Adipurush: 150 ಕೋಟಿ ತಗೊಂಡು ಸುಮ್ಮನಾಗಿಬಿಟ್ರಾ ಪ್ರಭಾಸ್? | Prabhas: Was Adipurush solely for money? Netizens Questions Why not focus on Movie’s Output?

bredcrumb

Features

oi-Narayana M

|

ಭಾರೀ
ನಿರೀಕ್ಷೆ
ಹುಟ್ಟಾಕ್ಕಿದ್ದ
ಪೌರಾಣಿಕ
ಸಿನಿಮಾ
‘ಆದಿಪುರುಷ್’
ಬಾಕ್ಸಾಫೀಸ್‌ನಲ್ಲಿ
ಮುಗ್ಗರಿಸಿದೆ.
ಓಂ
ರಾವುತ್
ನಿರ್ದೇಶನದ

ಚಿತ್ರದಲ್ಲಿ
ಪ್ರಭಾಸ್
ಶ್ರೀರಾಮನಾಗಿ
ನಟಿಸಿದ್ದಾರೆ.
ಜೂನ್
16ಕ್ಕೆ
ತೆರೆಕಂಡಿದ್ದ
ಸಿನಿಮಾ
ಫಸ್ಟ್
ವೀಕೆಂಡ್
ಭರ್ಜರಿ
ಕಲೆಕ್ಷನ್
ಮಾಡಿದ್ರು
ನಂತರ
ಪ್ರೇಕ್ಷಕರ
ಬರ
ಎದುರಿಸುತ್ತಿದೆ.
ಟಿಕೆಟ್
ದರ
ಇಳಿಸಿದರೂ
ಪ್ರಯೋಜನವಾಗುತ್ತಿಲ್ಲ.
ಸಿನಿಮಾ
ಬಗ್ಗೆ
ಸಾಕಷ್ಟು
ಟೀಕೆ
ವ್ಯಕ್ತವಾಗುತ್ತಿದೆ.

ರಾಮಾಯಣ
ಕಾವ್ಯ
ಆಧರಿಸಿ
ಸಿನಿಮಾ
ಮಾಡಿದ್ದರೂ
ಕ್ರಿಯೇಟಿವಿಟಿ
ಲಿಬರ್ಟಿ
ಹೆಸರಿನಲ್ಲಿ
ಇಷ್ಟಬಂದಂತೆ
ಪಾತ್ರಗಳ
ಚಿತ್ರಣ
ಮಾಡಲಾಗಿದೆ.
ರಾಮಾಯಣ
ಕಾವ್ಯ
ಎಲ್ಲರಿಗೂ
ಗೊತ್ತು.
ಈಗಾಗಲೇ
ಪುಸ್ತಕಗಳಲ್ಲಿ,
ನಾಟಕ,
ಸಿನಿಮಾ,
ಧಾರಾವಾಹಿಯಲ್ಲಿ
ರಾಮನ
ಚರಿತ್ರೆಯನ್ನು
ನೋಡಿದ್ದೇವೆ,
ಕೇಳಿದ್ದೇವೆ.
ಆದರೆ
ಅದನ್ನೆಲ್ಲಾ
ತಿರುಚಿ
‘ಆದಿಪುರುಷ್’
ಸಿನಿಮಾ
ಮಾಡಿರುವುದು
ಸ್ಪಷ್ಟವಾಗಿ
ಗೊತ್ತಾಗುತ್ತಿದೆ.
ಪಾತ್ರಗಳ
ಕಾಸ್ಟ್ಯೂಮ್,
ಡೈಲಾಗ್ಸ್
ಎಲ್ಲದರ
ಬಗ್ಗೆಯೂ
ಈಗ
ಟೀಕೆ
ವ್ಯಕ್ತವಾಗುತ್ತಿದೆ.
ಕೆಲವರು

ಸಿನಿಮಾ
ನೋಡೋದೆ
ಇಲ್ಲ
ಎನ್ನುತ್ತಿದ್ದಾರೆ.
ಸಿನಿಮಾ
ಬ್ಯಾನ್
ಮಾಡುವಂತೆ
ಟಿಟಿಷನ್
ಕೂಡ
ದಾಖಲಾಗಿದೆ.

Prabhas: Was Adipurush solely for money? Netizens Questions Why not focus on Movies Output?

ಇಷ್ಟೆಲ್ಲಾ
ಟೀಕೆ,
ವಿರೋಧ
ವ್ಯಕ್ತವಾಗುತ್ತಿದ್ದರು
ಚಿತ್ರತಂಡ
ಮಾತ್ರ
ಸೈಲೆಂಟ್
ಆಗಿದೆ.
ಪ್ರಭಾಸ್
ಹಾಗೂ
ಓಂ
ರಾವುತ್

ಬಗ್ಗೆ
ಯಾವುದೇ
ಪ್ರತಿಕ್ರಿಯೆ
ನೀಡಿಲ್ಲ.
ಇನ್ನು
ಸಿನಿಮಾ
ತಾರೆಯರು
ಸಹ
‘ಆದಿಪುರುಷ್’
ಚಿತ್ರವನ್ನು
ಟೀಕಿಸುತ್ತಿದ್ದಾರೆ.
ಇನ್ನು
ಸಿನಿಮಾ
ಮೊದಲ
ವಾರ
400
ಕೋಟಿ
ರೂ.ಗೂ
ಅಧಿಕ
ಗ್ರಾಸ್
ಕಲೆಕ್ಷನ್
ಮಾಡಿದೆ.
ಇದೆಲ್ಲದರ
ನಡುವೆ

ರೀತಿ
ಸಿನಿಮಾ
ಮಾಡಲು
ಪ್ರಭಾಸ್
ಹೇಗೆ
ಒಪ್ಪಿದರು
ಎಂದು
ಕೆಲವರು
ಅಚ್ಚರಿ
ವ್ಯಕ್ತಪಡಿಸುತ್ತಿದ್ದಾರೆ.

Adipurush Box Office:ಟಿಕೆಟ್ ಬೆಲೆ 150 ರೂ. ಮಾಡಿದ್ರು ಸಿನಿಮಾ ನೋಡ್ತಿಲ್ಲ:7ನೇ ದಿನವೂ ನೆಲಕ್ಕಚ್ಚಿದ 'ಆದಿಪುರುಷ್' ಕಲೆಕ್ಷನ್Adipurush
Box
Office:ಟಿಕೆಟ್
ಬೆಲೆ
150
ರೂ.
ಮಾಡಿದ್ರು
ಸಿನಿಮಾ
ನೋಡ್ತಿಲ್ಲ:7ನೇ
ದಿನವೂ
ನೆಲಕ್ಕಚ್ಚಿದ
‘ಆದಿಪುರುಷ್’
ಕಲೆಕ್ಷನ್

ಪ್ರಭಾಸ್‌

ರೀತಿ
ಸಿನಿಮಾ
ಮಾಡ್ಬೇಕಿತ್ತಾ?

ಖುದ್ದು
ಪ್ರಭಾಸ್
ಅಭಿಮಾನಿಗಳು
ಈಗ

ಪ್ರಶ್ನೆ
ಕೇಳುತ್ತಿದ್ದಾರೆ.
‘ಬಾಹುಬಲಿ’
ರೀತಿಯ
ಅದ್ಭುತ
ಸಿನಿಮಾ
ಮಾಡಿದ್ದ
ನಟನಿಗೆ

ರೀತಿ
ಟೀಕೆಗೆ
ಗುರಿಯಾಗುವಂತೆ
ಸಿನಿಮಾ
ಮಾಡುವುದು
ಬೇಕಿತ್ತಾ?
ಎನ್ನುತ್ತಿದ್ದಾರೆ.
ಸಿನಿಮಾ
ಒಪ್ಪಿಕೊಳ್ಳುವಾಗ
ಕೊಂಚ
ಯೋಚಿಸಬೇಕಿತ್ತು
ಅಲ್ಲವೇ?
ಸ್ಕ್ರಿಪ್ಟ್
ರೀಡಿಂಗ್
ಕೊಟ್ಟಾಗ
ಶೂಟಿಂಗ್
ವೇಳೆ
ಕಾಸ್ಟ್ಯೂಮ್ಸ್,
ಡೈಲಾಗ್ಸ್
ಬಗ್ಗೆ
ಗಮನ
ಇರಬೇಕಿತ್ತಲ್ಲವೇ?
ಹೇಳಿದ್ದರೆ
ಬದಲಾವಣೆಗೆ
ನಿರ್ದೇಶರು
ಒಪ್ಪುತ್ತಿರಲಿಲ್ಲವೇ?
ಎಲ್ಲವನ್ನು
ನೋಡಿಕೊಂಡು
ಪ್ರಭಾಸ್
ಮೂಖ
ಪ್ರೇಕ್ಷಕನಾಬಿಟ್ರಾ?
ಎನ್ನುವ
ಅನುಮಾನ
ಕಾಡುತ್ತಿದೆ.

Prabhas: Was Adipurush solely for money? Netizens Questions Why not focus on Movies Output?

150
ಕೋಟಿ
ಸಂಭಾವನೆ?

ಕ್ರೇಜ್‌ಗೆ
ತಕ್ಕಂತೆ
ಪ್ರಭಾಸ್

ಚಿತ್ರಕ್ಕಾಗಿ
ಬರೋಬ್ಬರಿ
150
ಕೋಟಿ
ರೂ.
ಸಂಭಾವನೆ
ಪಡೆದುಕೊಂಡಿದ್ದಾರೆ
ಎನ್ನಲಾಗ್ತಿದೆ.
ಬಹುತೇಕ
ಗ್ರೀನ್‌ಮ್ಯಾಟ್‌ನಲ್ಲಿ
ಸಿನಿಮಾ
ಚಿತ್ರೀಕರಣವಾಗಿದೆ.
ಹಾಗಾಗಿ
ಕಡಿಮೆ
ದಿನಗಳ
ಕಾಲ್‌ಶೀಟ್
ಕೊಟ್ಟಿದ್ದಾರೆ.
ಕಮ್ಮಿ
ಡೇಟ್ಸ್
ಕೊಟ್ಟು
ಹೆಚ್ಚು
ಸಂಭಾವನೆ
ಜೇಬಿಗಿಳಿಸಿ
ಪ್ರಭಾಸ್
ರಾಮಾಯಣವನ್ನೇ
ಮರೆತುಬಿಟ್ರಾ?
ಎನ್ನುವ
ಪ್ರಶ್ನೆಯೂ
ಕೆಲವರನ್ನು
ಕಾಡುತ್ತಿದೆ.
ಇದೇ
ಮೇಕಿಂಗ್
,
ಇದೇ
ಔಟ್‌ಫುಟ್
ಜೊತೆಗೆ
ಯಾವುದೇ
ಟೀಕೆ
ಇಲ್ಲದಂತೆ
ಯತಾವತ್
ರಾಮಾಯಣ
ಕಾವ್ಯವನ್ನು
ತೆರೆಗೆ
ತಂದಿದ್ದರೆ
ಸಿನಿಮಾ
1000
ಕೋಟಿ
ರೂ.
ಕಲೆಕ್ಷನ್
ಮಾಡುತ್ತಿತ್ತು.
ಪ್ರಭಾಸ್‌ಗೆ
ಜೈಕಾರ
ಸಿಗುತ್ತಿತ್ತು.
ಆದರೆ
ಈಗ
ಬಾಯಿಬಿಡಲು
ಹೆದರಿಕೊಳ್ಳುವಂತ
ಪರಿಸ್ಥಿತಿ
ನಿರ್ಮಾಣವಾಗಿದೆ
ಎನ್ನುವ
ಚರ್ಚೆ
ಶುರುವಾಗಿದೆ.

ಇಟಲಿ ಬಂಗ್ಲೆಯನ್ನು ಬಾಡಿಗೆ ಬಿಟ್ಟ ಪ್ರಭಾಸ್: ತಿಂಗಳ ಬಾಡಿಗೆಯಲ್ಲಿ 10 ವರ್ಷ ಆರಾಮಾಗಿ ಸಾಗುತ್ತೆ ಜೀವನಇಟಲಿ
ಬಂಗ್ಲೆಯನ್ನು
ಬಾಡಿಗೆ
ಬಿಟ್ಟ
ಪ್ರಭಾಸ್:
ತಿಂಗಳ
ಬಾಡಿಗೆಯಲ್ಲಿ
10
ವರ್ಷ
ಆರಾಮಾಗಿ
ಸಾಗುತ್ತೆ
ಜೀವನ

ಪ್ರಭಾಸ್‌ಗೆ
ರಾಮಾಯಣ
ಗೊತ್ತಿಲ್ವಾ?

ರಾಮಾಯಣಕ್ಕೆ
ಹಿಂದೂಗಳ
ಹೃದಯದಲ್ಲಿ
ಪವಿತ್ರ
ಸ್ಥಾನವಿದೆ.
ಅದರಲ್ಲೂ
ತೆಲುಗಿನಲ್ಲೇ
ಐತಿಹಾಸಿಕ,
ಪೌರಾಣಿಕ
ಸಿನಿಮಾಗಳ
ಹೆಚ್ಚು
ನಿರ್ಮಾಣವಾಗಿವೆ.
ಶ್ರೀರಾಮನಾಗಿ
ಎನ್‌ಟಿಆರ್‌
ಗೆಟಪ್,
ನಟನೆ
ನೋಡಿ
ನಿಜವಾದ
ರಾಮ
ಹೀಗೆ
ಇದ್ದ
ಎಂದು
ತೆಲುಗು
ಜನ
ಅಂದುಕೊಂಡಿದ್ದಾರೆ.
ಅಷ್ಟರಮಟ್ಟಿಗೆ
ತೆಲುಗು
ಜನರ
ಮೇಲೆ
ರಾಮಾಯಣದ
ಪ್ರಭಾವ
ಇದೆ.
ಪ್ರಭಾಸ್‌ಗೂ
ಇದು
ಚೆನ್ನಾಗಿ
ಗೊತ್ತು.
ಅಷ್ಟೆಲ್ಲಾ
ಇದ್ದರೂ
ಪ್ರಭಾಸ್
‘ಆದಿಪುರುಷ್’
ಸಿನಿಮಾ
ಔಟ್‌ಫುಟ್
ನೋಡಿ
ಏನು
ಹೇಳಲಿಲ್ಲವೇ?
ಜನ
ಇದನ್ನು
ಹೇಗೆ
ಸ್ವೀಕರಿಸುತ್ತಾರೆ?
ಎನ್ನುವ
ಅರಿವು
ಇರಲಿಲ್ಲವೇ?
ಎಂದು
ಪ್ರಶ್ನೆ
ಏಳುವುದು
ಸಹಜ.

400
ಕೋಟಿಗೂ
ಅಧಿಕ
ಕಲೆಕ್ಷನ್

ಅಂದಾಜು
550
ಕೋಟಿ
ರೂ.
ಬಜೆಟ್‌ನಲ್ಲಿ
‘ಆದಿಪುರುಷ್’
ಸಿನಿಮಾ
ನಿರ್ಮಾಣವಾಗಿದೆ.
8
ದಿನಕ್ಕೆ
400
ಕೋಟಿ
ರೂ.ಗೂ
ಅಧಿಕ
ಗ್ರಾಸ್
ಕಲೆಕ್ಷನ್
ಆಗಿದೆ.
ಆದರೆ
ಹೆಚ್ಚು
ಕಮ್ಮಿ
250
ಕೋಟಿ
ರೂ.
ಶೇರ್
ಬಂದಂತಾಗಿದೆ.

ಲೆಕ್ಕದಲ್ಲಿ
ಸಿನಿಮಾ
ಬಜೆಟ್
ಕೂಡ
ಇನ್ನು
ವಾಪಸ್
ಬಂದಿಲ್ಲ.
ಆಡಿಯೋ,
ಡಿಜಿಟಲ್,
ಸ್ಯಾಟಲೈಟ್‌
ರೈಟ್ಸ್‌ನಿಂದ
ಕೊಂಚಮಟ್ಟಿಗೆ
ನಿರ್ಮಾಪಕರು
ಬಚಾವಾಗುವ
ಸಾಧ್ಯತೆಯಿದೆ.

English summary

Did Prabhas Choose Adipurush Solely for Monetary Gain? Netizens Question His Decision Regarding his ignorance about overall movie output | Know More at Filmibeat Kannada.

Saturday, June 24, 2023, 9:53

Source link