Amruthadhaare: ತಲೆ ನೋವಾದ ಪ್ರಶ್ನೆ ಕೇಳುವ ಶಾಸ್ತ್ರ: ಅಜ್ಜಿಯರ ನಡುವೆ ಸಿಲುಕಿದ ಮೊಮ್ಮಕ್ಕಳು | Amruthadhaare Serial 27th July episode written update

bredcrumb

Tv

oi-Narayana M

By ಪ್ರಿಯಾ ದೊರೆ

|

ಗೌತಮ್
ಹಾಗೂ
ಭೂಮಿಕಾ
ಅಜ್ಜಿಯಂದಿರು
ಇಬ್ಬರೂ
ಊರಿಂದ
ಮೊಮ್ಮಕ್ಕಳ
ಮದುವೆ
ಸಲುವಾಗಿ
ಬೆಂಗಳೂರಿಗೆ
ಬಂದಿದ್ದಾರೆ.
ಮೊಮ್ಮಕ್ಕಳ
ಮದುವೆಯನ್ನು
ನೋಡುವ
ಖುಷಿಯ
ಜೊತೆಗೆ
ತಲೆನೋವನ್ನೂ
ತಂದಿದ್ದಾರೆ.
ಭೂಮಿಕಾ
ಅವರ
ಅಜ್ಜಿ
ನಡೆದುಕೊಳ್ಳುವ
ರೀತಿ
ಬಹಳ
ಮಾಡ್ರನ್
ಆದರೂ
ಕೂಡ,
ಶಾಸ್ತ್ರ
ಸಂಪ್ರದಾಯ
ಎಂದು
ಬಂದಾಗ
ಬಹಳ
ಕಟ್ಟುನಿಟ್ಟು.
ಈಗ
ಇದೇ
ಸಮಸ್ಯೆ
ಆಗಿ
ಪರಿಣಮಿಸಿದೆ.

ಅಜ್ಜಿ
ತಾತ
ಎಂದ
ಮೇಲೆ
ಅಲ್ಲಿ
ಕೋಪ,
ಮುನಿಸು,
ಹಠ
ಇದ್ದೇ
ಇರುತ್ತದೆ.
ಮಕ್ಕಳಂತೆ
ವಯಸ್ಸಾದವರು
ನಡೆದುಕೊಳ್ಳುತ್ತಾರೆ.
ಆದರೆ,
ಕೆಲವೊಮ್ಮೆ
ಇವರ
ಹಠವೇ
ಸಂಬಂಧಗಳ
ನಡುವೆ
ಸಮಸ್ಯೆಯನ್ನುಂಟು
ಮಾಡುತ್ತದೆ.
ಭೂಮಿಕಾ
ಅವರ
ಅಮ್ಮಮ್ಮ(ಅಜ್ಜಿ)ನಿಗೆ
ಪ್ರಶ್ನೆ
ಕೇಳುವ
ಶಾಸ್ತ್ರ
ಗಂಡು
ಹೆಣ್ಣಿನ
ಮನೆಯವರ
ಜೊತೆ
ಮಾಡಬೇಕಿದೆ.
ಆದರೆ,
ಇದಕ್ಕೆ
ಗೌತಮ್
ಅವರ
ಅಜ್ಜಿ
ಸುತಾರಾಂ
ಒಪ್ಪುತ್ತಿಲ್ಲ.

Amruthadhaare-serial

ಮಂದಾಕಿನಿಗೂ

ಶಾಸ್ತ್ರ
ಬೇಕಾಗಿಲ್ಲ.
ಕಾರಣ
ಹಾಗೋ
ಹೀಗೋ
ಮಾಡಿ
ಭೂಮಿಕಾಳ
ಮದುವೆ
ಫಿಕ್ಸ್
ಆಗಿದೆ.
ಈಗ

ಶಾಸ್ತ್ರ

ಶಾಸ್ತ್ರ
ಅಂತ
ಮಾಡಲು
ಹೋಗಿ
ಮದುವೆಗೆ
ಅಡ್ಡಿಯಾದರೆ
ಕಷ್ಟವಾಗುತ್ತದೆ
ಎಂಬುದು
ಮಂದಾಕಿನಿಯ
ಆಲೋಚನೆ.
ಆದರೆ,
ಅಮ್ಮಮ್ಮನಿಗೆ
ಇದು
ಕೊಂಚವೂ
ಅರ್ಥವಾಗುತ್ತಿಲ್ಲ.
ಅವರಿಗೆ
ಪರಂಪರಾಗತವಾಗಿ
ನಡೆದುಕೊಂಡು
ಬಂದಿರುವ
ಶಾಸ್ತ್ರ
ನಡೆಯಬೇಕಿದೆ
ಅಷ್ಟೇ.
ಹೀಗಾಗಿ
ಶಾಸ್ತ್ರ
ಮಾಡುವುದಿಲ್ಲ
ಎಂದರೆ,
ತಾನು
ಮದುವೆಗೆ
ಇರುವುದಿಲ್ಲ
ವಾಪಸ್
ಮೈಸೂರಿಗೆ
ಹೊರಡುವುದಾಗಿ
ಹಠ
ಮಾಡುತ್ತಿದ್ದಾರೆ.

Seetha Rama: ರಾಮ-ಸೀತಾ ಇಂದಿನಿಂದ ಅಕ್ಕಪಕ್ಕ.. ಸಿಹಿ ಮಾಡಿದ ಚಪಾತಿಯಿಂದ ಹೊಸ ಬಂಧ ಆರಂಭ?Seetha
Rama:
ರಾಮ-ಸೀತಾ
ಇಂದಿನಿಂದ
ಅಕ್ಕಪಕ್ಕ..
ಸಿಹಿ
ಮಾಡಿದ
ಚಪಾತಿಯಿಂದ
ಹೊಸ
ಬಂಧ
ಆರಂಭ?

ಅಜ್ಜಿಗೆ
ಹಾಲ್
ಬಾಯ್

ಭೂಮಿಕಾ
ಕೂಡ
ಅಮ್ಮಮ್ಮನಿಗೆ
ಬಹಳ
ನಿಧಾನವಾಗಿ
ಸಮಾಧಾನ
ಹೇಳಿದ್ದಾಳೆ.
ಇತ್ತ
ಗೌತಮ್
ದಿವಾನ್

ಶಾಸ್ತ್ರಗಳಿಂದ
ಏನೆಲ್ಲಾ
ಸಮಸ್ಯೆಗಳು
ಆಗುತ್ತಿವೆ
ಎಂಬುದನ್ನು
ಯೋಚಿಸುತ್ತಿದ್ದಾನೆ.
ಇದಕ್ಕಾಗಿ
ಪರಿಹಾರವನ್ನೂ
ಕೂಡ
ಹುಡುಕುತ್ತಾನೆ.
ತನ್ನ
ಅಜ್ಜಿಗೆ
ಹಾಲ್
ಬಾಯ್
ಎಂದರೆ
ಬಹಳ
ಇಷ್ಟ
ಎಂದು
ತಿಳಿದಿರುವ
ಗೌತಮ್
ತಂದು
ಕೊಡುತ್ತಾನೆ.
ಅಜ್ಜಿ
ಹಾಲ್
ಬಾಯ್
ತಿಂದ
ಮೇಲೆ,
ಅವರ
ತಾತನನ್ನು
ನೆನಪಿಸಿಕೊಳ್ಳುತ್ತಾರೆ.
ಆಗ
ಗೌತಮ್
ಅವರು
ನಡೆದ
ದಾರಿಯಲ್ಲಿ
ನಡೆದಿದ್ದಕ್ಕೆ
ಇವತ್ತು
ನಾನು
ಚೆನ್ನಾಗಿದ್ದೀನಿ
ಎಂದು
ಹೇಳುತ್ತಾ,
ದೊಡ್ಡವರ
ಮಾತಿಗೆ
ಬೆಲೆ
ಕೊಡಬೇಕು
ಎಂಬ
ಮಾತನ್ನು
ಹೇಳುತ್ತಾನೆ.

Amruthadhaare-serial

ಅಜ್ಜಿಗೆ
ಬುದ್ಧಿ
ಹೇಳಿದ
ಮೊಮ್ಮಗ

ನಮ್ಮ
ತಾತನಂತೆಯೇ
ಭೂಮಿಕಾ
ಅವರ
ಅಮ್ಮಮ್ಮ
ಕೂಡ
ಹಳೇ
ಕಾಲದಲ್ಲಿ
ಮಾಡಿರುವ
ಶಾಸ್ತ್ರವನ್ನು
ಈಗ
ಮಾಡಬೇಕು
ಎಂದುಕೊಂಡಿದ್ದಾರೆ.
ನಾವು
ಮಹಿಮಾ
ಮದುವೆಯನ್ನು
ಹೇಗೆಲ್ಲಾ
ಮಾಡಬೇಕು
ಎಂದು
ಆಸೆ
ಪಟ್ಟಿದ್ದೀವೋ,
ಹಾಗೆ
ಭೂಮಿಕಾ
ಮನೆಯವರಿಗೂ
ಆಸೆ
ಇರುತ್ತದೆ.
ಆದರೆ,
ಪ್ರಶ್ನೆ
ಕೇಳುವ
ಶಾಸ್ತ್ರ
ಬೇಡ
ಎನ್ನುತ್ತಿರುವುದು
ತಪ್ಪಲ್ವಾ
ಎಂದು
ಹೇಳುತ್ತಾನೆ.

ಮಾತನ್ನು
ಕೇಳಿದ
ಗೌತಮ್
ಅಜ್ಜಿಯೂ
ಕೂಡ
ಹೌದು
ಎಂದು
ಒಪ್ಪಿಕೊಂಡು
ಶಾಸ್ತ್ರವನ್ನು
ಮಾಡುವಂತೆ
ಹೇಳುತ್ತಾರೆ.
ಆಗ

ಮಾತನ್ನು
ಗೌತಮ್,
ಭೂಮಿಕಾಳಿಗೆ
ಫೋನ್
ಮಾಡಿ
ಹೇಳುತ್ತಾನೆ.

ನಿರಾಳರಾದ
ಮೊಮ್ಮಕ್ಕಳು

ಭೂಮಿಕಾ
ಮನೆಯಲ್ಲಿ
ಅಮ್ಮಮ್ಮ
ನೀರನ್ನೂ
ಕುಡಿಯದೇ
ಹಠ
ಮಾಡುತ್ತಿರುತ್ತಾರೆ.
ಆದರೆ,
ಗೌತಮ್
ಅವರ
ಅಜ್ಜಿ
ಶಾಸ್ತ್ರ
ಮಾಡಲು
ಒಪ್ಪಿದ್ದಾರೆ
ಎಂಬುದನ್ನು
ಕೇಳಿದ
ಕೂಡಲೇ
ಖುಷಿ
ಪಡುತ್ತಾರೆ.
ಗೌತಮ್
ಅವರ
ಅಜ್ಜಿಯನ್ನು
ಶಾಸ್ತ್ರ
ಮಾಡಲು
ಒಪ್ಪಿಸಿದ್ದಕ್ಕೆ
ಮಂದಾಕಿನಿಯೂ
ಖುಷಿಯಿಂದ
ಅಳಿಯನ
ಬಗ್ಗೆ
ಜಂಭ
ಕೊಚ್ಚಿಕೊಳ್ಳುತ್ತಾಳೆ.
ದುಡ್ಡನ್ನು
ನೋಡಿ
ಯಾರನ್ನು
ಅಳಿಯಬಾರದು.
ನನ್ನ
ಅಳಿಯ
ಸಂಬಂಧಗಳಿಗೆ,
ಇನ್ನೊಬ್ಬರ
ಖುಷಿ
ಎಷ್ಟು
ಬೆಲೆ
ಕೊಡುತ್ತಾರೆ
ಎಂದು
ಹೊಗಳುತ್ತಾಳೆ.

ಮಾತನ್ನು
ಕೇಳಿದ
ಗೌತಮ್‌ಗೂ
ಖುಷಿ
ಆಗುತ್ತದೆ.
ಈಗ
ಇಬ್ಬರು
ಅಜ್ಜಿಯಂದಿರ
ನಡುವೆ
ಸಿಲುಕಿದ
ಭೂಮಿಕಾ
ಹಾಗೂ
ಗೌತಮ್
ನಿರಾಳರಾಗಿದ್ದಾರೆ.

English summary

Amruthadhaare Kannada serial today episode. know more.

Thursday, July 27, 2023, 23:15

Story first published: Thursday, July 27, 2023, 23:15 [IST]

Source link