India
oi-Naveen Kumar N
600 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ತಯಾರಾದ ಬಹು ನಿರೀಕ್ಷಿತ ಆದಿಪುರುಷ್ ಸಿನಿಮಾ ಜೂನ್ 18ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರ್ಮಾಪಕ ಈಗ ನಷ್ಟದ ಭೀತಿಯಲ್ಲಿದ್ದಾರೆ. ಸಿನಿಮಾ ನೋಡಿದ ಹಲವು ಮಂದಿ ರಾಮಾಯಣಕ್ಕೆ ಅವಮಾನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಕೂಡ ಚಿತ್ರವನ್ನು ಬ್ಯಾನ್ ಮಾಡುವಂತೆ ಪ್ರತಿಭಟನೆ ಮಾಡಿದ್ದವು.
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಈಗ ಆದಿಪುರುಷ್ ಚಿತ್ರವನ್ನು ಒಂದೇ ಸಾಲಿನಲ್ಲಿ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, “ಆದಿಪುರುಷ್ ನೋಡಿದ ನಂತರ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಸಾಯಿಸಿದ್ದು ಎಂದು ನನಗೆ ಅರ್ಥವಾಯಿತು” ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.
ಈ ಮೂಲಕ ಚಿತ್ರದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರೇಂದ್ರ ಸೆಹ್ವಾಗ್ ಟ್ವೀಟ್‌ಗೆ 50 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು, ಸೆಹ್ವಾಗ್ ಹೇಳಿರುವುದು ಸರಿ ಇದೆ ಎಂದಿದ್ದಾರೆ. ಆದಿಪುರುಷ್ ಚಿತ್ರ ಮೊದಲನೇ ವಾರವೇ ನೆಲಕಚ್ಚಿದ್ದು, ನಿರ್ಮಾಪಕರು ಭಾರಿ ನಷ್ಟ ಅನುಭವಿಸುವ ಭಯದಲ್ಲಿದ್ದಾರೆ.
Adipurush dekhkar pata chala Katappa ne Bahubali ko kyun maara tha 😀
— Virender Sehwag (@virendersehwag) June 25, 2023
ಟೀಸರ್ ಬಿಡುಗಡೆಯಾದಾಗಿನಿಂದ ಒಂದಿಲ್ಲೊಂದು ವಿವಾದ
ಆದಿಪುರುಷ್ ಚಿತ್ರದ ಟೀಸರ್, ಟ್ರೈಲರ್ ಬಿಡುಗಡೆಯದಾಗಿನಿಂದ ಕೂಡ ಒಂದಿಲ್ಲೊಂದು ವಿವಾದ ಚಿತ್ರವನ್ನು ಕಾಡುತ್ತಲೇ ಇದೆ. ಮೊದಲು ರಾವಣನ ಗೆಟಪ್, ಆಂಜನೇಯನ ಅವತಾರದ ಬಗ್ಗೆ ವ್ಯಾಪಕ ಟೀಕೆ ಮಾಡಲಾಗಿತ್ತು. ರಾಮನಿಗೆ ಮೀಸೆ ಇರುವ ಬಗ್ಗೆ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.
ಜೂನ್ 18ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸೀತೆಯನ್ನು ಭಾರತದ ಮಗಳು ಎನ್ನುವ ಸಂಭಾಷಣೆ ಬಗ್ಗೆ ನೇಪಾಳ ಮೇಯರ್ ಆಕ್ರೋಶ ವ್ಯಕ್ತಪಡಿಸಿದ್ದರು. ಚಿತ್ರದ ಸಂಭಾಷಣೆ ತೆಗೆಯುವವರೆಗೂ ಕಠ್ಮಂಡುವಿನಲ್ಲಿ ಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.
ಉತ್ತರ ಭಾರತದ ಹಲವು ನಗರಗಳಲ್ಲಿ ಚಿತ್ರದ ವಿರುದ್ಧ ಭಾರಿ ಪ್ರತಿಭಟನೆ ಕೂಡ ವ್ಯಕ್ತವಾಗಿದೆ. ಕೆಟ್ಟ ಸಂಭಾಷಣೆಗಳನ್ನು ಬರೆಯಲಾಗಿದೆ ಎಂದು ಸಂಭಾಷಣೆಕಾರನ ವಿರುದ್ಧ ಕೂಡ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನಂತರ ಚಿತ್ರದಲ್ಲಿ ಹಲವು ಸಂಭಾಷಣೆಗಳನ್ನು ಬದಲಾವಣೆ ಮಾಡಲಾಗಿದೆ. ಮೊದಲ ವಾರದ ನಂತರ ಚಿತ್ರದ ಟಿಕೆಟ್ ದರವನ್ನು ಕಡಿಮೆ ಮಾಡಲಾಗಿದೆ. ಆದರೂ, ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಾಹುಬಲಿ ನಂತರ ಹಿಟ್ ಚಿತ್ರವನ್ನು ಕೊಡುವ ಉತ್ಸಾಹದಲ್ಲಿದ್ದ ಪ್ರಭಾಸ್ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಮುಂದಿನ ಚಿತ್ರ ಸಲಾರ್ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕೆಜಿಎಫ್ ಚಿತ್ರದ ನಂತರ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ.
English summary
Former cricketer Virender Sehwag took a dig at the movie “Adipurush” and jokingly remarked, “Now I know why Kattappa killed Bahubali.”
Story first published: Sunday, June 25, 2023, 15:31 [IST]