Ravi Sinha: ‘ರಾ’ ಮುಖ್ಯಸ್ಥರನ್ನಾಗಿ ರವಿ ಸಿನ್ಹಾ ನೇಮಕ: ಕೇಂದ್ರ ಆದೇಶ | Central Government Appointed IPS Officer Ravi Sinha As RAW Chief

India

oi-Shankrappa Parangi

|

Google Oneindia Kannada News

ನವದೆಹಲಿ, ಜೂನ್ 19: ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಅವರನ್ನು ಭಾರತದ ‘ಬಾಹ್ಯ ಬೇಹುಗಾರಿಕಾ ಸಂಸ್ಥೆ’ಯ (RAW) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಇದೇ ಸಂಸ್ಥೆಗೆ ಹಿಂದಿದ್ದ ಅಧಿಕಾರಿ ಯಾರು, ಅವರ ಅವಧಿ ಎಲ್ಲಿಯವರೆಗೆ ಇರಲಿದೆ, ಹೊಸ ಮುಖ್ಯಸ್ಥರ ಆಡಳಿತದ ಮಾಹಿತಿ ಇಲ್ಲಿದೆ.

ಈ ಹಿಂದೆ ‘ಬಾಹ್ಯ ಬೇಹುಗಾರಿಕಾ ಸಂಸ್ಥೆ’ಯ (RAW) ಸಮಂತ್ ಕುಮಾರ್ ಗೋಯೆಲ್ ಅವರ ಉತ್ತರಾಧಿಕಾರಿಯಾಗಿ ರವಿ ಸಿನ್ಹಾ ಕಾರ್ಯ ನಿರ್ವಹಿಸಲಿದ್ದಾರೆ. ಸುಮಂತ್ ಕುಮಾರ್ ಗೋಯಲ್ ಅವರು ಇದೇ ತಿಂಗಳ ಜೂನ್ 30 ರಂದು ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಕೇಂದ್ರದ ಅಧಿಕೃತ ಆದೇಶವು ಮಾಹಿತಿ ನೀಡಿದೆ.

Central Government Appointed IPS Officer Ravi Sinha As RAW Chief

‘ಬಾಹ್ಯ ಬೇಹುಗಾರಿಕಾ ಸಂಸ್ಥೆ’ಯ ನೂತನ ಮುಖ್ಯಸ್ಥರಾಗಿ ನೇಮಕರಾದ ರವಿ ಸಿನ್ಹಾ ಅವರು ಛತ್ತೀಸ್‌ಗಢ ಕೇಡರ್‌ನ 1988 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿದ್ದಾರೆ. ಅವರು ಪ್ರಸ್ತುತ ಕ್ಯಾಬಿನೆಟ್ ಸೆಕ್ರೆಟರಿಯಟ್‌ನಲ್ಲಿ ವಿಶೇಷ ಕಾರ್ಯದರ್ಶಿಯಾಗಿಯು ಕಾರ್ಯ ನಿರ್ವಹಿಸುತ್ತಿದ್ದರು.

ಎರಡು ವರ್ಷಗಳ ಅವಧಿಗೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ) ಕಾರ್ಯದರ್ಶಿಯಾಗಿ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಇತ್ತೀಚೆಗೆ ಅನುಮೋದನೆ ನೀಡಿದೆ. ಅದರ ಬೆನ್ನಲ್ಲೆ ಸೋಮವಾರ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ರವಿ ಸಿನ್ಹಾ ಅವರು ಕಳೆದ 20 ವರ್ಷಗಳಿಂದ ಪ್ರತಿಷ್ಠಿತ ಗುಪ್ತಚರ ಸಂಸ್ಥೆಯಲ್ಲಿದ್ದಾರೆ. ಅವರು ತಮ್ಮ ಪ್ರಚಾರದ ಮೊದಲು RAW ನ ಕಾರ್ಯಾಚರಣೆಯ ವಿಭಾಗಕ್ಕೆ ಮುಖ್ಯಸ್ಥರಾಗಿದ್ದರು. ನೆರೆಹೊರೆಯ ತಜ್ಞರೆಂದು ಪರಿಗಣಿಸಲ್ಪಟ್ಟಿರುವ ಅಧಿಕಾರಿಯು ಜಮ್ಮು – ಕಾಶ್ಮೀರ, ಈಶಾನ್ಯ ಹಾಗೂ ಇನ್ನಿತರ ದೇಶಗಳೆಲ್ಲಡೆ ಕಾರ್ಯ ನಿರ್ವಹಿಸಿದ ಅನುಭವ ಸಿನ್ಹಾ ಹೊಂದಿದ್ದಾರೆ.

Central Government Appointed IPS Officer Ravi Sinha As RAW Chief

ಗೋಯೆಲ್ ಸೇವೆ ಎರಡು ಭಾರಿ ವಿಸ್ತರಣೆ

ಈ ಹಿಂದೆ ಕೆಲ ದೇಶಗಳಿಂದ ಸಿಖ್ ಉಗ್ರವಾದವನ್ನು ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿಯೇ ಅವರು ಅಧಿಕಾರ ವಹಿಸಿಕೊಂಡು ಉತ್ತಮ ಸೇವೆ ನೀಡಿದವರು. ಸಿನ್ಹಾ ಅವರ ಪೂರ್ವವರ್ತಿ ಗೋಯಲ್ ಅವರನ್ನು ಜೂನ್ 2019 ರಲ್ಲಿ ಎರಡು ವರ್ಷಗಳ ಕಾಲ RAW ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ನಂತರ ಅವರಿಗೆ 2021ರಲ್ಲಿ ಹಾಗೂ ಮರುವರ್ಷ 2022ರ ಜೂನ್ ತಿಂಗಳಲ್ಲಿ ತಲಾ ಒಂದೊಂದು ವರ್ಷದ ಎರಡು ಅವಧಿಗೆ ಸೇವೆಯನ್ನು ವಿಸ್ತರಣೆ ಮಾಡಲಾಗಿತ್ತು.

2019 ರ ಫೆಬ್ರುವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯಲ್ಲಿ ಸಮಂತ್ ಕುಮಾರ್ ಗೋಯೆಲ್ ಅವರು ಪ್ರಮುಖ ಪಾತ್ರವಹಿಸಿದ್ದರು. ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಪಾರವಾಗಿ ಪರಿಣಿತಿ ಹೊಂದಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

2019ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಗೆ ವಿರುದ್ಧವಾಗಿ ಸೇಡು ತೀರಿಸಿಕೊಳ್ಳಲು ಭಾರತದಿಂದ ಪಾಕಿಸ್ಥಾನದ ಬಾಲಾಕೋಟ್ ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು. ಇದರಲ್ಲಿ 40 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಸಿಬ್ಬಂದಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JM) ಆತ್ಮಾಹುತಿ ಬಾಂಬರ್ ಒಬ್ಬನನ್ನು ಹತ್ಯೆ ಮಾಡಿತ್ತು. ಬಾಲಾಕೋಟ್‌ನಲ್ಲಿರುವ ಜೆಇಎಂ ಭಯೋತ್ಪಾದಕ ತರಬೇತಿ ಶಿಬಿರವನ್ನು ಹೊಡೆದುರುಳಿಸಿತ್ತು.

English summary

Central Government appointed IPS officer Ravi Sinha as Research and Analysis Wing (RAW) chief.

Story first published: Monday, June 19, 2023, 20:47 [IST]

Source link