Gossips
oi-Muralidhar S
ಧನುಷ್
ಹಾಗೂ
ಅಮಲಾ
ಪೌಲ್
ತಮಿಳು
ಚಿತ್ರರಂಗದ
ಬೆಸ್ಟ್
ಜೋಡಿ.
ಇದೂವರೆಗೂ
ಮೂರು
ಸಿನಿಮಾಗಳಲ್ಲಿ
ಈ
ಜೋಡಿ
ಜೊತೆಯಾಗಿ
ಕೆಲಸ
ಮಾಡಿದ್ದಾರೆ.
ಇವರಿಬ್ಬರ
ಸ್ಕ್ರೀನ್
ಕೆಮಿಸ್ಟ್ರಿಗೆ
ತಮಿಳು
ಮಂದಿ
ಬಹುಪರಾಕ್
ಹೇಳಿದ್ದರು.
ಅದಾದ
ಬಳಿಕ
ಈ
ಜೋಡಿ
ಮತ್ತೆ
ಒಟ್ಟಿಗೆ
ಕಾಣಿಸಿಕೊಂಡಿರಲಿಲ್ಲ.
ಈ
ಸುದ್ದಿಗೆ
ನೂರೆಂಟು
ಪುಕ್ಕಗಳು
ಅಂಟಿಕೊಂಡಿದ್ದವು.
ಅಮಲಾ
ಪೌಲ್
ತಮಿಳು
ನಿರ್ದೇಶಕ
ವಿಜಯ್‌ರನ್ನು
ಮದುವೆಯಾದ
ಕೆಲವೇ
ವರ್ಷಗಳಲ್ಲಿ
ವಿಚ್ಛೇದನ
ನೀಡಿ
ಹೊರಬಂದಿದ್ದರು.
ಬಳಿಕ
ನಿರ್ದೇಶಕ
ವಿಜಯ್
ತಂದೆ
ಅಮಲಾ
ಪೌಲ್
ವಿಚ್ಛೇದನ
ನೀಡಿದಕ್ಕೆ
ಧನುಷ್
ಕಾರಣವೆಂದು
ಆರೋಪ
ಮಾಡಿದ್ದರು.
ಆಗ
ನನ್ನ
ಡಿವೋರ್ಸ್‌ಗೆ
ಯಾರೂ
ಕಾರಣರಲ್ಲ
ಎಂದು
ಸ್ವತ:
ಅಮಲಾನೇ
ಸ್ಪಷ್ಠಿಕರಣ
ನೀಡಿದ್ದರು.
ಅಮಲಾ
ವಿಚ್ಛೇದನದ
ಬಳಿಕ
ಧನುಷ್
ಹಾಗೂ
ಅಮಲಾ
ಪೌಲ್
ಇಬ್ಬರೂ
ಒಟ್ಟಿಗೆ
ಸಿನಿಮಾದಲ್ಲಿ
ನಟಿಸಿರಲಿಲ್ಲ.
ಈಗ
ಧನುಷ್
ಕೂಡ
ಪತ್ನಿಯಿಂದ
ದೂರವಾಗಿದ್ದಾರೆ.
ಈ
ಮಧ್ಯೆ
ಮತ್ತೆ
ಇವರಿಬ್ಬರ
ಬಗ್ಗೆ
ಸುದ್ದಿಯೊಂದು
ಓಡಾಡುತ್ತಿದೆ.
ಧನುಷ್
50ನೇ
ಸಿನಿಮಾದಲ್ಲಿ
ಅಮಲಾ
ಪೌಲ್
ನಟಿಸುತ್ತಿದ್ದಾರೆ
ಅನ್ನೋ
ಸುದ್ದಿ
ಹಬ್ಬಿದೆ.
ಅಷ್ಟಕ್ಕೂ
ಈ
ಸುದ್ದಿಯ
ಹಿಂದಿರೋ
ಸಂಗತಿಯೇನು?
ಧನುಷ್
ಸಿನಿಮಾದಲ್ಲಿ
ಹೀರೊ
ಆಗಿದ್ದ
ನಟನೀಗ
ಟ್ಯಾಕ್ಸಿ
ಡ್ರೈವರ್:
ಫೋಟೊ
ವೈರಲ್..
ಏನಿದು
ಸುದ್ದಿ?
ಧನುಷ್
ಸಿನಿಮಾದಲ್ಲಿ
ಅಮಲಾ
ಪೌಲ್
2014ರಲ್ಲಿ
ಧನುಷ್
ಹಾಗೂ
ಅಮಲಾ
ಪೌಲ್
ಜೊತೆ
ನಟಿಸಿದ
ಮೊದಲ
ಸಿನಿಮಾ
‘ವಿಐಪಿ’
ರಿಲೀಸ್
ಆಗಿತ್ತು.
ಈ
ಸಿನಿಮಾ
ಬಾಕ್ಸಾಫೀಸ್‌ನಲ್ಲಿ
ಬ್ಲಾಕ್‌ಬಸ್ಟರ್
ಅಂತ
ಸಾಬೀತಾಗಿತ್ತು.
ಈ
ಸಿನಿಮಾ
ಸೂಪರ್
ಹಿಟ್
ಆಗುತ್ತಿದ್ದಂತೆ
ಮೂರು
ವರ್ಷಗಳ
ಬಳಿಕ
ಮತ್ತೆ
ಇದೇ
ಸಿನಿಮಾದ
ಸೀಕ್ವೆಲ್
‘ವಿಐಪಿ
2’ನಲ್ಲಿ
ಒಟ್ಟಿಗೆ
ನಟಿಸಿತ್ತು.
ವಿಶೇಷ
ಅಂದ್ರೆ,
‘ವಿಐಪಿ’
ಹಾಗೂ
‘ವಿಐಪಿ
2’
ಸಿನಿಮಾ
ಬರುವುದರ
ಮಧ್ಯೆ
ಅಮಲಾ
ಪೌಲ್‌ಗಾಗಿ
ಧನುಷ್
‘ಅಮ್ಮ
ಕನಕ್ಕು’
ಅನ್ನೋ
ಸಿನಿಮಾ
ನಿರ್ಮಾಣ
ಮಾಡಿದ್ದರು.
ಇದು
2016ರಲ್ಲಿ
ತೆರೆಕಂಡಿತ್ತು.
ಮಹಿಳಾ
ಪ್ರಧಾನ
ಸಿನಿಮಾ
ಆಗಿದ್ದರಿಂದ
ಅಮಲಾ
ಪೌಲ್
ಪ್ರಮುಖ
ಪಾತ್ರದಲ್ಲಿ
ನಟಿಸಿದ್ದರು.
ಹೀಗಾಗಿ
ಈ
ಜೋಡಿ
ನಡುವೆ
ಒಂದು
ಬಾಂಡಿಂಗ್
ಅಂತೂ
ಇದ್ದೇ
ಇದೆ.
ಇದೇ
ಇಬ್ಬರ
ಫ್ಯಾಮಿಲಿ
ಲೈಫ್‌ಗೆ
ತೊಡಕಾಯ್ತು
ಅನ್ನೋ
ಮಾತಿದೆ.
ಧನುಷ್
50ನೇ
ಸಿನಿಮಾದಲ್ಲಿ
ಅಮಲಾ
ಪೌಲ್
ಧನುಷ್
ಸದ್ಯ
‘ಕ್ಯಾಪ್ಟನ್
ಮಿಲ್ಲರ್’
ಸಿನಿಮಾದ
ಚಿತ್ರೀಕರಣದ
ಕೊನೆಯ
ಹಂತದಲ್ಲಿದ್ದಾರೆ.
ಇದರೊಂದಿಗೆ
ಆನಂದ್
ಎಲ್
ರೈ
ಹಾಗೂ
ಶೇಖರ್
ಕಮ್ಮುಲ
ನಿರ್ದೇಶನದ
ಸಿನಿಮಾ
ನಟಿಸುತ್ತಿದ್ದಾರೆ.
ಈ
ಎರಡು
ಸಿನಿಮಾಗಳನ್ನು
ಮುಗಿಸಿದ
ಬಳಿಕ
50ನೇ
ಸಿನಿಮಾ
ಕಡೆ
ಮುಖ
ಮಾಡಲಿದ್ದಾರೆ.
ಈ
ಸಿನಿಮಾ
ಅಮಲಾ
ಪೌಲ್
ಕೂಡ
ನಟಿಸುತ್ತಿದ್ದಾರೆ.
ಆದರೆ,
ಇಲ್ಲಿ
ಧನುಷ್‌ಗೆ
ನಾಯಕಿಯಾಗಿ
ನಟಿಸುತ್ತಿಲ್ಲ
ಅನ್ನೋದು
ವಿಶೇಷ.
ನಟ
ಸಂದೀಪ್
ಕಿಶನ್‌ಗೆ
ಜೋಡಿಯಾಗಿ
ಅಮಲಾ
ನಟಿಸುತ್ತಿದ್ದಾರೆ
ಎನ್ನಲಾಗಿದೆ.
ಸದ್ಯ
ಟಾಲಿವುಡ್
ಮಾಧ್ಯಮಗಳಲ್ಲಿ
ಧನುಷ್
ಹಾಗೂ
ಅಮಲಾ
ಪೌಲ್
ಒಟ್ಟಿಗೆ
ನಟಿಸುತ್ತಿರುವ
ಸುದ್ದಿ
ವೈರಲ್
ಆಗಿದೆ.
50ನೇ
ಸಿನಿಮಾ
ಧನುಷ್
ನಿರ್ದೇಶನ
ಧನುಷ್
50ನೇ
ಸಿನಿಮಾದಲ್ಲಿ
ಪ್ರಮುಖ
ಪಾತ್ರದಲ್ಲಷ್ಟೇ
ನಟಿಸುತ್ತಿಲ್ಲ.
ಬದಲಾಗಿದೆ
ಈ
ಸಿನಿಮಾ
ನಿರ್ದೇಶನ
ಕೂಡ
ಮಾಡುತ್ತಿದ್ದಾರೆ
ಎನ್ನಲಾಗಿದೆ.
ಒಂದು
ವೇಳೆ
ಈ
ಸುದ್ದಿ
ಏನಾದರೂ
ನಿಜವೇ
ಆದರೆ,
ಇದು
ಧನುಷ್
ನಿರ್ದೇಶನದ
ಎರಡನೇ
ಸಿನಿಮಾ
ಆಗಲಿದೆ.
ಇದಕ್ಕೂ
ಮುನ್ನ
ಧನುಷ್
‘ಪಾ.
ಪಾಂಡಿ’
ಅನ್ನೋ
ಸಿನಿಮಾವನ್ನು
ನಿರ್ದೇಶನ
ಮಾಡಿದ್ದರು.
ಅಂದ್ಹಾಗೆ,
ಧನುಷ್
50ನೇ
ಸಿನಿಮಾ
ಗ್ಯಾಂಗ್‌ಸ್ಟರ್
ಸಿನಿಮಾ
ಆಗಿದ್ದು,
ಈಗಾಗಲೇ
ಈ
ಸಿನಿಮಾ
‘ರಾಯನ್’
ಅನ್ನೋ
ಹೆಸರನ್ನೂ
ಇಡಲಾಗಿದೆ
ಎನ್ನಲಾಗುತ್ತಿದೆ.
ಆದರೆ,
ಇದೆಲ್ಲವೂ
ತಮಿಳು
ಮಾಧ್ಯಮಗಳಲ್ಲಿ
ಹರಿದಾಡುತ್ತಿರುವ
ಸುದ್ದಿಯಷ್ಟೇ..
English summary
Amala Paul in Dhanush’s 50th movie: netizens says finally reunited for the fourth time. Here is the details.
Friday, June 23, 2023, 22:03
Story first published: Friday, June 23, 2023, 22:03 [IST]