Tamil
oi-Srinivasa A
ಮೊನ್ನೆಯಷ್ಟೇ
(
ಜೂನ್
23
)
ತಮಿಳು
ನಟ
ದಳಪತಿ
ವಿಜಯ್
ಹುಟ್ಟುಹಬ್ಬವನ್ನು
ಅವರ
ಅಭಿಮಾನಿಗಳು
ಸಂಭ್ರಮದಿಂದ
ಆಚರಿಸಿದರು.
ಆ
ದಿನ
ವಿಜಯ್
ನಟನೆಯ
ಮುಂದಿನ
ಸಿನಿಮಾ
ಲಿಯೋದ
ಮೊದಲ
ಹಾಡೂ
ಸಹ
ಬಿಡುಗಡೆಗೊಂಡಿತು.
ಹೌದು,
ಲಿಯೋ
ಚಿತ್ರದ
ಫಸ್ಟ್
ಸಿಂಗಲ್
‘ನಾ
ರೆಡಿ’
ವಿಜಯ್
ಹುಟ್ಟುಹಬ್ಬದ
ಅಂಗವಾಗಿ
ಬಿಡುಗಡೆಗೊಂಡಿತು.
ಬೃಹತ್
ನಿರೀಕ್ಷೆಯೊಂದಿಗೆ
ಬಿಡುಗಡೆಯಾದ
ಈ
ಹಾಡು
ಕೇಳುಗರ
ಮನ
ಗೆದ್ದಿತ್ತು.
ಹಾಡು
ಸಂಪೂರ್ಣವಾಗಿ
ಬಿಡುಗಡೆಯಾಗುವ
ಮುನ್ನವೇ
ರಿಲೀಸ್
ಆಗಿದ್ದ
ಹಾಡಿನ
ಟೀಸರ್
ಹಾಡು
ಚಾರ್ಟ್ಬಸ್ಟರ್
ಆಗಲಿದೆ
ಎಂಬ
ಸುಳಿವು
ನೀಡಿತ್ತು.
ಅದರಂತೆ
ಹಾಡು
ಬಿಡುಗಡೆಯಾದ
ಕೆಲವೇ
ಗಂಟೆಗಳಲ್ಲಿ
ಚಾರ್ಟ್ಬಸ್ಟರ್
ಆಗಿ,
ಎಲ್ಲೆಡೆ
ಸಿಕ್ಕಾಪಟ್ಟೆ
ವೈರಲ್
ಆಗಿತ್ತು.
ಈ
ಹಾಡಿಗೆ
ವಿಜಯ್
ಅವರೇ
ಸ್ವತಃ
ದನಿ
ನೀಡಿದ್ದು,
ಸಂಗೀತ
ನಿರ್ದೇಶಕ
ಅನಿರುದ್ಧ್
ರವಿಚಂದರ್
ಸಹ
ಹಾಡಿನ
ಕೆಲ
ಸಾಲುಗಳನ್ನು
ಹಾಡಿದ್ದಾರೆ.
ಹೀಗೆ
ಬಿಡುಗಡೆಯಾಗಿ
ಮೂರು
ದಿನಗಳು
ಕಳೆದ
ಬಳಿಕ
ಈ
ಹಾಡು
28
ಮಿಲಿಯನ್ಗಿಂತ
ಹೆಚ್ಚಿನ
ವೀಕ್ಷಣೆಗಳನ್ನು
ಪಡೆದುಕೊಂಡಿದ್ದು,
ಇನ್ನೂ
ಸಹ
ಸದ್ದು
ಮಾಡುತ್ತಲೇ
ಇದೆ.
ಹೀಗಿರುವಾಗಲೇ
ಚಿತ್ರತಂಡಕ್ಕೆ
ಹಿನ್ನಡೆಯಾಗುವಂತಹ
ಘಟನೆಯೊಂದು
ನಡೆದಿದೆ.
ಚೆನ್ನೈನ
ಸಾಮಾಜಿಕ
ಕಾರ್ಯಕರ್ತನೊಬ್ಬ
ಈ
ಹಾಡಿನ
ವಿರುದ್ಧ
ಡ್ರಗ್ಸ್
ವೈಭವೀಕರಣದ
ದೂರನ್ನು
ದಾಖಲಿಸಿದ್ದಾರೆ.
ಸೆಲ್ವಂ
ಎಂಬ
ಸಾಮಾಜಿಕ
ಕಾರ್ಯಕರ್ತ
ನಾ
ರೆಡಿ
ಹಾಡಿನಲ್ಲಿ
ಡ್ರಗ್ಸ್
ವೈಭವೀಕರಣ
ಹಾಗೂ
ರೌಡಿಸಂ
ಅನ್ನು
ಹೊಗಳಲಾಗಿದೆ,
‘ಚಿತ್ರತಂಡದ
ಮಾದಕ
ದ್ರವ್ಯ
ನಿಯಂತ್ರಣ
ಕಾಯಿದೆ’
ವಿರುದ್ಧ
ಕ್ರಮ
ತೆಗೆದುಕೊಳ್ಳಬೇಕೆಂದು
ದೂರನ್ನು
ದಾಖಲಿಸಿದ್ದಾರೆ.
ಮೊದಲಿಗೆ
ಜೂನ್
25ರಂದು
ಆನ್ಲೈನ್
ಮೂಲಕ
ದೂರನ್ನು
ದಾಖಲಿಸಿದ್ದ
ಸೆಲ್ವಮ್
ನಂತರ
ಇಂದು
(
ಜೂನ್
26
)
ಬೆಳಗ್ಗೆ
10
ಗಂಟೆಗೆ
ಪಿಟಿಷನ್
ಸಲ್ಲಿಸಿದ್ದಾರೆ.
ಇನ್ನು
ಈ
ದೂರಿನ
ಅನ್ವಯ
ಯಾವ
ರೀತಿಯ
ಕ್ರಮವನ್ನು
ತೆಗೆದುಕೊಳ್ಳಲಾಗುತ್ತದೆಯೋ
ಕಾದು
ನೋಡಬೇಕಿದೆ.
English summary
Compliant Filed Against Leo’s Hero Vijay for Promoting Drugs and Rowdyism in the Movie
Monday, June 26, 2023, 15:18
Story first published: Monday, June 26, 2023, 15:18 [IST]