ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ಬಿಡುಗಡೆ, ಷರತ್ತುಗಳು | Govt First Grade College Guest Lecturer May Monthly Honorarium Released

Karnataka

oi-Gururaj S

|

Google Oneindia Kannada News

ಬೆಂಗಳೂರು, ಜೂನ್ 26; ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಮೇ ತಿಂಗಳ ಗೌರವಧನ ಬಿಡುಗಡೆ ಮಾಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದ್ದು, ಷರತ್ತುಗಳನ್ನು ಸಹ ಆದೇಶದೊಂದಿಗೆ ಲಗತ್ತಿಸಿದೆ.

ಕಾಲೇಜು ಶಿಕ್ಷಣ ಆಯುಕ್ತರಿಂದ ಅನುಮೋದನೆಗೊಂಡ ಟಿಪ್ಪಣಿಯನ್ನು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ. ಇಲಾಖಾ ವ್ಯಾಪ್ತಿಯಡಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2022-233ನೇ ಸಾಲಿಗೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ಗೌರವಧನ ಪಾವತಿಸುವ ಸಲುವಾಗಿ ಎಂಬವ ವಿಷಯವನ್ನು ಆದೇಶ ಒಳಗೊಂಡಿದೆ.

Tax Dept Recruitment: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 477 ಹೊಸ ಹುದ್ದೆ ರಚನೆ, ವೇತನ ಶ್ರೇಣಿ

Govt First Grade College Guest Lecturer May Monthly Honorarium Released

ಅತಿಥಿ ಉಪನ್ಯಾಸಕರುಗಳ ಗೌರವಧನ ಪಾವತಿಸುವ ಸಲುವಾಗಿ ಮೊದಲನೇ ಚರ್ತುಮಾಸದಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಲಾಗಿರುವ ಒಟ್ಟು ರೂ. 65,33,33,333 ಅನುದಾನದಲ್ಲಿ ಈಗಾಗಲೇ ಮಾರ್ಚ್ 2023 ಹಾಗೂ ಏಪ್ರಿಲ್ 2023ರ ಮಾಹೆಗಳಿಗೆ ಹಾಗೂ ಕೊರತೆಯಾಗಿರುವ ಮಾಹೆಗಳಿಗೆ ಒಟ್ಟು ರೂ. 52,67,80,308 ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು. ಸದರಿ ಅನುದಾನದಲ್ಲಿ ವೆಚ್ಚವಾಗಿ ಉಳಿಕೆಯಾಗಿರುವ ಅನುದಾನದಲ್ಲಿ ಮೇ-2023ರ ಮಾಹೆಯ 15 ದಿನಗಳಗೆ ಮಾತ್ರ ಅನುದಾನವನ್ನು ಬಿಡುಗಡೆ ಮಾಡಬಹುದಾಗಿರುತ್ತದೆ.

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೇಮಕಾತಿ ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೇಮಕಾತಿ

ಈಗಾಗಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹಂತದಲ್ಲಿ ವೆಚ್ಚವಾಗಿ ಖಜಾನೆ-2ರಲ್ಲಿ ಉಳಿಸಿಕೊಂಡಿರುವ ಅನುದಾನವನ್ನು ವಾಪಸ್ಸು ಸೆಳೆದು ಬಿಡುಗಡೆ ಮಾಡಲಾಗುತ್ತಿರುವ ಒಟ್ಟು ಅನುದಾನ ರೂ. 12,88,15,608 ಅನುದಾನವನ್ನು ಬಿಡುಗಡೆ ಮಾಡಲು ಈ ಆದೇಶ ಎಂದು ಸ್ಪಷ್ಟಪಡಿಸಲಾಗಿದೆ.

ಕೊಪ್ಪಳ; ಅತಿಥಿ ಶಿಕ್ಷಕರ ನೇಮಕಾತಿ, ಜೂನ್‌ 30ರೊಳಗೆ ಅರ್ಜಿ ಹಾಕಿ ಕೊಪ್ಪಳ; ಅತಿಥಿ ಶಿಕ್ಷಕರ ನೇಮಕಾತಿ, ಜೂನ್‌ 30ರೊಳಗೆ ಅರ್ಜಿ ಹಾಕಿ

ಗೌರವಧನದ ಆದೇಶ; ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಇಲಾಖಾ ವ್ಯಾಪ್ತಿಯಡಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2022-23ನೇ ಸಾಲಿಗೆ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ಪಾವತಿಸುವ ಸಲುವಾಗಿ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಬಹುದಾಗಿದ್ದು ಎಂದು ಆದೇಶ ಹೇಳಿದೆ.

2023-24ನೇ ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ವೆಚ್ಚವಾಗಿ ಉಳಿಕೆಯಾಗಿರುವ ಒಟ್ಟು ಅನುದಾನದಲ್ಲಿ ಅನುದಾನ ರೂ. 12,88,15,608 ಗೌರವಧನಕ್ಕಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಷರತ್ತುಗೊಳಪಟ್ಟು ಬಿಡುಗಡೆ ಮಾಡಿ ಆದೇಶಿಸಲಾಗಿದೆ ಎಂದು ಹೇಳಿದೆ.

* 2022-23ನೇ ಸಾಲಿನ ವಿವಿಧ ವಿಷಯಗಳಿಗೆ ಸರ್ಕಾರದ ಆದೇಶ/ ಸುತ್ತೋಲೆಗಳನ್ವಯ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡು ಪ್ರಾದೇಶಿಕ ಜಂಟಿನಿರ್ದೇಶಕರ ಕಛೇರಿಯ ಅನುಮೋದನೆಗೊಂಡಿರುವ ಉಪನ್ಯಾಸಕರುಗಳಿಗೆ ಬಿಡುಗಡೆ ಮಾಡಲಾಗಿರುವ ಗೌರವಧನವನ್ನು ಕರ್ತವ್ಯ ನಿರ್ವಹಿಸಿದ ಅವಧಿಗೆ ಮಾತ್ರ ಪಾವತಿಸತಕ್ಕದ್ದು ಹಾಗೂ ಪ್ರಾದೇಶಿಕ ನಿರ್ದೇಶಕರುಗಳಿಂದ ಅನುಮೋದನೆಗೊಂಡಿಲ್ಲದ అತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಿದ್ದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು.

* ಕಛೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಿಭಾಗಿಸಿ 15/19 ಗಂಟೆಗಳ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರಿಗೆ ನೇಮಕಗೊಂಡಿರಬೇಕು. ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳುವ ಉದ್ದೇಶದಿಂದ ಹೆಚ್ಚುವರಿ ವಿಭಾಗ ತೆರೆದು ಹೆಚ್ಚಿನ ಅಥವಾ ಹೆಚ್ಚುವರಿ ಕಾರ್ಯಭಾರ ಲೆಕ್ಕಚಾರ ಮಾಡಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಗೌರವಧನ ಪಾವತಿಸಿದ್ದಲ್ಲಿ ಸಂಬಂಧಿಸಿದ ಪ್ರಾಂಶುಪಾಲರು ಮತ್ತು ಕಛೇರಿ ಸಿಬ್ಬಂದಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮಕೈಗೊಳ್ಳುವುದು.

* ಸರ್ಕಾರದ ಪತ್ರ ದಿನಾಂಕ 27/01/2023. ಸುತ್ತೋಲೆ ದಿನಾಂಕ 28/01/2023ರ ಆದೇಶದ ಪ್ರಕಾರ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಮೇ-2023ರ ಮಾಹೆಯ 15 ದಿನಗಳಿಗೆ ಮಾತ್ರ ಗೌರವಧನವನ್ನು ಪಾವತಿಸುವ ಸಂಬಂಧ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಹಾಗೂ ಬಳಸಿಕೊಂಡಿರುವ ಅನುದಾನಕ್ಕೆ ನಿಗದಿತ ಅವಧಿಯಲ್ಲಿ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಲು ಸೂಚಿಸಲಾಗಿದೆ.

English summary

Collage education department released government first grade college guest lecturer monthly honorarium for the month of May 2023.

Source link