Anna Bhagya: ಅಕ್ಕಿ ಸಿಗುವವರೆಗೂ ಹಣ ಕೊಡುತ್ತೇವೆ ಎಂದ ಸಿದ್ದರಾಮಯ್ಯ; ಜನರ ಅಕೌಂಟ್‌ ಬರುವ ಹಣ ಎಷ್ಟು ಗೊತ್ತಾ? | Siddaramaiah: We Will Provide Money to BPL Card Holders Until We Get Rice Supply

Karnataka

oi-Reshma P

|

Google Oneindia Kannada News

ಬೆಂಗಳೂರು, ಜೂನ್‌ 28: ರಾಜ್ಯ ಹಾಗೂ ಕೇಂದ್ರ ಸರ್ಕಾರ ನಡುವೆ ಅನ್ನ ಭಾಗ್ಯದ ಅಕ್ಕಿ ವಿಚಾರದಲ್ಲಿ ಸರಣಿ ವಾಕ್ಸಮರ ನಡೆದಿದ್ದು, ಕೇಂದ್ರ ನಾಯಕರನ್ನ ಸಿದ್ದರಾಮಯ್ಯ ಹಾಗೂ ಆಹಾರ ಸಚಿವ ಕೆ ಹೆಚ್‌ ಮುನಿಯಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಅಕ್ಕಿ ಕೊಡುವ ಯೋಜನೆಗೆ ಸಮರ್ಪಕವಾಗಿ ಅಕ್ಕಿ ವಿತರಣೆಯಾಗದ ಹಿನ್ನಲೆಯಲ್ಲಿ, ಹಣವನ್ನು ಕೊಡಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಸಚಿವರ ಜೊತೆಗೆ ಚರ್ಚೆ ನಡೆಸಿದ್ದು, ಅಕ್ಕಿ ವಿತರಣೆಯಾಗದ ಹಿನ್ನಲೆಯಲ್ಲಿ, ಜನರ ಅಕೌಂಟ್‌ ಗೆ ಹಣವನ್ನು ಕೊಡಲು ಸರ್ಕಾರ ನಿರ್ಧರಿಸಿದೆ.

Money to BPL Card Holders Until

ಈ ಕುರಿತು ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಕ್ಕಿ ದಾಸ್ತಾನು ಇಟ್ಕೊಂಡು ಕೊಡ್ತೀವಿ ಅಂತ ಕೇಂದ್ರ ಸರ್ಕಾರ ಹೇಳಿತ್ತು. 14 ನೇ ತಾರೀಖು ಅಕ್ಕಿ ಇಲ್ಲ ಅಂತ ಪ್ರತ್ರ ಬರೆದಿದ್ದಾರೆ. ದುಡ್ಡು ಕೊಟ್ಟರು ಅಕ್ಕಿ ಕೊಡಲು ಕೇಂದ್ರ ಸರ್ಕಾರ ರೆಡಿಯಾಗಿಲ್ಲ, ಬಡವರಿಗೆ ಕೇಂದ್ರ ಸರ್ಕಾರ ದ್ರೋಹ ಮಾಡುತ್ತಿದೆ. ಖಾಸಗಿ ಅವರಿಗೆ ಮಾತ್ರವೇ ಅಕ್ಕಿ ಕೊಡುತ್ತಿದ್ದಾರೆ, ಇದು ಕೇಂದ್ರ ಸರ್ಕಾರ ಬಡವರಿಗೆ ಮಾಡುವರಿಗೆ ದ್ರೋಹ. ಇದು ಬಡವರ ಕಾರ್ಯಕ್ರಮ, ಯಡಿಯೂರಪ್ಪ ಹಾಗೂ ಬಸವರಾಜ ಹೋಗಿ ಕೇಂದ್ರಕ್ಕೆ ಹೋಗಿ ಅಕ್ಕಿ ಕೊಡಿ ಎಂದು ಒತ್ತಾಯ ಮಾಡಲಿ ಎಂದರು.

 ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆಗೆ ಸಿಎಂ ಸಿದ್ದರಾಮಯ್ಯ ಬರಬಾರದು: ಸಂಘಟನೆಗಳ ಎಚ್ಚರಿಕೆ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆಗೆ ಸಿಎಂ ಸಿದ್ದರಾಮಯ್ಯ ಬರಬಾರದು: ಸಂಘಟನೆಗಳ ಎಚ್ಚರಿಕೆ

ಜುಲೈ 1 ರಿಂದ 5+5 ಹತ್ತು ಕೆ.ಜಿ ಅಕ್ಕಿ‌ಕೊಡುವುದಾಗಿ ಹೇಳಿದ್ವಿ. 5 ಕೇಂದ್ರ ಸರ್ಕಾರ ಕೊಡುತ್ತದೆ. ನಾವು 5 ಕೆ.ಜಿ ಅಕ್ಕಿ ಕೊಡಬೇಕು, ಆದರೆ ಅಕ್ಕಿ ದಾಸ್ತಾನು ಇಲ್ಲ. ನಮಗೆ 2.29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು. ಪುಡ್ ಸೆಕ್ಯುರಿಟಿ ಆ್ಯಕ್ಟ್ ಅಕ್ಕಿ ಕೊಡುತ್ತೇವೆ ಅಂತ ಹೇಳಿತ್ತು. ಈಗ ಅಕ್ಕಿ ಸಿಗದೇ ಇರುವುದರಿಂದ, ಹೀಗಾಗಿ ಅಕ್ಕಿ ಸಿಗುವವರೆಗೂ ನೇರವಾಗಿ ಅವರ ಅಕೌಂಟ್ ಗೆ ಒಂದು ಕೆ.ಜಿ ಅಕ್ಕಿ ಗೆ 34 ರೂಪಾಯಿಯಂತೆ 170 ರೂಪಾಯಿ ಜಮಾ ಆಗಲಿದೆ. ಪ್ರತಿಯೊಂದು ಕುಟುಂಬಕ್ಕೆ 5 ಕೆ.ಜಿ ಅಕ್ಕಿ ಹಾಗೂ 5 ಅಕ್ಕಿಗೆ ಹಣ ನೀಡುತ್ತೇವೆ ಎಂದು ಹೇಳಿದರು.

ಸಿಎಂ ಕಛೇರಿಯಲ್ಲಿ ವರ್ಗಾವಣೆ ಧಂದೆ ನಡೆಯುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಮಾತನಾಡಿ, ಅದು ಅವರ ಕಾಲದಲ್ಲಿ ನಡೆದಿರುವುದನ್ನು ನೆನಪು ಮಾಡಿಕೊಂಡು ಇವಾಗ ಹೇಳ್ತಿದ್ದಾರೆ ಎಂದು ಹೇಳಿದರು.

ಇನ್ನೂ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಅನ್ನಭಾಗ್ಯ ಯೋಜನೆ ಯ ಅಕ್ಕಿ ಕೊಡುತ್ತೇವೆ ಅಂಥ ಹೇಳಿದ್ವಿ. ಎಫ್ ಸಿ ಐ ನಲ್ಲಿ ಅಕ್ಕಿ ಇದ್ದರೂ ದುರುದ್ದೇಶದಿಂದ ಅಕ್ಕಿ‌ಕೊಟ್ಟಿಲ್ಲ, ಕೇಂದ್ರ‌ ಬಿಜೆಪಿ ಸರ್ಕಾರ ರಾಜ್ಯದ‌ ಜನರಿಗೆ ದ್ರೋಹ‌ಮಾಡಿದೆ. ಹೀಗಾಗಿ ಜುಲೈ‌ ಒಂದರಿಂದ ಅಕ್ಕಿ ಬದಲು ಅಕೌಂಟ್ ಗೆ ನೇರವಾಗಿ ಹಣ ಹಾಕ್ತೇವೆ, ಐದು‌ ಕೆಜಿ ಅಕ್ಕಿಗೆ‌ ಬದಲಾಗಿ ಹಣ ಕೊಡುತ್ತೇವೆ ಎಂದು ಹೇಳಿದರು.

ಅನ್ನ ಭಾಗ್ಯದ ಅಕ್ಕಿ ವಿತರಣೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡಿ, ಕೇಂದ್ರ ಸರ್ಕರ ನಮಗೆ ಅಕ್ಕಿ ಕೊಡಲಿಲ್ಲ. ಹಣ ಕೊಡುತ್ತೇವೆ ಅಂದ್ರು ಅಕ್ಕಿ‌ ಕೊಡಲಿಲ್ಲ, ನಾವು ಜುಲೈ 1 ರಿಂದ ಅಕ್ಕಿ ಕೊಡುತ್ತೇವೆ ಅಂತ ಮಾತು ಕೊಟ್ಟಿದ್ದೇವೆ, ಮಾತು ಕೊಟ್ಟಂತೆ ಅಕ್ಕಿ ಬದಲಾಗಿ ಹಣ ನೀಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳಿದರು.

English summary

Cm Siddaramaiah Said That We Will Provide Money to BPL Card Holders Until We Get Rice Supply

Source link