Bengaluru Power Cut: ಗಮನಿಸಿ ಜೂನ್ 28ರಂದು ವಿದ್ಯುತ್ ಕಡಿತ ಪ್ರದೇಶಗಳ ವಿವಿರ ಹೀಗಿದೆ | Power Cut: Bengaluru Few Parts Will Face Power Cut Issue On Tomorrow June 28th

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 27: ಭಾರತದ ದಕ್ಷಿಣ ರಾಜ್ಯದ ಏಕೈಕ ವಿದ್ಯುತ್ ಪೂರೈಕೆ ಸಂಸ್ಥೆಯಾಗಿರುವ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಹಲವಾರು ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಈ ಸಂಬಂಧ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆ ಜೂನ್ 28ರಂದು ಬುಧವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಲ್ ಸಂಸ್ಥೆಯು ವಿದ್ಯುತ್ ಪೂರೈಕೆ ಸ್ಥಿತಿಗತಿ, ಟವರ್‌ಗಳ ನಿರ್ಮಾಣ, ಸ್ಥಿತಿಯ ಮೇಲ್ವಿಚಾರಣೆ, ಬಸ್ ಐಸೊಲೇಟರ್‌ಗಳ ನಿರ್ವಹಣೆ, ಹಾಟ್‌ಲೈನ್ ವೀಕ್ಷಣೆಯಂತಹ ತುರ್ತು ಕಾಮಗಾರಿ ಕೈಗೊಂಡಿದೆ. ಹೀಗಾಗಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಈ ಕುರಿತು ಸಂಸ್ಥೆಗಳು ಅಧಿಕೃತ ಪ್ರಕಟಣೆ ಹೊರಡಿಸಿವೆ.

Bengaluru power cut

ನಿರ್ವಹಣಾ ಕೆಲಸ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಸಲಾಗುವುದು. ಹೀಗಾಗಿ ಐದು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

Karnataka: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ, ಆಡಳಿತ, ಜಲ-ವಿದ್ಯುತ್ ಕ್ಷಾಮ: ಬೊಮ್ಮಾಯಿ ಭವಿಷ್ಯKarnataka: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ, ಆಡಳಿತ, ಜಲ-ವಿದ್ಯುತ್ ಕ್ಷಾಮ: ಬೊಮ್ಮಾಯಿ ಭವಿಷ್ಯ

ವಿದ್ಯುತ್ ಕಡಿತ ಪ್ರದೇಶಗಳು

ನಗರದ ಬೇಗೂರು ಕೊಪ್ಪ ರಸ್ತೆ, ವಿಶ್ವಪ್ರಿಯ ಲೇಔಟ್, ದೇವರಚಿಕ್ಕನಹಳ್ಳಿ, ಅಕ್ಷಯನಗರ, ತೇಜಸ್ವಿನಿ ನಗರ, ಪ್ರೆಸ್ಟೀಜ್ ಸಾಂಗ್ ಆಫ್ ಸೌತ್, ಹಿರಾನಂದನಿ ಅಪಾರ್ಟ್‌ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಲಿಟಾ ಪ್ರೊಮೆನೇಡ್ ಅಪಾರ್ಟ್‌ಮೆಂಟ್‌, ಕೆಆರ್ ಬಡಾವಣೆ, ಶಾರದಾನಗರ, ಚುಂಚುಘಟ್ಟ ಮತ್ತು ಉಪ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳು.

Bengaluru power cut

ಎಲ್ 6 ಮತ್ತು ಟಿ ಟೆಕ್ ಪಾರ್ಕ್, ಹಾರೋಬೆಲೆ, ಕೋಡಿಹಳ್ಳಿ, ಬಿಜ್ಜಹಳ್ಳಿ, ಕುನ್ನೂರು, ಹುಕುಂಡ, ಹುಣಸೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ 11 ಕಿಲೋವೋಲ್ಟ್ (ಕೆವಿ) ಉಪ ಕೇಂದ್ರಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇನ್ನೂ ಇಂದು ಮಂಗಳವಾರ ಸಹ ನಗರದ ವಿವಿಧೆಡ ವಿದ್ಯುತ್ ಕಡಿತಗೊಂಡಿದೆ. ಸಂಜೆ ನಂತರ ಎಂದಿನಂತೆ ವಿದ್ಯುತ್ ಪೂರೈಕೆ ಆಗಲಿದೆ.

English summary

Power Cut: Bengaluru few parts will face power cut issue on Tomorrow June 28th, says BESCOM

Story first published: Tuesday, June 27, 2023, 14:14 [IST]

Source link