ತಮಿಳುನಾಡಿನಲ್ಲಿ ಭಾರೀ ಮಳೆ, ಬಿರುಗಾಳಿ; ಚೆನ್ನೈ ಸೇರಿ 5 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ | Heavy Rain Hits Several Districts in Tamil Nadu, Holiday Declared for Schools

India

oi-Mamatha M

|

Google Oneindia Kannada News

ಚೆನ್ನೈ, ಜೂನ್. 19: ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳು ಸೋಮವಾರ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಗೆ ಸಾಕ್ಷಿಯಾಗಿವೆ. ಮಳೆಯಿಂದ ಅಸ್ತವ್ಯಸ್ತವಾಗಿರುವ ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ತಿರುವಳ್ಳೂರು ಮತ್ತು ರಾಣಿಪೇಟ್ ಜಿಲ್ಲೆಗಳ ಶಾಲೆಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿದೆ.

ಭಾನುವಾರ ರಾತ್ರಿ ಚೆನ್ನೈನಾದ್ಯಂತ ವ್ಯಾಪಕ ಮಳೆ ದಾಖಲಾಗಿದೆ. ಮೀನಂಬಾಕ್ಕಂನಲ್ಲಿ ಭಾನುವಾರ ಬೆಳಗ್ಗೆ 8.30 ರಿಂದ ಸೋಮವಾರ ಬೆಳಗ್ಗೆ 5.30 ರವರೆಗೆ 137.6 ಮಿಮೀ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ. ಇದು ಕಳೆದ 27 ವರ್ಷದ ನಂತರ ಜೂನ್‌ ನಲ್ಲಿ ಆಗಿರುವ ಅತ್ಯಧಿಕ ಮಳೆ. 1996 ರಲ್ಲಿ ಜೂನ್‌ನಲ್ಲಿ 282.2 ಮಿಲಿಮೀಟರ್‌ ಮಳೆಯಾಗಿತ್ತು.

Heavy Rain Hits Several Districts in Tamil Nadu, Holiday Declared for Schools

ತಾರಾಮಣಿ ಮತ್ತು ನಂದನಂನಲ್ಲಿ ಸ್ವಯಂಚಾಲಿತ ಮಳೆ ಮಾಪಕಗಳು (ಎಆರ್‌ಜಿಗಳು) ಸುಮಾರು 12 ಸೆಂ.ಮೀ ಮಳೆಯನ್ನು ದಾಖಲಿಸಿವೆ ಮತ್ತು ನಂತರ ಚೆಂಬರಂಬಾಕ್ಕಂನಲ್ಲಿ 11 ಸೆಂ.ಮೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸೋಮವಾರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಹಲವಾರು ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ.

ರಾಜಸ್ಥಾನದಲ್ಲಿ ಭಾರೀ ಮಳೆ: ಆಸ್ಪತ್ರೆಗಳು ಜಲಾವೃತ, 30 ಜನರ ರಕ್ಷಣೆ; ಬುಧವಾರದ ವೇಳೆಗೆ ಬಿಡುವು ಸಾಧ್ಯತೆರಾಜಸ್ಥಾನದಲ್ಲಿ ಭಾರೀ ಮಳೆ: ಆಸ್ಪತ್ರೆಗಳು ಜಲಾವೃತ, 30 ಜನರ ರಕ್ಷಣೆ; ಬುಧವಾರದ ವೇಳೆಗೆ ಬಿಡುವು ಸಾಧ್ಯತೆ

ಕಾಂಚೀಪುರಂ, ಚೆಂಗಲ್ಪಟ್ಟು, ತಿರುವಣ್ಣಾಮಲೈ, ಕಲ್ಲಕುರಿಚಿ, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ನಾಗಪಟ್ಟಿಣಂ, ತಿರುವಾರೂರ್, ತಂಜಾವೂರು, ತಿರುಚ್ಚಿ, ಅರಿಯಲೂರ್, ಪೆರಂಬಲೂರು ಸೇರಿದಂತೆ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರದಿಂದ ಗುರುವಾರದವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಕೆಲವು ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇನ್ನು, ಭಾರೀ ಮಳೆಯಿಂದಾಗಿ ಚೆನ್ನೈಗೆ ತೆರಳುತ್ತಿದ್ದ ಆರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳನ್ನು ಬೆಂಗಳೂರಿಗೆ ತಿರುಗಿಸಲಾಗಿದೆ. ಮಳೆಯಿಂದಾಗಿ 12ಕ್ಕೂ ಅಧಿಕ ಅಂತರಾಷ್ಟ್ರೀಯ ವಿಮಾನಗಳ ನಿರ್ಗಮನದಲ್ಲಿ ವಿಳಂಬವಾಗಿದೆ.

English summary

Tamil Nadu Rains: Heavy rain hits several districts in Tamil Nadu, including Chennai, holiday declared for schools in Chennai, Kancheepuram, Chengalpattu, Tiruvallur and Ranipet districts. know more.

Story first published: Monday, June 19, 2023, 19:19 [IST]

Source link