Amruthadhaare: ಗೌತಮ್‌ಗಾಗಿ ಉಂಗುರ ಆರಿಸಿದ ಭೂಮಿಕಾ | Amruthadhaare Serial 03rd July episode written update

bredcrumb

Tv

oi-Narayana M

By ಪ್ರಿಯಾ ದೊರೆ

|

ಪ್ರತಿಬಾರಿ
ಎದುರಾದಾಗಲೆಲ್ಲಾ
ಕಚ್ಚಾಡುತ್ತಿದ್ದ
ಜೋಡಿ
ಈಗ
ಮದುವೆಯಾಗಲು
ಮುಂದಾಗಿದ್ದಾರೆ.
ಮನೆಯವರ
ಸಂತೋಷಕ್ಕಾಗಿ
ಭೂಮಿಕಾ
ಹಾಗೂ
ಗೌತಮ್
ತಮ್ಮ
ಮದುವೆಯ
ಬಗ್ಗೆ
ತಾವೇ
ನಿರ್ಧಾರ
ಮಾಡಿದ್ದಾರೆ.
ಭೂಮಿಕಾ
ತಾಯಿ
ಮಂದಾಕಿನಿಗೆ
ಸದ್ಯ
ಈಗಲಾದರೂ
ಭೂಮಿಕಾ
ಮದುವೆ
ನಡೆಯುತ್ತಿದೆ
ಎಂಬ
ಖುಷಿ.
ಆದರೆ,
ಶಕುಂತಲಾಗೆ
ಮದುವೆ
ನಂತರ
ಭೂಮಿಕಾ
ತನ್ನ
ಕೈ
ಆಳಾಗಿರುತ್ತಾಳೆ
ಎಂಬ
ನೆಮ್ಮದಿ.

ಇತ್ತ
ಭೂಮಿಕಾ
ಹಾಗೂ
ಗೌತಮ್‌ಗೆ
ಈಗ
ಇಬ್ಬರೂ
ಮದುವೆಯಾಗದೇ
ಬೇರೆ
ದಾರಿಯೇ
ಇಲ್ಲ.
ಹಾಗಾಗಿ
ಇಬ್ಬರೂ

ಮದುವೆಗೆ
ಒಪ್ಪಿದ್ದಾರೆ,
ಎಂಬುದು
ಶಕುಂತಲಾಳಿಗೆ
ಮಾತ್ರವೇ
ಗೊತ್ತಿದೆ.
ಯಾಕೆಂದರೆ,
ಶಕುಂತಲಾನೇ
ಪ್ಲ್ಯಾನ್
ಮಾಡಿ
ಮೀಡಿಯಾದಲ್ಲಿ
ಇವರಿಬ್ಬರ
ವಿಚಾರ
ಪ್ರಸಾರವಾಗುವಂತೆ
ಮಾಡಿದ್ದು.
ಈಗ
ಗೌತಮ್
ಹಾಗೂ
ಭುಮಿಕಾ
ಮದುವೆಗೆ
ಒಪ್ಪಿಕೊಂಡಿದ್ದಾರೆ.
ಇನ್ನು
ಶಕುಂತಲಾ
ನಿಶ್ಚಿತಾರ್ಥಕ್ಕೆ
ಮುಹೂರ್ತ
ನೋಡಬೇಕು
ಎಂದು
ಹೇಳಿದಾಗ
ಗೌತಮ್
ಬೇಡ.
ನಾನೇ
ಸಮಯ
ಹಾಗೂ
ದಿನವನ್ನು
ಫಿಕ್ಸ್
ಮಾಡಿದ್ದೇನೆ.
ನಾಳೆ
ರಾತ್ರಿ
10.30ಗೆ
ಎಂದು
ಹೇಳುತ್ತಾನೆ.

Amruthadhaare-serial

ಗೌತಮ್
ಮಾತಿಗೆ
ಶಕುಂತಲಾ
ಒಪ್ಪಿಕೊಳ್ಳುತ್ತಾಳೆ.
ಬಳಿಕ
ಸಂಬಂಧಿಕರು
ಹಾಗೂ
ಸ್ನೇಹಿತರನ್ನು
ಕರೆಯಬೇಕು
ಎಂದು
ಹೇಳಿದಾಗ
ಅದಕ್ಕೂ
ಗೌತಮ್
ಯಾರೂ
ಬೇಡ
ಎನ್ನುತ್ತಾನೆ.
ಆಗಲೂ
ಶಕುಂತಲಾ
ಓಕೆ
ಎಂದು
ಹೇಳುತ್ತಾಳೆ.
ಇದಕ್ಕೆ
ಶಕುಂತಲಾ
ಸಹೋದರ
ಯಾಕೆ
ಅವನು
ಹೇಳಿದ್ದಕ್ಕೆಲ್ಲಾ
ತಲೆಯಾಡಿಸುತ್ತೀಯಾ
ಎಂದು
ಕೇಳಿದ್ದಕ್ಕೆ
ಶಕುಂತಲಾ,
ನಿಶ್ಚಿತಾರ್ಥ
ಅವನಿಷ್ಟದಂತೆ
ನಡೆಯುತ್ತೆ.
ಆದರೆ,
ಭೂಮಿಕಾ
ತನಗಿಷ್ಟದಂತೆ
ಇರುತ್ತಾಳೆ
ಎಂದು
ಹೇಳುತ್ತಾಳೆ.

ಗೌತಮ್‌ಗಾಗಿ
ಉಂಗುರ
ಆರಿಸಿದ
ಭೂಮಿಕಾ

ಇನ್ನು
ರಾತ್ರಿ
ಗೌತಮ್
ಹಾಗೂ
ಭೂಮಿಕಾ
ಇಬ್ಬರಿಗೂ
ನಿದ್ದೆಯೇ
ಬರುವುದಿಲ್ಲ.
ಇಬ್ಬರ
ನಡುವೆ
ನಡೆದಿದ್ದನ್ನೆಲ್ಲಾ
ನೆನಪು
ಮಾಡಿಕೊಳ್ಳುತ್ತಲೇ
ರಾತ್ರಿಯನ್ನು
ಕಳೆಯುತ್ತಾರೆ.
ಮಂದಾಕಿನಿ,
ಭೂಮಿಕಾ
ಬಳಿಯಿದ್ದ
ಹಳೆಯ
ಎಂಗೇಜ್‌ಮೆಂಟ್
ಉಂಗುರವನ್ನು
ಎಕ್ಸ್‌ಚೇಂಜ್
ಮಾಡುವಂತೆ
ಹೇಳುತ್ತಾಳೆ.

Amruthadhaare-serial

ಗೌತಮ್‌ಗೆ
ಯಾವುದರಲ್ಲೂ
ಆಸಕ್ತಿ
ಇಲ್ಲ

ಭೂಮಿಕಾ
ಕೂಡ
ಅಂಗಡಿಗೆ
ಹೋಗಿ
ಉಂಗುರ
ಬದಲಾಯಿಸುತ್ತಾಳೆ.
ಅದು
ಕೂಡ
ಗೌತಮ್
ಬಹಳ
ದಪ್ಪಗಿದ್ದಾನೆ
ಎಂದು
ದೊಡ್ಡ
ಸೈಜ್‌ನ
ಉಂಗುರ
ಖರೀದಿ
ಮಾಡುತ್ತಾಳೆ.
ಆದರೆ
ಇತ್ತ
ಭೂಮಿಕಾಳಿಗಾಗಿ
ಶಕುಂತಲಾಳೇ
ಉಂಗುರವನ್ನು
ಆರಿಸುತ್ತಾಳೆ.
ಗೌತಮ್
ತನಗೆ
ಇಷ್ಟವಿಲ್ಲದಿದ್ದರೂ
ಈಗ
ನಿಶ್ಚಿತಾರ್ಥ
ಮಾಡಿಕೊಳ್ಳುತ್ತಿರುವ
ಕಾರಣ
ಯಾವುದರಲ್ಲೂ
ಆಸಕ್ತಿ
ತೋರಿಸುವುದಿಲ್ಲ.

ಸ್ಪೆಷಲ್
ಆಗಿ
ರೆಡಿಯಾದ
ಭೂಮಿಕಾ

ಇನ್ನು
ಭೂಮಿಕಾಳನ್ನು
ನಿಶ್ಚಿತಾರ್ಥಕ್ಕೆ
ಕರೆದುಕೊಂಡು
ಹೋಗಲು
ಮಂದಾಕಿನಿ
ಹಾಗೂ
ಅಪೇಕ್ಷಾ
ಸೇರಿ
ರೆಡಿ
ಮಾಡುತ್ತಾರೆ.
ಭೂಮಿಕಾಳಿಗೆ
ಇಷ್ಟವಿಲ್ಲದಿದ್ದರೂ
ಮೇಕಪ್,
ಲಿಪ್
ಸ್ಟಿಕ್,
ಹೇರ್
ಸ್ಟೈಲ್
ಮಾಡುತ್ತಾರೆ.
ಇತ್ತ
ಗೌತಮ್‌ಗೆ
ಡಾರ್ಲಿಂಗ್
ಅಪರ್ಣಾಳೇ
ಬಟ್ಟೆಯನ್ನು
ಆರಿಸುತ್ತಾಳೆ.
ಭೂಮಿಕಾ
ಬಹಳ
ಸ್ಟೈಲಿಷ್
ಆಗಿ
ರೆಡಿಯಾಗಿರುತ್ತಾಳೆ.
ಪಿಂಕ್
ಸಲ್ವಾರ್‌ನಲ್ಲಿ
ಭೂಮಿಕಾ
ಗೌತಮ್
ಮನೆಗೆ
ಬರುತ್ತಾಳೆ.
ಹಸಿರು
ಉಡುಗೆಯಲ್ಲಿ
ಗೌತಮ್
ಸಿದ್ಧವಾಗಿರುತ್ತಾನೆ.

'ಲಕ್ಷ್ಮೀ ಬಾರಮ್ಮ' ಟೀಂ ಜೊತೆಗೆ ಲಚ್ಚಿ-ರಿಯಾ ಕಾಣಿಸಿಕೊಂಡ ಉದ್ದೇಶವೇನು ಗೊತ್ತಾ..?‘ಲಕ್ಷ್ಮೀ
ಬಾರಮ್ಮ’
ಟೀಂ
ಜೊತೆಗೆ
ಲಚ್ಚಿ-ರಿಯಾ
ಕಾಣಿಸಿಕೊಂಡ
ಉದ್ದೇಶವೇನು
ಗೊತ್ತಾ..?

ಗೆಳೆಯನಿಗೆ
ಟಿಪ್ಸ್
ಕೊಟ್ಟ
ಆನಂದ್

ಗೌತಮ್‌ನನ್ನು
ಕರೆದುಕೊಂಡು
ಬರಲು
ರೂಮಿಗೆ
ಹೋದಾಗ
ಗೆಳೆಯ
ಆನಂದ್
ಒಂದಷ್ಟು
ಟಿಪ್ಸ್
ಕೊಡುತ್ತಾನೆ.
ಇವತ್ತಾದರೂ
ಭೂಮಿಕಾಳನ್ನು
ಹೊಗಳು.
ಹುಡುಗಿಯರಿಗೆ
ಹೊಗಳಿದರೆ
ಬಹಳ
ಖುಷಿಯಾಗುತ್ತದೆ.
ಅವಳನ್ನು
ನಿನ್ನ
ಹೇರ್
ಸ್ಟೈಲ್
ಚೆನ್ನಾಗಿದೆ.
ಲಿಪ್
ಸ್ಟಿಕ್
ಬಣ್ಣ
ಸೂಪರ್
ಎಂದು
ಹೇಳು
ಎಂದು
ಹೇಳಿಕೊಡುತ್ತಾನೆ.
ಆದರೆ,
ಗೌತಮ್,
ಆನಂದ್
ಮಾತನ್ನು
ಕೇಳುವುದಕ್ಕೆ
ತಯಾರಿರುವುದಿಲ್ಲ.
ಬಳಿಕ
ಭೂಮಿಕಾಳನ್ನು
ಗೌತಮ್
ನೋಡಿ
ಕೊಂಚ
ಸಂಕೋಚ
ಪಟ್ಟುಕೊಳ್ಳುತ್ತಾನೆ.
ಭೂಮಿಕಾ
ನಾಚಿಕೊಂಡು
ನಿಂತಿರುತ್ತಾಳೆ.
ಇವರಿಬ್ಬರ
ಎಂಗೇಜ್‌ಮೆಂಟ್
ನೋಡಲು
ಎಲ್ಲರೂ
ತುದಿಗಾಲಿನಲ್ಲಿ
ನಿಂತಿದ್ದಾರೆ.

English summary

Amruthadhaare Serial 03rd July episode written update. here is details about Everyone waiting for Bhoomika and Gautham Diwan engagement. know more.

Monday, July 3, 2023, 23:01

Source link