
ಎಷ್ಟು
ಕಸರತ್ತು
ಮಾಡಿದರೂ
ಪ್ರಯೋಜನವಾಗಲಿಲ್ಲ.
ಮೊದಲಿನ
ಶೇಪ್
ಮರಳಿ
ಪಡೆಯಲು
ಸಾಧ್ಯವಾಗಲೇಯಿಲ್ಲ.

ಒಳ್ಳೆ
ಯೋಗಪಟು
ಆಗಿರುವ
ಸ್ವೀಟಿ
ಸರ್ಜರಿಯಂತಹ
ಸುಲಭ
ಮಾರ್ಗ
ಬಿಟ್ಟು
ನ್ಯಾಚುರಲ್
ಆಗಿ
ಸಣ್ಣ
ಆಗುವ
ಪ್ರಯತ್ನ
ಮಾಡಿದರು.
ಆದರೆ
ಅದರಲ್ಲಿ
ಸಂಪೂರ್ಣವಾಗಿ
ಯಶ
ಕಾಣಲಿಲ್ಲ.
ಬಾಹುಬಲಿ-2
ಚಿತ್ರದಲ್ಲಿ
ಗ್ರಾಫಿಕ್ಸ್
ಬಳಸಿ
ಆಕೆಯನ್ನು
ಸಣ್ಣಗೆ
ತೋರಿಸುವ
ಪ್ರಯತ್ನ
ಮಾಡಲಾಗಿತ್ತು.
‘ಸಿಂಗಂ-3’,
‘ಭಾಗಮತಿ’
ಸಿನಿಮಾಗಳಲ್ಲಿ
ಹಾಗೆಯೇ
ನಟಿಸಿದರು.
ನಂತರ
ಸಿನಿಮಾಗಳಲ್ಲಿ
ನಟಿಸೋದು
ಕಮ್ಮಿ
ಮಾಡಿದ್ದರು.
ಬಹಳ
ದಿನಗಳ
ಬಳಿಕ
ನಟಿಸಿದ
‘ನಿಶಬ್ದಂ’
ಸಿನಿಮಾ
ಗೆಲ್ಲಲಿಲ್ಲ.
ಬರ್ತಾ
ಬರ್ತಾ
ಸ್ವೀಟಿಗೆ
ಸಿನಿಮಾ
ಅವಕಾಶಗಳು
ಕಮ್ಮಿ
ಆಗುತ್ತಿದೆ.
ತೂಕ
ಇಳಿಸಿಕೊಂಡಿದ್ದರೂ
ಮೊದಲಿನಂತೆ
ನಾಯಕ
ನಟರ
ಪಕ್ಕ
ಬಳಿಯಂತೆ
ಬಳುಕಲು
ಸಾಧ್ಯವಾಗುತ್ತಿಲ್ಲ.
ರಶ್ಮಿಕಾ,
ತಮನ್ನಾ,
ಶ್ರೀಲೀಲಾ,
ಪೂಜಾ
ಹೆಗ್ಡೆ
ರೀತಿಯ
ಯುವ
ನಟಿಯರ
ಹವಾ
ಈಗ
ಚಿತ್ರರಂಗದಲ್ಲಿ
ಹೆಚ್ಚಾಗಿದೆ.
ಸದ್ಯ
‘ಮಿಸ್
ಶೆಟ್ಟಿ
ಮಿಸ್ಟರ್
ಪೊಲಿಶೆಟ್ಟಿ’
ಚಿತ್ರದಲ್ಲಿ
ಸ್ವೀಟಿ
ನಟಿಸಿದ್ದಾರೆ.
ಈ
ಚಿತ್ರದಲ್ಲಿ
ಶೆಫ್
ಆಗಿ
ಅನುಷ್ಕಾ
ಶೆಟ್ಟಿ
ಮಿಂಚಿದ್ದಾರೆ.
ಇನ್ನು
ನಿವಿನ್
ಪೊಲಿ
ಚಿತ್ರದಲ್ಲಿ
ಹೀರೊ
ಆಗಿ
ನಟಿಸಿದ್ದಾರೆ.

‘ಮಿಸ್
ಶೆಟ್ಟಿ
ಮಿಸ್ಟರ್
ಪೊಲಿಶೆಟ್ಟಿ’
ಚಿತ್ರದಲ್ಲಿ
ನಿವಿನ್
ಸ್ಟ್ಯಾಂಡಪ್
ಕಾಮಿಡಿಯನ್
ಆಗಿ
ಕಾಣಿಸಿಕೊಂಡಿದ್ದಾರೆ.
ಶೆಫ್
ರವಳಿ
ಶೆಟ್ಟಿ
ಹಾಗೂ
ಸ್ಟ್ಯಾಂಡಪ್
ಕಾಮಿಡಿಯನ್
ಪೊಲಿಶೆಟ್ಟಿ
ನಡುವೆ
ಸ್ನೇಹ
ಶುರುವಾಗುತ್ತದೆ.
ಆ
ಸ್ನೇಹ
ಎಲ್ಲಿಗೆ
ಹೋಗಿ
ಸೇರುತ್ತದೆ
ಅನ್ನೋದು
ಸಿನಿಮಾ
ಕಥೆ.
ಅನುಷ್ಕಾ
ಸಿಕ್ಕ
ಸಿಕ್ಕ
ಸಿನಿಮಾಗಳಲ್ಲಿ
ನಟಿಸೋದು
ಬೇಡ
ಎಂದು
ನಿರ್ಧರಿಸಿದ್ದಾರೆ
ಎನ್ನಲಾಗ್ತಿದೆ.
ಅದೇ
ಕಾರಣಕ್ಕೆ
ಈ
ಸಿನಿಮಾ
ನಂತರ
ಚಿತ್ರರಂಗಕ್ಕೆ
ಗುಡ್
ಬೈ
ಹೇಳಲು
ತೀರ್ಮಾನಿಸಿದ್ದಾರೆ
ಎನ್ನಲಾಗ್ತಿದೆ.
ಒಂದೊಳ್ಳೆ
ಸಿನಿಮಾವನ್ನು
ಅಭಿಮಾನಿಗಳಿಗೆ
ನೀಡಿ
ಚಿತ್ರರಂಗದಿಂದ
ದೂರಾಗಬೇಕು
ಎಂದು
ಸ್ವೀಟಿ
ಮನಸ್ಸು
ಮಾಡಿದ್ದಾರೆ
ಎನ್ನಲಾಗ್ತಿದೆ.
ಹಾಗಂತ
ಆಕೆ
ಮದುವೆ
ಆಗುತ್ತಿದ್ದಾರಾ?
ಅಂದ್ರೆ
ಆ
ಬಗ್ಗೆ
ಯಾವುದೇ
ಸುಳಿವು
ಸಿಗುತ್ತಿಲ್ಲ.
ಸಿನಿಮಾ
ಬಿಟ್ಟು
ವಿಶ್ರಾಂತಿ
ಜೀವನ
ಸಾಗಿಸಲು
ತೀರ್ಮಾನಿಸಿದ್ದಾರೆ
ಅನ್ನುವ
ವದಂತಿ
ಶುರುವಾಗಿದೆ.
ಒಂದೊಳ್ಳೆ
ಸಿನಿಮಾ
ಮೂಲಕ
ವಿದಾಯ
ಹೇಳಲು
ಸ್ವೀಟಿ
ನಿರ್ಧರಿಸಿದ್ದು
ಅದಕ್ಕೆ
‘ಮಿಸ್
ಶೆಟ್ಟಿ
ಮಿಸ್ಟರ್
ಪೊಲಿಶೆಟ್ಟಿ’
ಚಿತ್ರವನ್ನು
ಆಯ್ಕೆ
ಮಾಡಿಕೊಂಡಿದ್ದಾರೆ
ಎನ್ನುವ
ಚರ್ಚೆ
ಟಾಲಿವುಡ್‌ನಲ್ಲಿ
ಕೇಳಿಬರ್ತಿದೆ.
ಮಹೇಶ್
ಬಾಬುಗೆ
ವಿಚ್ಛೇದನ
ನೀಡಲು
ಮುಂದಾಗಿದ್ದ
ನಮ್ರತಾ
ಶಿರೋಡ್ಕರ್:
ಕಾರಣ
ಆ
ನಟಿ?
ಮಂಗಳೂರಿನಲ್ಲಿ
ಹುಟ್ಟಿ
ಬೆಳೆದ
ಸ್ವೀಟಿ
ಶೆಟ್ಟಿ
ತೆಲುಗಿನ
‘ಸೂಪರ್’
ಚಿತ್ರದಲ್ಲಿ
ಮೊದಲ
ಬಾರಿಗೆ
ನಟಿಸಿದರು.
ಮುಂದೆ
‘ಅರುಂಧತಿ’,
‘ಬಿಲ್ಲಾ’,
‘ಸಿಂಗಂ’,
‘ವೇದಂ’,
‘ಮಿರ್ಚಿ’,
‘ಬಾಹುಬಲಿ’
ರೀತಿಯ
ಹಿಟ್
ಸಿನಿಮಾಗಳಲ್ಲಿ
ನಟಿಸಿದರು.
ಬಿಕಿನಿ
ತೊಟ್ಟು
ಬೋಲ್ಡ್
ಪಾತ್ರದಲ್ಲಿ
ಮಿಂಚಿದ
ಚೆಲುವೆ
‘ಅರುಂಧತಿ’,
‘ದೇವಸೇನಾ’,
‘ಭಾಗಮತಿ’
ರೀತಿಯ
ಪವರ್‌ಫುಲ್
ರೋಲ್‌ಗಳಲ್ಲಿ
ಅಬ್ಬರಿಸಿದರು.
ಬೆಂಗಳೂರಿನಲ್ಲಿ
ಓದಿ
ಬೆಳೆದ
ಅನುಷ್ಕಾ
ಶೆಟ್ಟಿ
ಕನ್ನಡ
ಸಿನಿಮಾಗಳಲ್ಲಿ
ಮಾತ್ರ
ನಟಿಸಲೇಯಿಲ್ಲ.
English summary
Anushka Shetty Saying Good bye after miss shetty mr polishetty film.
Friday, July 28, 2023, 19:11
Story first published: Friday, July 28, 2023, 19:11 [IST]