Anna Bhagya: ಇಂದಿನಿಂದಲೇ ಅಕ್ಕಿ ಇಲ್ಲ; ಜುಲೈ 1 ರಂದೇ ಹಣ ಕೊಡ್ತೀವಿ ಅಂತ ಹೇಳಿಲ್ಲ: ಸಿದ್ದರಾಮಯ್ಯ | They Did Not Say That They Will Pay On July 1 Says Siddaramaiah

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 01: ರಾಜ್ಯ ಕಾಂಗ್ರೆಸ್‌ ಗೆ ಗ್ಯಾರಂಟಿ ಘೋಷಣೆಗಳ ಜಾರಿಯೇ ದೊಡ್ಡ ಸವಾಲಾಗಿದ್ದು, ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೂ ಹಾಗೂ ಕೇಂದ್ರ ಸರ್ಕಾರದ ನಡುವೆ ಅಕ್ಕಿ ಕಾಳಗ ಏರ್ಪಟಿದ್ದು, ಸಮರ್ಪಕವಾಗಿ ಅಕ್ಕಿ ಲಭ್ಯವಾಗದ ಹಿನ್ನಲೆ ರಾಜ್ಯ ಕಾಂಗ್ರೆಸ್‌ 5 ಕೆ ಜಿ ಅಕ್ಕಿ ಜೊತೆಗೆ ಹಣ ನೀಡಲು ಮುಂದಾಗಿದೆ.

ಈ ಇತ್ತ ಜುಲೈ 1 ರಿಂದ ಅಕ್ಕಿ ಜೊತೆಗೆ ಹಣ ನೀಡುವುದಾಗಿ ಸಚಿವರುಗಳು ಹೇಳಿದ್ದು, ಇದೀಗ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜುಲೈ 1 ರಂದೇ ಹಣ ಕೊಡುತ್ತೇವೆ ಅಂತ ಹೇಳಿಲ್ಲ. ಜುಲೈ 10ರಿಂದ ಅಕ್ಕಿ ಬದಲು ಹಣ ಕೊಡೋ ಪ್ರಕ್ರಿಯೆ ಶುರು ಮಾಡ್ತೀವಿ ಎಂದು ತಿಳಿಸಿದರು.

They Did Not Say That They Will Pay On July 1 Says Siddaramaiah

ಗೃಹ ಜ್ಯೋತಿ ಯೋಜನೆ ಈ ತಿಂಗಳಿಂದ ಉಚಿತ. ಗೃಹ ಜ್ಯೋತಿ ಯೋಜನೆಯಲ್ಲಿ ಆಗಸ್ಟ್ ಬಿಲ್ ಉಚಿತ. ಈ ತಿಂಗಳೇ ಅನ್ನಭಾಗ್ಯ ಯೋಜನೆ ಜಾರಿ. ಈ ತಿಂಗಳ ಹಣ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನೂ ಅನ್ನಭಾಗ್ಯ ಗ್ಯಾರಂಟಿ ಜಾರಿಗೆ ಇನ್ನೂ ಹತ್ತು ದಿನ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ತಾಂತ್ರಿಕವಾಗಿ ಇನ್ನೂ ಹತ್ತು ದಿನದ ಬಳಿಕ ಅನ್ನಭಾಗ್ಯ ಯೋಜನೆ ಜಾರಿಗೆ ಬರಲಿದೆ. ಸರ್ಕಾರ ಇಂದಿನಿಂದ ಜಾರಿ ಎಂದು ಹೇಳಲಾಗಿತ್ತು. ಆದರೇ ಇಂದು ಜಾರಿ ಸಾಧ್ಯವಿಲ್ಲ. ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳ 10ರ ನಂತರ ಅಕ್ಕಿ ಪೂರೈಕೆ ಆಗಲಿದೆ. ಸದ್ಯ ಅನ್ನಭಾಗ್ಯದ ಅಕ್ಕಿ ವಿತರಣೆಗೆ ಎಲ್ಲೂ ಸ್ಟಾಕ್ ಇಲ್ಲ. ಬಹುತೇಕ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ದಾಸ್ತಾನು ಇಲ್ಲ ಎಂದು ತಿಳಿದು ಬಂದಿದೆ.

English summary

Anna Bhagya schemes: Cm Siddaramaiah Said That They Did Not Say That They Will Pay On July 1,

Story first published: Saturday, July 1, 2023, 13:24 [IST]

Source link