S Janaki: ಗಾನಕೋಗಿಲೆ ಎಸ್. ಜಾನಕಿ ಧ್ವನಿಯಾದ ಕೊನೆಯ ಕನ್ನಡ ಹಾಡು ಯಾವುದು? ಇಲ್ಲಿದೆ ಮಾಹಿತಿ | | ACTPnews

ಎಸ್. ಜಾನಕಿ


Last Updated:

ಭಾರತೀಯ ಚಿತ್ರರಂಗದಲ್ಲಿ ಸುಮಧುರ ಕಂಠ, ಅಪರೂಪದ ಗಾಯನ ಶೈಲಿ ಹಾಡುಗಳ ಮೂಲಕ ಕೋಟ್ಯಂತರ ಸಂಗೀತಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಗಾನಕೋಗಿಲೆ ಎಸ್. ಜಾನಕಿ ಅವರು ಇಂದು (ಜುಲೈ 11) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಎಸ್. ಜಾನಕಿ
ಎಸ್. ಜಾನಕಿ

ಭಾರತೀಯ ಚಿತ್ರರಂಗದಲ್ಲಿ ಸುಮಧುರ ಕಂಠ, ಅಪರೂಪದ ಗಾಯನ ಶೈಲಿ ಹಾಡುಗಳ ಮೂಲಕ ಕೋಟ್ಯಂತರ ಸಂಗೀತಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಗಾನಕೋಗಿಲೆ ಎಸ್. ಜಾನಕಿ (S. Janaki) ಅವರು ಇಂದು (ಜುಲೈ 11) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಹಲವು ದಶಕಗಳ ಕಾಲ ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಜಾನಕಿ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ

ಕೇವಲ 19ನೇ ವಯಸ್ಸಿನಲ್ಲೇ ಎಸ್. ಜಾನಕಿ ತಮ್ಮ ವೃತ್ತಿಪರ ಗಾಯನ ಜೀವನ ಆರಂಭಿಸಿದರು. ತಮ್ಮ ಚಿಕ್ಕಪ್ಪನ ಸಲಹೆಯಂತೆ ಚೆನ್ನೈಗೆ ತೆರಳಿ ಎವಿಎಂ ಸ್ಟುಡಿಯೋದಲ್ಲಿ ಗಾಯಕಿಯಾಗಿ ಸೇರಿದರು. ಇದೇ ಅವರ ಬದುಕಿನ ಮಹತ್ವದ ತಿರುವಾಯಿತು. 1957ರಲ್ಲಿ ಮೊದಲ ಬಾರಿಗೆ ಚಿತ್ರಗೀತೆಗಳನ್ನು ಹಾಡಿದ ಅವರು, ಅದೇ ವರ್ಷ ಆರು ಭಾಷೆಗಳಲ್ಲಿ ಹಾಡುವ ಮೂಲಕ ತಮ್ಮ ಅಸಾಧಾರಣ ಪ್ರತಿಭೆಯನ್ನು ಸಾಬೀತುಪಡಿಸಿದರು.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಎಸ್. ಜಾನಕಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಪ್ರೇಮಗೀತೆ, ಭಕ್ತಿಗೀತೆ, ಜಾನಪದ, ದುಃಖಗೀತೆ, ಮಕ್ಕಳ ಹಾಡು ಅಥವಾ ಭಾವನಾತ್ಮಕ ಗೀತೆ ಯಾವುದೇ ಆಗಿರಲಿ, ಪ್ರತಿಯೊಂದು ಹಾಡಿಗೂ ತಮ್ಮ ಕಂಠದ ಮೂಲಕ ಜೀವ ತುಂಬುವ ಅಪರೂಪದ ಸಾಮರ್ಥ್ಯ ಅವರದ್ದಾಗಿತ್ತು.

‘ಪಲ್ಲಕ್ಕಿ 2’ ಮೂಲಕ ಮತ್ತೆ ಕನ್ನಡದಲ್ಲಿ ಧ್ವನಿ

ಹಲವು ವರ್ಷಗಳ ಬಳಿಕ 2013 ರಲ್ಲಿ ಎಸ್. ಜಾನಕಿ ಅವರು ಮತ್ತೆ ಕನ್ನಡ ಸಿನಿಮಾದ ಹಾಡೊಂದಕ್ಕೆ ಧ್ವನಿ ನೀಡಿದ್ದರು. . ನಿರ್ದೇಶಕ ಕೆ. ನರೇಂದ್ರ ಬಾಬು ನಿರ್ಮಿಸಿರುವ ‘ಪಲ್ಲಕ್ಕಿ 2’ ಸಿನಿಮಾದ ವಿಶೇಷ ಹಾಡೊಂದನ್ನು ಹಾಡಿದ್ದರು.

ನಂಬಿದ ಒಲವು ನೀಡಿದ ಮೊದಲ ನೋವಿಗೆ, ಹೃದಯ ನಡುಗಿದೆ, ಪ್ರೀತಿಯ ಸಲುಗೆ ಮೀರಿದ ಅಲೆವ ಮೊಜಿಗೆ ಮನವೆ ಕದಡಿದೆ ಎಂಬ ಸಾಲುಗಳಿಂದ ಆರಂಭವಾಗುವ ಈ ಭಾವನಾತ್ಮಕ ಗೀತೆಯನ್ನು ಮಂಗಳೂರಿನ ಡಾ. ಉಮೇಶ್ ಪಿಲೆಕೂಡೇಲು ರಚಿಸಿದ್ದು, ‘ಚಿರು’ ಚಿತ್ರದ ಖ್ಯಾತಿಯ ಗಿರಿಧರ್ ದಿವಾನ್ ಸಂಗೀತ ಸಂಯೋಜಿಸಿದ್ದರು.

‘ಪಲ್ಲಕ್ಕಿ 2’ ಸಿನಿಮಾ, 2007ರಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ‘ಪಲ್ಲಕ್ಕಿ’ ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರದ ನಿರ್ದೇಶಕರಾಗಿರುವ ಕೆ. ನರೇಂದ್ರ ಬಾಬು, ಎಸ್. ಜಾನಕಿ ಅವರಿಂದ ವಿಶೇಷ ಹಾಡೊಂದನ್ನು ಹಾಡಿಸಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಜಿ.ಕೆ. ವೆಂಕಟೇಶ್, ರಾಜನ್-ನಾಗೇಂದ್ರ, ವಿಜಯಭಾಸ್ಕರ್, ಉಪೇಂದ್ರ ಕುಮಾರ್ ಹಾಗೂ ಹಂಸಲೇಖ ಸೇರಿದಂತೆ ಅನೇಕ ದಿಗ್ಗಜ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅವರು ಕನ್ನಡಕ್ಕೆ ಅನೇಕ ಸದಾಬಹಾರ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರ ಧ್ವನಿಯಲ್ಲಿ ಮೂಡಿಬಂದ ಅನೇಕ ಹಾಡುಗಳು ಇಂದಿಗೂ ಸಂಗೀತಾಭಿಮಾನಿಗಳ ಮೆಚ್ಚಿನ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಹಲವಾರು ದಶಕಗಳ ಕಾಲ ಭಾರತೀಯ ಚಿತ್ರಸಂಗೀತವನ್ನು ತಮ್ಮ ಧ್ವನಿಯಿಂದ ಶ್ರೀಮಂತಗೊಳಿಸಿರುವ ಎಸ್. ಜಾನಕಿ ಅವರು ಕೇವಲ ಹಿನ್ನೆಲೆ ಗಾಯಕಿಯಲ್ಲ, ಸಂಗೀತ ಲೋಕದ ಅಮೂಲ್ಯ ಆಸ್ತಿಯಾಗಿದ್ದಾರೆ. ಅವರ ಹಾಡುಗಳು ಇಂದಿಗೂ ಹೊಸ ತಲೆಮಾರಿನ ಸಂಗೀತಾಸಕ್ತರ ಮನಸ್ಸನ್ನು ಸೆಳೆಯುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed