Last Updated:
ಭಾರತೀಯ ವಾಯುಸೇನೆ ಅಗ್ನಿವೀರ್ ವಾಯು (ಸಂಗೀತಗಾರ) ನೇಮಕಾತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ಪಾಸ್ ಮತ್ತು ಸಂಗೀತ ವಾದ್ಯದಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಬೆಂಗಳೂರು: ಸಂಗೀತದಲ್ಲಿ (Music) ಆಸಕ್ತಿ ಇರುವ ಹಾಗೂ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅವಿವಾಹಿತ ಯುವಕ-ಯುವತಿಯರಿಗೆ ಭಾರತೀಯ ವಾಯುಸೇನೆಯು (IAF) 01/2027 ನೇ ಸಾಲಿನ ಅಗ್ನಿವೀರ್ವಾಯು (ಸಂಗೀತಗಾರ) ಹುದ್ದೆಗಳ ನೇಮಕಾತಿಗೆ ಭರ್ಜರಿ ಸುವರ್ಣಾವಕಾಶ ಕಲ್ಪಿಸಿದೆ! ದೆಹಲಿಯ 110010 ಪಿನ್ಕೋಡ್ ವ್ಯಾಪ್ತಿಯ ರೇಸ್ ಕೋರ್ಸ್ ಕ್ಯಾಂಪ್ನ 2 ASC ಮತ್ತು ಬೆಂಗಳೂರಿನ ಕಬ್ಬನ್ ರಸ್ತೆಯ ನಂ. 1 ರಲ್ಲಿರುವ 7 ASC ಯಲ್ಲಿ 2026ರ ಆಗಸ್ಟ್ 31 ರಿಂದ ಸೆಪ್ಟೆಂಬರ್ 09 ರವರೆಗೆ ಬೃಹತ್ ನೇಮಕಾತಿ ರ್ಯಾಲಿ ನಡೆಯಲಿದೆ.
ಅಭ್ಯರ್ಥಿಗಳು ಟ್ರಿನಿಟಿ ಕಾಲೇಜು ಅಥವಾ ಇತರೆ ಸಂಸ್ಥೆಗಳಿಂದ ಸಂಗೀತದಲ್ಲಿ ಕನಿಷ್ಠ 5ನೇ ಗ್ರೇಡ್ ಪಾಸ್ ಮಾಡಿರಬೇಕು ಅಥವಾ ಡಿಪ್ಲೊಮಾ ಹೊಂದಿರಬೇಕು. ವಾದ್ಯಗಳಾದ ಫ್ಲೂಟ್, ಓಬೋ, ಕ್ಲಾರಿನೆಟ್ (Bb/Eb), ಸ್ಯಾಕ್ಸೋಫೋನ್ (Eb/Bb), ಫ್ರೆಂಚ್ ಹಾರ್ನ್ (F/Bb), ಟ್ರಂಪೆಟ್ (C/Bb), ಟ್ರೋಂಬೋನ್ (Bb/C), ಯುಫೋನಿಯಮ್, ಬಾಸೂನ್, ಬಾಸ್ ಟ್ಯೂಬಾ (Eb/Bb), ಕೀಬೋರ್ಡ್, ಗಿಟಾರ್, ಪಿಟೀಲು, ಡ್ರಮ್ಸ್ ಮತ್ತು ಯಾವುದೇ 1 ಭಾರತೀಯ ಶಾಸ್ತ್ರೀಯ ವಾದ್ಯವನ್ನು ನುಡಿಸಲು ತಿಳಿದಿರಬೇಕು. ಯಾವುದೇ ಲಂಚವಿಲ್ಲದೆ ಸಂಪೂರ್ಣ ಮೆರಿಟ್ ಆಧಾರದ ಮೇಲೆ ನಡೆಯುವ ಈ ನೇಮಕಾತಿಗೆ ಇಂದೇ 100 ರೂ. ಹಾಗೂ ಶೇ. 18 ಜಿಎಸ್ಟಿ ಪಾವತಿಸಿ ಅರ್ಜಿ ಸಲ್ಲಿಸಿ!
ದೈಹಿಕ ಅರ್ಹತೆಗಳಲ್ಲೂ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳಿದ್ದು, ಪುರುಷರಿಗೆ ಕನಿಷ್ಠ 162 ಸೆಂ.ಮೀ ಮತ್ತು ಮಹಿಳೆಯರಿಗೆ 152 ಸೆಂ.ಮೀ ಎತ್ತರವಿರಬೇಕು (ಉತ್ತರಾಖಂಡ ಹಾಗೂ ಈಶಾನ್ಯ ರಾಜ್ಯದವರಿಗೆ 147 ಸೆಂ.ಮೀ, ಲಕ್ಷದ್ವೀಪದವರಿಗೆ 150 ಸೆಂ.ಮೀ ಸಡಿಲಿಕೆ ಇದೆ). ಪುರುಷರ ಎದೆಯಳತೆಯು ಕನಿಷ್ಠ 77 ಸೆಂ.ಮೀ ಇದ್ದು 05 ಸೆಂ.ಮೀ ಹಿಗ್ಗಬೇಕು, ಮಹಿಳೆಯರಿಗೂ 05 ಸೆಂ.ಮೀ ಹಿಗ್ಗುವಿಕೆ ಕಡ್ಡಾಯ. ಕಣ್ಣಿನ ದೃಷ್ಟಿ 6/12 (6/6 ಗೆ ಸರಿಪಡಿಸಬಹುದಾದ) ಇರಬೇಕು ಹಾಗೂ ಹೈಪರ್ಮೆಟ್ರೋಪಿಯಾ +2.00 D, ಮಯೋಪಿಯಾ -1D ಮತ್ತು ± 0.50 D ಅಸ್ಟಿಗ್ಮ್ಯಾಟಿಸಂ ಮಿತಿಯೊಳಗಿರಬೇಕು. 6 ಮೀಟರ್ ದೂರದ ಪಿಸುಮಾತು ಸ್ಪಷ್ಟವಾಗಿ ಕೇಳಿಸಬೇಕು ಹಾಗೂ ಬಾಯಿಯಲ್ಲಿ ಕನಿಷ್ಠ 14 ದಂತ ಬಿಂದುಗಳು ಇರಲೇಬೇಕು. ವೈದ್ಯಕೀಯ ಪರೀಕ್ಷೆಯು 4 ರಿಂದ 5 ದಿನಗಳ ಕಾಲ ನಡೆಯಲಿದ್ದು, ಮೇಲ್ಮನವಿ ಸಲ್ಲಿಸಲು ಕೇವಲ 40 ರೂ. ಪಾವತಿಸಬೇಕಾಗುತ್ತದೆ.
ಪರೀಕ್ಷೆಯ ವಿವರ
ದೈಹಿಕ ಪರೀಕ್ಷೆ ಪಾಸಾದವರಿಗೆ 10ನೇ ತರಗತಿಯ ಸಿಬಿಎಸ್ಇ ಪಠ್ಯಕ್ರಮದಂತೆ 30 ನಿಮಿಷಗಳ ಕಾಲ 30 ಪ್ರಶ್ನೆಗಳ ಇಂಗ್ಲಿಷ್ ಲಿಖಿತ ಪರೀಕ್ಷೆ ಇರುತ್ತದೆ. ಮೈಮೇಲೆ ಟ್ಯಾಟೂ ಇರುವಂತಿಲ್ಲ ಹಾಗೂ ಸೇವೆಯ 4 ವರ್ಷಗಳಲ್ಲಿ ಮದುವೆಯಾಗುವಂತಿಲ್ಲ. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ನ ಕೊನೆಯ 04 ಅಂಕಿಗಳನ್ನು ನಮೂದಿಸುವುದು ಕಡ್ಡಾಯ. 10 ರಿಂದ 200 KB ಅಳತೆಯ ಫೋಟೋ, 80 ರಿಂದ 150 KB ಅಳತೆಯ ಅಭ್ಯರ್ಥಿ ಮತ್ತು ಪೋಷಕರ ಸಹಿ ಹಾಗೂ 50 ರಿಂದ 100 KB ಯ ಎಡಗೈ ಹೆಬ್ಬೆಟ್ಟಿನ ಗುರುತು ಅಪ್ಲೋಡ್ ಮಾಡಬೇಕು. ರ್ಯಾಲಿಗೆ ಹೋಗುವಾಗ 01 ತಿಂಗಳ ಒಳಗಿನ 08 ಪಾಸ್ಪೋರ್ಟ್ ಸೈಜ್ ಫೋಟೋಗಳು ಮತ್ತು ಕನಿಷ್ಠ 04 ಸೆಟ್ ಜೆರಾಕ್ಸ್ ಪ್ರತಿಗಳನ್ನು ಒಯ್ಯಬೇಕು. ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯು (PSL) 2026ರ ನವೆಂಬರ್ 14 ರಂದು ಪ್ರಕಟವಾಗಿ, ಡಿಸೆಂಬರ್ 01, 2026 ರ ನಂತರ ಅಂತಿಮ ನೇಮಕಾತಿ ಪಟ್ಟಿ ಹೊರಬೀಳಲಿದೆ! ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ +91-9513253233 (09:00 ರಿಂದ 18:00 ಗಂಟೆ) ಅಥವಾ 011-25694209, 011-25699606 (09:00 ರಿಂದ 17:00 ಗಂಟೆ) ಸಂಪರ್ಕಿಸಿ ಅಥವಾ iafrecruitment.edcil.co.in ಗೆ ಭೇಟಿ ನೀಡಿ.
Bangalore [Bangalore],Bangalore,Karnataka














