ಕೆಲಸ ಕಳೆದುಕೊಂಡ ಬಸ್‌ ಚಾಲಕಿಗೆ ಕಾರು ಕೊಡಿಸಿದ ಕಮಲ್‌ ಹಾಸನ್‌ | Kamal Haasan gift a car to Sharmila, a bus driver who lost her job

India

oi-Punith BU

|

Google Oneindia Kannada News

ಕೊಯಮತ್ತೂರು, ಜೂನ್‌ 26: ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ಪ್ರಯಾಣ ಟಿಕೆಟ್ ನೀಡಿದ ವಿವಾದದ ಹಿನ್ನೆಲೆಯಲ್ಲಿ ಕೆಲಸ ತೊರೆದ ಕೊಯಮತ್ತೂರು ಮೂಲದ ಬಸ್ ಮಹಿಳಾ ಚಾಲಕಿಗೆ ನಟ, ರಾಜಕಾರಣಿ ಕಮಲ್ ಹಾಸನ್ ಸೋಮವಾರ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿಯಾಗಿರುವ ಶರ್ಮಿಳಾ ಅವರಿಗೆ ಕಮಲ್ ಪನ್ಬಟ್ಟು ಮೈಯಮ್” (ಕಮಲ್ ಕಲ್ಚರಲ್ ಸೆಂಟರ್) ವತಿಯಿಂದ ಚಾಲಕಿ ಉದ್ಯಮಿಯಾಗಲು ನೆರವಾಗುವ ದೃಷ್ಟಿಯಿಂದ ಈ ಕಾರನ್ನು ನೀಡಲಾಗಿದೆ ಎಂದು ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Kamal Haasan gift a car to Sharmila, a bus driver who lost her job

ತನ್ನ ವಯಸ್ಸಿನ ಮಹಿಳೆಯರಿಗೆ ಉತ್ತಮ ಉದಾಹರಣೆಯಾಗಿರುವ ಶರ್ಮಿಳಾ ಅವರ ಸುತ್ತಲಿನ ಇತ್ತೀಚಿನ ಚರ್ಚೆಯ ಬಗ್ಗೆ ನಾನು ದುಃಖಿತನಾಗಿದ್ದೆ. ಶರ್ಮಿಳಾ ಕೇವಲ ಡ್ರೈವರ್ ಆಗಿ ಉಳಿಯಬಾರದು. ಅವರು ಅನೇಕ ಶರ್ಮಿಳಾರನ್ನು ಹುಟ್ಟುಹಾಕುವುದು ನನ್ನ ನಂಬಿಕೆ. ಅವಳು ಈಗ ಕಾರನ್ನು ಬಾಡಿಗೆ ಸೇವೆಗಾಗಿ ಓಡಿಸಬಹುದು ಮತ್ತು ಉದ್ಯಮಿಯಾಗಬಹುದು ಎಂದು ಅವರು ಹೇಳಿದರು.

ಕಳೆದ ವಾರ ಚಾಲಕಿ ಶರ್ಮಿಳಾ ಚಲಾಯಿಸುತ್ತಿದ್ದ ಬಸ್‌ನಲ್ಲಿ ಗಾಂಧಿಪುರಂನಿಂದ ಕೊಯಮತ್ತೂರಿನ ಪೀಲಮೇಡುವಿಗೆ ಡಿಎಂಕೆ ಸಂಸದೆ ಕನಿಮೊಳಿ ಆಕೆ ಓಡಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್‌ನ ಮಹಿಳಾ ಕಂಡಕ್ಟರ್‌ ಒಬ್ಬರು ಸಂಸದೆ ಕನಿಮೊಳಿ ಅವರನ್ನು ಟಿಕೆಟ್ ಪಡೆಯುವಂತೆ ಅಗೌರವಿಸಿದ್ದರು. ಇದರಿಂದ ಬೇಸತ್ತ ಚಾಲಕಿ ಶರ್ಮಿಳಾ ಆಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿದ್ದಳು.

ಅಲ್ಲದೆ ಮಹಿಳಾ ಕಂಡಕ್ಟರ್‌ ವಿರುದ್ಧ ಬಸ್ ಮಾಲೀಕರಿಗೆ ದೂರು ನೀಡಿ ತನ್ನ ಕನಸಿನ ಕೆಲಸಕ್ಕೂ ರಾಜೀನಾಮೆ ನೀಡಿದ್ದರು. ಶರ್ಮಿಳಾ ವಿರುದ್ಧ ಮಹಿಳಾ ಕಂಡಕ್ಟರ್‌ ಈಕೆ ಖ್ಯಾತ ವ್ಯಕ್ತಿಗಳನ್ನು ಬಸ್‌ನಲ್ಲಿ ಪ್ರಯಾಣಿಸಲು ಆಹ್ವಾನಿಸುವ ಮೂಲಕ ಪ್ರಚಾರ ಪಡೆಯುತ್ತಿದ್ದಾಳೆ ಎಂದು ಆರೋಪಿಸಿದ್ದರು.

ಆದರೆ ಶರ್ಮಿಳಾ, ಸಂಸದೆ ಕನಿಮೊಳಿ ಬರುತ್ತಾರೆ ಎಂದು ಮಾಲೀಕರಿಗೆ ತಾನು ಮೊದಲೇ ಹೇಳಿದ್ದೇ. ಆದರೆ ತನ್ನ ಸಹೋದ್ಯೋಗಿ ಸಂಸದರನ್ನು ಅವಮಾನಿಸಿರುವುದು ನನಗೆ ಬೇಸರ ತರಿಸಿದೆ. ಇದನ್ನು ನನ್ನಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿ ರಾಜೀನಾಮೆ ನೀಡಿದ್ದಳು. ಆದರೆ ಬಸ್‌ ಮಾಲೀಕರು ಸಂಸದೆ ಕನಿಮೊಳಿ ಅವರ ಭೇಟಿಯ ಬಗ್ಗೆ ಮಾಹಿತಿ ನೀಡಿರಲಿಲ್ಲ. ಶರ್ಮಿಳಾ ಅವರ ಸ್ವಂತ ಇಚ್ಛೆಯ ಮೇರೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿತ್ತು.

ಸಣ್ಣ ವಯಸ್ಸಿಗೆ ಬಸ್‌ ಚಾಲಕಿಯಾಗಿರುವ ಶರ್ಮಿಳಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅವರ ತಂದೆ ಕೂಡ ಬಸ್‌ ಚಾಲಕರಾಗಿದ್ದಾರೆ. ತಾನೂ ಕೂಡ ತಂದೆಯಂತೆ ಚಾಲಕಿಯಾಗಬೇಕು ಎಂದು ಡ್ರೈವಿಂಗ್‌ ಕಲಿತು ದೊಡ್ಡ ಬಸ್‌ ಚಾಲಯಿಸುವುದನ್ನು ಶರ್ಮಿಳಾ ಕಲಿತು ಕೆಲಸಕ್ಕೆ ಸೇರಿದ್ದರು. ಮೊದಲು ಸಣ್ಣ ಗಾಡಿಗಳನ್ನು ಓಡಿಸುತ್ತಿದ್ದ ಅವರು ಈಗ ಬಸ್‌ನಂತ ದೊಡ್ಡ ಗಾಡಿ ಓಡಿಸುತ್ತಿದ್ದರು.

English summary

Actor-politician Kamal Haasan on Monday gifted a new car to a Coimbatore-based female bus driver who quit her job following the controversy over the issue of a travel ticket to DMK MP Kanimozhi.

Story first published: Monday, June 26, 2023, 15:30 [IST]

Source link