Agriculture
oi-Gururaj S
ಕೊಪ್ಪಳ, ಜೂನ್ 26; ಈ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಯೋಜನೆಗೆ ರೈತರು ಹೆಸರು ನೋಂದಾಯಿಸುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಟಿ. ಎಸ್. ರುದ್ರೇಶಪ್ಪ ತಿಳಿಸಿದ್ದಾರೆ. ಹೆಸರು ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆ ಯೋಜನೆಯಡಿ ನೀರಾವರಿ ಹತ್ತಿ ಮತ್ತು ಮಳೆಯಾಶ್ರಿತ ಹೆಸರು ಬೆಳೆಗಳಿಗೆ ಬೆಳೆವಿಮೆಗೆ ಹೆಸರು ನೋಂದಾಯಿಸಲು ಜುಲೈ 15 ಹಾಗೂ ಇತರೆ ಎಲ್ಲಾ ಅಧಿಸೂಚಿತ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ.
ಜಿಲ್ಲೆಯ ಎಲ್ಲಾ ರೈತ ಭಾಂಧವರು ಕೂಡಲೇ ಬೆಳೆವಿಮೆ ನೋಂದಾಯಿಸಿ, ಯೋಜನೆ ಲಾಭ ಪಡೆಯಬೇಕು ಎಂದು ಕರೆ ನೀಡಲಾಗಿದೆ. ಬೆಳೆವಿಮೆ ಮಾಡಿಸಿದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ರೈತರಿಗೆ ನೆರವಿಗೆ ಬರಲಿದೆ. ಆದ್ದರಿಂದ ರೈತರು ನೋಂದಣಿ ಮಾಡಿಸಬೇಕು ಎಂದು ಮನವಿ ಮಾಡಲಾಗಿದೆ.
ಎಲ್ಲಿ ಮಾಹಿತಿ ಸಿಗಲಿದೆ?; ರೈತರು ಬೆಳೆ ವಿಮೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಲು ಕೊಪ್ಪಳ ಜಿಲ್ಲೆಗೆ ಆಯ್ಕೆಯಾದ ಪ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ. ಈ ಕಂಪನಿಯ ಪ್ರತಿನಿಧಿಗಳು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಲಭ್ಯವಿದ್ದು, ರೈತರಿಗೆ ಬೆಳೆವಿಮೆ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾರೆ.
ತಾಲೂಕವಾರು ಕಂಪನಿಯ ಪ್ರತಿನಿಧಿಗಳಾದ ಕೊಪ್ಪಳ ತಾಲೂಕಿನ ಸತೀಶ ಸುರೊಜಿ 8861468340, ಕುಷ್ಟಗಿಯ ಸುನೀಲ್ ಇಟಿನಿ 7996453241, ಯಲಬುರ್ಗಾದ ಸಂಗಪ್ಪ ಬೆಣ್ಣಿ 9964397577, ಗಂಗಾವತಿಯ ವಿಶಾಲ್ ಹೆಚ್ 9008078851, ಕಾರಟಗಿಯ ಮಹೇಂದ್ರ ಎಸ್ 9590642324, ಕನಕಗಿರಿಯ ಚಂದ್ರಶೇಖರ 9611682356 ಹಾಗೂ ಕುಕನೂರು ತಾಲೂಕಿನ ಕಳಕಪ್ಪ 8497074017 ಇವರನ್ನು ಸಂಪರ್ಕಿಸಬಹುದಾಗಿದೆ.
ರೈತರು ಖುದ್ದಾಗಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಪ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯ ಕೊಪ್ಪಳ ಜಿಲ್ಲೆಯ ಪ್ರಧಾನ ಕಛೇರಿಯು ಬ್ಯಾಂಕ್ ಆಫ್ ಬರೋಡಾ ಪಕ್ಕದಲ್ಲಿ, ನಾಸವಾಲೆ ಬಿಲ್ಡಿಂಗ್, 1ನೇ ಮಹಡಿ, ಕೊಪ್ಪಳ. ಈ ವಿಳಾಸದಲ್ಲಿದೆ. ಜಿಲ್ಲೆಯ ರೈತ ಬಾಂಧವರು ನೇರವಾಗಿ ಬ್ಯಾಂಕ್ ಅನ್ನು ಸಹ ಸಂಪರ್ಕಿಸಬಹುದಾಗಿದೆ.
English summary
Requested for farmers to register name for 2023 monsoon season crop insurance. July 31st last date to register name for Cotton and other crop.
Story first published: Monday, June 26, 2023, 11:17 [IST]