Amazon layoffs: ಅಮೆಜಾನ್ ಫ್ರೆಶ್ ದಿನಸಿ ಸ್ಟೋರ್‌ಗಳಲ್ಲಿ ಉದ್ಯೋಗ ಕಡಿತ- ಆತಂಕದಲ್ಲಿ ನೌಕರರು | Amazon layoffs: Job Cuts at Amazon Fresh Grocery Stores- Know the reason

Business

oi-Ravindra Gangal

|

Google Oneindia Kannada News

ಬೆಂಗಳೂರು, ಜುಲೈ 28: ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ ಅಮೆಜಾನ್‌ ಕಂಪನಿಯು ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಅಮೆಜಾನ್‌ ಫ್ರೆಶ್‌ ದಿನಸಿ ಸ್ಟೋರ್‌ಗಳಲ್ಲಿ ಕೆಲಸ ಮಾಡುವ ನೌಕರರನ್ನು ವಜಾ ಮಾಡಲು ನಿರ್ಧರಿಸಿದೆ. ಇದರ ಭಾಗವಾಗಿ ಹಲವು ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಿದೆ ಎಂದು ‘ಸಿಎನ್‌ಬಿಸಿ’ ವರದಿ ಮಾಡಿದೆ.

ಅಮೆಜಾನ್‌ ಫ್ರೆಸ್‌ ( ತಾಜಾ ದಿನಸಿ ಅಂಗಡಿ ) ಮತ್ತೊಂದು ಸುತ್ತಿನ ವಜಾಗಳನ್ನು ಘೋಷಿಸಿದೆ. ಯುಎಸ್‌ನಲ್ಲಿನ ಅಮೆಜಾನ್ ಫ್ರೆಶ್ ಸ್ಟೋರ್‌ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.

Amazon layoffs: Job Cuts at Amazon Fresh Grocery Stores- Know the reason

ಇನ್-ಸ್ಟೋರ್ ಸಿಬ್ಬಂದಿಯಾಗಿರುವ ಝೋನ್‌ ಲೀಡ್‌ಗಳನ್ನು ತೆಗೆದು ಹಾಕಿದೆ ಎಂದು ತಿಳಿದುಬಂದಿದೆ. ಝೋನ್‌ ಲೀಡ್ ಎನ್ನುವುದು ಕೆಳ ಹಂತದ ನಿರ್ವಹಣಾ ಸ್ಥಾನವಾಗಿದೆ. ಝೋನ್‌ ಲೀಡ್‌ಗಳು ನಿರ್ದಿಷ್ಟ ಅಂಗಡಿ ವಿಭಾಗಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಹೊಸ ಉದ್ಯೋಗಿಗಳಿಗೆ ಸಹಾಯ ಮಾಡುವುದು, ತರಬೇತಿ ನೀಡುವುದು ಇವರ ಕೆಲಸವಾಗಿದೆ.

Amazon layoff: ಮುಂದಿನ ಕೆಲ ವಾರಗಳಲ್ಲಿ ಮತ್ತೆ 9,000 ಉದ್ಯೋಗ ಕಡಿತಗೊಳಿಸಲಿದೆ ಅಮೆಜಾನ್Amazon layoff: ಮುಂದಿನ ಕೆಲ ವಾರಗಳಲ್ಲಿ ಮತ್ತೆ 9,000 ಉದ್ಯೋಗ ಕಡಿತಗೊಳಿಸಲಿದೆ ಅಮೆಜಾನ್

ಅಮೆಜಾನ್ ವಕ್ತಾರರಾದ ಜೆಸ್ಸಿಕಾ ಮಾರ್ಟಿನ್ ಅವರ ಹೇಳಿಕೆಯ ಪ್ರಕಾರ, ‘ಯಾವುದೇ ಚಿಲ್ಲರೆ ವ್ಯಾಪಾರಿಗಳಂತೆ, ನಾವು ಸಹ ನಿಯತಕಾಲಿಕವಾಗಿ ನಮ್ಮ ಅಂಗಡಿಗಳ ಅಗತ್ಯಗಳನ್ನು ನಿರ್ಣಯಿಸುತ್ತೇವೆ. ನಮ್ಮ ಉದ್ಯೋಗಿಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ಗ್ರಾಹಕರ ಮೌಲ್ಯವನ್ನು ತಲುಪಿಸಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

ನಮ್ಮ ಗ್ರಾಹಕರು ಮತ್ತು ತಂಡಗಳಿಗೆ ಉತ್ತಮ ಸೇವೆ ನೀಡಬೇಕೆಂಬುದು ನಮ್ಮ ಮೊದಲ ಆಧ್ಯತೆಯಾಗಿದೆ. ನಮ್ಮ ಅಂಗಡಿ ಸಿಬ್ಬಂದಿ ಮತ್ತು ಕಾರ್ಯಾಚರಣೆಯ ಮಾದರಿಗಳನ್ನು ಉತ್ತಮಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Amazon layoffs: Job Cuts at Amazon Fresh Grocery Stores- Know the reason

ದಿ ವಾಷಿಂಗ್ಟನ್ ಪೋಸ್ಟ್‌ನ ವರದಿಯ ಪ್ರಕಾರ, ಕಂಪನಿಯು 8 ರಾಜ್ಯಗಳಲ್ಲಿನ ಅಮೆಜಾನ್‌ ಫ್ರೆಸ್‌ ಅಂಗಡಿಗಳಲ್ಲಿ 44 ಉದ್ಯೋಗಿಗಳನ್ನು ಕಡಿತ ಮಾಡಿದೆ. ವಾಷಿಂಗ್ ಡಿಸಿ ಗಮನಾರ್ಹವಾಗಿ ಕಡಿತಗೊಳಿಸಲಾಗಿದೆ. ಕೆಲಸದಿಂದ ವಜಾಗೊಂಡ ಉದ್ಯೋಗಿಗಳಿಗೆ ಮೂರು ತಿಂಗಳ ಸಂಬಳವನ್ನು ಪಾವತಿಸಲು ಕಂಪನಿ ನಿರ್ಧರಿಸಿದೆ.

2007 ರಲ್ಲಿ, ಅಮೆಜಾನ್ ಫ್ರೆಶ್ ಅನ್ನು ಕೇವಲ ಡೆಲಿವರಿ ಬ್ರಾಂಡ್ ಆಗಿ ಪ್ರಾರಂಭಿಸಲಾಯಿತು. ಅದು ನಂತರ ಹೋಲ್‌ಸೆಲ್‌ ಫುಡ್ಸ್ ಸೂಪರ್‌ ಮಾರ್ಕೆಟ್‌ಗಳನ್ನು ಸುಮಾರು 13 ಶತಕೋಟಿಗೆ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿತು. ಕಂಪನಿಯು ತನ್ನ ಆನ್‌ಲೈನ್ ವಿತರಣಾ ಸೇವೆಗಳನ್ನು ಸುಧಾರಿಸಲು ಕೆಲವು ಡಾರ್ಕ್ ಸ್ಟೋರ್‌ಗಳನ್ನು ಸಹ ಖರೀದಿಸಿತು.

ಈ ವರ್ಷದ ಆರಂಭದಲ್ಲಿ, ಕಂಪನಿಯು ವೆಚ್ಚ ಕಡಿತದ ಕಾರಣದಿಂದಾಗಿ ಕೆಲವು ಫ್ರೆಶ್ ಮತ್ತು ಗೋ ಸ್ಟೋರ್‌ಗಳನ್ನು ಮುಚ್ಚುವುದಾಗಿ ಘೋಷಿಸಿತು.

Amazon layoffs: Job Cuts at Amazon Fresh Grocery Stores- Know the reason

ಕಳೆದ ಒಂದು ವರ್ಷದಲ್ಲಿ 27,000 ಉದ್ಯೋಗಗಳನ್ನು ಅಮೆಜಾನ್‌ ಕಡಿತಗೊಳಿಸಿದೆ. ಕಂಪನಿಯು ಈ ವರ್ಷದ ಆರಂಭದಲ್ಲಿ 18,000 ಉದ್ಯೋಗ ಕಡಿತಗಳನ್ನು ಮಾಡಿದೆ. ಅದರ ನಂತರ ಹೆಚ್ಚುವರಿಯಾಗಿ 9,000 ಉದ್ಯೋಗಿಗಳನ್ನು ವಜಾಗೊಳಿಸಲಾಯಿತು. ಮೇ ತಿಂಗಳಲ್ಲಿ, ಅಮೆಜಾನ್ ಭಾರತದಲ್ಲಿ ವಿವಿಧ ವ್ಯವಹಾರಗಳು ಮತ್ತು ಕಾರ್ಯಗಳಲ್ಲಿ ತೊಡಗಿಕೊಂಡಿದ್ದ 500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ತಿಳಿದುಬಂದಿದೆ.

English summary

Amazon layoffs: Amazon continues to cut jobs due to financial crisis,

Story first published: Friday, July 28, 2023, 14:03 [IST]

Source link