ಎಲ್ಲೇ ಹೋದರು ಪ್ರಜ್ಞಾನಂದಗೆ ಮನೆಯ ಊಟವೇ ಬೇಕು. ಹೀಗಾಗಿ ಅವರ ತಾಯಿ ಇಂಡಕ್ಷನ್ ಸ್ಟೌವ್, ಅಕ್ಕಿ, ರಸಂ ಹಾಗೂ ಸಾಂಬರ್ ಪದಾರ್ಥಗಳನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಾರೆ. ಈಗ ಚೆಸ್ ವಿಶ್ವಕಪ್ ಫೈನಲ್ ಪಂದ್ಯದ ವೇಳೆಯೂ ಪ್ರಜ್ಞಾನಂದ ರೈಸ್, ರಸಂ ಹಾಗೂ ಸಾಂಬರ್ ಊಟವನ್ನು ಮಾಡ್ತಾರೆ. ಅದು ಕೂಡ ಇವರ ತಾಯಿ ನಾಗಲಕ್ಷ್ಮೀ ಅವರೇ ಮಾಡಿದ ಅಡುಗೆ. ಈ ತಾಯಿ-ಮಗನ ಪ್ರೀತಿಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.