ಕಮಲ್ ಎಂಟ್ರಿ ಬಗ್ಗೆ ಸಿಹಿಸುದ್ದಿ ಜೊತೆ ಕಹಿ ಸುದ್ದಿಯನ್ನು ಕೊಟ್ಟ ‘ಪ್ರಾಜೆಕ್ಟ್‌- K’ ಟೀಂ? | Kamal Haasan joins Prabhas starrer Project- K, but movie likely to get postponed

bredcrumb

Gossips

oi-Narayana M

|

ಬಹುನಿರೀಕ್ಷಿತ
‘ಪ್ರಾಜೆಕ್ಟ್‌-
K’ಚಿತ್ರದಲ್ಲಿ
ಕಮಲ್
ಹಾಸನ್
ವಿಲನ್
ಆಗಿ
ನಟಿಸೋದು
ಪಕ್ಕಾ
ಆಗಿದೆ.
ಸ್ವತಃ
ಚಿತ್ರತಂಡವೇ

ಬಗ್ಗೆ
ಅಧಿಕೃತ
ಮಾಹಿತಿ
ನೀಡಿದೆ.
ಡಾರ್ಲಿಂಗ್
ಪ್ರಭಾಸ್
ಎದುರು
ಕಮಲ್
ಹಾಸನ್
ವಿಲನ್
ಆಗಿ
ಅಬ್ಬರಿಸ್ತಾರೆ
ಅನ್ನೋದನ್ನು
ಊಹಿಸಿಕೊಂಡೇ
ಫ್ಯಾನ್ಸ್
ಥ್ರಿಲ್ಲಾಗಿದ್ದಾರೆ.
ಇತ್ತೀಚಿನ
ವರ್ಷಗಳಲ್ಲಿ
ಭಾರತೀಯ
ಚಿತ್ರರಂಗದಲ್ಲೇ
ಬಹಳ
ದೊಡ್ಡ
ಮಲ್ಟಿಸ್ಟಾರರ್
ಸಿನಿಮಾ
ಇದಾಗಲಿದೆ.

ಪ್ರಭಾಸ್,
ಅಮಿತಾಬ್
ಬಚ್ಚನ್,
ದೀಪಿಕಾ
ಪಡುಕೋಣೆ,
ದಿಶಾ
ಪಠಾನಿ
‘ಪ್ರಾಜೆಕ್ಟ್‌-
K’
ಚಿತ್ರದಲ್ಲಿ
ನಟಿಸ್ತಿದ್ದಾರೆ.
ಕಮಲ್
ಎಂಟ್ರಿಯಿಂದ
ಸಿನಿಮಾ
ಬಗ್ಗೆ
ನಿರೀಕ್ಷೆ
ದುಪ್ಪಟ್ಟಾಗಿದೆ.
ಕೆಲ
ದಿನಗಳಿಂದ

ಸಿನಿಮಾದಲ್ಲಿ
ಕಮಲ್
ಹಾಸನ್,
ಪ್ರಭಾಸ್
ಎದುರು
ವಿಲನ್
ಆಗಿ
ನಟಿಸಲಿದ್ದಾರೆ
ಎಂಬ
ಸುದ್ದಿ
ಹರಿದಾಡಿತ್ತು.
ಅದರಂತೆ
ಈಗ
ಚಿತ್ರತಂಡ
ಕಮಲ್
ಎಂಟ್ರಿ
ಬಗ್ಗೆ
ಘೋಷಿಸಿದೆ.
ಆದರೆ
ಕಮಲ್
ಪಾತ್ರ
ಏನು
ಎನ್ನುವುದನ್ನು
ಮಾತ್ರ
ಚಿತ್ರತಂಡ
ಹೇಳಿಲ್ಲ.
ನಾಗ್‌
ಅಶ್ವಿನ್
ನಿರ್ದೇಶನದಲ್ಲಿ
ಉಳಗ
ನಾಯಗನ್
ನಟಿಸುವ
ಬಗ್ಗೆ
ಚಿತ್ರತಂಡ
ಮಾತನಾಡಿದೆ.

Kamal Haasan joins Prabhas starrer Project- K, but movie likely to get postponed

ವೈಯಂತಿ
ಮೂವೀಸ್
ಬ್ಯಾನರ್‌ನಲ್ಲಿ
ಬಹಳ
ಅದ್ಧೂರಿಯಾಗಿ
‘ಪ್ರಾಜೆಕ್ಟ್‌-
K’
ಸಿನಿಮಾ
ಮೂಡಿ
ಬರ್ತಿದೆ.
‘ಮಹಾನಟಿ’
ಸಿನಿಮಾ
ನಿರ್ದೇಶಿಸಿ
ಗೆದ್ದ
ನಾಗ್
ಅಶ್ವಿನ್
ಆಕ್ಷನ್
ಕಟ್
ಹೇಳುತ್ತಿದ್ದಾರೆ.
ಇದೊಂದು
ಸೈನ್ಸ್
ಫಿಕ್ಷನ್
ಆಕ್ಷನ್
ಎಂಟರ್‌ಟೈನರ್
ಸಿನಿಮಾ
ಆಗಿದ್ದು
500
ಕೋಟಿ
ರೂ.ಗೂ
ಅಧಿಕ
ಬಜೆಟ್‌ನಲ್ಲಿ
ಸಿನಿಮಾ
ನಿರ್ಮಾಣವಾಗ್ತಿದೆ.

Kamal Haasan joins Prabhas starrer Project- K, but movie likely to get postponed

ಉಳಗ
ನಾಯಗನ್
ಹೇಳಿದ್ದೇನು?

ಕಮಲ್
ಹಾಸನ್
ಮಾತನಾಡಿ,
“ನಾನು
50
ವರ್ಷದ
ಹಿಂದೆ
ನೃತ್ಯ
ಸಹಾಯಕ
ಮತ್ತು
ಸಹಾಯಕ
ನಿರ್ದೇಶಕನಾಗಿದ್ದಾಗ
ನಿರ್ಮಾಣ
ವಲಯದಲ್ಲಿ
ಅಶ್ವಿನಿ
ದತ್
ಹೆಸರು
ದೊಡ್ಡ
ಮಟ್ಟದಲ್ಲಿ
ಖ್ಯಾತಿಗೊಳಿಸಿತ್ತು.
ಐವತ್ತು
ವರ್ಷದ
ನಂತರ
ನಾವು
ಒಂದಾಗುತ್ತಿದ್ದೇವೆ.
ಇಂದಿನ
ಪೀಳಿಗೆಯ
ಅದ್ಭುತ
ನಿರ್ದೇಶಕ
ನಾಗ್
ಅಶ್ವಿನ್,
ನನ್ನ
ಸಹನಟರಾದ
ಪ್ರಭಾಸ್,
ದೀಪಿಕಾ
ಪಡುಕೋಣೆ,
ಅಮಿತಾಬ್
ಜಿ
ಜೊತೆ
ನಟಿಸುತ್ತಿರುವುದು
ಖುಷಿಕೊಟ್ಟಿದೆ.
ಪ್ರಾಜೆಕ್ಟ್-
K
ಸಿನಿಮಾಗಾಗಿ
ನಾನು
ಕುತೂಹಲದಿಂದ
ಕಾಯುತ್ತಿದ್ದೇನೆ
ಎಂದಿದ್ದಾರೆ.

ಅಶ್ವಿನಿ
ದತ್,
ನಾಗ್
ಅಶ್ವಿನ್
ಮಾತು

ನಿರ್ಮಾಪಕ
ಅಶ್ವಿನಿ
ದತ್,
“ಸುದೀರ್ಘವಾದ
ವೃತ್ತಿ
ಜೀವನದಲ್ಲಿ
‌ನಿಮ್ಮೊಟ್ಟಿಗೆ
ಕೆಲಸ
ಮಾಡುವುದು
ನನ್ನ
ಕನಸಾಗಿತ್ತು.
ಪ್ರಾಜೆಕ್ಟ್-
K
ಮೂಲಕ
ಅದು
ನನಸಾಗಿದೆ.
ಕಮಲ್
ಹಾಸನ್-ಅಮಿತಾಬ್
ಜಿ
ಅವರೊಟ್ಟಿಗಿನ
ಕೆಲಸ
ಮಾಡುವ
ಅವಕಾಶ
ದೊರೆತಿರುವುದು
ನನಗೆ
ಆಶೀರ್ವಾದ”
ಎಂದು
ಹೇಳಿದ್ದಾರೆ.
ನಿರ್ದೇಶಕ
ನಾಗ್
ಅಶ್ವಿನ್,
“ಕಮಲ್
ಸರ್
ಜೊತೆ
ಕೆಲಸ
ಮಾಡಲು
ಉತ್ಸುಕರಾಗಿದ್ದೇನೆ.
ನಮ್ಮ
ಜಗತ್ತನ್ನು
ಪೂರ್ಣಗೊಳಿಸಲು
ಅವರು
ಒಪ್ಪಿಕೊಂಡಿರುವುದು
ಸಂತಸ”
ಎಂದರು.

ಕಮಲ್‌ಗೆ
ಸಂಭಾವನೆ
ಎಷ್ಟು?

ಉಳಗ
ನಾಯಗನ್
ಬಹಳ
ದಿನಗಳ
ನಂತರ
ಬೇರೆ
ನಟನ
ಚಿತ್ರದಲ್ಲಿ
ವಿಶೇಷ
ಪಾತ್ರದಲ್ಲಿ
ನಟಿಸುತ್ತಿದ್ದಾರೆ.
‘ವಿಕ್ರಂ’
ಸಿನಿಮಾ
ಮೂಲಕ
ಕಂಬ್ಯಾಕ್
ಮಾಡಿರುವ
ಕಮಲ್
ಕ್ರೇಜ್
ಹೆಚ್ಚಾಗಿದೆ.
ಇಂತಹ
ಸಮಯದಲ್ಲಿ
ಪ್ರಭಾಸ್
ಜೊತೆ
ನಟಿಸೋಕೆ
ಭಾರೀ
ಮೊತ್ತದ
ಸಂಭಾವನೆಯನ್ನೇ
ಪಡೆಯುತ್ತಿದ್ದಾರೆ.
ಅಂದಾಜು
100
ಕೋಟಿ
ರೂ.
ಅಧಿಕ
ಚಾರ್ಜ್
ಮಾಡುತ್ತಿದ್ದಾರೆ
ಎನ್ನಲಾಗ್ತಿದೆ.
ಒಟ್ನಲ್ಲಿ
ಮೂವರು
ಸೂಪರ್
ಸ್ಟಾರ್ಸ್
ಒಂದೇ
ಚಿತ್ರದಲ್ಲಿ
ನಟಿಸುತ್ತಿರುವುದು
ಸಿನಿರಸಿಕರಿಗೆ
ಥ್ರಿಲ್
ಕೊಟ್ಟಿದೆ.

ಮತ್ತೆ
ರಿಲೀಸ್
ಡೇಟ್
ಪೋಸ್ಟ್‌ಪೋನ್?

3
ವರ್ಷಗಳ
ಹಿಂದೆ
ಶುರುವಾದ
ಪ್ರಾಜೆಕ್ಟ್-
K
ಸಿನಿಮಾ
ಕಾರಣಾಂತರಗಳಿಂದ
ತಡವಾಗುತ್ತಿದೆ.
ಮುಂದಿನ
ವರ್ಷ
ಸಂಕ್ರಾಂತಿಗೆ
ಸಿನಿಮಾ
ರಿಲೀಸ್
ಮಾಡೋದಾಗಿ

ಹಿಂದೆ
ಚಿತ್ರತಂಡ
ಹೇಳಿತ್ತು.
ಆದರೆ
ಕಮಲ್
ಚಿತ್ರದಲ್ಲಿ
ನಟಿಸೋ
ಬಗ್ಗೆ
ಮಾಹಿತಿ
ನೀಡಿರುವ
ವಿಡಿಯೋ,
ಪೋಸ್ಟರ್‌ನಲ್ಲಿ
ರಿಲೀಸ್
ಡೇಟ್
ನಮೂದಿಸಿಲ್ಲ.
ಹಾಗಾಗಿ
ಸಿನಿಮಾ
ಸುಗ್ಗಿಹಬ್ಬಕ್ಕ
ಬರೋದು
ಅನುಮಾನ
ಎನ್ನಲಾಗುತ್ತಿದೆ.
ಇನ್ನು
ನಾಲ್ಕೈದು
ತಿಂಗಳು
ತಡವಾಗುವ
ಸಾಧ್ಯತೆಯಿದೆ.

English summary

Kamal Haasan joins Prabhas starrer Project- K, but movie likely to get postponed. Sci-fi Movie supposed to Release in summer 2024. know more.

Sunday, June 25, 2023, 18:15

Story first published: Sunday, June 25, 2023, 18:15 [IST]

Source link