Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪಟ್ಟು; ನಾನು ಸನ್ಯಾಸಿ ಅಲ್ಲ, ಅಧ್ಯಕ್ಷ ಹುದ್ದೆ ಆಕಾಂಕ್ಷಿ! | Karnataka BJP : Give Me The Post Of BJP State President Says Former Minister V Somanna

Karnataka

oi-Reshma P

|

Google Oneindia Kannada News

ಬೆಂಗಳೂರು, ಜೂನ್‌ 26: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಮತ್ತೆ ಚೇತರಿಸಿಕೊಳ್ಳುತ್ತಿದೆ. ಸೋಲಿಗೆ ಕಾರಣ ಹಾಗೂ ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ಬಿಜೆಪಿ ಪಾಳಯದಲ್ಲಿ ನೂತನ ಸಾರಥಿ ಆಯ್ಕೆ ವಿಚಾರ ಚರ್ಚೆಯಾಗುತ್ತಿದೆ.

ಹೌದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರುಗಳು ಹರಿದಾಡುತ್ತಿರುವಾಗಲೇ ಮಾಜಿ ಸಚಿವ ವಿ ಸೋಮಣ್ಣನವರು ರಾಜ್ಯಾಧದ್ಯಕ್ಷ ಸ್ಥಾನಕ್ಕೆ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಸೋಮಣ್ಣ ಅವರ ಬಹಿರಂಗ ಬೇಡಿ ರಾಜ್ಯ ಬಿಜೆಪಿ ನಾಯಕರ ಕಣ್ಣರಳಿಸುವಂತೆ ಮಾಡಿದೆ.

Karnataka BJP : Give Me The Post Of BJP State President Says Former Minister V Somanna

ಈಗಾಗಲೇ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಪಕ್ಷವನ್ನ ಬದಪಡಿಸಬೇಕಿದೆ ನನಗೆ ರಾಜ್ಯಧ್ಯಕ್ಷ ಸ್ಥಾನವನ್ನ ಕೊಡಿ ಎಂದು ಬಹಿರಂಗವಾಗಿ ಆಸೆಯನ್ನ ವ್ಯಕ್ತಪಡಿಸಿದ್ದ ಸೋಮಣ್ಣ, ಮತ್ತೆ ಪುನರುಚ್ಚರಿಸಿದ್ದಾರೆ. ನನಗಿಂತ ಬುದ್ಧಿವಂತರು, ಕೆಲಸ ಮಾಡುವವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ನನ್ನದೇನೂ ತಕರಾರಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.

ನಾನೇನು ನಾನು ಸನ್ಯಾಸಿ ಅಲ್ಲ. ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ. ಕೆಲಸ ಮಾಡುವವರಿಗೆ ಕೆಲಸ ನೀಡುವಂತೆ ಕೇಳುತ್ತಿದ್ದೇನೆ. ಆದರೆ, ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಅಥವಾ ಬಿಡುವುದು ಪಕ್ಷದ ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದು. ನನಗಿಂತ ಕೆಲಸ ಮಾಡುವವರು, ಬುದ್ಧಿವಂತರು ಸಾಕಷ್ಟುಜನರಿದ್ದು, ಅವರಿಗೆ ನೀಡುವುದಾದರೆ ನನ್ನದೇನು ತಕರಾರು ಇಲ್ಲ. ಅದರಿಂದ ನನಗೇನು ಮುಜುಗರವೂ ಆಗುವುದಿಲ್ಲ . ಪಕ್ಷ ಕೊಡುವ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.

ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಿ ಅಥವಾ ಬಿಡಲಿ. ನಾನು ಮಾತ್ರ ಸುಮ್ಮನೆ ಕೂರುವವನಲ್ಲ. ನಿದ್ದೆ ಮಾಡುವವನಲ್ಲ. ಯಾರು ಪಕ್ಷಕ್ಕೆ ಕೆಲಸ ಮಾಡುತ್ತಾರೋ ಅವರಿಗೂ ನಿದ್ರಿಸಲು ಬಿಡುವವನಲ್ಲ. ನನಗೆ ಇದೊಂದು ಪರ್ವ ಕಾಲ. ಕಠಿಣ ಶ್ರಮವಹಿಸಿ ಕೆಲಸ ಮಾಡುವ ಭಾವನೆ ಹೊಂದಿದ್ದೇನೆ. ಸದ್ಯ ನನಗೆ 72 ವರ್ಷ ವಯಸ್ಸು. ನನಗೆ ಒಂದು ಕಾತುರತೆ ಇದೆ. ಏನು ಕಳೆದುಕೊಂಡಿದ್ದೇವೆಯೋ ಅದನ್ನು ಪಡೆಯಬೇಕು ಎಂಬ ಹಠವೂ ಇದೆ. ಇದು ನನ್ನೊಬ್ಬನ ಆಸೆಯಲ್ಲ. ಎಲ್ಲರ ಆಸೆಯಾಗಿದೆ ಎಂದರು.

ಜನಸಾಮಾನ್ಯರಿಗೂ ಕಾನೂನಿನ ಅರಿವು ಮೂಡಿಸಿ. ಕಾನೂನಿನ ಪ್ರತಿಪಾದನೆ, ಅದರ ಪ್ರತಿಪಾದನೆಯಿಂದ ಆಗುವ ಸಾಧಕ- ಬಾಧಕಗಳ ಅರಿವು ಮೂಡಿಸುವುದು ಶ್ಲಾಘನೀಯ. ಭಾರತದ ಸಾರ್ವಭೌಮತೆ, ಅಖಂಡತೆ, ಈ ದೇಶವನ್ನು ಮುಂದಿನ ಪೀಳಿಗೆ ಎಂಥ ಸಂದರ್ಭದಲ್ಲೂ ವಿಚಲಿತರಾಗದೆ ಕೆಲಸ ಮಾಡುವ ಮಾದರಿಯಲ್ಲಿ ಸಮರ್ಪಕ ಸಂದೇಶವನ್ನು ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ ಎಂದು ತಿಳಿಸಿದರು.

ರಾಜಕಾರಣದಲ್ಲಿ ಅಧಿಕಾರ, ಅಧಿಕಾರ ಇದ್ದಾಗ ನಡವಳಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರಲ್ಲದೆ, ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಕರಾಳ ದಿನಗಳನ್ನು ನಮ್ಮೆದುರಿಗೆ ಇಟ್ಟಿದ್ದರು ಎಂದು ನೆನಪಿಸಿದರು. ಅಂಥ ಸಂದರ್ಭ ಬರದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿಯವರು ತಿಳಿಸಿದ್ದಾರೆ. ಹೊಟ್ಟೆಪಾಡಿಗಾಗಿ ಅಪಚಾರದ ಜೀವನ ಮಾಡಬಾರದು ಎಂದ ಅವರು, ಜನರಿಗೆ ಕಾನೂನಿನ ಅರಿವು ಸರಿಯಾಗಿ ತಲುಪಿಲ್ಲ. ಗಳಿಕೆ, ಆದಾಯ, ಸಂಪಾದನೆ ಮುಖ್ಯವಲ್ಲ. ನಿಜವಾದ ಅಗತ್ಯ ಇರುವವರಿಗೆ ಸಹಾಯ ಮಾಡಿದರೆ ಅದರಿಂದ ಮಾನಸಿಕ ತೃಪ್ತಿ ಸಿಗುತ್ತದೆ ಎಂದು ವಿಶ್ಲೇಷಿಸಿದರು.

ಪಕ್ಷಕ್ಕಿಂತ ದೊಡ್ಡದು ಯಾವುದೂ ಇಲ್ಲ. ಪಕ್ಷದ ನೆಲೆ, ಗಟ್ಟಿತನ, ಸಂದೇಶ ವಿಸ್ತರಣೆಗೆ ಪ್ರಯತ್ನಿಸಿದರೆ ಅದರ ಪ್ರತಿಫಲ ನಮಗೆ ಸಿಗುತ್ತದೆ ಎಂದರು. ತಮಗೆ ರಾಜಕೀಯ ತಿರುವು ನೀಡಿದ ಸಂದರ್ಭಗಳನ್ನು ವಿವರಿಸಿದರು. ನರೇಂದ್ರ ಮೋದಿಜಿ ಅವರಿಗೆ ಅಮೆರಿಕದ ಆಹ್ವಾನ ಬಹುದೊಡ್ಡದು ಎಂದು ಶ್ಲಾಘಿಸಿದರು.

English summary

Karnataka BJP State President: Former Minister V Somanna Said That Give Me The Post Of BJP State President.

Source link