ತಂದೆಯಾಗುತ್ತಿರುವದಾಗಿ ಭಿನ್ನ ರೀತಿಯಲ್ಲಿ ಘೋಷಿಸಿದ್ದ ಛೆಟ್ರಿ
ಕಳೆದ ಜೂನ್ ತಿಂಗಳಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಪಂದ್ಯದ ಸಂದರ್ಭದಲ್ಲಿ, ಸುನಿಲ್ ಛೆಟ್ರಿ ತಾನು ತಂದೆಯಾಗುತ್ತಿರುವುದಾಗಿ ಘೋಷಿಸಿದ್ದರು. ಗೋಲು ಗಳಿಸಿದ ಸಂದರ್ಭದಲ್ಲಿ ತಮ್ಮ ಜೆರ್ಸಿಯ ಒಳಗೆ ಫುಟ್ಬಾಲ್ ಚೆಂಡನ್ನು ಇಟ್ಟು ತಮ್ಮ ಪತ್ನಿ ಗರ್ಭಿಣಿ ಎಂಬುದನ್ನು ವಿಭಿನ್ನ ಶೈಲಿಯಲ್ಲಿ ಘೋಷಿಸಿದ್ದರು. ಮೈದಾನದ ವೀಕ್ಷಕರ ಗ್ಯಾಲರಿಯಲ್ಲಿದ್ದ ಸೋನಮ್ ಕಡೆಗೆ ನೋಡುತ್ತಾ ಸಂಭ್ರಮಾಚರಿಸಿದ್ದರು. ಅಲ್ಲದೆ ಸೋನಂ ಕೂಡಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಕುಟುಂಬವು ಮುದ್ದಾದ ಮಗುವನ್ನು ಸ್ವಾಗತಿಸಿದೆ.