Amarnath Yatra: ರಸ್ತೆ ಸಂಪರ್ಕ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಕಾಫಿನಾಡಿನ ಐವರು ಸೇಫ್‌ | Amarnath Yatra: Road connectivity breakdown due to heavy rain, Chikkamagaluru’s five people safe

Chikkamagaluru

lekhaka-Veeresha H G

By ಚಿಕ್ಕಮಗಳೂರು ಪ್ರತಿನಿಧಿ

|

Google Oneindia Kannada News

ಚಿಕ್ಕಮಗಳೂರು, ಜುಲೈ, 09: ಮಳೆ ಆರ್ಭಟ ಹೆಚ್ಚಾದ ಪರಿಣಾಮ ಅಮರನಾಥದಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ. ಇದರಿಂದ ಕರ್ನಾಟದಿಂದ ತೆರಳಿದ್ದ ಹಲವು ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಯಾತ್ರೆಗೆ ಹೋಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಲದ ಪ್ರವಾಸಿಗರು ಯಾವುದೇ ತೊಂದರೆ ಇಲ್ಲದೆ ಸೇಫ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಶ್ರೀನಿವಾಸ್, ಮಣಿ, ಭರತ್, ಚಂದ್ರಶೇಖರ್, ಮನೋಜ್ ಎಂಬ ಐವರು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ವಾರ ಯಾತ್ರೆಗೆ ತೆರಳಿದ್ದ ಈ ಐವರ ತಂಡ ಇದೀಗ ಶೇಷನಾಗ್ ಪ್ರದೇಶದಲ್ಲಿದೆ ಎಂದು ತಿಳಿದುಬಂದಿದೆ.

Amarnath Yatra

ಪಂಚತರಣಿಯಲ್ಲಿ ಸಿಲುಕಿಕೊಂಡ ಧಾರವಾಡದ ಐವರು

ಭಾರೀ ಮಳೆಯಾಗುತ್ತಿರುವ ಪರಿಣಾಮ ಅಮರನಾಥದಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ. ಅಲ್ಲದೆ ಜುಲೈ 3ರಂದು ಧಾರವಾಡದಿಂದ ಹೋಗಿದ್ದ ಐದು ಜನ ಜುಲೈ 6 ರಂದು ಅಮರನಾಥ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ವಿಪರೀತ ಮಳೆ ಆರಂಭಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದರಿಂದ ಸೇನಾ ಪಡೆಯುವರು ಪ್ರವಾಸಕ್ಕೆ ಬಂದಿದ್ದ ಎಲ್ಲರನ್ನೂ ಪಂಚತರಣಿ ಎಂಬಲ್ಲಿ ಟೆಂಟ್‌ನಲ್ಲಿ ಇಟ್ಟಿದ್ದಾರೆ. ಅದರಲ್ಲಿ ಧಾರವಾಡದ ರಾಕೇಶ್‌ ನಾಝರೆ, ವಿಠ್ಠಲ ಬಾಚಗುಂಡೆ, ನಾಗರಾಜ ಹಳಕಟ್ಟಿ, ಹರೀಶ್‌ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಎಂಬುವವರೂ ಇದ್ದಾರೆ. ಇವರ ಜೊತೆಗೆ ಬೆಂಗಳೂರು, ರಾಯಚೂರು, ಗದಗ ಸೇರದಂತೆ ಕರ್ನಾಟಕದ ಅನೇಕ ಜಿಲ್ಲೆಯ ಜನರು ಕೂಡ ಇದ್ದಾರೆ.

ಅಮರನಾಥ ಯಾತ್ರೆ; ಕನ್ನಡಿಗರನ್ನು ಕರೆತರಲು ಸರ್ಕಾರದಿಂದ ವ್ಯವಸ್ಥೆಅಮರನಾಥ ಯಾತ್ರೆ; ಕನ್ನಡಿಗರನ್ನು ಕರೆತರಲು ಸರ್ಕಾರದಿಂದ ವ್ಯವಸ್ಥೆ

ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಪ್ರವಾಸಿಗರನ್ನು ಖಾಸಗಿ ಟೆಂಟ್‌ನಲ್ಲಿ ಸೇನಾ ಪಡೆಯುವರು ಇಟ್ಟಿದ್ದಾರೆ. ಅಲ್ಲಿ ಊಟದ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಒಬ್ಬೊಬ್ಬ ಟೆಂಟ್‌ನವರು 600 ರೂಪಾಯಿ ಪಡೆದುಕೊಳ್ಳುತ್ತಿದ್ದು, ಊಟ ಮಾಡಿದರೆ ವಾಂತಿ, ಬೇಧಿ ಆಗುತ್ತಿದೆ. ಮತ್ತೊಂದೆಡೆ ವಿಪರೀತ ಮಳೆ ಸುರಿಯುತ್ತಿರುವುದರಿಂದ ಟೆಂಟ್ ಬಿಟ್ಟು ಹೊರಗಡೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಪ್ರವಾಸಿಗರನ್ನು ಕರೆತರಲು ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯವನ್ನು ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಮಾಡಿದ್ದಾರೆ.

English summary

Amarnath Yatra: Road connectivity breakdown due to heavy rain, Chikkamagaluru’s five people safe, here see details

Story first published: Sunday, July 9, 2023, 12:13 [IST]

Source link