ಬೆಂಗಳೂರಿನ ರಸ್ತೆಗಳಲ್ಲಿ ಅಪಘಾತಗಳು, ಪಾದಚಾರಿಗಳ ಸಾವಿನ ಸಂಖ್ಯೆ ಹೆಚ್ಚಳ: ಕಾರಣ ಇಲ್ಲಿದೆ | Road accidents are on the rise on Bengaluru streets: Police Analysis Report

Bengaluru

oi-Mamatha M

|

Google Oneindia Kannada News

ಬೆಂಗಳೂರು, ಜೂನ್. 19: ಕಳೆದ ಮೂರು ವರ್ಷಗಳಲ್ಲಿ 2020, 2021 ಮತ್ತು 2022 ರಲ್ಲಿ 2020 ಕ್ಕೆ ಹೋಲಿಸಿದರೆ 2022 ರಲ್ಲಿ ಅಪಘಾತಗಳ ಸಂಖ್ಯೆ 120 ರಷ್ಟು ಏರಿಕೆಯಾಗಿದೆ. ಅದೇ ಅವಧಿಯಲ್ಲಿ ಸಾವಿನ ಸಂಖ್ಯೆ 115 ರಷ್ಟು ಹೆಚ್ಚಾಗಿದೆ ಎಂದು ನಗರ ಸಂಚಾರ ಪೊಲೀಸರ (Bengaluru Traffic Police) ವಿಸ್ತೃತ ವಿಶ್ಲೇಷಣಾ ವರದಿಯಿಂದ ತಿಳಿದುಬಂದಿದೆ.

ಇದೇ ವೇಳೆ ಕೊಲ್ಲಲ್ಪಟ್ಟ ಪಾದಚಾರಿಗಳ ಸಂಖ್ಯೆಯು 2020 ರಲ್ಲಿ 164 ರಿಂದ 2022 ರಲ್ಲಿ 247 ಕ್ಕೆ ಏರಿದೆ. ನಗರದಲ್ಲಿ ಸಂಚಾರ ನಿಯಮಗಳ ಜಾರಿಯಲ್ಲಿ ಸುಮಾರು 25% ಹೆಚ್ಚಳದ ಹೊರತಾಗಿಯೂ ಇದು ಮೊದಲ ಬಾರಿಗೆ 2022 ರಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು 1,04,49,571 ಪ್ರಕರಣಗಳನ್ನು ದಾಖಲಿಸಿದ್ದಾರೆ. 2020 ಮತ್ತು 2021 ರಲ್ಲಿ ಕಡಿಮೆ ಎಫೆಕ್ಟ್ ಅಪಘಾತಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ವರ್ಷದ ಹೆಚ್ಚಿನ ಭಾಗಗಳಲ್ಲಿ ಅನೇಕ ಲಾಕ್‌ಡೌನ್‌ಗಳನ್ನು ಮಾಡಲಾಗಿತ್ತು.

Road accidents are on the rise on Bengaluru streets: Police Analysis Report

ನಿಯಮಗಳ ಬಗ್ಗೆ ಅರಿವು ಕಡಿಮೆ

ರಸ್ತೆ ಬೀದಿಗಳನ್ನು ಸುರಕ್ಷಿತವಾಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಒಳನೋಟಗಳನ್ನು ಪಡೆಯಲು ವರದಿಯು ಸಹಾಯ ಮಾಡುತ್ತದೆ ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರಿ) ಎಂ.ಎನ್. ಅನುಚೇತ್ ಹೇಳಿದ್ದಾರೆ. “ಉದಾಹರಣೆಗೆ, ಸತ್ತವರಲ್ಲಿ ಸುಮಾರು 45% ರಷ್ಟು ಹೈಸ್ಕೂಲ್ ಮಟ್ಟದ ಶಿಕ್ಷಣವನ್ನು ಮಾತ್ರ ಹೊಂದಿದ್ದಾರೆ ಎಂದು ವಿಶ್ಲೇಷಣೆ ತೋರಿಸುತ್ತದೆ. ನಾವು ಈಗ ಕಾರ್ಯನಿರ್ವಹಿಸುತ್ತಿರುವ ಸರಳ ಸ್ವರೂಪದಲ್ಲಿ ನಿಯಮಗಳ ಬಗ್ಗೆ ಅವರಿಗೆ ಹೆಚ್ಚಿನ ಅರಿವು ಬೇಕು ಎಂದು ವರದಿ ಸೂಚಿಸುತ್ತದೆ” ಎಂದು ತಿಳಿಸಿದ್ದಾರೆ.

Shakti Scheme Effect: ಬೆಂಗಳೂರು-ಮೈಸೂರು ಪ್ರೀಮಿಯಂ ಬಸ್‌ಗಳಿಗೆ ಪ್ರಯಾಣಿಕರ ನಷ್ಟ ಎಷ್ಟು ಗೊತ್ತೇ?Shakti Scheme Effect: ಬೆಂಗಳೂರು-ಮೈಸೂರು ಪ್ರೀಮಿಯಂ ಬಸ್‌ಗಳಿಗೆ ಪ್ರಯಾಣಿಕರ ನಷ್ಟ ಎಷ್ಟು ಗೊತ್ತೇ?

ಮಹಿಳೆಯರಿಗಿಂತ ಪುರುಷರು ಅಪಘಾತಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಣೆ ತೋರಿಸುತ್ತದೆ. “ಕಳೆದ ಮೂರು ವರ್ಷಗಳಲ್ಲಿ ಸರಾಸರಿ 600 ಪುರುಷರು ಮತ್ತು 94 ಮಹಿಳೆಯರು ಅಪಘಾತಕ್ಕೆ ಬಲಿಯಾಗಿದ್ದಾರೆ. 21 ರಿಂದ 40 ವಯೋಮಾನದ ಪುರುಷರು ಮತ್ತು 31 ರಿಂದ 50 ವಯೋಮಾನದ ಮಹಿಳೆಯರು ಮೃತಪಟ್ಟವರಲ್ಲಿ ಹೆಚ್ಚಿನವರು ಎಂದು ವಿಶ್ಲೇಷಣೆ ಹೇಳಿದೆ.ಇದು

ಪುರುಷರು, ವಿಶೇಷವಾಗಿ 21 ರಿಂದ 40 ವರ್ಷ ವಯಸ್ಸಿನವರಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುವ ಸಾಧ್ಯತೆಯಿದೆ ಎಂದು ಬೆಮಗಳೂರು ನಗರ ಸಂಚಾರ ಪೊಲೀಸರ ವರದಿ ಸೂಚಿಸುತ್ತದೆ. ಪ್ರತಿ ವರ್ಷ ಸರಾಸರಿ 163 ಜನರು ಸ್ವಯಂ ಅಪಘಾತಗಳಲ್ಲಿ ಮೃತಪಡುತ್ತಾರೆ ಎಂದು ಡೇಟಾ ತೋರಿಸುತ್ತದೆ, ಇದನ್ನು ಸುಲಭವಾಗಿ ತಪ್ಪಿಸಬಹುದು. ಅವರಲ್ಲಿ ಸರಾಸರಿ 161 ಪುರುಷರಿದ್ದರೇ, ಮಹಿಳೆಯರ ಸಂಖ್ಯೆ ಮೂರು ಮಾತ್ರ.

Road accidents are on the rise on Bengaluru streets: Police Analysis Report

“ವಾಹನವು ಸುಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಮತ್ತು ರಕ್ಷಣಾತ್ಮಕ ಚಾಲನಾ ತಂತ್ರಗಳನ್ನು ಅನುಸರಿಸುವ ಮೂಲಕ, ಸುರಕ್ಷತಾ ಸೀಟ್ ಬೆಲ್ಟ್ ಮತ್ತು ಹೆಲ್ಮೇಟ್ ಧರಿಸುವುದರ ಮೂಲಕ, ಮಳೆ, ಬಿರುಗಾಳಿಯ ಸಮಯದಲ್ಲಿ ವಾಹನದ ವೇಗವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಸ್ವಯಂ ಅಪಘಾತಗಳನ್ನು ಸುಲಭವಾಗಿ ತಪ್ಪಿಸಬಹು” ಎಂದು ವರದಿ ಹೇಳಿದೆ.

ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ

ಸಂಚಾರ ತಜ್ಞ ಪ್ರೊ.ಎಂ.ಎನ್. ಶ್ರೀಹರಿ ಅವರ ಪ್ರಕಾರ ಅಪಘಾತ ವಿಶ್ಲೇಷಣಾ ವರದಿಯು ನಗರದ ರಸ್ತೆಗಳಲ್ಲಿ ಅಪಘಾತಗಳು ಏಕೆ ಹೆಚ್ಚುತ್ತಿವೆ ಎಂಬುದರ ಕುರಿತು ಬೆಳಕು ಚೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ವಾಹನಗಳ ಸಂಖ್ಯೆ ನಾನಾ ಪಟ್ಟು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿ ಲಭ್ಯವಿರುವ ರಸ್ತೆ ಮೂಲಸೌಕರ್ಯಗಳು ಸೀಮಿತವಾಗಿದ್ದು, ಇರುವುದನ್ನೂ ಅವೈಜ್ಞಾನಿಕವಾಗಿ ಬಳಸಲಾಗುತ್ತಿದೆ ಎಂದಿದ್ದಾರೆ.

“ಸುಮಾರು 60% ಬೀದಿಗಳು ಕಿರಿದಾಗಿದ್ದು, ಅಗಲೀಕರಣಕ್ಕೆ ಯಾವುದೇ ಅವಕಾಶವಿಲ್ಲ. ನಗರ ಮತ್ತು ಸುತ್ತಮುತ್ತಲಿನ 298 ಪ್ರಮುಖ ರಸ್ತೆಗಳ ವಿಸ್ತರಣೆಯಾಗಬೇಕಿದ್ದು, ಈ ಪೈಕಿ ಶೇ.10ರಷ್ಟು ರಸ್ತೆಗಳು ಮಾತ್ರ ಇಲ್ಲಿಯವರೆಗೆ ವಿಸ್ತರಣೆಯಾಗಿವೆ. ಮೋಟಾರ್ ಸ್ಥಳಾವಕಾಶದ ಕೊರತೆ ಮತ್ತು ರಸ್ತೆಗಳಲ್ಲಿನ ಅಡೆತಡೆಗಳಿಂದಾಗಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆಯುತ್ತವೆ, ಮುಖ್ಯವಾಗಿ ಪಾರ್ಕಿಂಗ್‌ನಿಂದ ಆಕ್ರಮಿಸಲ್ಪಟ್ಟಿವೆ” ಎಂದು ನಗರದ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ.

ಆದರೆ, ಬೆಂಗಳೂರು ಟ್ರಾಫಿಕ್ ಪೊಲೀಸರ ಮೂರು ವರ್ಷಗಳ ಅಪಘಾತ ವಿಶ್ಲೇಷಣಾ ವರದಿಯು ರಸ್ತೆಗಳಲ್ಲಿನ ದೋಷಗಳು ಅಥವಾ ಅಡೆತಡೆಗಳಿಂದ ಉಂಟಾಗುವ ಅಪಘಾತಗಳು 2020 ರಲ್ಲಿ 38 ರಿಂದ 2022 ರಲ್ಲಿ 18 ಕ್ಕೆ ಇಳಿದಿದೆ ಎಂದಿದೆ. ಫುಟ್‌ಪಾತ್‌ಗಳ ಕೆಟ್ಟ ಸ್ಥಿತಿ ಮತ್ತು ಪಾದಚಾರಿ ಸೌಲಭ್ಯಗಳ ಕೊರತೆಯಿಂದಾಗಿ ಪಾದಚಾರಿಗಳು ರಸ್ತೆಯನ್ನು ಬಳಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಪಾದಚಾರಿಗಳು ನಗರದ ರಸ್ತೆಗಳಲ್ಲಿ ಅಪಘಾತಕ್ಕೆ ಈಡಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ದ್ವಿಚಕ್ರ ವಾಹನ ಅಪಘಾತ ಹೆಚ್ಚು

ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಹೆಚ್ಚು ಮಾರಣಾಂತಿಕವಾಗಿದ್ದು, ಕೆಟ್ಟ ಹೆಲ್ಮೆಟ್ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಅಪಘಾತಗಳ ವಿಶ್ಲೇಷಣೆಯು ನಗರದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸವಾರಿ ಅತ್ಯಂತ ಮಾರಣಾಂತಿಕವಾಗಿದೆ ಎಂದು ಹೇಳಿದೆ. ದ್ವಿಚಕ್ರ ವಾಹನಗಳು ನಗರದ ವಾಹನ ಜನಸಂಖ್ಯೆಯ 60% ಕ್ಕಿಂತ ಹೆಚ್ಚಿರುವುದು ಇದಕ್ಕೆ ಕಾರಣ ಆಗಿರಬಹುದು.

2022 ರಲ್ಲಿ 772 ಸಾವುನೋವುಗಳಲ್ಲಿ, 431 (55%) ದ್ವಿಚಕ್ರ ವಾಹನ ಸವಾರರು ಮತ್ತು ಅಪಘಾತವನ್ನು ಉಂಟುಮಾಡಿದ 289 ವ್ಯಕ್ತಿಗಳು (37%) ದ್ವಿಚಕ್ರ ವಾಹನ ಸವಾರರು. ಪಾದಚಾರಿ ಸಾವುಗಳಲ್ಲಿ ಕಾಲು ಭಾಗದಷ್ಟು ದ್ವಿಚಕ್ರ ವಾಹನಗಳಿಂದ ಸಂಭವಿಸಿದೆ. ಸಾವನ್ನಪ್ಪಿದ 431 ದ್ವಿಚಕ್ರ ವಾಹನ ಸವಾರರ ಪೈಕಿ 112 ಮಂದಿ ಹೆಲ್ಮೆಟ್ ಧರಿಸಿರಲಿಲ್ಲ, 319 ಹೆಲ್ಮೆಟ್ ಧರಿಸಿದ್ದು, ಜೀವ ರಕ್ಷಣೆಯಲ್ಲಿ ಹೆಲ್ಮೆಟ್ ಧರಿಸುವುದರ ಪರಿಣಾಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

“ಅನೇಕ ಜನರು ಟ್ರಾಫಿಕ್ ಪೊಲೀಸರಿಂದ ದಂಡವನ್ನು ತಪ್ಪಿಸಲು ಹೆಲ್ಮೆಟ್‌ಗಳನ್ನು ಧರಿಸುತ್ತಾರೆ. ತಮ್ಮ ಸುರಕ್ಷತೆಗಾಗಿ ಅಲ್ಲ. ಅವರು ಅರ್ಧ ಹೆಲ್ಮೆಟ್‌ಗಳು ಮತ್ತು ಕಡಿಮೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸುತ್ತಾರೆ. ಇದು ಡೇಟಾ ತೋರಿಸುವಂತೆ ಅವರ ಜೀವಗಳನ್ನು ರಕ್ಷಿಸುವುದಿಲ್ಲ. ಟ್ರಾಫಿಕ್ ಪೊಲೀಸರು ನಿಮ್ಹಾನ್ಸ್‌ನೊಂದಿಗೆ ಅಪಘಾತಗಳಲ್ಲಿ ಜನರು ಅನುಭವಿಸುವ ತಲೆ ಗಾಯಗಳ ಬಗ್ಗೆ ಮತ್ತು ಹೆಲ್ಮೆಟ್‌ಗಳ ಉತ್ತಮ ಬಳಕೆಯನ್ನು ಅಧ್ಯಯನ ಮಾಡಲು ಕೆಲಸ ಮಾಡುತ್ತಿದೆ” ಎಂದು ಎಂ.ಎನ್. ಅನುಚೇತ್ ಹೇಳಿದ್ದಾರೆ.

(ಮಾಹಿತಿ ಕೃಪೆ: ದಿ ಹಿಂದೂ)

English summary

Road accidents and pedestrian deaths are on the rise on Bengaluru streets, because of lack of awareness and infrastructure gaps says police analysis report. know more.

Story first published: Monday, June 19, 2023, 18:33 [IST]

Source link