ಬಾಲಿವುಡ್ನ (Bollywood) ‘ದಬಾಂಗ್’ ಸ್ಟಾರ್ ಸಲ್ಮಾನ್ ಖಾನ್ (Salman Khan) 60ನೇ ವಯಸ್ಸಿನಲ್ಲೂ ತಮ್ಮ ಫಿಟ್ನೆಸ್, ಸ್ಟೈಲ್ ಮತ್ತು ಯಂಗ್ ಲುಕ್ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಲೇ ಇದ್ದಾರೆ. ಇತ್ತೀಚೆಗೆ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಒಂದೆಡೆ ಅವರು ದಣಿದಂತೆ ಕಾಣುತ್ತಿದ್ದರೆ, ಮತ್ತೊಂದೆಡೆ ಹಂಚಿಕೊಂಡ ಮತ್ತೊಂದು ಚಿತ್ರದಲ್ಲಿ ಎಂದಿನಂತೆ ಫಿಟ್ ಮತ್ತು ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದರು. ಈ ನಡುವೆ, ಅವರ ಯೌವನದ ಲುಕ್ ಹಿಂದಿನ ಅಚ್ಚರಿಯ ಸಂಗತಿಯನ್ನು ಖ್ಯಾತ ನಿರ್ಮಾಪಕ ಶೈಲೇಂದ್ರ ಸಿಂಗ್ ಬಹಿರಂಗಪಡಿಸಿದ್ದು, ಬಾಲಿವುಡ್ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.













