ಎಲ್ಲೇ ಹೋದರು ಮನೆಯ ಊಟವೇ ಬೇಕು
ಪ್ರಜ್ಞಾನಂದ ಎಲ್ಲೇ ಹೋದರೂ, ಅವನಿಗೆ ಮನೆಯ ಊಟವೇ ಬೇಕು. ಇದೇ ಕಾರಣಕ್ಕಾಗಿ ಮಗನು ಭಾಗವಹಿಸುವ ಎಲ್ಲಾ ಟೂರ್ನಿಗಳಲ್ಲಿ ಆತನ ಆರೋಗ್ಯ ಕಾಪಾಡುವ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವುದರ ಜೊತೆಗೆ ಮನೆಯ ಊಟ ಸಿದ್ಧಪಡಿಸಿಕೊಡುತ್ತಾರೆ. ತಪ್ಪದೇ ಅನ್ನ ರಸಂ ಪ್ರಜ್ಞಾನಂದನಿಗೆ ಅಡುಗೆ ಮಾಡಿಕೊಡುತ್ತಾರೆ ನಾಗಲಕ್ಷ್ಮಿ. ವಿದೇಶಕ್ಕೆ ಪ್ರಯಾಣಿಸಿದರೂ ಇಂಡಕ್ಷನ್ ಸ್ಟೌ ಮತ್ತು ರೈಸ್ ಕುಕ್ಕರ್, ಅಕ್ಕಿ, ರಸಂ ಪದಾರ್ಥಗಳನ್ನೂ ಸಹ ಒಯ್ಯುತ್ತಾರೆ.