African Swine Flu: ಕೇರಳದಲ್ಲಿ ಹಂದಿ ಜ್ವರ ಪತ್ತೆ, ಕರ್ನಾಟಕಕ್ಕೂ ಅನಾರೋಗ್ಯ ಭೀತಿ | African Swine Flu Detected In Kerala, 70 Pigs Died Due To Fever, Worrying For Karnataka

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 27: ಚಿಕುನ್ ಗುನ್ಯಾ, ಡೇಂಗಿ ಜ್ವರ, ಹಕ್ಕಿ ಜ್ವರ ಮತ್ತು ಹಂದಿ ಜ್ವರಗಳು ಜನರನ್ನು ತೀವ್ರವಾಗಿ ಬಾಧಿಸುತ್ತವೆ. ಕೊರೊನಾ ನಂತರ ಈ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುವುದು ಕಡಿಮೆಯಾಗಿತ್ತು. ಇದೀಗ ಮತ್ತೆ ಹಂದಿ ರೋಗದ ಹಾವಳಿ ಹೆಚ್ಚಾಗಿದೆ.

ಕೆಲವು ವರ್ಷಗಳ ಹಿಂದೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿ ಜ್ವರ, ಹಂದಿ ಜ್ವರ, ಚಿಕುನ್ ಗುನ್ಯಾ ದಂತಹ ಕಾಯಿಲೆಗಳು ಕಾಡಿದ್ದವು. ಕೆಲವೆಡೆ ಹಲವು ಜೀವಗಳನ್ನು ಈ ರೋಗಗಳು ಬಲಿ ಪಡೆದಿದ್ದವು. ಕೊರೊನಾ ನಂತರ ಕೇರಳದಲ್ಲಿ ಮತ್ತೆ ಹಂದಿ ಜ್ವರ ಕಾಣಿಸಿಕೊಂಡಿದ್ದು, ಎಲ್ಲೆಡೆ ಆತಂಕ ಸೃಷ್ಟಿಸಿದೆ. ಇದೀಗ ಇದರ ಛಾಯೆ ಕರ್ನಾಟಕದ ಮೇಲೂ ಬೀಳಲಿದಿಯಾ ಎಂಬ ಆತಂಕ ಕಾಡುತ್ತಿದೆ.

African Swine Flu Detected In Kerala, 70 Pigs Died Due To Fever, Worrying For Karnataka

ನೆರೆ ರಾಜ್ಯ ಕೇರಳದ ಇಡುಕ್ಕಿಯ ವತ್ತಿಕುಡಿ ಪಂಚಾಯತಿ ವ್ಯಾಪ್ತಿಯಲ್ಲಿ ‘ಆಫ್ರಿಕನ್ ಹಂದಿ ಜ್ವರ’ ಕಾಣಿಸಿಕೊಂಡಿದೆ. ವೈದ್ಯರ ತಪಾಸಣೆಯಲ್ಲಿ ಇದು ದೃಢಪಟ್ಟಿದೆ. ಈ ಗ್ರಾಮ ಪಂಚಾಯಿತಿ ಯ ಪಟಮುಗಂ ಕದಲಿಕಾಟ್‌ನಲ್ಲಿನ ಬೀನಾ ಜೋಸೆಫ್ ಎಂಬವರ ಹಂದಿಗಳಿಗೆ ಈ ರೋಗ ಇರುವುದು ಖಚಿತವಾಗುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

ಜ್ವರದಿಂದ 170 ಹಂದಿಗಳು ಮೃತ

ಈಗಾಗಲೇ ಆಫ್ರಿಕನ್ ಹಂದಿ ಜ್ವರ ತಗುಲಿ ಬೀನಾ ಅವರ ಒಟ್ಟು ಹಂದಿಗಳ ಪೈಕಿ 170 ಹಂದಿಗಳು ಮೃತಪಟ್ಟಿವೆ. ಇನ್ನು ಕೆಲವೇ ಕೆಲವು ಹಂದಿಗಳು ಜೀವಂತವಾಗಿವೆ. ಈಗ ಅವುಗಳಿಂದ ಜನರಿಗೆ ಏನಾದರೂ ಈ ರೋಗ ಹರಡುತ್ತದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಇಡುಕ್ಕಿಯ ವತ್ತಿಕುಡಿ ಪಂಚಾಯತ್‌ನ ಪಟಮುಖದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಾರ್ಮ್‌ನಲ್ಲಿ ಹಲವು ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಇರುವುದು ಖಚಿತವಾಗಿದ. ಪಡಮುಗಂ ಕದಲಿಕಾಟ್ ಬಿನಾ ಅವರ ಜಮೀನಿನಲ್ಲಿ ಸಾಕಲಾಗಿದ್ದ ಹಂದಿಗಳ ಪೈಕಿ 170 ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ತಗುಲಿ, ಅವೆಲ್ಲವು ಮೃತಪಟ್ಟಿವೆ.

African Swine Flu Detected In Kerala, 70 Pigs Died Due To Fever, Worrying For Karnataka

ಒಂದರ ಹಿಂದ ಒಂದರಂತೆ ಅನೇಕ ಹಂತಿಗಳು ಮೃತಪಟ್ಟ ಬಳಿಕ ಅವುಗಳ ದೇಹದ ಮಾದರಿಯನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ಬೆಂಗಳೂರಿನ ಪ್ರಯೋಗಾಲಯದಲ್ಲಿ ತಪಾಸಣೆ ಬಳಿಕ ಕೇರಳ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಇರುವುದು ಖಚಿತವಾಗಿದೆ.

ಜೀವಂತ 60 ಹಂದಿಗಳಿಂದ ರೋಗ ಹರಡುವ ಭೀತಿ

ಸದ್ಯ ಪಡಮುಗಂ ಕದಲಿಕಾಟ್ ಬಿನಾ ಫಾರ್ಮ್‌ನಲ್ಲಿ ಒಟ್ಟು ಹಂದಿಗಳ ಪೈಕಿ 60 ಹಂದಿಗಳು ಜೀವಂತವಾಗಿದೆ. ಇದೀಗ ಇವುಗಳಿಗೂ ಆ ಆಫ್ರಿಕನ್ ರೋಗ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸದ್ಯಗ್ರಾಂಸ್ಥರ ಹಿತ ದೃಷ್ಟಿಯಿಂದ ಅವುಗಳಿಗೆ ಸಾಮೂಹಿಕ ಮರಣ ನೀಡುವ (ದಯಾಮರಣ) ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ತೋಟದ ಒಂದು ಕಿಲೋಮೀಟರ್ ವ್ಯಾಪ್ತಿಯ ವತ್ತಿಕ್ಕೂರು ಪಂಚಾಯತ್ ಒಟ್ಟು ಐದು ವಾರ್ಡ್‌ಗಳನ್ನು ರೋಗ ಪೀಡಿತ ಪ್ರದೇಶವೆಂದು ಆರೋಗ್ಯಾಧಿಕಾರಿಗಳು ಘೋಷಿಸಿದ್ದಾರೆ. 10 ಕಿಲೋ ಮೀಟರ್ ವ್ಯಾಪ್ತಿಯ ಕಾಮಾಕ್ಷಿ, ವತ್ತಿಕುಡಿ, ಮರಿಯಾಪುರಂ ವಾಜಥೋಪ್ ಮುಂತಾದ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರೋಗ ಹರುಡುವ ಬಗ್ಗೆ ನಿಗಾ ಇಡಲಾಗಿದೆ.

ಪ್ರಾಣಿ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ವಹಿಸಿದ ಜಮೀನಿನಲ್ಲಿ ಬದುಕುಳಿದ ಇತರ ಹಂದಿಗಳಿಗೆ ದಯಾಮರಣ ನೀಡಲಾಗುತ್ತದೆ.

English summary

African Swine flu detected in Kerala, 70 pigs died due to fever, worrying for Karnataka.

Story first published: Tuesday, June 27, 2023, 16:38 [IST]

Source link